logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯನ ದೇಹವೇ ನಶ್ವರ ಆಗಿರುವುದರಿಂದ ಇಂದ್ರಿಯ ಸುಖ ಶಾಶ್ವತವಲ್ಲ; ಭಗವದ್ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಮನುಷ್ಯನ ದೇಹವೇ ನಶ್ವರ ಆಗಿರುವುದರಿಂದ ಇಂದ್ರಿಯ ಸುಖ ಶಾಶ್ವತವಲ್ಲ; ಭಗವದ್ಗೀತೆಯ ಸಾರಾಂಶ ತಿಳಿಯಿರಿ

Raghavendra M Y HT Kannada

Feb 07, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • Bhagavad Gita Updesh: ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯನ ದೇಹವೇ ನಶ್ವರ ಆಗಿರುವುದರಿಂದ ಇಂದ್ರಿಯ ಸುಖ ಶಾಶ್ವತವಲ್ಲ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 5

ಕರ್ಮಯೋಗ - ಕೃಷ್ಣಪ್ರಜ್ಞೆಯಲ್ಲಿ ಕಾರ್ಯ

ಶ್ಲೋಕ - 21

ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿನ್ದತ್ಯಾತ್ಮನಿ ಯತ್ ಸುಖಮ್ |

ಸ ಬ್ರಹ್ಮ ಯೋಗಮುಕ್ತಾತ್ಮಾ ಸುಖಮಕ್ಷಯಮಶ್ನುತೇ ||21||

Bhagavad Gita Updesh In Kannada: ಹೀಗೆ ಮುಕ್ತನಾದ ಮನುಷ್ಯನಿಗೆ ಐಹಿಕ ಇಂದ್ರಿಯಸುಖದ ಆಕರ್ಷಣೆಯಿಲ್ಲ. ಅವನು ಯಾವಾಗಲೂ ಆಂತರ್ಯದಲ್ಲಿ ಸುಖವನ್ನು ಅನುಭವಿಸುತ್ತಾ ಸಮಾಧಿಸ್ಥಿತಿಯಲ್ಲಿರುತ್ತಾನೆ. ಈ ರೀತಿಯಲ್ಲಿ ಆತ್ಮಸಾಕ್ಷಾತ್ಕಾರ ಪಡೆದ ಮನುಷ್ಯನು ಪರಮಸತ್ಯದಲ್ಲಿ ಮಗ್ನನಾಗಿರುವುದರಿಂದ ಅಮಿತಾನಂದವನ್ನು ಸವಿಯುತ್ತಾನೆ. ಕೃಷ್ಣಪ್ರಜ್ಞೆಯುಳ್ಳ ಶ್ರೇಷ್ಠ ಭಕ್ತರಾದ ಶ್ರೀ ಯಾಮುನಾಚಾರ್ಯರು ಹೀಗೆ ಹೇಳಿದ್ದಾರೆ -

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಯದವಧಿ ಮಮ ಚೇತಃ ಕೃಷ್ಣಪಾದರವಿನ್ದೇ

ನವನವರಸಧಾಮ್ನಿ ಉದ್ಯತಂ ರನ್ತುಮಾಸೀತ್ |

ತದವಧಿ ಬತ ನಾರೀಸನ್ಗಮೇ ಸ್ಮ ರ್ಯಮಾನೇ

ಭವತಿ ಮುಖವಿಕಾರಃ ಸುಷ್ಠು ನಿಷ್ಠೀವನಂ ಚ ||

ಕೃಷ್ಣನ ದಿವ್ಯಪ್ರೇಮಸೇವೆಯಲ್ಲಿ ನಿರತನಾಗಿ ಅವನಲ್ಲಿ ಹೊಸಹೊಸ ಸಂತೋಷವನ್ನು ಅನುಭವಿಸುತ್ತಿರುವಾಗಿನಿಂದ, ಕಾಮಸುಖವನ್ನು ಯೋಜಿಸಿದಾಗೆಲೆಲ್ಲ ಜಿಗುಪ್ಪೆ ಪಡುತ್ತೇನೆ ಮತ್ತು ನನ್ನ ಮುಖದಲ್ಲಿ ಅಸಹ್ಯಭಾವವುಂಟಾಗುತ್ತದೆ. ಬ್ರಹ್ಮಯೋಗದಲ್ಲಿ ಅಥವಾ ಕೃಷ್ಣಪ್ರಜ್ಞೆಯಲ್ಲಿ ಇರುವ ಮನುಷ್ಯನು ಭಗವಂತನ ಪ್ರೇಮಪೂರ್ವಕ ಸೇವೆಯಲ್ಲಿ ಎಷ್ಟು ಮೈಮರೆತಿರುತ್ತಾನೆಂದರೆ ಆತನಿಗೆ ಐಹಿಕ ಇಂದ್ರಿಯ ಸುಖದಲ್ಲಿ ಆಸಕ್ತಿಯೇ ಹೋಗಿಬಿಡುತ್ತದೆ. ಜಡವಸ್ತುವಿಗೆ ಸಂಬಂಧಿಸಿದಂತೆ ಅತ್ಯುನ್ನತ ಸುಖವೆಂದರೆ ಕಾಮಸುಖ.

ಇಡೀ ಪ್ರಪಂಚವೇ ಅದರ ಮೋಡಿಗೆ ಸಿಲುಕಿ ನಡೆಯುತ್ತಿದೆ. ಪ್ರಾಪಂಚಿಕನಾದವನು ಈ ಪ್ರೇರಣೆಯಿಲ್ಲದೆ ಕೆಲಸವನ್ನೇ ಮಾಡಲಾರ. ಆದರೆ ಕೃಷ್ಣಪ್ರಜ್ಞೆಯಲ್ಲಿ ತೊಡಿಗಿರುವವನು ಲೈಂಗಿಕಸುಖವನ್ನು ದೂರವಿಡುತ್ತಾನೆ. ಅವನು ಅದಿಲ್ಲದೆಯೇ ಹೆಚ್ಚು ಚೈತನ್ಯಪೂರ್ಣವಾಗಿ ಕೆಲಸಮಾಡಬಲ್ಲ. ಆತ್ಮಸಾಕ್ಷಾತ್ಕಾರಕ್ಕೆ ಇದೇ ಪರೀಕ್ಷೆ. ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೂ ರತಿಸುಖಕ್ಕೂ ಹೊಂದಾಣಿಕೆಯಾಗುವುದಿಲ್ಲ. ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ಮುಕ್ತಾತ್ಮನಾಗಿರುವುದರಿಂದ ಅವನಿಗೆ ಯಾವುದೇ ಇಂದ್ರಿಯಸುಖದ ಆಕರ್ಷಣೆಯಿರುವುದಿಲ್ಲ.

ಶ್ಲೋಕ - 22

ಯೋ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ |

ಆದ್ಯಂತವಂತಃ ಕೌನ್ತೇಯ ನ ತೇಷು ರಮತೇ ಬುಧಃ ||22||

ವಿಷಯೇಂದ್ರಿಗಳ ಸಂಪರ್ಕವು ದುಃಖವನ್ನುಂಟುಮಾಡುವುದರಿಂದ ವಿವೇಕಿಯಾದವನು ಅದರಲ್ಲಿ ತೊಡಗುವುದಿಲ್ಲ. ಕುಂತೀಪುತ್ರನಾದ ಅರ್ಜನನೆ, ಇಂತಹ ಸುಖಗಳಿಗೆ ಆದಿಯೂ ಅಂತ್ಯವೂ ಉಂಟು. ಆದುದರಿಂದ ವಿವೇಕಿಯಾದವನು ಅವುಗಳಲ್ಲಿ ಸಂತೋಷಪಡುವುದಿಲ್ಲ.

ಐಹಿಕ ಇಂದ್ರಿಯ ಸುಖಗಳು ಐಹಿಕ ಇಂದ್ರಿಯಗಳ ಸಂಪರ್ಕದಿಂದ ಉಂಟಾಗುತ್ತವೆ. ಇವೆಲ್ಲ ಅಲ್ಪಕಾಲದವು. ಏಕೆಂದರೆ ದೇಹವೇ ಅಲ್ಪಕಾಲದ್ದು. ಅಲ್ಪಕಾಲದ್ದಾದ ಯಾವುದರಲ್ಲಿಯೂ ಮುಕ್ತಾತ್ಮನಿಗೆ ಆಸಕ್ತಿಯಿಲ್ಲ. ಅಲೌಕಿಕವಾದ ಸುಖಗಳನ್ನು ಚೆನ್ನಾಗಿ ಬಲ್ಲ ಮುಕ್ತಾತ್ಮನು ಹುಸಿ ಸಂತೋಷವನ್ನು ಸವಿಯಲು ಒಪ್ಪುವುದಾದರೂ ಹೇಗೆ? ಪದ್ಮಪುರಾಣದಲ್ಲಿ ಹೀಗೆ ಹೇಳಿದೆ -

ರಮನ್ತೇ ಯೋಗಿನೋನನ್ತೇ ಸತ್ಯಾನನ್ದೇ ಚಿದಾತ್ಮನಿ |

ಇತಿ ರಾಮಪದೇನಾಸೌ ಪರಂ ಬ್ರಹ್ಮಾಭಿಧೀಯತೇ ||

ಯೋಗಿಗಳು ಪರಮ ಸತ್ಯದಿಂದ ಅಮಿತವಾದ ದಿವ್ಯಾನಂದವನ್ನು ಪಡೆಯುತ್ತಾರೆ. ಆದುದರಿಂದ ಪರಮ ಸತ್ಯನಾದ ದೇವೋತ್ತಮ ಪುರುಷನಿಗೆ ರಾಮ ಎಂದೂ ಹೆಸರು. ಶ್ರೀಮದ್ಭಾಗವತದಲ್ಲಿ ಸಹ (5.5.1) ಹೀಗೆ ಹೇಳಿದೆ -

ನಾಯಂ ದೇಹೋ ದೇಹಭಾಜಾಂ ನೃಲೋಕೇ

ಕಷ್ಟಾನ್ ಕಾಮನ್ ಅರ್ಹತೇ ವಿಡ್ಭುಜಾಂ ಯೇ |

ತಪೋ ದಿವ್ಯಂ ಪುತ್ರಕಾ ಯೇನ ಸತ್ತ್ವಂ

ಸುದ್ಧ್ಯೇದ್ಯಸ್ಮಾದ್ ಬ್ರಹ್ಮಸೌಖ್ಯಂ ತ್ವನನ್ತಮ್ ||

ನನ್ನ ಪ್ರೀತಿಯ ಪುತ್ರರೇ, ಈ ಮಾನವ ರೂಪದಲ್ಲಿರುವಾಗ ಇಂದ್ರಿಯ ಸಂತೋಷಕ್ಕಾಗಿ ಬಹಳ ಕಷ್ಟಪಡುವ ಅಗತ್ಯವಿಲ್ಲ. ಮಲಭಕ್ಷಕಗಳೂ (ಹಿಂದಿಗಳು) ಇಂತಹ ಸುಖವನ್ನು ಅನುಭವಿಸುತ್ತವೆ. ಇದರ ಬದಲು ನೀವು ಈ ಜನ್ಮದಲ್ಲಿ ತಪಸ್ಸನ್ನು ಆಚರಿಸಬೇಕು. ಇದರಿಂದ ನಿಮ್ಮ ಅಸ್ತಿತ್ವವು ಪರಿಶುದ್ಧವಾಗುವುದು. ಇದರ ಫಲವಾಗಿ ನೀವು ಅನಂತವಾದ ದಿವ್ಯಾನಂದವನ್ನು ಸವಿಯುವಿರಿ.

ಆದುದರಿಂದ ನಿಜವಾದ ಯೋಗಿಗಳಿಗೆ ಅಥವಾ ವಿದ್ವಜ್ಜನರಾದ ಆಧ್ಯಾತ್ಮಿಕವಾದಿಗಳಿಗೆ ಇಂದ್ರಿಯಸುಖಗಳ ಅಕರ್ಷಣೆಯಿರುವುದಿಲ್ಲ. ಈ ಇಂದ್ರಿಯ ಸುಖಗಳು ನಿರಂತರವಾದ ಐಹಿಕ ಅಸ್ತಿತ್ವಕ್ಕೆ ಕಾರಣವಾಗುತ್ತವೆ. ಮನುಷ್ಯನು ಐಹಿಕ ಸುಖಕ್ಕೆ ಅಂಟಿಕೊಂಡಷ್ಟೂ ಐಹಿಕ ದುಃಖಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ