logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಲ್ಲಿರುವ ಮನುಷ್ಯನ ಮನಸ್ಸು ಹೊಸ ಬದುಕಿನ ಮಾರ್ಗಕ್ಕೆ ಕೊಂಡೊಯ್ಯುತ್ತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನಲ್ಲಿರುವ ಮನುಷ್ಯನ ಮನಸ್ಸು ಹೊಸ ಬದುಕಿನ ಮಾರ್ಗಕ್ಕೆ ಕೊಂಡೊಯ್ಯುತ್ತೆ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Apr 14, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಗವಂತನಲ್ಲಿರುವ ಮನುಷ್ಯನ ಮನಸ್ಸು ಹೊಸ ಬದುಕಿನ ಮಾರ್ಗಕ್ಕೆ ಕೊಂಡೊಯ್ಯುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಶ್ಲೋಕ 23, 24 ಹಾಗೂ 25 ರಲ್ಲಿ ಓದಿ. 
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 23

ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ |

ಪ್ರಯಾತಾ ಯಾನ್ತಿ ತಂ ಕಾಲಂ ವಕ್ಷ್ಯಾಮಿ ಭರತವರ್ಷಭ ||23||

ಅನುವಾದ: ಭರತ ವಂಶದಲ್ಲಿ ಶ್ರೇಷ್ಠನಾದ ಅರ್ಜುನನೇ, ಯೋಗಿಯು ಈ ಜಗತ್ತನ್ನು ಯಾವ ಸಮಯದಲ್ಲಿ ಬಿಟ್ಟರೆ ಹಿಂದಕ್ಕೆ ಬರುತ್ತಾನೆ ಅಥವಾ ಬರುವುದಿಲ್ಲ ಎನ್ನುವುದನ್ನು ಈಗ ವಿವರಿಸುತ್ತೇನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಸಂಪೂರ್ಣವಾಗಿ ಭಗವಂತನಿಗೆ (Bhagavad Gita Updesh in Kannada) ಶರಣಾಗತರಾದ ಪರಮ ಪ್ರಭುವಿನ ಪರಿಶುದ್ಧ ಭಕ್ತರು ತಮ್ಮ ದೇಹಗಳನ್ನು ಯಾವಾಗ, ಹೇಗೆ ತ್ಯಜಿಸುತ್ತೇವೆ ಎಂದು ಚಿಂತಿಸುವುದೇ ಇಲ್ಲ. ಅವರು ಎಲ್ಲವನ್ನೂ ಕೃಷ್ಣನ ಕೈಗಳಿಗೆ ಒಪ್ಪಿಸುತ್ತಾರೆ. ಆದುದರಿಂದ ಸುಲಭವಾಗಿ, ಸಂತಸದಿಂದ ಭಗವದ್ಧಾಮಕ್ಕೆ ಹಿಂದಿರುತ್ತಾರೆ. ಆದರೆ ಪರಿಶುದ್ಧ ಭಕ್ತರಾಗಿಲ್ಲದೆ ಕರ್ಮಯೋಗ, ಜ್ಞಾನಯೋಗ ಮತ್ತು ಹಠಯೋಗಗಳಂತಹ ಸಾಧನಗಳನ್ನು ಅವಲಂಭಿಸಿದವರು ದೇಹವನ್ನು ಸೂಕ್ತವಾದ ಸಮಯದಲ್ಲಿ ತ್ಯಜಿಸಬೇಕು. ಆ ಮೂಲಕ ಜನನ ಮರಣಗಳ ಲೋಕಕ್ಕೆ ಹಿಂದಿರುಗುತ್ತಾರೆಯೇ ಇಲ್ಲವೇ ಎನ್ನುವುದನ್ನು ಖಚಿತಮಾಡಿಕೊಳ್ಳಬೇಕು.

ಯೋಗಿಯು ಪರಿಪೂರ್ಣನಾದರೆ ಈ ಐಹಿಕ ಜಗತ್ತನ್ನು ಬಿಡುವ ಕಾಲವನ್ನೂ ಸನ್ನಿವೇಶವನ್ನೂ ಆರಿಸಿಕೊಳ್ಳಬಹುದು. ಆದರೆ ಆತನು ಅಷ್ಟು ಪ್ರವೀಣನಲ್ಲದಿದ್ದರೆ, ಅಕಸ್ಮಾತ್ತಾಗಿ ಆತನು ಸೂಕ್ತವಾದ ಸಮಯದಲ್ಲಿ ಮರಣಹೊಂದುವುದನ್ನೇ ಅವನ ಯಶಸ್ಸು ಅವಲಂಬಿಸುತ್ತದೆ. ಮನುಷ್ಯನು ಮರಣ ಹೊಂದಿ ಮತ್ತೆ ಬಾರದಂತಾಗಬೇಕಾದರೆ ಮರಣಕ್ಕೆ ಸೂಕ್ತ ಸಮಯಗಳನ್ನು ಪ್ರಭುವು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ. ಆಚಾರ್ಯ ಬಲದೇವ ವಿದ್ಯಾಭೂಷಣರ ಅಭಿಪ್ರಾಯದಲ್ಲಿ, ಇಲ್ಲಿ ಬಳಸಿರುವ ಕಾಲ ಎನ್ನುವ ಸಂಸ್ಕೃತ ಪದವು ಕಾಲದ ದೇವತೆಯನ್ನು ಸೂಚಿಸುತ್ತದೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 24

ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ |

ತತ್ರ ಪ್ರಯಾತಾ ಗಚ್ಛನ್ತಿ ಬ್ರಹ್ಮ ಬ್ರಹ್ಮವಿದೋ ಜನಾಃ ||24||

ಅನುವಾದ: ಪರಬ್ರಹ್ಮನನ್ನು ಬಲ್ಲವರು ಅಗ್ನಿದೇವತೆಯ ಪ್ರಭಾವದ ಕಾಲದಲ್ಲಿ, ಬೆಳಕಿನಲ್ಲಿ, ಹಗಲು ಶುಭಕ್ಷಣದಲ್ಲಿ, ಶುಕ್ಲಪಕ್ಷದಲ್ಲಿ, ಉತ್ತರಾಯಣದ ಆರು ಮಾಸಗಳಲ್ಲಿ ಈ ಜಗತ್ತನ್ನು ಬಿಟ್ಟು ಪರಬ್ರಹ್ಮನನ್ನು ಸೇರುತ್ತಾರೆ.

ಭಾವಾರ್ಥ: ಅಗ್ನಿ, ಬೆಳಕು, ಹಗಲು ಮತ್ತು ಶುಕ್ಲಪಕ್ಷಗಳನ್ನು ಹೆಸರಿಸಿದಾಗ ಆತ್ಮದ ಪ್ರಯಾಣಕ್ಕೆ ವ್ಯವಸ್ಥೆಮಾಡುವ ಅಧಿದೇವತೆಗಳು ಇವುಗಳ ಮೇಲಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಮರಣಕಾಲದಲ್ಲಿ ಮನಸ್ಸು ಮನುಷ್ಯರನ್ನು ಒಂದು ಹೊಸ ಬದುಕಿನ ಮಾರ್ಗಕ್ಕೆ ಕೊಂಡೊಯ್ಯುತ್ತದೆ. ಆಕಸ್ಮಿಕವಾಗಿ ಆಗಲಿ, ವ್ಯವಸ್ಥೆ ಮಾಡಿಕೊಂಡಾಗಲಿ ಮೇಲೆ ಹೇಳಿದ ಕಾಲದಲ್ಲಿ ದೇಹವನ್ನು ಬಿಟ್ಟ ಮನುಷ್ಯನಿಗೆ ನಿರಾಕಾರ ಬ್ರಹ್ಮಜ್ಯೋತಿಯನ್ನು ಸೇರುವುದು ಸಾಧ್ಯವಾಗುತ್ತದೆ. ಯೋಗಾಭ್ಯಾಸದಲ್ಲಿ ಮುಂದುವರಿದ ಯೋಗಿಗಳು ದೇಹವನ್ನು ಬಿಡುವ ಕಾಲವನ್ನು, ಸ್ಥಳವನ್ನು ನಿರ್ಧರಿಸಬಲ್ಲರು. ಇತರರಿಗೆ ನಿಯಂತ್ರಣವಿಲ್ಲ. ಆಕಸ್ಮಿಕವಾಗಿ ಶುಭಕ್ಷಣದಲ್ಲಿ ದೇಹವನ್ನು ಬಿಟ್ಟರೆ ಅವರು ಜನನ ಮರಣಗಳ ಚಕ್ರಕ್ಕೆ ಹಿಂದಿರುಗುವುದಿಲ್ಲ. ಹಾಗೆ ಆಗದಿದ್ದರೆ ಅವರು ಹಿಂದಿರುಗಬೇಕಾದ ಸಾಧ್ಯತೆಯೇ ಬಹು ಹೆಚ್ಚು. ಆದರೆ ಕೃಷ್ಣಪ್ರಜ್ಞೆ ಇರುವ ಪರಿಶುದ್ಧ ಭಕ್ತನು ದೇಹವನ್ನು ಶುಭಗಳಿಗೆಯಲ್ಲಿ ಬಿಡಲಿ, ಅಶುಭಗಳಿಕೆಯಲ್ಲಿ ಬಿಡಲಿ, ಆಕಸ್ಮಿಕವಾಗಿ ಬಿಡಲಿ, ಏರ್ಪಾಟುಮಾಡಿಕೊಂಡು ಬಿಡಲಿ, ಆತನಿಗೆ ಜನನ ಮರಣದ ಚಕ್ರಕ್ಕೆ ಹಿಂತಿರುಗುವ ಭಯವಿಲ್ಲ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 25

ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್ |

ತತ್ರ ಚಾನ್ದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ ||25||

ಅನುವಾದ: ಧೂಮಕಾಲದಲ್ಲಿ, ರಾತ್ರಿಯಲ್ಲಿ, ಕೃಷ್ಣಪಕ್ಷದಲ್ಲಿ, ದಕ್ಷಿಣಾಯನದ ಆರು ತಿಂಗಳಲ್ಲಿ ಮರಣ ಹೊಂದುವ ಯೋಗಿಯು ಚಂದ್ರಲೋಕವನ್ನು ಸೇರುತ್ತಾನೆ. ಆದರೆ ಮರಳಿ ಬರುತ್ತಾನೆ.

ಭಾವಾರ್ಥ: ಶ್ರೀಮದ್ಭಾಗವತದ ಮೂರನೆಯ ಸ್ಕಂಧದಲ್ಲಿ ಕಪಿಲಮುನಿಯು ಭೂಲೋಕದಲ್ಲಿ ಕರ್ಮಾಚರಣೆಯಲ್ಲಿ ಮತ್ತು ಯಜ್ಞಮಾರ್ಗಗಳಲ್ಲಿ ಪರಿಣತರಾದವರು ಮರಣದ ಅನಂತರ ಚಂದ್ರನನ್ನು ಸೇರುತ್ತಾರೆ ಎಂದು ಹೇಳಿದ್ದಾನೆ. ಹೀಗೆ ಮೇಲಿನ ಲೋಕಕ್ಕೆ ಹೋದ ಆತ್ಮಗಳು ಚಂದ್ರಲೋಕದಲ್ಲಿ (ದೇವತೆಗಳ ಲೆಕ್ಕದಂತೆ) ಸುಮಾರು 10,000 ವರ್ಷಗಳು ಇದ್ದು ಸೋಮರಸ ಪಾನಮಾಡಿ ಸುಖಿಸುತ್ತಾರೆ. ಅವರು ಕಟ್ಟಕಡೆಗೆ ಭೂಮಿಗೆ ಹಿಂದಿರುತ್ತಾರೆ. ಜಡ ಇಂದ್ರಿಯಗಳು ಅವರ ಅಸ್ತಿತ್ವವನ್ನು ಗ್ರಹಿಸಲಾರದೆ ಹೋದರೂ ಚಂದ್ರಲೋಕದಲ್ಲಿ ಉನ್ನತವರ್ಗದ ಜೀವಿಗಳಿದ್ದಾರೆ ಎಂದು ಇದರ ಅರ್ಥ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ