Bhagavad Gita: ಭಗವಂತನಲ್ಲಿರುವ ವ್ಯಕ್ತಿಗೆ ಧಾನ್ಯ ಸೇರಿ ಯಾವುದರಲ್ಲೂ ಕೊರತೆ ಇರುವುದಿಲ್ಲ; ಗೀತೆಯ ಅರ್ಥ ಹೀಗಿದೆ
Feb 22, 2024 05:15 AM IST
ಭಗವಂತನಲ್ಲಿರುವ ವ್ಯಕ್ತಿಗೆ ಧಾನ್ಯ ಸೇರಿ ಯಾವುದರಲ್ಲೂ ಕೊರತೆ ಇರುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
- Bhagavad Gita Updesh: ಭಗವಂತನಲ್ಲಿರುವ ವ್ಯಕ್ತಿಗೆ ಧಾನ್ಯ ಸೇರಿ ಯಾವುದರಲ್ಲೂ ಕೊರತೆ ಇರುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಶ್ಲೋಕ - 16
ನಾತ್ಯಶ್ನತಸ್ತು ಯೋಗೋಸ್ತಿ ನ ಚೈಕಾನ್ತಮನಶ್ನತಃ |
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ||16||
Bhagavad Gita Updeshin Kannada: ಅರ್ಜುನನೆ, ಮನುಷ್ಯನು ಅತಿಹೆಚ್ಚಾಗಿ ತಿಂದರೂ ಅಥವಾ ಅತಿಸ್ವಲ್ಪ ತಿಂದರೂ, ಅತಿ ಹೆಚ್ಚಾಗಿ ನಿದ್ದೆ ಮಾಡಿದರೂ ಅಥವಾ ತಕ್ಕಷ್ಟು ನಿದ್ದೆ ಮಾಡದಿದ್ದರೂ ಯೋಗಿಯಾಗಲು ಸಾಧ್ಯವಿಲ್ಲ.
ತಾಜಾ ಫೋಟೊಗಳು
ಇಲ್ಲಿ ಯೋಗಿಗಳು ಊಟ ಮತ್ತು ನಿದ್ರೆಗಳ ವಿಷಯದಲ್ಲಿ ನಿಯಂತ್ರಣವನ್ನು ಅನುಸರಿಸಬೇಕೆಂದು ಸಲಹೆ ಮಾಡಿದೆ. ಅತಿಯಾಗಿ ತಿನ್ನುವುದೆಂದರೆ ದೇಹ ಮತ್ತು ಆತ್ಮಗಳನ್ನು ಒಟ್ಟಿಗಿಡಲು ಆಗತ್ಯವಾದದ್ದಕ್ಕಿಂತ ಹೆಚ್ಚು ತಿನ್ನುವುದು. ಮನುಷ್ಯರು ಪ್ರಾಣಿಗಳನ್ನು ತಿನ್ನುವ ಅಗತ್ಯವೇ ಇಲ್ಲ. ಏಕೆಂದರೆ ಧಾನ್ಯಗಳು, ತರಕಾರಿಗಳು, ಹಣ್ಣು ಮತ್ತು ಹಾಲು ಸಮೃದ್ಧಿಯಾಗಿ ಸಿಕ್ಕುತ್ತವೆ. ಇಂತಹ ಸರಳವಾದ ಆಹಾರವು ಸಾತ್ವಿಕ ಗುಣಕ್ಕೆ ಹೊಂದಿಕೊಂಡದ್ದು ಎಂದು ಭಗವದ್ಗೀತೆಯಲ್ಲಿ ಪರಿಗಣಿಸಿದೆ. ಮಾಂಸಾಹಾರವು ತಾಮಸ ಗುಣದವರಿಗೆ ಮಾತ್ರ. ಆದುದರಿಂದ ಪ್ರಾಣಿಗಳ ಮಾಂಸವನ್ನು ತಿನ್ನುವುದು, ಮದ್ಯಪಾನ, ಧೂಮಪಾನ ಮತ್ತು ಕೃಷ್ಣಪ್ರಸಾದವಲ್ಲದ ಆಹಾರವನ್ನು ತಿನ್ನುವುದು ಇವುಗಳನ್ನು ಅಭ್ಯಾಸಮಾಡಿದವರು ಪಾಪಪೂರಿತ ಪ್ರತಿಕ್ರಿಯೆಗಳಿಂದ ಕಷ್ಟಪಡುತ್ತಾರೆ.
ಭಞ್ಜತೇ ತೇ ತ್ವಘಂ ಪಾಪಾ ಯೇ ಪಚನ್ತಿ ಆತ್ಮಕಾರಣಾತ್. ಇಂದ್ರಿಯ ಸಂತೋಷಕ್ಕಾಗಿ ತಿನ್ನುವವನು ಅಥವಾ ತನ್ನ ಆಹಾರವನ್ನು ಕೃಷ್ಣನಿಗೆ ನೈವೇದ್ಯ ಮಾಡದೆ ತನಗಾಗಿ ಅಡಿಗೆ ಮಾಡಿಕೊಳ್ಳುವವನು ಅಥವಾ ತನ್ನ ಆಹಾರವನ್ನು ಕೃಷ್ಣನಿಗೆ ನೈವೇದ್ಯ ಮಾಡದೆ ತನಗಾಗಿ ಅಡಿಗೆ ಮಾಡಿಕೊಳ್ಳುವವನು ಪಾಪವನ್ನೇ ತಿನ್ನುತ್ತಾನೆ. ಪಾವನ್ನು ತಿನ್ನುವವನು ಮತ್ತು ತನ್ನ ಪಾಲಿಗೆ ಕೊಟ್ಟದ್ದಕ್ಕಿಂತ ಹೆಚ್ಚು ತಿನ್ನುವವನು ಪರಿಪೂರ್ಣ ಯೋಗವನ್ನು ಮಾಡಲಾರ. ಕೃಷ್ಣಪ್ರಸಾದದ ಶೇಷವನ್ನಷ್ಟೇ ತಿನ್ನವುದು ಅತ್ಯಂತ ಉತ್ತಮ. ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ಕೃಷ್ಣನಿಗೆ ನೈವೇದ್ಯ ಮಾಡದಿರುವ ಯಾವ ಆಹಾರವನ್ನೂ ತಿನ್ನುವುದಿಲ್ಲ. ಆದ್ದರಿಂದ ಕೃಷ್ಣಪ್ರಜ್ಞೆಯಿರುವ ಮನುಷ್ಯನು ಮಾತ್ರ ಯೋಗಾಭ್ಯಾಸದಲ್ಲಿ ಪರಿಪೂರ್ಣನಾಗಬಲ್ಲ.
ತನ್ನ ವೈಯಕ್ತಿಕ ಉಪವಾಸ ರೀತಿಯನ್ನು ರಚಿಸಿಕೊಂಡು ಕೃತಕ ರೀತಿಯಲ್ಲಿ ಆಹಾರವನ್ನು ಬಿಡುವವನು ಯೋಗಾಭ್ಯಾಸ ಮಾಡಲಾರ. ಕೃಷ್ಣಪ್ರಜ್ಞೆ ಇರುವ ಮನುಷ್ಯನು ಶಾಸ್ತ್ರ ಗ್ರಂಥಗಳಲ್ಲಿ ಸೂಚಿಸಿರುವ ರೀತಿಯಲ್ಲಿ ಉಪವಾಸ ಮಾಡುತ್ತಾನೆ. ಆತನು ಅಗತ್ಯವಾದದ್ದಕ್ಕಿಂತ ಹೆಚ್ಚು ಉಪವಾಸವನ್ನು ಮಾಡುವುದಿಲ್ಲ. ಹೆಚ್ಚು ಆಹಾರವನ್ನೂ ತಿನ್ನುವುದಿಲ್ಲ. ಆದುದರಿಂದ ಆತನು ಯೋಗಾಭ್ಯಾಸ ಮಾಡಲು ಸಮರ್ಥನು.
ಅಗತ್ಯವಾದದ್ದಕ್ಕಿಂತ ಹೆಚ್ಚು ತಿನ್ನುವವನು ನಿದ್ರೆ ಮಾಡುವಾಗ ಬಹಳ ಕನಸು ಕಾಣುತ್ತಾನೆ. ಪರಿಣಾಮವಾಗಿ ಅವನು ಅಗತ್ಯವಾದದದ್ದಕ್ಕಿಂತ ಹೆಚ್ಚು ನಿದ್ರೆ ಮಾಡಬೇಕಾಗುತ್ತದೆ. ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ನಿದ್ರೆಮಾಡುವವನು ನಿಶ್ಚಯವಾಗಿಯೂ ತಾಮಸ ಗುಣದಿಂದ ಪ್ರಭಾವಿತನಾದವನು. ತಾಮಸಗುಣದ ಗುಣಮದ ಮನುಷ್ಯನು ಸೋಮಾರಿ ಮತ್ತು ಬಹಳ ನಿದ್ರೆ ಮಾಡುವ ಪ್ರವೃತ್ತಿಯವನು. ಇಂತಹ ಮನುಷ್ಯನು ಯೋಗಾಭ್ಯಾಸ ಮಾಡಲಾರನು.
ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳಿವೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )