ಭಗವದ್ಗೀತೆ: ಜ್ಞಾನದ ನೆಲೆಯಲ್ಲಿ ನಿಂತು ತ್ಯಾಗಮಾಡುವುದು ಎಂದರೆ ಈ ಕಾರ್ಯವನ್ನ ನಿಲ್ಲಿಸುವ ಅರ್ಥವೇ; ಗೀತೆಯ ಅರ್ಥ ಹೀಗಿದೆ
Jan 25, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಜ್ಞಾನದ ನೆಲೆಯಲ್ಲಿ ನಿಂತು ತ್ಯಾಗಮಾಡುವುದು ಎಂದರೆ ಈ ಕಾರ್ಯವನ್ನ ನಿಲ್ಲಿಸುವ ಅರ್ಥವೇ ಎಂಬುದನ್ನ ತಿಳಿಯಿರಿ.
ಸನ್ನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ |
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ||1||
ಅರ್ಜುನನು ಕೇಳಿದನು - ಹೇ ಕೃಷ್ಣ, ಮೊದಲು ನೀವು ಕ್ರರ್ಮವನ್ನು ಬಿಡಬೇಕೆಂದು ಹೇಳುತ್ತೀಯೆ. ಅನಂತರ ನೀವು ಭಕ್ತಿಪೂರ್ವಕ ಕರ್ಮವನ್ನು ಮಾಡಬೇಕೆಂದೂ ಹೇಳುತ್ತೀಯೆ. ಇವರೆಡರಲ್ಲಿ ಯಾವುದು ಹೆಚ್ಚು ಶ್ರೇಯಸ್ಕರ ಎಂದು ನನಗೆ ಖಚಿತವಾಗಿ ಹೇಳುವೆಯ?
ತಾಜಾ ಫೋಟೊಗಳು
ಭಗವದ್ಗೀತೆಯ ಈ ಐದನೆಯ ಅಧ್ಯಾಯದಲ್ಲಿ ಭಗವಂತನು ಭಕ್ತಿಸೇವೆಯು ಒಣ ಊಹಾತ್ಮಕ ಚಿಂತನೆಗಿಂತ ಉತ್ತಮ ಎಂದು ಹೇಳುತ್ತಾನೆ. ಊಹಾತ್ಮಕ ಚಿಂತನೆಗಿಂತ ಭಕ್ತಿಸೇವೆಯು ಸುಲಭ ಕೂಡ. ಏಕೆಂದರೆ ಅದು ಆಧ್ಯಾತ್ಮಿಕ ಸ್ವಭಾವದ್ದು. ಆದ್ದರಿಂದ ಅದು ನಮ್ಮನ್ನು ಕರ್ಮಬಂಧನದಿಂದ ಬಿಡುಗಡೆ ಮಾಡುತ್ತದೆ. ಎರಡನೆಯ ಅಧ್ಯಾಯದಲ್ಲಿ ಆತ್ಮದ ಸ್ವರೂಪವನ್ನು ಮತ್ತು ಭೌತಿಕ ಶರೀರದಲ್ಲಿ ಅದು ಬಂಧಿತವಾಗಿರುವುದನ್ನು ಕುರಿತು ಪ್ರಾಥಮಿಕವಾದ ಸಂಗತಿಗಳನ್ನು ಬಿಡುಗಡೆ ಹೊಂದುವುದು ಹೇಗೆ ಎಂದು ವಿವರಿಸಲಾಯಿತು.
ಮೂರನೆಯ ಅಧ್ಯಾಯದಲ್ಲಿ ಜ್ಞಾನದ ನೆಲೆಗೆ ಏರಿದವನು ಯಾವ ಕರ್ತವ್ಯಗಳನ್ನೂ ಮಾಡಬೇಕಾಗಿಲ್ಲ ಎಂದು ವಿವರಿಸಲಾಯಿತು. ನಾಲ್ಕನೆಯ ಅಧ್ಯಾಯದಲ್ಲಿ ಯಜ್ಞರೂಪದ ಎಲ್ಲ ಕರ್ಮವೂ ಜ್ಞಾನದಲ್ಲಿ ಕೊನೆಗೊಳ್ಳುತ್ತದೆ ಎಂದು ಭಗವಂತನು ಅರ್ಜನನಿಗೆ ಹೇಳಿದನು. ಆದರೆ ನಾಲ್ಕನೆಯ ಅಧ್ಯಾಯದ ಅಂತ್ಯದಲ್ಲಿ ಭಗವಂತನು ಅರ್ಜುನನಿಗೆ ಹೇಳಿದನು. ಆದರೆ ನಾಲ್ಕನೆಯ ಅಧ್ಯಾಯದ ಅಂತ್ಯದಲ್ಲಿ ಭಗವಂತನು ಅರ್ಜುನನಿಗೆ, ಪರಿಪೂರ್ಣಜ್ಞಾನದಲ್ಲಿ ನೆಲೆಗೊಂಡಿದ್ದು, ಜಾಗೃತನಾಗಿ ಯುದ್ಧಮಾಡಬೇಕೆಂದು ಹೇಳಿದನು. ಹೀಗೆ ಕೃಷ್ಣನು ಏಕಕಾಲದಲ್ಲಿ ಭಕ್ತಿಪೂರ್ವಕವಾದ ಕ್ರಮದ ಹಮತ್ವವನ್ನೂ ಮತ್ತು ಜ್ಞಾನದ ನೆಲೆಯಲ್ಲಿ ಕ್ರಮವನ್ನು ಆಚರಿಸದೆ ಇರುವುದರ ಮಹತ್ವವನ್ನೂ ಒತ್ತಿ ಹೇಳಿದನು.
ಕೃಷ್ಣನ ಈ ಮಾತುಗಳಿಂದ ಅರ್ಜುನನು ಗಲಿಬಿಲಿಗೊಂಡದ್ದಲ್ಲದೆ ಅವನ ಸಂಕಲ್ಪಶಕ್ತಿಯೇ ಗೊಂದಲಕ್ಕೀಡಾಯಿತು. ಜ್ಞಾನದ ನೆಲೆಯಲ್ಲಿ ನಿಂತು ತ್ಯಾಗಮಾಡುವುದು ಎಂದರೆ ಎಲ್ಲ ಬಗೆಯ ಇಂದ್ರಿಯ ಕಾರ್ಯಗಳನ್ನು ನಿಲ್ಲಿಸಿಬಡುವುದು ಎಂದು ಅರ್ಜುನ ಅರ್ಥ ಮಾಡಿಕೊಂಡ. ಆದರೆ ಭಕ್ತಿಸೇವೆಯಲ್ಲಿರುವಾತ ಕಾರ್ಯಮಾಡುವಾಗ ಅದು ನಿಷ್ಕ್ರಿಯೆ ಹೇಗಾಗುತ್ತದೆ? ಇದನ್ನೇ ಬೇರೆ ಮಾತುಗಳಲ್ಲಿ ಹೀಗೆ ಹೇಳಬಹುದು.
ಜ್ಞಾನಪೂರ್ವಕವಾದ ತ್ಯಾಗವೆಂದರೆ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿಬಿಡುವುದು ಎಂದು ಅರ್ಜುನನಿಗೆ ತೋರಿತು. ಏಕೆಂದರೆ ಕರ್ಮ ಮತ್ತು ಸನ್ಯಾಸಗಳು ಒಂದಕ್ಕೊಂದು ಹೊಂದುವುದಿಲ್ಲ. ಆದರೆ ಸಂಪೂರ್ಣವಾದ ಜ್ಞಾನದಲ್ಲಿ ಮಾಡುವ ಕರ್ಮವು ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ. ಆದುದರಿಂದ ಅದು ಅಕರ್ಮದಂತೆಯೇ. ಇದು ಅರ್ಜುನನಿಗೆ ತಿಳಿದಂತೆ ಕಾಣುವುದಿಲ್ಲ. ಆದ್ದರಿಂದ ತಾವು ಪೂರ್ತಿಯಾಗಿ ಕ್ರಮವನ್ನು ಬಿಟ್ಟುಬಿಡಬೇಕೇ ಅಥವಾ ಪೂರ್ಣಜ್ಞಾನದ ನೆಲೆಯಲ್ಲಿ ನಿಂತು ಕ್ರರ್ಮಮಾಡಬೇಕೆ ಎಂದು ಕೇಳುತ್ತಾನೆ.