Bhagavad Gita: ಭಗವಂತ ಎಲ್ಲಾ ಬಾಂಧವ್ಯಗಳ ಭಂಡಾರವಾಗಿ ಕಾಣುತ್ತಾನೆ; ಗೀತೆಯ ಅರ್ಥ ತಿಳಿಯಿರಿ
Jun 25, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತ ಎಲ್ಲಾ ಬಾಂಧವ್ಯಗಳ ಭಂಡಾರವಾಗಿ ಕಾಣುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11 ಅಧ್ಯಾಯದ 14 ಮತ್ತು 15ನೇ ಶ್ಲೋಕದಲ್ಲಿ ಓದಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 14
ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಞ್ಜಯಃ |
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ||14||
ಅನುವಾದ: ಅನಂತರ ದಿಗ್ಬ್ರಮೆಯಿಂದ, ಆಶ್ಚರ್ಯದಿಂದ, ರೋಮಾಂಚನಗೊಂಡ ಅರ್ಜುನನು ತಲೆಬಾಗಿ ಪ್ರಮಾಣ ಮಾಡಿ, ಕೈಗಳನ್ನು ಮುಗಿದುೆಕೂಂಡು ಪರಮ ಪ್ರಭುವಿಗೆ ಪ್ರಾರ್ಥನೆಯನ್ನು ಮಾಡಲು ಪ್ರಾರಂಭಿಸಿದನು.
ತಾಜಾ ಫೋಟೊಗಳು
ಭಾವಾರ್ಥ: ದೈವೀದೃಶ್ಯವು ಒಮ್ಮೆ ಪ್ರಕಟವಾಗುತ್ತಲೇ ಕೃಷ್ಣ ಮತ್ತು ಅರ್ಜುನರ ಸಂಬಂಧವು ಬದಲಾಗುತ್ತದೆ. ಈವರೆಗೆ ಕೃಷ್ಣ ಮತ್ತು ಅರ್ಜುನರ ಬಾಂಧವ್ಯಕ್ಕೆ ಸ್ನೇಹವು ಆಧಾರವಾಗಿತ್ತು. ದರ್ಶನದನಂತರ ಇಲ್ಲಿ ಅರ್ಜುನನು ಬಹು ಗೌರವದಿಂದ ಪ್ರಣಾಮ ಮಾಡುತ್ತಿದ್ದಾನೆ ಮತ್ತು ಕೈಗಳನ್ನು ಮುಗಿದುಕೊಂಡು ಕೃಷ್ಣನಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ. ಅವನು ವಿಶ್ವರೂಪವನ್ನು ಹೊಗಳುತ್ತಿದ್ದಾನೆ. ಹೀಗೆ ಅರ್ಜುನನ ಬಾಂಧವ್ಯವು ಸ್ನೇಹದ ಬಾಂಧವ್ಯಕ್ಕಿಂತ ಹೆಚ್ಚಾಗಿ ಬೆರಗಿನ ಬಾಂಧವ್ಯವಾಗುತ್ತದೆ (Bhagavad Gita Updesh in Kannada).
ಮಹಾನ್‌ಭಕ್ತರು ಕೃಷ್ಣನನ್ನು ಎಲ್ಲ ಬಾಂಧವ್ಯಗಳ ಭಂಡಾರವಾಗಿ ಕಾಣುತ್ತಾರೆ. ಧರ್ಮಗ್ರಂಥಗಳಲ್ಲಿ 12 ಬಗೆಯ ಬಾಂಧವ್ಯಗಳನ್ನು ಪ್ರಾಸ್ತಾಪಿಸಿದೆ. ಅವೆಲ್ಲ ಕೃಷ್ಣನಲ್ಲಿವೆ. ಅವನು ಎರಡು ಜೀವಿಗಳ ನಡುವೆ, ದೇತೆಗಳ ನಡುವೆ ಅಥವಾ ಪರಮ ಪ್ರಭು ಮತ್ತು ಅವನ ಭಕ್ತರ ನಡುವೆ ವಿನಿಮಯವಾಗುವ ಎಲ್ಲ ಬಾಂಧವ್ಯಗಳ ಸಾಗರ ಎಂದು ಹೇಳಲಾಗಿದೆ.
ಇಲ್ಲಿ ಅರ್ಜುನನಿಗೆ ಬೆರಗಿನ ಬಾಂಧವ್ಯವು ಸ್ಫೂರ್ತಿಯನ್ನು ಕೊಟ್ಟಿತು. ಅವನು ಸಮಾಧಾನವಾದ, ಶಾಂತವಾದ ಮತ್ತು ನಿರುದ್ವಿಗ್ನವಾದ ಸ್ವಭಾವದವನು. ಆದರೂ ಇಲ್ಲಿ ತನ್ನ ಬೆರಗಿನಲ್ಲಿ ಅವನಿಗೆ ಹರ್ಷೋನ್ಮಾದವಾಯಿತು. ಅವನ ಕೂದಲು ನಿಮಿರಿತು ಮತ್ತು ಕೈಗಳನ್ನು ಹೆದರಿಕೆಯಾಗಲಿಲ್ಲ. ಪರಮ ಪ್ರಭುವಿನ ಅದ್ಭುತಗಳು ಅವನ ಮೇಲೆ ಪರಿಣಾಮ ಮಾಡಿದವು. ತಕ್ಷಣದ ಸಂದರ್ಭ ಬರೆಗು. ಅವನ ಸಹಜವಾದ ಪ್ರೇಮಪೂರ್ವಕ ಸ್ನೇಹವು ಬೆರಗಿನಿಂದ ದುರ್ಬಲವಾಯಿತು. ಅವನು ಈ ರೀತಿಯಲ್ಲಿ ಪ್ರತಿಕ್ರಿಯೆ ತೋರಿದನು.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 15
ಪಶ್ಯಾಮಿ ದೇವಾಂಸ್ತವ ದೇವ ದೇಹೇ
ಸರ್ವಾಂಸ್ತಥಾ ಭೂತವಿಶೇಷಸಂಘಾನ್|
ಬ್ರಹ್ಮಾಣಮೀಶಂ ಕಮಲಾಸನಸ್ಥಮ್
ಋಷೀಂಶ್ಚ ಸರ್ವಾನುರುಗಾಂಶ್ಚ ದಿನ್ಯಾನ್ ||15||
ಅನುವಾದ: ಅರ್ಜುನನು ಹೀಗೆ ಹೇಳಿದನು - ಪ್ರೀತಿಯ ಪ್ರಭು ಶ್ರೀಕೃಷ್ಣನೇ, ಎಲ್ಲ ದೇವತೆಗಳು ಮತ್ತು ಇತರ ಹಲವಾರು ಜೀವಿಗಳು ನಿನ್ನ ದೇಹದಲ್ಲಿ ಸೇರಿರುವುದನ್ನು ಕಾಣುತ್ತಿದ್ದೇನೆ. ಬ್ರಹ್ಮನು ಕಮಲದ ಮೇಲೆ ಕುಳಿತಿರುವುದನ್ನು, ಶಿವ ಮತ್ತು ಎಲ್ಲ ಋಷಿಗಳನ್ನು ಮತ್ತು ದಿವ್ಯ ಸರ್ಪಗಳನ್ನು ಕಾಣುತ್ತಿದ್ದೇನೆ.
ಭಾವಾರ್ಥ: ಅರ್ಜುನನು ವಿಶ್ವದಲ್ಲಿ ಇರುವುದೆಲ್ಲವನ್ನೂ ಕಾಣುತ್ತಾನೆ. ಆದುದರಿಂದ ವಿಶ್ವದ ಪ್ರಥಮ ಜೀವಿಯಾದ ಬ್ರಹ್ಮನನ್ನೂ, ವಿಶ್ವದ ಅಧೋಪ್ರದೇಶದಲ್ಲಿ ಗರ್ಭೋದಕಶಾಯಿ ವಿಷ್ಣುವಿಗೆ ಹಾಸಿಗೆಯಾಗಿರುವ ದಿವ್ಯಸರ್ಪವನ್ನೂ ಕಾಣುತ್ತಾನೆ. ಈ ಸರ್ಪಶಯ್ಯೆಗೆ ವಾಸುಕಿ ಎಂದು ಹೆಸರು. ವಾಸುಕಿ ಎನ್ನುವ ಹೆಸರಿನ ಇತರ ಸರ್ಪಗಳೂ ಉಂಟು. ಗರ್ಭೋದಕಶಾಯಿ ವಿಷ್ಣುವಿನಿಂದ ವಿಶ್ವದ ಅತ್ಯುಚ್ಚಭಾಗದವಾದ ಬ್ರಹ್ಮ ಲೋಕದವರೆಗೆ ಅರ್ಜುನನು ಕಾಣಬಲ್ಲನು. ಹೀಗೆಂದರೆ ತನ್ನ ರಥದಲ್ಲಿ ಒಂದು ಸ್ಥಳದಲ್ಲಿ ಕುಳಿತಿರುವ ಅರ್ಜುನನು ಆದಿಯಿಂದ ಅಂತ್ಯದವರೆಗೆ ಎಲ್ಲವನ್ನೂ ಕಾಣಲು ಸಾಧ್ಯವಾಗಿತ್ತು. ಇದು ಸಾಧ್ಯವಾದದ್ದು ಪರಮ ಪ್ರಭುವಾದ ಕೃಷ್ಣನ ಕೃಪೆಯಿಂದ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)