Bhagavad Gita: ಆರೋಗ್ಯಕರ ಸ್ಥಿತಿಯನ್ನು ಹದಗೆಡಿಸುವ ಏನನ್ನೂ ಮನುಷ್ಯ ಮಾಡಬಾರದು; ಗೀತೆಯ ಸಾರಾಂಶ ಹೀಗಿದೆ
May 16, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಆರೋಗ್ಯಕರ ಸ್ಥಿತಿಯನ್ನು ಹದಗೆಡಿಸುವ ಏನನ್ನೂ ಮನುಷ್ಯ ಮಾಡಬಾರದು ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 30ನೇ ಶ್ಲೋಕದಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 30
ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್
ಸಾಧುರೇವ ಸ ಮನ್ತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ
ಅನುವಾದ: ಯಾವನಾದರೂ ಅತ್ಯಂತ ಹೀನ ಕಾರ್ಯವನ್ನು ಮಾಡುತ್ತಿದ್ದರೂ, ಆತನು ಭಕ್ತಿಸೇವೆಯಲ್ಲಿ ತೊಡಗಿದ್ದರೆ ಆತನನ್ನು ಸಾಧು ಎಂದೇ ಭಾವಿಸಬೇಕು. ಏಕೆಂದರೆ ಆತನು ತನ್ನ ನಿರ್ಧಾರದಲ್ಲಿ ಸರಿಯಾಗಿ ನೆಲೆಸಿದ್ದಾನೆ.
ತಾಜಾ ಫೋಟೊಗಳು
ಭಾವಾರ್ಥ: ಸುದುರಾಚಾರಃ ಎನ್ನುವ ಪದ ಈ ಶ್ಲೋಕದಲ್ಲಿ ಅರ್ಥವತ್ತಾದದ್ದು. ಅದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಜೀವಿಯು ಬದ್ಧನಾಗಿದ್ದಾಗ ಅವನ ಚಟುವಟಿಕೆಗಳು ಎರಡು ಬಗೆಯವು - ಬದ್ಧವಾದವು, ಸಹಜಸ್ವರೂಪದವು. ಭಕ್ತರ ಬದ್ಧಜೀವನಕ್ಕೆ ಸಂಬಂಧಿಸಿದಂತೆ ದೇಹರಕ್ಷಣೆ ಹಾಗೂ ಸಮಾಜದ ಸರ್ಕಾರದ ನಿಯಮಗಳನ್ನು ಪಾಲಿಸುವಲ್ಲಿ ಬೇರೆ ಬೇರೆ ಚಟುವಟಿಕೆಗಳಿರುತ್ತವೆ. ಇವನ್ನು ಬದ್ಧ ಚಟುವಟಿಕೆಗಳು ಎಂದು ಕರೆಯುತ್ತಾರೆ. ಇವುಗಳಲ್ಲದೆ, ತನ್ನ ಅಧ್ಯಾತ್ಮಿಕ ಸ್ವರೂಪದ ಅರಿವಿದ್ದು ಕೃಷ್ಣಪ್ರಜ್ಞೆಯಲ್ಲಿ ಅಥವಾ ಪ್ರಭುವಿನ ಭಕ್ತಿಸೇವೆಯಲ್ಲಿ ನಿರತನಾದ ಜೀವಿಯು ನಿರ್ವಹಿಸಬೇಕಾದ ಅಧ್ಯಾತ್ಮಿಕ ಚಟುವಟಿಕೆಗಳೂ ಇವೆ. ಇಂತಹ ಚಟುವಟಿಕೆಗಳನ್ನು ಜೀವಿಯು ತನ್ನ ಸಹಜಸ್ವರೂಪದಲ್ಲಿ ಮಾಡುತ್ತಾನೆ. ಇವಕ್ಕೆ ಶಾಸ್ತ್ರೀಯವಾಗಿ ಭಕ್ತಿಸೇವೆ ಎಂದು ಹೆಸರು (ವ.
ಬದ್ಧಸ್ಥಿತಿಯಲ್ಲಿ ಕೆಲವೊಮ್ಮೆ ಭಕ್ತಿಸೇವೆಯೂ ದೇಹಕ್ಕೆ ಸಂಬಂಧಿಸಿದಂತೆ ಬದ್ಧಸೇವೆಯೂ ಪರಸ್ಪರ ಸಮಾನಾಂತರವಾಗುತ್ತವೆ. ಆದರೆ ಕೆಲವೊಮ್ಮೆ ಈ ಚಟುವಟಿಕೆಗಳು ಒಂದಕ್ಕೊಂದು ವಿರೋಧವಾಗುತ್ತವೆ. ಸಾಧ್ಯವಾದ ಮಟ್ಟಿಗೂ ತನ್ನ ಆರೋಗ್ಯಕರವಾದ ಸ್ಥಿತಿಯನ್ನು ಹದಗೆಡಿಸುವ ಏನನ್ನೂ ಮಾಡದಂತೆ ಭಕ್ತನು ಬಹಳ ಎಚ್ಚರದಿಂದ ಇರುತ್ತಾನೆ. ತನ್ನ ಚಟುವಟಿಕೆಗಳು ಒಂದಕ್ಕೊಂದು ವಿರೋಧವಾಗುತ್ತದೆ. ಸಾಧ್ಯವಾದ ಮಟ್ಟಿಗೂ ತನ್ನ ಆರೋಗ್ಯಕರವಾದ ಸ್ಥಿತಿಯನ್ನು ಹದಗೆಡಿಸುವ ಏನನ್ನೂ ಮಾಡದಂತೆ ಭಕ್ತನು ಬಹಳ ಎಚ್ಚರದಿಂದ ಇರುತ್ತಾನೆ.
ತನ್ನ ಚಟುವಟಿಕೆಗಳಲ್ಲಿ ಪರಿಪೂರ್ಣತೆಯು ತಾನು ಕ್ರಮಕ್ರಮವಾಗಿ ಕೃಷ್ಣಪ್ರಜ್ಞೆಯನ್ನು ಸಾಧಿಸುವುದರಲ್ಲಿದೆ ಎಂದು ಅವನಿಗೆ ಗೊತ್ತು. ಆದರೆ ಒಮ್ಮೆಮ್ಮೆ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು, ಸಾಮಾಜಿಕ ಅಥವಾ ರಾಜಕೀಯವಾಗಿ ಅತ್ಯಂತ ಹೀನಾಯವೆನ್ನಿಸುವ ಕೆಲಸಗಳನ್ನು ಮಾಡುವುದನ್ನು ಕಾಣಬಹುದು. ಇಂತಹ ತಾತ್ಕಾಲಿಕ ಪತನವು ಅವನನ್ನು ಅಯೋಗ್ಯನನ್ನಾಗಿ ಮಾಡುವುದಿಲ್ಲ. ಒಬ್ಬ ಮನುಷ್ಯನು ಪತತನಾಗಬಹುದು. ಆದರೆ ಅವನು ಮನಃಪೂರ್ವಕವಾಗಿ ಪರಮ ಪ್ರಭುವಿನ ದಿವ್ಯಸೇವೆಯಲ್ಲಿ ನಿರತನಾಗಿದ್ದರೆ ಅವನ ಹೃದಯದಲ್ಲಿರುವ ಪ್ರಭುವು ಅವನನ್ನು ಪರಿಶುದ್ಧಗೊಳಿಸುತ್ತಾನೆ. ಮತ್ತು ಆ ಹೀನ ಕಾರ್ಯಕ್ಕಾಗಿ ಕ್ಷಮಿತ್ತಾನೆ. ಹೀಗೆಂದು ಶ್ರೀಮದ್ಭಾಗವತದಲ್ಲಿ ಹೇಳಿದೆ.
ಐಹಿಕದ ಸೋಂಕು ಎಷ್ಟು ಪ್ರಬಲ ಎಂದರೆ ಭಗವಂತನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿರುವ ಯೋಗಿಯೂ ಸಹ ಒಮ್ಮೊಮ್ಮೆ ಬಲೆಗೆ ಬೀಳುತ್ತಾನೆ. ಆದರೆ ಕೃಷ್ಣಪ್ರಜ್ಞೆಯು ಎಷ್ಟು ಶಕ್ತವಾದದ್ದು ಎಂದರೆ ಯಾವಾಗಲಾದರೊಮ್ಮೆ ಆಗುವ ಇಂತಹ ಪತನವನ್ನು ಕೂಡಲೇ ಸರಿಪಡಿಸುತ್ತದೆ. ಆದುದರಿಂದ ಭಕ್ತಿಸೇವೆಯ ಪ್ರಕ್ರಿಯೆು ಯಾವಾಗಲೂ ಯಶಸ್ವಿಯಾಗುತ್ತದೆ. ಆದರ್ಶ ಮಾರ್ಗದಿಂದ ಆಕಸ್ಮಿಕವಾಗಿ ಪತನ ಹೊಂದಿದುದಕ್ಕೆ ಯಾರೂ ಭಕ್ತನನ್ನು ಅಪಹಾಸ್ಯ ಮಾಡಬಾರದು. ಏಕೆಂದರೆ, ಮುಂದಿನ ಶ್ಲೋಕದಲ್ಲಿ ವಿವರಿಸಿರುವಂತೆ, ಭಕ್ತನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ನೆಲೆಸುತ್ತಲೇ ಒಮ್ಮೊಮ್ಮೆ ಸಂಭವಿಸುವ ಇಂತಹ ಪತನಗಳು ಕಾಲಕ್ರಮದಲ್ಲಿ ನಿಂತುಹೋಗುತ್ತವೆ.