logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯ ಸಹಜ ಸ್ವರೂಪ ತಿಳಿದು ಅದಕ್ಕನುಗುಣವಾಗಿ ಕೆಲಸಮಾಡುವುದೇ ನಿಜವಾದ ಜೀವನ; ಗೀತೆಯ ಅರ್ಥ ಹೀಗಿದೆ

Bhagavad Gita: ಮನುಷ್ಯ ಸಹಜ ಸ್ವರೂಪ ತಿಳಿದು ಅದಕ್ಕನುಗುಣವಾಗಿ ಕೆಲಸಮಾಡುವುದೇ ನಿಜವಾದ ಜೀವನ; ಗೀತೆಯ ಅರ್ಥ ಹೀಗಿದೆ

Raghavendra M Y HT Kannada

Feb 14, 2024 05:15 AM IST

google News

ಭಗವದ್ಗೀತೆಯಲ್ಲಿ ಮನುಷ್ಯನ ನಿಜವಾದ ಜೀವನ ಹೇಗೆ ಎಂಬುದರ ಅರ್ಥವನ್ನು ತಿಳಿಯಿರಿ.

  • Bhagavad Gita Updesh: ಮನುಷ್ಯ ಸಹಜ ಸ್ವರೂಪ ತಿಳಿದು ಅದಕ್ಕನುಗುಣವಾಗಿ ಕೆಲಸಮಾಡುವುದೇ ನಿಜವಾದ ಜೀವನ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಭಗವದ್ಗೀತೆಯಲ್ಲಿ ಮನುಷ್ಯನ ನಿಜವಾದ ಜೀವನ ಹೇಗೆ ಎಂಬುದರ ಅರ್ಥವನ್ನು ತಿಳಿಯಿರಿ.
ಭಗವದ್ಗೀತೆಯಲ್ಲಿ ಮನುಷ್ಯನ ನಿಜವಾದ ಜೀವನ ಹೇಗೆ ಎಂಬುದರ ಅರ್ಥವನ್ನು ತಿಳಿಯಿರಿ.

ಅಧ್ಯಾಯ - 6 ಧ್ಯಾನ ಯೋಗ

ಶ್ಲೋಕ-2

ಯಂ ಸನ್ನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಣ್ಡವ |

ನ ಹ್ಯಸನ್ನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ||2||

Bhagavad Gita Updesh in Kannada: ಪಾಂಡುಪುತ್ರನಾದ ಅರ್ಜನನೆ, ಯಾವುದನ್ನು ಸನ್ಯಾಸವೆಂದು ಕರೆಯುವರೋ ಅದೇ ಯೋಗ ಅಥವಾ ಪರಮ ಪ್ರಭವಿನೊಂದಿಗೆ ಸಂಪರ್ಕವನ್ನು ಹೂಂದುವುದು ಎಂದು ತಿಳಿ. ಏಕೆಂದರೆ ಇಂದ್ರಿಯ ತೃಪ್ತಿಯ ಆಸೆಯನ್ನು ತ್ಯಾಗಮಾಡದಿದ್ದರೆ ಯಾರೂ ಯೋಗಿಯಾಗಲಾರರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಿಜವಾದ ಸನ್ಯಾಸಯೋಗ ಅಥವಾ ಭಕ್ತಿಯೆಂದರೆ ಮನುಷ್ಯನು ಜೀವಿಯಾಗಿ ತನ್ನ ಸಹಜ ಸ್ವರೂಪವನ್ನು ತಿಳಿದುಕೊಂಡು ಅದಕ್ಕನುಗುಣವಾಗಿ ಕೆಲಸಮಾಡುವದು ಎಂದರ್ಥ. ಜೀವಿಗೆ ಪ್ರತ್ಯೇಕ ಸ್ವತಂತ್ರ ವ್ಯಕ್ತಿತ್ವವಿಲ್ಲ. ಅವನು ಪರದ ಪ್ರಭುವಿನ ತಟಸ್ಥ ಶಕ್ತಿ. ಐಹಿಕ ಶಕ್ತಿಯ ಬಲೆಗೆ ಸಿಲುಕಿದಾಗ ಅವನು ಬದ್ಧನಾಗುತ್ತಾನೆ. ಕೃಷ್ಣಪ್ರಜ್ಞೆ ಇದ್ದಾಗ ಅಥವಾ ಅಧ್ಯಾತ್ಮಿಕ ಚೈತನ್ಯದ ಅರಿವು ಇದ್ದಾಗ ಅವನು ತನ್ನ ನಿಜವಾದ ಮತ್ತು ಸಹಜವಾದ ಬದುಕಿನ ಸ್ಥಿತಿಯಲ್ಲಿರುತ್ತಾನೆ. ಆದುದರಿಂದ ಮನುಷ್ಯನಿಗೆ ಸಂಪೂರ್ಣಜ್ಞಾನವಿದ್ದಾಗ ಎಲ್ಲ ಐಹಿಕ ಇಂದ್ರಿಯತೃಪ್ತಿಯು ನಿಂತು ಹೋಗುತ್ತದೆ.

ಆತನು ಎಲ್ಲ ಇಂದ್ರಿಯ ತೃಪ್ತಿಯ ಕಾರ್ಯಗಳನ್ನು ತ್ಯಜಿಸುತ್ತಾನೆ. ಇಂದ್ರಿಯಗಳನ್ನು ಐಹಿಕ ಮೋಹದಿಂದ ತಡೆಯುವ ಎಲ್ಲಾ ಯೋಗಿಗಳೂ ಇದನ್ನು ಅನುಷ್ಠಾನ ಮಾಡುತ್ತಾರೆ. ಆದರೆ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಕೃಷ್ಣರಹಿತವಾದುದರಲ್ಲಿ ತನ್ನ ಇಂದ್ರಿಯಗಳನ್ನು ತೊಡಗಿಸುವ ಅವಕಾಶವೇ ಇರುವುದಿಲ್ಲ. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ಏಕಕಾಲದಲ್ಲಿ ಸನ್ಯಾಸಿ ಮತ್ತು ಯೋಗಿ. ಜ್ಞಾನ ಮತ್ತು ಯೋಗ ಪ್ರಕ್ರಿಯೆಗಳಲ್ಲಿ ವಿಧಿಸಿರುವ ಪ್ರಕಾರ ಜ್ಞಾನ ಮತ್ತು ಇಂದ್ರಿಯ ನಿಗ್ರಹಗಳ ಉದ್ದೇಶವು ಕೃಷ್ಣಪ್ರಜ್ಞೆಯಲ್ಲಿ ತಂತಾನೇ ನೆರವೇರುತ್ತದೆ.

ಮನುಷ್ಯನು ಸ್ವಾರ್ಥದ ಕ್ರಿಯೆಗಳನ್ನು ಬಿಟ್ಟುಬಿಡಲು ಶಕ್ತನಾಗಿದ್ದರೆ ಜ್ಞಾನ ಮತ್ತು ಯೋಗಗಳು ನಿರರ್ಥಕ. ಎಲ್ಲ ಸ್ವಾರ್ಥತೃಪ್ತಿಯನ್ನೂ ತ್ಯಜಿಸಿ ಪರಮ ಪ್ರಭುವನ್ನು ತೃಪ್ತಿಗೊಳಿಸಲು ಸಿದ್ಧವಾಗಿರುವುದೇ ಜೀವಿಯ ನಿಜವಾದ ಗುರಿ. ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಯಾವುದೇ ಬಗೆಯ ಸ್ವಂತಭೋಗದ ಆಸೆ ಇರುವುದಿಲ್ಲ. ಅವನು ಸದಾಕಾಲದಲ್ಲಿಯೂ ಪರಮ ಪ್ರಭುವನ್ನು ತೃಪ್ತಿಪಡಿಸುವುದರಲ್ಲಿಯೇ ನಿರತನಾಗಿರುತ್ತಾನೆ. ಪರಮೋನ್ನತನ ಬಗ್ಗೆ ಏನೂ ತಿಳಿಯದವನು ಸ್ವಂತ ತೃಪ್ತಿಯಲ್ಲಿ ತೊಡಗಬೇಕಾಗುತ್ತದೆ. ಏಕೆಂದರೆ ಯಾರೂ ನಿಷ್ಕ್ರಿಯೆಯ ನೆಲೆಯಲ್ಲಿ ನಿಲ್ಲಲು ಸಾಧ್ಯವಿಲ್ಲ. ಕೃಷ್ಣಪ್ರಜ್ಞೆಯ ಅನುಷ್ಠಾನದಿಂದ ಎಲ್ಲ ಉದ್ದೇಶಗಳೂ ಪರಿಪೂರ್ಣವಾಗಿ ಈಡೇರುತ್ತವೆ.

ಶ್ಲೋಕ-3

ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ |

ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ||3||

ಇದನ್ನೂ ಓದಿ: ಭಗವಂತನು ಯಾರ ವಿಷಯದಲ್ಲಿಯೂ ಪಕ್ಷಪಾತಿಯಲ್ಲ, ಎಲ್ಲರನ್ನೂ ಒಂದೇ ರೀತಿ ಕಾಣುತ್ತಾನೆ; ಗೀತೆಯ ಅರ್ಥ ಹೀಗಿದೆ

ಅಷ್ಟಾಂಗ ಯೋಗ ಪದ್ಧತಿಯಲ್ಲಿ ಹೊಸದಾಗಿ ದೀಕ್ಷೆ ಪಡೆದವನಿಗೆ ಕರ್ಮವೇ ಸಾಧನ ಎಂದು ಹೇಳಿದೆ. ಯೋಗದಲ್ಲಿ ಆಗಲೇ ಬಹು ಮುಂದುವರಿದವನಿಗೆ ಎಲ್ಲ ಐಹಿಕ ಕಾರ್ಯಗಳನ್ನು ನಿಲ್ಲಿಸುವುದೇ ಸಾಧನ ಎಂದು ಹೇಳಿದೆ.

ಮನುಷ್ಯನು ಪರಮೋನ್ನತನೊಂದಿಗೆ ಸಂಬಂಧ ಪಡೆಯುವ ಪ್ರಕ್ರಿಯೆಗೆ ಯೋಗವೆಂದು ಹೆಸರು. ಅತ್ಯುನ್ನತ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಸಾಧಿಸುವ ಏಣಿಗೆ ಇದನ್ನು ಹೋಲಿಸಬಹುದು. ಏಣಿಯು ಜೀವಿಯ ಅತ್ಯಂತ ಕೆಳಗಿನ ಐಹಿಕ ಸ್ಥಿತಿಯಿಂದ ಪ್ರಾರಂಭವಾಗಿ ಪರಿಶುದ್ಧ ಆಧ್ಯಾತ್ಮಿಕ ಜೀವನದಲ್ಲಿ ಪರಿಪೂರ್ಣ ಆತ್ಮ ಸಾಕ್ಷಾತ್ಕಾರದವರೆಗೆ ಏರುತ್ತದೆ. ವಿವಿಧ ಎತ್ತರಗಳಿಗೆ ಅನುಗುಣವಾಗಿ ಏಣಿಯ ಬೇರೆ ಬೇರೆ ಭಾಗಗಳಿಗೆ ಬೇರೆ ಬೇರೆ ಹೆಸರುಗಳುಂಟು. ಆದರೆ ಒಟ್ಟಾಗಿ ಇಡೀ ಏಣಿಗೆ ಯೋಗ ಎಂದು ಹೆಸರು. ಇದನ್ನು ಜ್ಞಾನಯೋಗ, ಧ್ಯಾನಯೋಗ ಮತ್ತು ಭಕ್ತಿಯೋಗ ಎಂದು ವಿಂಗಡಿಸಬಹುದು. ಏಣಿಯ ಪ್ರಾರಂಭವನ್ನು ಯೋಗಾರುರುಕ್ಷು ಹಂತವೆಂದೂ ಅತ್ಯಂತ ಮೇಲಿನ ಮಟ್ಟವನ್ನು ಯೋಗಾರೂಢವೆಂದೂ ಕರೆಯುತ್ತಾರೆ.

ಬದುಕಿನ ನಿಯಂತ್ರಕ ತತ್ವಗಳ ಮೂಲಕ ಮತ್ತು ವಿವಿಧ ಯೋಗಾಸನಗಳ ಮೂಲಕ ಧ್ಯಾನದಲ್ಲಿ ತೊಡಗಲು ಪ್ರಯತ್ನಿಸಬಹುದು ( ಈ ಯೋಗಾಸನಗಳು ಸ್ವಲ್ಪ ಹೆಚ್ಚು ಕಡಿಮೆ ದೈಹಿಕ ವ್ಯಾಯಮಗಳೇ). ಅಷ್ಟಾಂಗ ಯೋಗ ಪದ್ಧತಿಯನ್ನು ಕುರಿತು ಹೇಳುವುದಾದರೆ, ಇಂತಹ ಪ್ರಾರಂಭದ ಪ್ರಯತ್ನಗಳನ್ನು ಫಲಾಪೇಕ್ಷೆಯ ಐಹಿಕ ಕರ್ಮಗಳು ಎಂದು ಪರಿಗಣಿಸಲಾಗುತ್ತದೆ.

ಇಂತಹ ಎಲ್ಲ ಕಾರ್ಯಗಳೂ ಇಂದ್ರಿಯ ನಿಯಂತ್ರಣಕ್ಕಾಗಿ ಪರಿಪೂರ್ಣ ಮಾನಸಿಕ ಸಮತೋಲನವನ್ನು ಸಾಧಿಸುವತ್ತ ಕರೆದೊಯ್ಯುತ್ತವೆ. ಧ್ಯಾನಭ್ಯಾಸದಲ್ಲಿ ಮನುಷ್ಯನು ಸಿದ್ಧಿ ಪಡೆದಾಗ ಅವನು ಮನಸ್ಸನ್ನು ಕಲಕುವ ಎಲ್ಲ ಕಾರ್ಯಗಳನ್ನು ನಿಲ್ಲಿಸುತ್ತಾನೆ. ಆದರೆ ಕೃಷ್ಣಪ್ರಜ್ಞೆಯ ಮನುಷ್ಯನು ಸದಾ ಕೃಷ್ಣನನ್ನೇ ಕುರಿತು ಚಿಂತಿಸುತ್ತಿರುವುದರಿಂದ ಅವನು ಪ್ರಾರಂಭದಿಂದಲೇ ಧ್ಯಾನದ ನೆಲೆಯ ಮೇಲಿರುತ್ತಾನೆ. ಸದಾ ಕೃಷ್ಣಸೇವೆಯಲ್ಲಿ ನಿರತನಾಗಿರುವುದರಿಂದ ಎಲ್ಲ ಐಹಿಕ ಕಾರ್ಯಗಳನ್ನು ನಿಲ್ಲಿಸಿದ್ದಾನೆ ಎಂದು ಪರಿಗಣಿಸಲಾಗುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ