Bhagavad Gita: ಮನುಷ್ಯ ಭಗವಂತನನ್ನು ದೃಢವಾಗಿ ಪೂಜಿಸಿದರೆ ಫಲಗಳನ್ನು ಪಡೆಯುತ್ತಾನೆ; ಗೀತೆಯ ಅರ್ಥ ತಿಳಿಯಿರಿ
Jul 19, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಮನುಷ್ಯ ಭಗವಂತನನ್ನು ದೃಢವಾಗಿ ಪೂಜಿಸಿದರೆ ಫಲಗಳನ್ನು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 54 ನೇ ಶ್ಲೋಕದ ಮುಂದುರಿದ ಭಾಗದಲ್ಲಿ ಓದಿ.
ಭಗವದ್ಗೀತೆಯ 11ನೇ ಅಧ್ಯಾಯದ 54ನೇ ಶ್ಲೋಕದ ಮುಂದುವರಿದ ಭಾಗದಲ್ಲಿ.
ತಾಜಾ ಫೋಟೊಗಳು
ಬ್ರಹ್ಮಸಂಹಿತೆಯಲ್ಲಿ (5.48) ಹೇಳುವಂತೆ -
ಯಸ್ಯೈಕ ನಿಶ್ವಸಿತ ಕಾಲಮ್ ಅಥಾವಲಮ್ಬ್ಯ
ಜೀವನ್ತಿ ಲೋಮವಿಲಜಾ ಜಗದಣ್ಣ ನಾಥಾಃ |
ವಿಷ್ಣುರ್ ಮಹಾನ್ ಸ ಇಹ ಯಸ್ಯ ಕಲಾ ವಿಶೇಷೋ
ಗೋವಿನ್ದಮಾದಿಪುರುಷಂ ತಮಹಂ ಭಜಾಮಿ ||
ಮಹಾವಿಷ್ಣುವು ಉಸಿರಾಡಿದರೆ ಸಾಕು, ಅಸಂಖ್ಯಾತ ವಿಶ್ವಗಳು ಒಳಕ್ಕೆ ಹೋಗುತ್ತವೆ ಮತ್ತು ಹೊರಕ್ಕೆ ಬರುತ್ತವೆ. ಇಂತಹ ಮಹಾವಿಷ್ಣುವು ಕೃಷ್ಣನ ಸ್ವಾಂಸ ವಿಸ್ತರಣೆ. ಆದುದರಿಂದ ಎಲ್ಲ ಕಾರಣಗಳ ಕಾರಣನಾದ ಗೋವಿಂದನನ್ನು ಕೃಷ್ಣನನ್ನು ನಾನು ಪೂಜಿಸುತ್ತೇನೆ. ಆದುದರಿಂದ ಎಲ್ಲ ಕಾರಣಗಳ ಕಾರಣನಾದ ಗೋವಿಂದನನ್ನು ಕೃಷ್ಣನನ್ನು ನಾನು ಪೂಜಿಸುತ್ತೇನೆ. ಆದುದರಿಂದ ಕೃಷ್ಣನ ಸಾಕಾರ ರೂಪವನ್ನು ಸಚ್ಚಿದಾನಂದ ಜ್ಞಾನವನ್ನು ಪಡೆದ ದೇವೋತ್ತಮ ಪರಮ ಪುರುಷ ಎಂದು ಮನುಷ್ಯನು ದೃಢವಾಗಿ ಪೂಜಿಸಬೇಕು. ವಿಷ್ಣುವಿನ ಎಲ್ಲ ರೂಪಗಳ ಮೂಲ ಅವನು. ಎಲ್ಲ ಅವತಾರ ರೂಪಗಳ ಮೂಲನೂ ಅವನೇ. ಭಗವದ್ಗೀತೆಯಲ್ಲಿ ದೃಢ ಪಡಿಸಿದಂತೆ ಅವನೇ ಪರಮ ಪುರುಷನು.
ವೇದ ಸಾಹಿತ್ಯದಲ್ಲಿ (ಗೋಪಾಲತಾಪನಿ ಉಪನಿಷತ್ 1.1) ಹೀಗೆ ಹೇಳಿದೆ -
ಸಚ್ಚಿದಾನನ್ದ ರೂಪಾಯ ಕೃಷ್ಣಾಯಾಕ್ಲಿಷ್ಟ ಕಾರಿಣೇ |
ನಮೋ ವೇದಾನ್ತ ವೇದ್ಯಾಯ ಗುರವೇ ಬುದ್ಧಿ ಸಾಕ್ಷಿಣೇ ||
ನಾನು ಕೃಷ್ಣನಿಗೆ ಗೌರವ ಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಆತನು ಸಚ್ಚಿದಾನಂದ ರೂಪನು. ಅವನನ್ನು ಅರ್ಥಮಾಡಿಕೊಳ್ಳುವುದೆಂದರೆ ವೇದಗಳನ್ನು ಅರ್ಥಮಾಡಿಕೊಂಡಂತೆ. ಆದುದರಿಂದ ಆತನು ಪರಮ ಗುರು. ಆದುದರಿಂದ ಆತನಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ಅನಂತರ ಹೀಗೆ ಹೇಳಿದೆ - ಕೃಷ್ಣೋ ವೈ ಪರಮಂ ದೈವತಮ್ - ಕೃಷ್ಣನು ದೇವೋತ್ತಮ ಪರಮ ಪುರುಷ (ಗೋಪಾಲತಾಪನಿ 1.3) ಏಕೋ ವಶೀ ಸರ್ವಗಃ ಕೃಷ್ಣ ಈಡ್ಯಃ - ಆ ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಪರಮ ಪೂಜ್ಯನು. ಏಕೋಪಿ ಸನ್ ಬಹುಧಾ ಯೋವಭಾತಿ - ಕೃಷ್ಣನು ಒಬ್ಬನೇ, ಆದರೆ ಲೆಕ್ಕವಿಲ್ಲದಷ್ಟು ರೂಪಗಳಲ್ಲಿ ಮತ್ತು ವಿಸ್ತೃತ ಅವತಾರಗಳಲ್ಲಿ ಆತನು ಪ್ರಕಟವಾಗುತ್ತಾನೆ. (ಗೋಪಾಲತಾಪನಿ 1.21) ಬ್ರಹ್ಮಸಂಹಿತೆಯಲ್ಲಿ (5.1) ಹೀಗೆ ಹೇಳಿದೆ -
ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನನ್ದ ವಿಗ್ರಹಃ |
ಅನಾದಿರ್ ಆದಿರ್ ಗೋವಿನ್ದಃ ಸರ್ವ ಕಾರಣ ಕಾರಣಮ್ ||
ಇದನ್ನೂ ಓದಿ: ಶ್ರೀಮದ್ ಭಗವದ್ಗೀತೆ ಮಾತ್ರವಲ್ಲ, ಬ್ರಹ್ಮಗೀತೆ, ಜನಕ ಗೀತೆ ಸೇರಿದಂತೆ ಹಿಂದೂ ಧರ್ಮದಲ್ಲಿದೆ ಒಟ್ಟು 60 ಗೀತೆಗಳು
ದೇವೋತ್ತಮ ಪರಮ ಪುರುಷನು ಕೃಷ್ಣನು. ಅವನಿಗೆ ಸಚ್ಚಿದಾನಂದ ದೇಹವಿದೆ. ಅವನಿಗೆ ಆದಿಯಿಲ್ಲ. ಏಕೆಂದರೆ ಅವನೇ ಎಲ್ಲದರ ಆದಿ, ಅವನು ಎಲ್ಲ ಕಾರಣಗಳ ಕಾರಣನು. ಬೇರೆಡೆ ಹೇಗೆ ಹೇಳಿದೆ - ಯತ್ರಾವತೀರ್ಣಂ ಕೃಷ್ಣಾಖ್ಯಂ ಪರಂ ಬ್ರಹ್ಮ ನರಾಕೃತಿ - ಪರಮ ಪರಿಪೂರ್ಣ ಸತ್ಯವು ಒಬ್ಬ ವ್ಯಕ್ತಿ. ಅವನ ಹೆಸರು ಕೃಷ್ಣ. ಅವನು ಒಮ್ಮೊಮ್ಮೆ ಈ ಭೂಮಿಗೆ ಇಳಿದು ಬರುತ್ತಾನೆ. ಹೀಗೆಯೇ ಶ್ರೀಮದ್ಭಾಗವತದಲ್ಲಿ ದೇವೋತ್ತಮ ಪರಮ ಪುರುಷನ ಎಲ್ಲ ಬಗೆಯ ಅವತಾರಗಳ ವರ್ಣನೆಯನ್ನು ಕಾಣುತ್ತೇನೆ. ಈ ಪಟ್ಟಿಯಲ್ಲಿ ಕೃಷ್ಣನ ಹೆಸರೂ ಕಾಣುತ್ತದೆ. ಆದರೆ ಈ ಕೃಷ್ಣನ ದೇವರ ಒಂದು ಅವತಾರವಲ್ಲ. ಅವನು ಮೂಲ ದೇವೋತ್ತಮ ಪರಮ ಪುರುಷನೇ ಎಂದು ಹೇಳಲಾಗಿದೆ. (ಏತೇ ಚಾಂಶ ಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್).
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)