logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನಸ್ಸನ್ನು ಹತೋಟಿಯಲ್ಲಿಡಲು ಅತ್ಯಂತ ಸುಲಭ ಮಾರ್ಗ ಇದೇ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಮನಸ್ಸನ್ನು ಹತೋಟಿಯಲ್ಲಿಡಲು ಅತ್ಯಂತ ಸುಲಭ ಮಾರ್ಗ ಇದೇ; ಗೀತೆಯ ಸಾರಾಂಶ ತಿಳಿಯಿರಿ

Raghavendra M Y HT Kannada

Mar 02, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಮನಸ್ಸನ್ನು ಹತೋಟಿಯಲ್ಲಿಡಲು ಅತ್ಯಂತ ಸುಲಭ ಮಾರ್ಗ ಯಾವುದು ಎಂಬುದನ್ನು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. 
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 6 - ಧ್ಯಾನ ಯೋಗ: ಶ್ಲೋಕ - 33

ಅರ್ಜುನ ಉವಾಚ

ಯೋಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ |

ಏತಸ್ವಾಹಂ ನ ಪಶ್ಯಾಮಿ ಚಞ್ಚಲತ್ವಾತ್ ಸ್ಥಿತಿಂ ಸ್ಥಿರಾಮ್ ||33||

ಅನುವಾದ: ಅರ್ಜುನನು ಹೀಗೆ ಹೇಳಿದನು - ಮಧುಸೂದನನೇ, ನೀವು ಸಂಗ್ರಹವಾಗಿ ಹೇಳಿದ ಈ ಯೋಗಪದ್ಧತಿಯು ಕಾರ್ಯಸಾಧ್ಯವಲ್ಲ ಮತ್ತು ಇದು ಸಹಿಸಲಸಾಧ್ಯವಾದದ್ದು ಎಂದು ನನಗೆ ತೋರುತ್ತದೆ. ಏಕೆಂದರೆ ಮನಸ್ಸು ಪ್ರಕ್ಷುಬ್ಧವಾದದ್ದು ಮತ್ತು ಚಂಚಲವಾದದ್ದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಶುಚೌ ದೇಶೇ ಎಂಬ ಮಾತುಗಳಿಂದ ಪ್ರಾರಂಭಿಸಿ ಯೋಗೀ ಪರಮಃ ಎಂಬ ಮಾತುಗಳಿಂದ ಮುಕ್ತಾಯ ಮಾಡಿ ಶ್ರೀಕೃಷ್ಣನು ಅರ್ಜುನನಿಗೆ ವರ್ಣಿಸಿದ ಯೋಗ ಪದ್ಧತಿಯನ್ನು ಅರ್ಜುನನು ಇಲ್ಲಿ ತನ್ನ ಅಸಾಮರ್ಥ್ಯದ ಭಾವದಿಂದ ತಿರಸ್ಕರಿಸುತ್ತಿದ್ದಾನೆ. ಈ ಕಲಿಯುಗದಲ್ಲಿ ಸಾಮಾನ್ಯ ಮನುಷ್ಯನು ಯೋಗಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಬೆಟ್ಟಗಳ ನಡುವೆ ಅಥವಾ ಕಾಡಿನಲ್ಲಿ ಏಕಾಂತ ಸ್ಥಳಕ್ಕೆ ಹೋಗುವುದು ಸಾಧ್ಯವಿಲ್ಲ. ಅಲ್ಪಾಯುಸ್ಸಿನ ಬದುಕಿನಲ್ಲಿ ಕಠಿಣ ಹೋರಾಟವು ಈಗಿನ ಯುಗದ ಲಕ್ಷಣ. ಸರಳವಾದ ಕಾರ್ಯಸಾಧ್ಯವಾದ ವಿಧಾನಗಳಿಂದ ಆತ್ಮಸಾಕ್ಷಾತ್ಕಾರವನ್ನು ಪಡೆಯುವ ವಿಷಯದಲ್ಲಿಯೂ ಜನರಿಗೆ ಗಂಭೀರ ಆಸಕ್ತಿಯಿಲ್ಲ.

ಇನ್ನು ಜೀವನ ವಿಧಾನ, ಆಸನದ ರೀತಿ, ಸ್ಥಳದ ಆಯ್ಕೆ ಮತ್ತು ಐಹಿಕ ಚಟುವಟಿಕೆಗಳಿಂದ ಮನಸ್ಸನ್ನು ದೂರಮಾಡುವುದು ಇವೆಲ್ಲವನ್ನೂ ನಿಯಂತ್ರಿಸುವ ಈ ಕಷ್ಟಸಾಧ್ಯವಾದ ಯೋಗಪದ್ಧತಿಯನ್ನು ಕುರಿತು ಹೇಳುವುದೇನು? ಹಲವು ರೀತಿಗಳಲ್ಲಿ ಅರ್ಜುನನಿಗೆ ಅನುಕೂಲಗಳೇ ಇದ್ದರೂ ಕಾರ್ಯಶೀಲ ಮನುಷ್ಯನಾಗಿ ಅವನು ಈ ಯೋಗಪದ್ಧತಿಯನ್ನು ಅನುಸರಿಸುವುದು ಸಾಧ್ಯವಿಲ್ಲ ಎಂದು ಯೋಚಿಸಿದನು. ಆತನು ರಾಜವಂಶಕ್ಕೆ ಸೇರಿದವನು ಮತ್ತು ಹಲವು ಗುಣಗಳಲ್ಲಿ ಶ್ರೇಷ್ಠನು. ಅವನು ಮಹಾಯೋಧ, ಮತ್ತು ದೀರ್ಘಾಯುಷಿ. ಎಲ್ಲಕ್ಕಿಂತ ಮಿಗಿಲಾಗಿ, ಅವನು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಟನ ಆತ್ಮೀಯ ಸ್ನೇಹಿತ.

ಐದು ಸಾವಿರ ವರ್ಷಗಳ ಹಿಂದೆ ಅರ್ಜುನನಿಗೆ ಈಗ ನಮಗಿರುವುದಕ್ಕಿಂತ ಹೆಚ್ಚಿನ ಸೌಲಭ್ಯಗಳಿದ್ದವು. ಆದರೂ ಅವನು ಈ ಯೋಗಪದ್ಧತಿಯನ್ನು ತಿರಸ್ಕರಿಸಿದ. ವಾಸ್ತವವಾಗಿ ಅವನು ಇದನ್ನು ಅನುಷ್ಠಾನಮಾಡಿದುದನ್ನು ಚರಿತ್ರೆಯಲ್ಲಿ ಎಲ್ಲೂ ನಾವು ಕಾಣುವುದಿಲ್ಲ. ಆದುದರಿಂದ ಈ ಕಲಿಯುಗದಲ್ಲಿ ಸಾಮಾನ್ಯವಾಗಿ ಈ ಪದ್ಧತಿಯು ಕಾರ್ಯಸಾಧ್ಯವಲ್ಲ ಎಂದು ಭಾವಿಸಬೇಕಾಗಿದೆ. ಕೆಲವೇ ಕೆಲವರು ವಿರಳವಾದ ಮನುಷ್ಯರಿಗೆ ಇದು ಕಾರ್ಯಸಾಧ್ಯವಾಗಬಹುದು. ಆದರೆ ಜನಸಾಮಾನ್ಯರಿಗೆ ಇದು ಸಾಧ್ಯವಲ್ಲದ ಸಲಹೆ. ಐದು ಸಾವಿರ ವರ್ಷಗಳ ಹಿಂದೆಯೇ ಹೀಗಿದ್ದರೆ ಇಂದಿನ ಮಾತೇನು? ಶಾಲೆಗಳು ಮತ್ತು ಸಂಘಗಳು ಎನ್ನಿಸಿಕೊಂಡ ವಿವಿಧ ಸಂಸ್ಥೆಗಳಲ್ಲಿ ಈ ಯೋಗ ಪದ್ಧತಿಯನ್ನು ಅನುಕರಿಸುತ್ತಿರುವವರು ತಮ್ಮಲ್ಲಿಯೇ ತೃಪ್ತರಾಗಿದ್ದರೂ ನಿಶ್ಚಯವಾಗಿ ಅವರು ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಅಪೇಕ್ಷಿತ ಗುರಿಯ ವಿಷಯದಲ್ಲಿ ಅವರು ಸಂಪೂರ್ಣವಾಗಿ ಅಜ್ಞಾನಿಗಳು.

ಅಧ್ಯಾಯ 6 - ಧ್ಯಾನ ಯೋಗ: ಶ್ಲೋಕ - 34

ಚಞ್ಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಮ್ |

ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ||34||

ಅನುವಾದ: ಕೃಷ್ಣನೆ, ಮನಸ್ಸು ಚಂಚಲವಾದದ್ದು, ಪ್ರಕ್ಷಬ್ಧವಾದದ್ದು, ಹಠಮಾರಿ ಮತ್ತು ಬಲವಾದದ್ದು. ಅದನ್ನು ನಿಗ್ರಹಿಸುವುದು ಗಾಳಿಯನ್ನು ನಿಯಂತ್ರಿಸುವುದಕ್ಕಿಂತ ಕಷ್ಟ ಎಂದು ನನಗೆ ತೋರುತ್ತದೆ.

ಭಾವಾರ್ಥ: ಮನಸ್ಸು ಎಷ್ಟು ಗಟ್ಟಿ ಮತ್ತು ಹಠಮಾರಿ ಎಂದರೆ ಮನಸ್ಸು ಬುದ್ಧಿಶಕ್ತಿಗೆ ವಿಧೇಯವಾಗಿರುತ್ತದೆ ಎಂಬ ನಿರೀಕ್ಷಣೆ ಇದ್ದರೂ ಕೆಲವೊಮ್ಮೆ ಅದು ಬುದ್ಧಿಶಕ್ತಿಯನ್ನೂ ಮಣಿಸುತ್ತದೆ. ವ್ಯಾವಹಾರಿಕ ಜಗತ್ತಿನಲ್ಲಿದ್ದು ಹಲವು ವಿರುದ್ಧ ಅಂಶಗಳೊಡನೆ ಸೆಣಸಬೇಕಾದ ಮನುಷ್ಯನಿಗೆ ಮನಸ್ಸನ್ನು ನಿಯಂತ್ರಣದಲ್ಲಿಡುವುದು ನಿಶ್ಚಯವಾಗಿಯೂ ಬಹುಕಷ್ಟ. ಕೃತಕವಾಗಿ ಮನುಷ್ಯನು ಮಿತ್ರ ಮತ್ತು ಶತ್ರು ಇವರ ವಿಷಯದಲ್ಲಿ ಒಂದು ಮಾನಸಿಕ ಸಮತೋಲನವನ್ನು ಸ್ಥಾಪಿಸಿಕೊಳ್ಳಬಹುದು. ಆದರೆ ಕಟ್ಟಕಡೆಗೆ ಪ್ರಾಪಂಚಿಕ ವ್ಯವಸ್ಥೆಯಲ್ಲಿರುವ ಯಾವ ಮನುಷ್ಯನು ಹೀಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇದು ಪ್ರಚಂಡವಾದ ಗಾಳಿಯನ್ನು ಹತೋಟಿಯಲ್ಲಿ ಇಡುವುದಕ್ಕಿಂತ ಕಷ್ಟವಾದದ್ದು. ವೈದಿಕ ಸಾಹಿತ್ಯದಲ್ಲಿ (ಕಠೋಪನಿಷತ್ತು 1.3.3-4) ಹೀಗೆ ಹೇಳಿದೆ -

ಆತ್ಮಾನಂ ರಥಿನಂ ವಿಧಿ ಶರೀರಂ ರಥಮ್ ಏವ ಚ |

ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮ್ ಏವ ಚ ||

ಇನ್ದ್ರಿಯಾಣಿ ಹಯಾನಾಹುರ್ ವಿಷಯಾಂಸ್ತೇಷು ಗೋಚರಾನ್ |

ಆತ್ಮೇಂದ್ರಿಯ ಮನೋಯುಕ್ತಂ ಭೋಕ್ತೇತ್ಯಾಹುರ್ ಮನೀಷಿಣಃ ||

ಬುದ್ಧಿಶಕ್ತಿಯು ಮನಸ್ಸನ್ನು ನಿರ್ದೇಶಿಸಬೇಕು. ಆದರೆ ಮನಸ್ಸು ಎಷ್ಟು ಗಟ್ಟಿ ಮತ್ತು ಹಠಮಾರಿಯೆಂದರೆ, ಒಂದು ತೀವ್ರವಾದ ರೋಗಾಣು ಸೋಂಕು ಔಷಧಿಯ ಪರಿಣಾಮವನ್ನು ಮೀರಿಸುವಂತೆ, ಮನಸ್ಸು ಬಹುಬಾರಿ ಮನುಷ್ಯನ ಬುದ್ಧಿಶಕ್ತಿಯನ್ನು ಸಹ ಅಧೀನಮಾಡಿಕೊಳ್ಳುತ್ತದೆ. ಯೋಗಾಭ್ಯಾಸವು ಇಂತಹ ಗಟ್ಟಿ ಮನಸ್ಸನ್ನು ನಿಯಂತ್ರಿಸುತ್ತದೆ ಎಂದು ನಂಬಿಕೆ. ಆದರೆ ಅರ್ಜುನನಂತಹ ಲೌಕಿಕ ವ್ಯಕ್ತಿಗೆ ಇಂತಹ ಅಭ್ಯಾಸವು ಕಾರ್ಯಸಾಧ್ಯವಲ್ಲ.

ಇನ್ನು ಆಧುನಿಕ ಮನುಷ್ಯನ ವಿಷಯ ಏನು ಹೇಳಬಹುದು? ಇಲ್ಲಿ ಬಳಸಿದ ಉಪಮಾನ ಸೂಕ್ತವಾಗಿದೆ. ಬೀಸುತ್ತಿರುವ ಗಾಳಿಯನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಚೈತನ್ಯ ಮಹಾಪ್ರಭುಗಳು ಸೂಚಿಸಿದಂತೆ ಮನಸ್ಸನ್ನು ಹತೋಟಿಯಲ್ಲಿಡಲು ಅತ್ಯಂತ ಸುಲಭವಾದ ಮಾರ್ಗವೆಂದರೆ ಸಂಪೂರ್ಣ ದೀನತೆಯಿಂದ ಮುಕ್ತಿಯ ಮಹಾಮಂತ್ರ ಹರೇಕೃಷ್ಣ ಸಂಕೀತನೆ ಮಾಡುವುದು. ಇದಕ್ಕೆ ವಿಧಿಸಿರುವ ವಿಧಾನವು ಇದು. ಸ ವೈ ಮನಃ ಕೃಷ್ಣಪದಾರವಿಂದಯೋಃ ಮನುಷ್ಯನು ತನ್ನ ಮನಸ್ಸನ್ನು ಸಂಪೂರ್ಣವಾಗಿ ಕೃಷ್ಣನಲ್ಲಿ ತೊಡಗಿಸಬೇಕು. ಆಗ ಮಾತ್ರ ಮನಸ್ಸನ್ನು ಕ್ಷೋಕ್ಷೆಗೊಳಿಸುವ ಬೇರೆ ಯಾವ ಕಾರ್ಯಗಳು ಉಳಿಯುವುದಿಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ