logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಇಂದ್ರಿಯ ಭೋಗದ ಆಸೆ ಆತ್ಮದ ಅತ್ಯಂತ ದೊಡ್ಡ ಶತ್ರು; ಗೀತೆಯ ಅರ್ಥ ತಿಳಿಯಿರಿ

ಭಗವದ್ಗೀತೆ: ಇಂದ್ರಿಯ ಭೋಗದ ಆಸೆ ಆತ್ಮದ ಅತ್ಯಂತ ದೊಡ್ಡ ಶತ್ರು; ಗೀತೆಯ ಅರ್ಥ ತಿಳಿಯಿರಿ

HT Kannada Desk HT Kannada

Dec 27, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಇಂದ್ರಿಯ ಭೋಗದ ಆಸೆ ಆತ್ಮದ ಅತ್ಯಂತ ದೊಡ್ಡ ಶತ್ರು ಎಂಬ ಗೀತೆಯಲ್ಲಿ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ |

ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಮ್ ||43||

ಮಹಾಬಾಹುವಾದ ಅರ್ಜುನನೇ, ಭೌತಿಕ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವೆಲ್ಲವನ್ನೂ ಮನುಷ್ಯನು ಮೀರಿದವನು. ಇದನ್ನು ಅರಿತು ಮನಸ್ಸನ್ನು ಉದ್ದೇಶಪೂರ್ವಕವಾದ ಅಲೌಕಿಕ ಬುದ್ಧಿಯಿಂದ (ಕೃಷ್ಣಪ್ರಜ್ಞೆಯಿಂದ) ದೃಢಗೊಳಿಸಬೇಕು. ಹೀಗೆ ಆಧ್ಯಾತ್ಮಿಕ ಶಕ್ತಿಯಿಂದ ಎಂದೂ ತೃಪ್ತಿ ಪಡಿಸಲು ಸಾಧ್ಯವಿಲ್ಲದ ಈ ಕಾಮ ಎಂಬ ವೈರಿಯನ್ನು ಗೆಲ್ಲಬೇಕು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಿರಾಕಾರ ಶ್ಯೂನ್ಯತೆಯನ್ನು ಅಂತಿಮಗುರಿಯಾಗಿ ಪರಿಗಣಿಸಬಾರದು, ದೇವೋತ್ತಮ ಪರಮ ಪುರುಷನ ನಿತ್ಯಸೇವಕ ತಾನು ಎಂದು ತಿಳಿದುಕೊಂಡು ಕೃಷ್ಣಪ್ರಜ್ಞೆಯನ್ನು ಸಾಧಿಸಬೇಕು ಎಂದು ಭಗವದ್ಗೀತೆಯ ಈ ಮೂರನೆಯ ಅಧ್ಯಾಯವು ನಿರ್ಣಾಯಕವಾಗಿ ನಿರ್ದೇಶಿಸುತ್ತದೆ. ಬದುಕಿನ ಐಹಿಕ ಅಸ್ತಿತ್ವದಲ್ಲಿ ಕಾಮಪ್ರವೃತ್ತಿಗಳಿಂದ ಮತ್ತು ಭೌತಿಕ ನಿಸರ್ಗದ ಸಂಪನ್ಮೂಲಗಳ ಮೇಲೆ ಪ್ರಭುತ್ವ ನಡೆಸುವ ಆಸೆಯಿಂದ ನಿಶ್ಚಯವಾಗಿಯೂ ಮನುಷ್ಯನು ಪ್ರಭಾವಿತನಾಗುತ್ತಾನೆ.

ಯಜಮಾನಿಕೆ ನಡೆಸುವ ಆಸೆ ಮತ್ತು ಇಂದ್ರಿಯಭೋಗದ ಆಸೆ ಬದ್ಧ ಆತ್ಮದ ಅತ್ಯಂತ ದೊಡ್ಡ ಶತ್ರು. ಆದರೆ ಕೃಷ್ಣಪ್ರಜ್ಞೆಯ ಬಲದಿಂದ ಭೌತಿಕ ಇಂದ್ರಿಯಗಳನ್ನೂ ಮನಸ್ಸನ್ನೂ ಮತ್ತು ಬುದ್ಧಿಯನ್ನೂ ಹತೋಟಿಯಲ್ಲಿಡಲು ಸಾಧ್ಯ. ಇದ್ದಕ್ಕಿದ್ದಂತ ಕರ್ಮವನ್ನೂ ನಿಯತಕರ್ಯಗಳನ್ನೂ ಬಿಟ್ಟುಬಿಡುವಂತಿಲ್ಲ. ಆದರೆ ಕ್ರಮೇಣ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಂಡು ತನ್ನ ಶುದ್ಧ ವ್ಯಕ್ತಿತ್ವದ ಕಡೆಗೆ ಬುದ್ಧಿಯನ್ನು ದೃಢವಾಗಿ ನಿರ್ದೇಶಿಸುವುದು ಸಾಧ್ಯ.

ಹೀಗೆ ಮಾಡಿ ಮನುಷ್ಯನು ಭೌತಿಕ ಇಂದ್ರಿಯಗಳ ಮತ್ತು ಮನಸ್ಸಿನ ಪ್ರಭಾವಕ್ಕೆ ಒಳಗಾಗದೆ ಆಧ್ಯಾತ್ಮಿಕ ಸ್ಥಿತಿಯಲ್ಲಿ ನೆಲೆಗೊಳ್ಳಬಹುದು. ಇದು ಈ ಅಧ್ಯಾಯದ ಸಾರಸಂಗ್ರಹ. ಐಹಿಕ ಅಸ್ತಿತ್ವದ ಅಪರಿಪಕ್ವ ಘಟ್ಟಗಳಲ್ಲಿ ತಾತ್ವಿಕ ಊಹೆಗಳಾಗಲೀ ಮತ್ತು ಯೋಗಾಸನಗಳ ಅಭ್ಯಾಸ ಎಂದು ಹೇಳಿಕೊಳ್ಳುವ ಅಭ್ಯಾಸದಿಂದ ಇಂದ್ರಿಯ ನಿಗ್ರಹದ ಕೃತಕ ಪ್ರಯತ್ನಗಳಾಗಲೀ ಮನುಷ್ಯನು ಆಧ್ಯಾತ್ಮಿಕ ಬದುಕಿಗೆ ಹೋಗಲು ನೆರವಾಗುವುದಿಲ್ಲ. ಅವನಿಗೆ ಉನ್ನತ ಬುದ್ಧಿಯಿಂದ ಕೃಷ್ಣಪ್ರಜ್ಞೆಯಲ್ಲಿ ಶಿಕ್ಷಣ ದೊರೆಯಬೇಕು.

ಏವಂ ಪರಮ್ಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ |

ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರನ್ತಪ ||2||

ಈ ಉತ್ತಮೋತ್ತಮ ವಿಜ್ಞಾನವು ಗುರುಪರಂಪರೆಯಲ್ಲಿ ಬಂದಿತು. ರಾಜರ್ಷಿಗಳು ಅದನ್ನು ಹಾಗೆಯೇ ಗ್ರಹಿಸಿದರು. ಆದರೆ ಕಾಲಕ್ರಮದಲ್ಲಿ ಈ ಪರಂಪರೆಯು ಛೇದವಾಯಿತು. ಆದುದರಿಂದ ಈ ವಿಜ್ಞಾನವು ನಷ್ಟವಾದಂತೆ ಕಾಣುತ್ತದೆ.

ರಾಜರ್ಷಿಗಳು ಪ್ರಜೆಗಳನ್ನು ಆಳುವಾಗ ಗೀತೆಯ ಉದ್ದೇಶವನ್ನು ಕಾರ್ಯಗತ ಮಾಡಬೇಕಾಗಿತ್ತು. ಆದುದರಿಂದ ಗೀತೆಯು ಮುಖ್ಯವಾಗಿ ಅವರಿಗಾಗಿ ರಚಿತವಾಗಿದದ್ದೆಂದು ಸ್ಪಷ್ಟವಾಗಿ ಹೇಳಲಾಗಿದೆ. ರಾಕ್ಷಸರಿಗೆ ಇದು ಎಂದೂ ಉದ್ದೇಶಿತವಾಗಿರಲಿಲ್ಲ. ಏಕೆಂದರೆ ಅವರು ಅದನ್ನು ಯಾರಿಗೂ ಪ್ರಯೋಜನವಾಗದಂತೆ ಹಾಳು ಮಾಡಿಬಿಡುತ್ತಿದ್ದರು ಮತ್ತು ಮನೋ ಇಚ್ಛೆಯಾಗಿ ಎಲ್ಲ ಬಗೆಯ ವ್ಯಾಖ್ಯಾನಗಳನ್ನು ಸೃಷ್ಟಿಮಾಡಿಬಿಡುತ್ತಿದ್ದರು. ಆದುದರಿಂದ ನಿಶ್ಚಯವಾಗಿಯೂ ಭಗವದ್ಗೀತೆಯನ್ನು ರಾಕ್ಷಸರಿಗಾಗಿ ಹೇಳಿಲ್ಲ.

ನೀತಿನಿಷ್ಠೆಗಳಿಲ್ಲದೆ ವ್ಯಾಖ್ಯಾನಕಾರರ ಉದ್ದೇಶಗಳು ಮೂಲ ಉದ್ದೇಶವನ್ನು ನಷ್ಟಗೊಳಿಸಿದ ಕೂಡಲೆ ಗುರುಪರಂಪರೆಯನ್ನು ಮತ್ತೆ ಸ್ಥಾಪಿಸುವ ಅಗತ್ಯವು ತಲೆದೋರಿತು. ಗುರುಪರಂಪರೆಯು ಛೇದವಾಯಿತೆಂದು ಭಗವಂತನೇ ಐದು ಸಾವಿರ ವರ್ಷಗಳ ಹಿಂದೆ ಕಂಡಕೊಂಡನು. ಆದುದರಿಂದ ಅವನು ಗೀತೆಯ ಉದ್ದೇಶವು ನಷ್ಟವಾಯಿತು ಎಂದು ಸಾರಿದ. ಅದೇ ರೀತಿ ಈಗಲೂ ( ವಿಶೇಷವಾಗಿ ಇಂಗ್ಲಿಷಿನಲ್ಲಿ) ಗೀತೆಯ ಎಷ್ಟೋ ಆವೃತ್ತಿಗಳಿವೆ. ಅವುಗಳಲ್ಲಿ ಅನೇಕ ಆವೃತ್ತಿಗಳು ಯಾವ ಅಧಿಕೃತ ಗುರುಪರಂಪರೆಗೂ ಅನುಗುಣವಾಗಿಲ್ಲ.

ಬೇರೆ ಬೇರೆ ಲೌಕಿಕ ವಿದ್ವಾಂಸರು ರೂಪಿಸಿದ ಅಸಂಖ್ಯಾತ ವ್ಯಾಖ್ಯಾನಗಳಿವೆ. ಅವರೆಲ್ಲರೂ ಕೃಷ್ಣನ ಮಾತುಗಳಿಂದ ಒಳ್ಳೆಯ ವ್ಯಾಪಾರವನ್ನು ಪಡೆದುಕೊಳ್ಳುತ್ತಿದ್ದರೂ ಹೆಚ್ಚು ಕಡಮೆ ಅವು ಯಾವುವೂ ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಒಪ್ಪಿಕೊಳ್ಳುವುದಿಲ್ಲ. ಇದು ರಾಕ್ಷಸೀ ಮನೋಧರ್ಮ. ಏಕೆಂದರೆ ರಾಕ್ಷಸರಿಗೆ ದೇವರಲ್ಲಿ ನಂಬಿಕೆಯಿಲ್ಲ. ಆದರೆ ಪರಮ ಪ್ರಭುವಿನ ಸ್ವತ್ತನ್ನು ಭೋಗಿಸುತ್ತಾರೆ.

ಗುರುಪರಂಪರೆಯಲ್ಲಿ ಸ್ವೀಕೃತವಾಗಿರುವಂತೆ ಗೀತೆಯ ಒಂದು ಇಂಗ್ಗಿಷ್ ಆವೃತ್ತಿಯು ಬಹಳ ಅಗತ್ಯವಾಗಿದೆ. ಈ ದೊಡ್ಡ ಅಗತ್ಯವನ್ನು ತುಂಬಿಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. ಭಗವದ್ದೀಗೆತಯನ್ನು ಯಥಾರೂಪವಾಗಿ ಅಂಗೀಕರಿಸಿದರೆ ಮಾನವ ಕುಲಕ್ಕೆ ಅದು ಒಂದು ದೊಡ್ಡ ವರ. ಆದರೆ ಅದನ್ನು ಊಹಾತ್ಮಕಚಿಂತನೆಗಳ ಒಂದು ಗ್ರಂಥವನ್ನಾಗಿ ಸ್ವೀಕರಿಸಿದರೆ ಅದು ವ್ಯರ್ಥಕಾಲಕ್ಷೇಪ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ