logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಸ್ವರ್ಗಲೋಕಗಳನ್ನು ಸೇರುವುದಕ್ಕಾಗಿ ಮನುಷ್ಯ ನಿರ್ದಿಷ್ಟ ಯಜ್ಞಗಳನ್ನು ಮಾಡುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಸ್ವರ್ಗಲೋಕಗಳನ್ನು ಸೇರುವುದಕ್ಕಾಗಿ ಮನುಷ್ಯ ನಿರ್ದಿಷ್ಟ ಯಜ್ಞಗಳನ್ನು ಮಾಡುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Apr 02, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಸ್ವರ್ಗಲೋಕಗಳನ್ನು ಸೇರುವುದಕ್ಕಾಗಿ ಮನುಷ್ಯ ನಿರ್ದಿಷ್ಟ ಯಜ್ಞಗಳನ್ನು ಮಾಡುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ 3ನೇ ಶ್ಲೋಕದಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 3

ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಧ್ಯಾತ್ಮಮುಚ್ಯತೇ|

ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ||3||

ಅನುವಾದ - ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು - ಅವಿನಾಶಿಯಾದ ದಿವ್ಯಜೀವಿಗೆ ಬ್ರಹ್ಮನ್ ಎಂದು ಹೆಸರು. ಅವನ ನಿತ್ಯಸ್ವಭಾವವನ್ನು ಅಧ್ಯಾತ್ಮ ಅಥವಾ ಆತ್ಮ ಎಂದು ಕರೆಯುತ್ತಾರೆ. ಜೀವಿಗಳ ಭೌತಿಕ ಶರೀರಗಳ ಬೆವಣಿಗೆಗೆ ಸಂಬಂಧಿಸಿದ ಕ್ರಿಯೆಗೆ ಕರ್ಮ ಎಂದು ಹೆಸರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ - ಬ್ರಹ್ಮನ್ ನಾಶವಾಗುವುದಿಲ್ಲ. ಅದು ನಿರಂತರವಾಗಿ ಅಸ್ತಿತ್ವದಲ್ಲಿರುತ್ತದೆ. ಅದರ ರಚನೆಯ ಯಾವ ಕಾಲದಲ್ಲಿಯೂ ಬದಲಾಗುವುದಿಲ್ಲ. ಆದರೆ ಬ್ರಹ್ಮನ್‌ನ ಆಚೆ ಪರಬ್ರಹ್ಮವಿದೆ. ಬ್ರಹ್ಮನ್ ಎನ್ನುವುದು ಜೀವಿಯನ್ನು ಸೂಚಿಸುತ್ತದೆ ಮತ್ತು ಪರಬ್ರಹ್ಮನ್ ಎನ್ನುವುದು ದೇವೋತ್ತಮ ಪರಮ ಪುರುಷನನ್ನು ಸೂಚಿಸುತ್ತದೆ. ಜೀವಿಯ ಸಹಜ ಸ್ವರೂಪವು ಅವನು ಐಹಿಕ ಜಗತ್ತಿನಲ್ಲಿ ಸ್ವೀಕರಿಸುವ ಸ್ಥಾನಕ್ಕಿಂತ ಬೇರೆಯಾದುದು. ಐಹಿಕ ಪ್ರಜ್ಞೆಯಲ್ಲಿ ವಸ್ತುವಿನ ಪ್ರಭುವಾಗಲು ಪ್ರಯತ್ನಿಸುವುದು ಅವನ ಸ್ವಭಾವ. ಆದರೆ ಆಧ್ಯಾತ್ಮಿಕ ಪ್ರಜ್ಞೆಯಲ್ಲಿ, ಕೃಷ್ಣಪ್ರಜ್ಞೆಯಲ್ಲಿ ಪರಮ ಪ್ರಭುವನ್ನು ಸೇವಿಸುವುದೇ ಅವನ ಸ್ಥಾನ. ಜೀವಿಯು ಐಹಿಕ ಪ್ರಜ್ಞೆಯಲ್ಲಿದ್ದಾಗ ಐಹಿಕ ಜಗತ್ತಿನಲ್ಲಿ ಅವನು ಹಲವು ದೇಹಗಳನ್ನು ಧರಿಸಬೇಕಾಗುತ್ತದೆ. ಇದಕ್ಕೆ ಕರ್ಮ ಅಥವಾ ಐಹಿಕ ಪ್ರಜ್ಞೆಯ ಶಕ್ತಿಯಿಂದ ಘಟಿಸುವ ವೈವಿಧ್ಯಮಯ ಸೃಷ್ಟಿ ಎಂದು ಹೆಸರು.

ವೈದಿಕ ಸಾಹಿತ್ಯದಲ್ಲಿ ಜೀವಿಯನ್ನು ಜೀವಾತ್ಮ ಮತ್ತು ಬ್ರಹ್ಮನ್ ಎಂದು ಕರೆದಿದೆ. ಆದರೆ ಎಲ್ಲಿಯೂ ಅದನ್ನು ಪರಬ್ರಹ್ಮನೆಂದು ಕರೆದಿಲ್ಲ. ಜೀವಾತ್ಮನು ಬೇರೆಬೇರೆ ಸ್ಥಿತಿಗಳನ್ನು ಸ್ವೀಕರಿಸುತ್ತಾನೆ. ಒಮ್ಮೊಮ್ಮೆ ಆತನು ಅಜ್ಞಾನವು ತುಂಬಿದ ಭೌತಿಕ ಪ್ರಕೃತಿಯಲ್ಲಿ ಒಂದಾಗಿ ತನ್ನನ್ನು ಜಡವಸ್ತುವಿನೊಂದಿಗೆ ಗುರುತಿಸಿಕೊಳ್ಳುತ್ತಾನೆ. ಒಮ್ಮೊಮ್ಮೆ ತನ್ನನ್ನು ಉತ್ತಮವಾದ ಅಧ್ಯಾತ್ಮಿಕ ಪ್ರಕೃತಿಯೊಂದಿಗೆ ಗುರುತಿಸಿಕೊಳ್ಳುತ್ತಾನೆ. ಆದುದರಿಂದ ಆತನನ್ನು ಪರಮ ಪ್ರಭುವಿನ ಅಲ್ಪಪ್ರಮಾಣದ ಶಕ್ತಿ ಎಂದು ಕರೆಯುತ್ತಾರೆ. ಆತನು ಭೌತಿಕ ಪ್ರಕೃತಿಯೊಂದಿಗೆ ಗುರುತಿಸಿಕೊಳ್ಳುತ್ತಾನೆಯೇ ಅಥವಾ ಅಧ್ಯಾತ್ಮಿಕ ಪ್ರಕೃತಿಯೊಂದಿಗೆ ಗುರುತಿಸಿಕೊಳ್ಳುತ್ತಾನೆಯೇ ಎನ್ನುವುದನ್ನು ಅವಲಂಬಿಸಿ, ಅವನಿಗೆ ಭೌತಿಕ ಅಥವಾ ಅಧ್ಯಾತ್ಮಿಕ ಶರೀರವು ಲಭಿಸುತ್ತದೆ.

ಭೋಗಗಳನ್ನು ಪಡೆಯಲು ಒಮ್ಮೊಮ್ಮೆ ಯಜ್ಞಗಳನ್ನು ಮಾಡುತ್ತಾನೆ

ಭೌತಿಕ ಪ್ರಕೃತಿಯಲ್ಲಿ ಆತನ ಜೀವದ 84,00,000 ವರ್ಗಗಳಲ್ಲಿ ಯಾವುದಾದರೂ ಒಂದರಿಂದ ಶರೀರವನ್ನು ಪಡೆಯಬಹುದು. ಆದರೆ ಅಧ್ಯಾತ್ಮಿಕ ಪ್ರಕೃತಿಯಲ್ಲಿ ಆತನಿಗೆ ಇರುವುದು ಒಂದೇ ಶರೀರ. ಭೌತಿಕ ಪ್ರಕೃತಿಯಲ್ಲಿ ಆತನ ಕರ್ಮಕ್ಕನುಗುಣವಾಗಿ ಆತನು ಮನುಷ್ಯನಾಗಿ, ದೇವತೆಯಾಗಿ, ಪ್ರಾಣಿಯಾಗಿ, ಪಶುವಾಗಿ, ಪಕ್ಷಿಯಾಗಿ ಇತ್ಯಾದಿ ರೂಪತಾಳುತ್ತಾನೆ. ಐಹಿಕ ಸ್ವರ್ಗಲೋಕಗಳನ್ನು ಸೇರಿ ಅಲ್ಲಿನ ಭೋಗಗಳನ್ನು ಪಡೆಯಲು ಆತನು ಒಮ್ಮೊಮ್ಮೆ ಯಜ್ಞಗಳನ್ನು ಮಾಡುತ್ತಾನೆ. ಆದರೆ ಅವನ ಭೋಗಗಳನ್ನು ಪಡೆಯಲು ಆತನು ಒಮ್ಮೊಮ್ಮೆ ಯಜ್ಞಗಳನ್ನು ಮಾಡುತ್ತಾನೆ. ಆದರೆ ಅವನ ಪುಣ್ಯವು ತೀರಿದಾಗ ಆತನು ಮನುಷ್ಯ ರೂಪದಲ್ಲಿ ಮತ್ತೆ ಭೂಮಿಗೆ ಬರುತ್ತಾನೆ. ಈ ಪ್ರಕ್ರಿಯೆಗೆ ಕರ್ಮ ಎಂದು ಹೆಸರು.

ಛಾಂದೋಗ್ಯ ಉಪನಿಷತ್ತು ವೈದಿಕ ಯಜ್ಞಗಳ ಕ್ರಮವನ್ನು ವರ್ಣಿಸುತ್ತದೆ. ಬಲಿಪೀಠದ ಮೇಲೆ ಐದು ಬಗೆಯ ಅಗ್ನಿಗಳಲ್ಲಿ ಐದು ಬಗೆಯ ಆಹುತಿಗಳನ್ನು ಅರ್ಪಿಸುತ್ತಾರೆ. ಐದು ಬಗೆಯ ಅಗ್ನಿಗಳನ್ನು ಸ್ವರ್ಗಲೋಕಗಳು, ಮೋಡಗಳು, ಭೂಮಿ, ಪುರುಷ ಮತ್ತು ಸ್ತ್ರೀ ಎಂದು ಭಾವಿಸುತ್ತಾರೆ. ಐದು ಬಗೆಯ ಆಹುತಿಗಳೆಂದರೆ ಶ್ರದ್ಧೆ, ಚಂದ್ರಲೋಕದ ಭೋಕ್ತಾರ, ಮಳೆ, ಧಾನ್ಯಗಳು ಮತ್ತು ವೀರ್ಯ.

ಯಜ್ಞದ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಸ್ವರ್ಗಲೋಕಗಳನ್ನು ಸೇರುವುದಕ್ಕಾಗಿ ಜೀವಿಯು ನಿರ್ದಿಷ್ಟ ಯಜ್ಞಗಳನ್ನು ಮಾಡುತ್ತಾನೆ. ಆದುದರಿಂದ ಅವುಗಳನ್ನು ಸೇರುತ್ತಾನೆ. ಯಜ್ಞದ ಪುಣ್ಯವು ಕ್ಷಯಿಸಿದಾಗ ಜೀವಿಯು ಮಳೆಯ ರೂಪದಲ್ಲಿ ಭೂಮಿಗೆ ಹಿಂದಿರುಗುತ್ತಾನೆ. ಅನಂತರ ಧಾನ್ಯಗಳ ರೂಪವನ್ನು ಪಡೆಯುತ್ತಾನೆ. ಧಾನ್ಯಗಳನ್ನು ಪುರುಷನು ತಿನ್ನುತ್ತಾನೆ. ಅವು ವೀರ್ಯವಾಗಿ ಮಾರ್ಪಡುತ್ತವೆ. ವೀರ್ಯವು ಹೆಂಗಸಿಗೆ ಗರ್ಭಾಧಾನ ಮಾಡುತ್ತದೆ. ಜೀವಿಯು ಮತ್ತೆ ಮನುಷ್ಯ ರೂಪವನ್ನು ಪಡೆಯುತ್ತಾನೆ. ಯಜ್ಞವನ್ನು ಮಾಡುತ್ತಾನೆ. ಹೀಗೆ ಚಕ್ರದ ಪುನರಾವರ್ತನೆಯಾಗುತ್ತದೆ. ಈ ರೀತಿಯಲ್ಲಿ ಜೀವಿಯು ಸಂಸಾರ ಮಾರ್ಗದಲ್ಲಿ ಬಂದು ನಿರ್ಗಮಿಸುತ್ತಿರುತ್ತಾನೆ. ಆದರೆ ಕೃಷ್ಣಪ್ರಜ್ಞೆ ಇರುವ ಮನುಷ್ಯನು ಇಂತಹ ಯಜ್ಞಗಳಿಂದ ದೂರವಿರುತ್ತಾನೆ. ಆತನು ನೇರವಾಗಿ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುತ್ತಾನೆ. ಹೀಗೆ ಭಗವದ್ಧಾಮಕ್ಕೆ ಹಿಂದಿರುಗಲು ಸಿದ್ಧಮಾಡಿಕೊಳ್ಳುತ್ತಾನೆ.

ಭಗವದ್ಗೀತೆಯ ನಿರಾಕಾರವಾದಿ ವ್ಯಾಖ್ಯಾನಕಾರರು ಬ್ರಹ್ಮನ್ ಐಹಿಕ ಜಗತ್ತಿನಲ್ಲಿ ಜೀವಿಯ ರೂಪವನ್ನು ಪಡೆಯುತ್ತದೆ ಎಂದು ಕಾರಣವೇ ಇಲ್ಲದೆ ಭಾವಿಸುತ್ತಾರೆ. ಇದನ್ನು ಸಮರ್ಥಿಸಲು ಅವರು ಗೀತೆಯ ಹದಿನೈದನೆಯ ಅಧ್ಯಾಯದ ಏಳನೆಯ ಶ್ಲೋಕವನ್ನು ಪ್ರಸ್ತಾಪಿಸುತ್ತಾರೆ. ಆದರೆ ಈ ಶ್ಲೋಕದಲ್ಲಿ ಸಹ ಭಗವಂತನು ಜೀವಿಯನ್ನು ನನ್ನ ನಿತ್ಯವಾದ ಒಂದು ಭಾಗ ಎಂದು ವರ್ಣಿಸುತ್ತಾನೆ. ಭಗವಂತನ ಒಂದು ಭಾಗವಾದ ಜೀವಿಯು ಐಹಿಕ ಜಗತ್ತಿಗೆ ಪತನ ಹೊಂದಬಹುದು. ಆದರೆ ಪರಮ ಪ್ರಭುವಿಗೆ (ಅತ್ಯುತ) ಎಂದಿಗೂ ಪತನವಿಲ್ಲ. ಆದುದರಿಂದ ಪರಬ್ರಹ್ಮನ್ ಜೀವಿಯ ರೂಪವನ್ನು ಪಡೆಯುತ್ತಾನೆ ಎನ್ನುವ ಸ್ವೀಕೃತ ಭಾವನೆಯನ್ನು ಒಪ್ಪಲು ಸಾಧ್ಯವಿಲ್ಲ. ವೈದಿಕ ಸಾಹಿತ್ಯದಲ್ಲಿ ಬ್ರಹ್ಮನ್ (ಜೀವಿ) ಮತ್ತು ಪರಬ್ರಹ್ಮನ್ (ಪರಮ ಪ್ರಭು) ಇರುವ ಬೇರೆ ಬೇರೆ ಎಂದ ನೆನಪಿಡುವುದು ಮುಖ್ಯವಾದದ್ದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ