ಭಗವದ್ಗೀತೆ: ಶ್ರೀಕೃಷ್ಣನಲ್ಲಿ ಜೀವಿಸುವ ವ್ಯಕ್ತಿ ಅಜ್ಞಾನ ಸಾಗರದಿಂದ ಹೊರ ಬರುತ್ತಾನೆ; ಗೀತೆಯ ಅರ್ಥ ಹೀಗಿದೆ
Jan 21, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶ್ರೀಕೃಷ್ಣನಲ್ಲಿ ಜೀವಿಸುವ ವ್ಯಕ್ತಿ ಅಜ್ಞಾನ ಸಾಗರದಿಂದ ಹೊರ ಬರುತ್ತಾನೆ ಎಂಬುದರ ಅರ್ಥವನ್ನ ಗೀತೆಯಲ್ಲಿ ತಿಳಿಯಿರಿ.
ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸನ್ತರಿಷ್ಯಸಿ ||36||
ಪಾಪಿಗಳಲ್ಲಿ ಪರಮಪಾಪಿಯೆಂದು ಪರಿಗಣಿತನಾಗಿದ್ದರೂ ನೀವು ಆಧ್ಯಾತ್ಮಿಕ ಜ್ಞಾನದ ದೋಣಿಯಲ್ಲಿದ್ದಾಗ ದುಃಖಸಾಗರವನ್ನುು ದಾಟಬಲ್ಲೆ.
ತಾಜಾ ಫೋಟೊಗಳು
ಮನುಷ್ಯನಿಗೆ ಕೃಷ್ಣ ಸಂಬಂಧದಲ್ಲಿ ತನ್ನ ನಿಜಸ್ವರೂಪದ ಅರಿವು ಎಷ್ಟು ಒಳ್ಳೆಯದೆಂದರೆ ಅದು ಅವನನ್ನು ಅಜ್ಞಾನಸಾಗರದಲ್ಲಿ ನಡೆಯುವ ಅಸ್ತಿತ್ವದ ಹೋರಾಟದಿಂದ ಕೂಡಲೇ ಮೇಲೆತ್ತುತ್ತದೆ. ಈ ಐಹಿಕ ಜಗತ್ತನ್ನು ಕೆಲವೊಮ್ಮೆ ಅಜ್ಞಾನ ಸಾಗರವೆಂದು, ಕೆಲವೊಮ್ಮೆ ಉರಿಯುತ್ತಿರುವ ಅರಣ್ಯವೆಂದು ಭಾವಿಸುತ್ತಾರೆ. ಎಂತಹ ನಿಪುಣ ಈಜುಗಾರನೂ ಸಮುದ್ರದಲ್ಲಿ ಉಳಿದುಕೊಳ್ಳಲು ತುಂಬ ಸೆಣಸಬೇಕಾಗುತ್ತದೆ. ಪಾಡುಪಡುತ್ತಿರುವ ಈಜುಗಾರನನ್ನು ಯಾರಾದರೂ ಬಂದು ಸಮುದ್ರದಿಂದ ಮೇಲೆತ್ತಿದರೆ ಆತನೇ ಬಹು ದೊಡ್ಡ ರಕ್ಷಕ. ದೇವೋತ್ತಮ ಪರಮ ಪುರುಷನಿಂದ ಬಂದ ಪರಿಪೂರ್ಣಜ್ಞಾನವು ಮುಕ್ತಿಮಾರ್ಗ. ಕೃಷ್ಣಪ್ರಜ್ಞೆಯ ದೋಣಿಯು ಬಹು ಸರಳವಾದದ್ದು, ಜೊತೆಗೇ ಅತ್ಯಂತ ಭವ್ಯವಾದದ್ದು.
ಯಥೈಧಾಂಸಿ ಸಮಿದ್ಧೋಗ್ನಿಸ್ಮಸಾತ್ ಕುರುತೇರ್ಜುನ |
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ||37||
ಅರ್ಜುನನೆ, ಪ್ರಜ್ವಲಿಸುತ್ತಿರುವ ಬೆಂಕಿಯು ಕಟ್ಟಿಗೆಯನ್ನು ಹೇಗೆ ಬೂದಿ ಮಾಡುತ್ತದೆಯೋ ಹಾಗೆ ಜ್ಞಾನವೆಂಬ ಅಗ್ನಿಯು ಎಲ್ಲ ಐಹಿಕ ಕ್ರಮಗಳ ಪ್ರತಿಕ್ರಿಯೆಗಳನ್ನೂ ಸುಟ್ಟು ಬೂದಿಮಾಡುವುದು.
ಆತ್ಮ ಪರಮಾತ್ಮ ಮತ್ತು ಇವುಗಳು ಸಂಬಂಧದ ಪರಿಪೂರ್ಣ ಜ್ಞಾನವನ್ನು ಇಲ್ಲ ಅಗ್ನಿಗೆ ಹೋಲಿಸಿದೆ. ಈ ಅಗ್ನಿಯು ಎಲ್ಲ ಪಾಪ ಕರ್ಮಗಳ ಪ್ರತಿಕ್ರಿಯೆಗಳನ್ನು ಸುಟ್ಟುಹಾಕುವುದಲ್ಲದೆ ಎಲ್ಲ ಪುಣ್ಯ ಕರ್ಮಗಳನ್ನೂ ಸುಟ್ಟು ಬೂದಿ ಮಾಡುತ್ತದೆ. ಕರ್ಮದ ಪ್ರತಿಕ್ರಿಯೆಗಳ ಹಲವು ಹಂತಗಳಿವೆ. ರೂಪಗೊಳ್ಳುತ್ತಿರುವ ಕರ್ಮದ ಪ್ರತಿಕ್ರಿಯೆ, ಫಲಿಸುತ್ತಿರುವ ಕರ್ಮದ ಪ್ರತಿಕ್ರಿಯೆ, ಆಗಲೇ ಸಾಧಿಸಿದ ಕರ್ಮದ ಪ್ರತಿಕ್ರಿಯೆ ಮತ್ತು ಕಾರಣಪೂರ್ವಕ ಕರ್ಮದ ಪ್ರತಿಕ್ರಿಯೆ. ಆದರೆ ಜೀವಿಯ ನಿಜಸ್ವರೂಪದ ಜ್ಞಾನವು ಲಭ್ಯವಾದಾಗ ಕರ್ಮಗಳ ಎಲ್ಲ ಪ್ರತಿಕ್ರಿಯೆಗಳೂ ಸುಟ್ಟುಹೋಗುತ್ತವೆ. ವೇದಗಳಲ್ಲಿ (ಬೃಹದಾರಣ್ಯಕ ಉಪನಿಷತ್ತು 4.4.22) ಉಭೇ ಉಹೈವೈಷ ಏತೇ ತರತ್ಯಮೃತಃ ಸಾಧ್ಯಸಾಧೂನೀ ಎಂದರೆ ಮನುಷ್ಯನು ಧಾರ್ಮಿಕ ಮತ್ತು ಅಧಾರ್ಮಿಕ ಕರ್ಮಗಳ ಪ್ರತಿಕ್ರಿಯೆಗಳೆರಡನ್ನೂ ನಿವಾರಿಸಿಕೊಳ್ಳುತ್ತಾನೆ ಎಂದು ಹೇಳಿದೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in