ಭಗವದ್ಗೀತೆ: ಇಂದ್ರಿಯಗಳ ನಿಯಂತ್ರಣ ಜೀವನದ ಸಮಸ್ಯೆಗಳಿಗೆ ಪರಿಹಾರ; ಗೀತೆಯ ಅರ್ಥ ಹೀಗಿದೆ
Jan 17, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಇಂದ್ರಿಯಗಳ ನಿಯಂತ್ರಣ ಜೀವನ ಸಮಸ್ಯೆಗಳಿಗೆ ಪರಿಹಾರ ಎಂಬುದರ ಅರ್ಥವನ್ನು ಗೀತೆಯಲ್ಲಿ ತಿಳಿಯಿರಿ.
ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಪಾನಂ ತಥಾಪರೇ |
ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ ||29||
ಪ್ರಾಣಾಯಾಮದ ಪ್ರಕ್ರಿಯೆಯನ್ನು ಅನುಸರಿಸುವ ಇನ್ನೂ ಕೆಲವರು ಹೊರಹೋಗುವ ವಾಯುವಿನ ಚಲನೆಯನ್ನು ಒಳಕ್ಕೆ ಬರುವ ವಾಯುವಿನ ಚಲನೆಗೆ ಮತ್ತು ಒಳಕ್ಕೆ ಬಿಡುವ ಉಸಿರಿನ ಚಲನೆಯನ್ನು ಹೊರಕ್ಕೆ ಹೋಗುವ ವಾಯುವಿನ ಚಲನೆಗೆ ಅರ್ಪಿಸಿ ಕಡೆಗೆ ಎಲ್ಲ ಉಸಿರಾಟವನ್ನು ನಿಲ್ಲಿಸಿ ಸಮಾಧಿಸ್ಥರಾಗುತ್ತಾರೆ. ಇತರರು ಆಹಾರಸೇವನೆಯನ್ನು ನಿಯಂತ್ರಿಸಿ ಹೊರಹೋಗುವ ಉಸಿರನ್ನೇ ಯಜ್ಞವಾಗಿ ಸಮರ್ಪಿಸುತ್ತಾರೆ.
ತಾಜಾ ಫೋಟೊಗಳು
ಇಂದ್ರಿಯಗಳನ್ನ ನಿಯಂತ್ರಿಸಿ ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ ಮುಂದುವರಿಯಲು ಈ ಎಲ್ಲ ಪದ್ಧತಿಗಳನ್ನು ಉಸಿರಾಟದ ಪ್ರಕ್ರಿಯೆಯನ್ನು ನಿಯಂತ್ರಿಸುವ ಪದ್ಧತಿಗೆ ಪ್ರಾಣಾಯಾಮ ಎಂದು ಹೆಸರು. ಪ್ರಾರಂಭದಲ್ಲಿ ಇದನ್ನು ಹಠಯೋಗ ಪದ್ಧತಿಯಲ್ಲಿ ಬೇರೆಬೇರೆ ಆಸನಗಳ ಮೂಲಕ ಅಭ್ಯಾಸಮಾಡುತ್ತಾರೆ. ಇಂದ್ರಿಯಗಳನ್ನು ನಿಯಂತ್ರಿಸಿ ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ ಮುಂದುವರಿಯಲು ಈ ಎಲ್ಲ ಪದ್ಧತಿಗಳನ್ನು ಸೂಚಿಸಲಾಗಿದೆ. ಈ ಪದ್ಧತಿಯಲ್ಲಿ ದೇಹದೊಳಗಿನ ವಾಯುಗಳ ಚಲನೆಯ ದಿಕ್ಕನ್ನು ಬದಲಾಯಿಸುವಂತೆ ಅವನ್ನು ನಿಯಂತ್ರಿಸುವುದೂ ಸೇರಿದೆ. ಅಪಾನವಾಯುವು ಕೆಳಕ್ಕೆ ಹೋಗುತ್ತದೆ. ಪ್ರಾಣವಾಯುವು ಮೇಲಕ್ಕೆ ಹೋಗುತ್ತದೆ.
ಈ ವಾಯು ಪ್ರವಾಹಗಳು ಪೂರಕ ಅಥವಾ ಸಮತೋಲನದಲ್ಲಿ ಒಂದಕ್ಕೊಂದು ಸರಿಹೋಗುವವರೆಗೆ ಪ್ರಾಣಾಯಾಮ ಯೋಗಿಯು ಸಹಜವಾದ ರೀತಿಗೆ ವಿರುದ್ಧವಾದ ರೀತಿಯಲ್ಲಿ ಉಸಿರಾಡುವುದನ್ನು ಅಭ್ಯಾಸಮಾಡುತ್ತಾನೆ. ಉಚ್ಚಾಸವನ್ನು ನಿಶ್ವಾಸದಲ್ಲಿ ಸೇರಿಸುವುದು ರೇಚಕ, ಎರಡು ವಾಯುಪ್ರವಾಹಗಳನ್ನೂ ಸಂಪೂರ್ಣವಾಗಿ ನಿಲ್ಲಿಸಿದಾಗ ಆ ಮನುಷ್ಯನು ಕುಂಭಕ ಯೋಗದಲ್ಲಿದ್ದಾನೆ ಎಂದು ಹೇಳುತ್ತಾರೆ. ಕುಂಭಕ ಯೋಗವನ್ನು ಅಭ್ಯಾಸ ಮಾಡಿದ ಮನುಷ್ಯನು ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಆಯುಸ್ಸನ್ನು ಹೆಚ್ಚಿಸಿಕೊಳ್ಳಬಹುದು. ವಿವೇಕಿಯಾದ ಯೋಗಿಗೆ ಮುಂದಿನ ಜನ್ಮದವರೆಗೆ ಕಾಯದೆ ಒಂದು ಜನ್ಮದಲ್ಲಿಯೇ ಪರಿಪೂರ್ಣತೆಯನ್ನು ಕೈಗೂಡಿಸಿಕೊಳ್ಳುವುದರಲ್ಲಿ ಆಸಕ್ತಿ.
ಕುಂಭಕ ಯೋಗವನ್ನು ಅಭ್ಯಾಸಮಾಡುವ ಮನುಷ್ಯನು ತನ್ನ ಆಯಸ್ಸುನ್ನು ಹೆಚ್ಚಿಸಿಕೊಳ್ಳಬಹುದು.ಆದರೆ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ಭಗವಂತನ ದಿವ್ಯ ಪ್ರೇಮಪೂರ್ವಕ ಸೇವೆಯಲ್ಲಿ ಸದಾ ನಿರತನಾಗಿರುವುದರಿಂದಂ ಅವನ ಇಂದ್ರಿಯಗಳು ಬೇರೆ ರೀತಿಯ ಕ್ರಿಯೆಯಲ್ಲಿ ತೊಗಡುವ ಸಾಧ್ಯತೆಯೇ ಇಲ್ಲ. ಆದುದರಿಂದ ಬದುಕಿನ ಅಂತ್ಯದಲ್ಲಿ ಆತನು ಸಹಜವಾಗಿ ಶ್ರೀಕೃಷ್ಣನ ದಿವ್ಯ ನೆಲೆಗೆ ಏರಿಬಿಡುತ್ತಾನೆ. ಆದುದರಿಂದ ಅವನು ತನ್ನ ಆಯಸ್ಸನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನವನ್ನೇ ಮಾಡುವುದಿಲ್ಲ. ಭಗವದ್ಗೀತೆಯಲ್ಲಿ (14.26) ಹೇಳಿರುವಂತೆ ಅವನನ್ನು ತಕ್ಷಣವೇ ಮುಕ್ತಿಯ ಹಂತಕ್ಕೆ ಏರಿಸಲಾಗುತ್ತದೆ -
ಮಾಂ ಚ ಯೋವ್ಯಭಿಚಾರೇಣ ಭಕ್ತಿಯೋಗೇನ ಸೇವತೇ |
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ||
ಭಗವಂತನ ಪರಿಶುದ್ಧ ಭಕ್ತಿಸೇವೆಯಲ್ಲಿ ನಿರತನಾದವನು ಐಹಿಕ ಪ್ರಕೃತಿಯ ಗುಣಗಳನ್ನು ಮೀರುತ್ತಾನೆ ಮತ್ತು ಕೂಡಲೇ ಆಧ್ಯಾತ್ಮಿಕ ನೆಲೆಗೆ ಏರುತ್ತಾನೆ." ಕೃಷ್ಣಪ್ರಜ್ಞೆಯಲ್ಲಿ ಇರುವ ಮನುಷ್ಯನು ಆಧ್ಯಾತ್ಮಿಕ ಮಟ್ಟದಿಂದ ಪ್ರಾರಂಭಿಸುತ್ತಾನೆ ಮತ್ತು ಸದಾ ಆ ಪ್ರಜ್ಞೆಯಲ್ಲಿ ಇರುತ್ತಾನೆ. ಆದುದರಿಂದ ಪತನ ಎಂಬುವುದಿಲ್ಲ, ಕಡೆಗೆ ಅವನು ವಿಳಂಬವಿಲ್ಲದೆ ಭಗವಂತನ ಧಾಮವನ್ನು ಪ್ರವೇಶಿಸುತ್ತಾನೆ. ಮನುಷ್ಯನು ಕೃಷ್ಣಪ್ರಸಾದವಷ್ಟನ್ನೇಗಿ ಸೇವಿಸುತ್ತಿದ್ದರೆ ತಿನ್ನುವ ಆಹಾರದ ಪ್ರಮಾಣ ಸಹಜವಾಗಿಯೇ ಕಡಮೆಯಾಗುತ್ತದೆ. ಆಹಾರಸೇವನೆಯನ್ನು ಕಡಮೆಮಾಡುವುದು ಇಂದ್ರಿಯ ನಿಯಂತ್ರಣಕ್ಕೆ ಬಹಳ ಸಹಕಾರಿ. ಇಂದ್ರಿಯ ನಿಯಂತ್ರಣವಿಲ್ಲದೆ ಐಹಿಕ ತೊಡಕುಗಳಿಂದ ಬಿಡುಗಡೆಯಾಗುವ ಸಾಧ್ಯತೆಯೇ ಇಲ್ಲ.