logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶ್ರೀಕೃಷ್ಣನ ರೀತಿ ಭಕ್ತನೂ ಎಲ್ಲಾ ಟೀಕೆಗಳನ್ನು ಮೀರಿದಾಗ ಯಶಸ್ಸು ಪಡೆಯುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಶ್ರೀಕೃಷ್ಣನ ರೀತಿ ಭಕ್ತನೂ ಎಲ್ಲಾ ಟೀಕೆಗಳನ್ನು ಮೀರಿದಾಗ ಯಶಸ್ಸು ಪಡೆಯುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

May 13, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಶ್ರೀಕೃಷ್ಣನ ರೀತಿ ಭಕ್ತನೂ ಎಲ್ಲಾ ಟೀಕೆಗಳನ್ನು ಮೀರಿದಾಗ ಯಶಸ್ಸು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 28ನೇ ಶ್ಲೋಕದಲ್ಲಿ ತಿಳಿಯೋಣ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 28

ಶುಭಾಶುಭ ಫಲೈರೇವಂ ಮೋಕ್ಷ್ಯಸೇ ಕರ್ಮಬನ್ಧನೈಃ |

ಸನ್ನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ||28||

ಅನುವಾದ: ಈ ರೀತಿಯಲ್ಲಿ ನೀನು ಕರ್ಮಬಂಧನದಿಂದ ಮತ್ತು ಅದರ ಶುಭಾಶುಭ ಫಲಗಳಿಂದ ಬಿಡುಗಡೆ ಹೊಂದುತ್ತೀಯೆ. ಈ ತ್ಯಾಗ ತತ್ವದಿಂದ ನಿನ್ನ ಮನಸ್ಸು ನನ್ನಲ್ಲಿ ನೆಲೆಸಿ ನೀನು ಮುಕ್ತನಾಗುತ್ತೀಯೆ ಮತ್ತು ನನ್ನ ಬಳಿಗೆ ಬರುತ್ತೀಯೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಶ್ರೇಷ್ಠ ಮಾರ್ಗದರ್ಶನದಲ್ಲಿ ಕೃಷ್ಣಪ್ರಜ್ಞೆಯಲ್ಲಿ ಕರ್ಮಮಾಡುವವನನ್ನು ಯುಕ್ತ ಎಂದು ಕರೆಯುತ್ತಾರೆ. ಇದಕ್ಕೆ ಶಾಸ್ತ್ರಿಯ ಶಬ್ದ ಯುಕ್ತ ವೈರಾಗ್ಯ. ಇದನ್ನು ರೂಪ ಗೋಸ್ವಾಮಿಯವರು ಹೀಗೆ ವಿವರಿಸಿದ್ದಾರೆ -

ಅನಾಸಕ್ತಸ್ಯ ವಿಷಯಾನ್ ಯಥಾರ್ಹಮ್ ಉಪಯುಞ್ಜತಃ |

ನಿರ್ಬನ್ಧಃ ಕೃಷ್ಣಸಮ್ಬನ್ಧೇ ಯುಕ್ತಂ ವೈರಾಗ್ಯಮುಚ್ಯತೇ || (ಭಕ್ತಿರಸಾಮೃತ ಸಿಂಧು 2.255)

ನಾವು ಈ ಐಹಿಕ ಜಗತ್ತಿನಲ್ಲಿ ಇರುವವರೆಗೆ ಕರ್ಮ ಮಾಡಲೇಬೇಕು. ಕರ್ಮವನ್ನು ಬಿಡುವಂತಿಲ್ಲ. ಹಾಗೆ ಕರ್ಮಗಳನ್ನು ಮಾಡಿ ಫಲಗಳನ್ನು ಕೃಷ್ಣನಿಗೆ ಅರ್ಪಿಸಿದರೆ, ಅದಕ್ಕೆ ಯುಕ್ತ ವೈರಾಗ್ಯ ಎಂದು ಹೆಸರು ಎಂದು ರೂಪ ಗೋಸ್ವಾಮಿಯವರು ಹೇಳುತ್ತಾರೆ. ವಾಸ್ತವವಾಗಿ ಸನ್ಯಾಸದಲ್ಲಿ ನೆಲೆಸಿದಾಗ ಇಂತಹ ಚಟುವಟಿಕೆಗಳು ಮನಸ್ಸಿನ ದರ್ಪಣವನ್ನು ಸ್ವಚ್ಛಗೊಳಿಸುತ್ತವೆ. ಕರ್ತನು ಕ್ರಮಕ್ರಮವಾಗಿ ಆತ್ಮ ಸಾಕ್ಷಾತ್ಕಾರದಲ್ಲಿ ಮುನ್ನಡೆದಂತೆ ಆತನು ಸಂಪೂರ್ಣವಾಗಿ ದೇವೋತ್ತಮ ಪರಮ ಪುರುಷನಿಗೆ ಶರಣಾಗುತ್ತಾನೆ, ಆದುದರಿಂದ ಕಡೆಯಲ್ಲಿ ಮುಕ್ತನಾಗುತ್ತಾನೆ. ಈ ಮುಕ್ತಿಯನ್ನೂ ಖಚಿತವಾಗಿ ಹೇಳಿದೆ. ಈ ಮುಕ್ತಿಯಿಂದ ಆತನು ಬ್ರಹ್ಮಜ್ಯೋತಿಯೊಂದಿಗೆ ಒಂದಾಗುವುದಿಲ್ಲ. ಆದರೆ ಪರಮ ಪ್ರಭುವಿನ ಲೋಕವನ್ನು ಪ್ರವೇಶಿಸುತ್ತಾನೆ. ಇದನ್ನು ಇಲ್ಲಿ ಸ್ಪಷ್ಟವಾಗಿ ಹೇಳಿದೆ (Bhagavad Gita Updesh In Kannada).

ಮಾಮ್ ಉಪೈಶ್ಯಸಿ ಆತನು ನನ್ನ ಬಳಿಗೆ ಬರುತ್ತಾನೆ. ಎಂದರೆ ಭಗವದ್ಧಾಮಕ್ಕೆ ಹಿಂದಿರುಗುತ್ತಾನೆ. ಮುಕ್ತಿಯಲ್ಲಿ ಐದು ಹಂತಗಳಿದೆ. ಮೇಲೆ ಹೇಳಿದಂತೆ ತನ್ನ ಬಾಳಿನಲ್ಲಿ ಸದಾ ಪರಮ ಪ್ರಭುವಿನ ನಿರ್ದೇಶನದಲ್ಲಿ ಬದುಕಿದವನು ಒಂದು ಹಂತದವರೆಗೆ ವಿಕಾಸ ಹೊಂದುತ್ತಾನೆ. ಈ ಹಂತದಿಂದ ಅವನ ದೇಹವನ್ನು ಬಿಟ್ಟನಂತರ ಭಗದ್ದಾಮಕ್ಕೆ ಹಿಂದಿರುಗಿ ಪರಮ ಪ್ರಭುವಿನ ಸಹವಾಸದಲ್ಲಿ ನೇರವಾಗಿ ನಿರತನಾಗಬಹುದು. ತನ್ನ ಜೀವನವನ್ನು ಪ್ರಭುವಿನ ಸೇವೆಗೆ ಮುಡಿಪಾಗಿಡುವುದನ್ನು ಬಿಟ್ಟು ಬೇರೆ ಯಾವುದೇ ಆಸಕ್ತಿ ಇಲ್ಲದವನು ವಾಸ್ತವವಾಗಿ ಸನ್ಯಾಸಿ. ಅಂತಹ ಮನುಷ್ಯನು ತನ್ನನ್ನು ಪ್ರಭುವಿನ ಪರಮ ಇಚ್ಛೆಯನ್ನು ಅವಲಂಬಿಸಿದ ನಿರಂತರ ಸೇವಕ ಎಂದೇ ಭಾವಿಸುತ್ತಾನೆ. ಹೀಗಾಗಿ ಅವನು ಏನನ್ನೇ ಮಾಡಲಿ ಪ್ರಭುವಿನ ಪ್ರಯೋಜನಕ್ಕಾಗಿ ಮಾಡುತ್ತಾನೆ.

ಅವನ ಯಾವ ಕಾರ್ಯವನ್ನೇ ಮಾಡಲಿ ಅದನ್ನು ಪ್ರಭುವಿನ ಸೇವೆ ಎಂದು ಮಾಡುತ್ತಾನೆ. ಫಲವನ್ನು ನೀಡುವ ಕರ್ಮಗಳಿಗಾಗಲೀ, ವೇದಗಳಲ್ಲಿ ಪ್ರಸ್ತಾಪಿಸಿರುವ ವಿಧಿತ ಕರ್ತವ್ಯಗಳಿಗಾಗಲೀ ಆತನು ಗಂಭೀರ ಗಮನವನ್ನು ಕೊಡುವುದಿಲ್ಲ. ವೇದಗಳಲ್ಲಿ ಪ್ರಸ್ತಾಪಿಸಿರುವ ವಿಧಿತ ಕರ್ತವ್ಯಗಳನ್ನು ಸಾಮಾನ್ಯ ಮನುಷ್ಯರು ಮಾಡಲೇಬೇಕು. ಆದರೆ ಪ್ರಭುವಿನ ಸೇವೆಯಲ್ಲಿಯೇ ಸಂಪೂರ್ಣವಾಗಿ ನಿರತನಾಗಿರುವ ಪರಿಶುದ್ಧ ಭಕ್ತನು ವೇದಗಳು ವಿಧಿಸಿರುವ ಕರ್ತವ್ಯಗಳಿಗೆ ವಿರುದ್ಧವಾಗಿ ಹೋಗುವಂತೆ ಕಂಡರೂ ವಾಸ್ತವವಾಗಿ ಹಾಗಿರುವುದಿಲ್ಲ.

ಆದುದರಿಂದ ಅತ್ಯಂತ ಬುದ್ಧಿವಂತನಾದವನೂ ಪರಿಶುದ್ಧ ಭಕ್ತನ ಯೋಜನೆಗಳನ್ನು, ಕಾರ್ಯಗಳನ್ನು ಅರ್ಥಮಾಡಿಕೊಳ್ಳಲಾರ ಎಂದು ವೈಷ್ಣವ ಪ್ರಮಾಣಗಳು ಹೇಳುತ್ತವೆ. ನಿಷ್ಕೃಷ್ಟವಾಗಿ ಆ ಮಾತುಗಳು ಇವು - ತಾನ್ರವಾಕ್ಯ, ಕ್ರಿಯಾ, ಮುದ್ರಾವಿಜ್ಞೇಹ ನಾ ಬುಝಯ (ಚೈತನ್ಯ ಚರಿತಾಮೃತ, ಮಧ್ಯ 23.39) ಭಗವಂತನ ಸೇವೆಯಲ್ಲಿ ಸದಾ ನಿರತನಾಗಿರುವವನನ್ನು ಅಥವಾ ಭಗವಂತನ ಸೇವೆ ಮಾಡುವುದು ಹೇಗೆ ಎಂದು ಸದಾ ಯೋಚಿಸುತ್ತ ಯೋಜನೆಗಳನ್ನು ಮಾಡುತ್ತಿರುವವನು ಈಗಲೇ ಸಂಪೂರ್ಣವಾಗಿ ಮುಕ್ತನಾಗಿದ್ದಾನೆ ಎಂದು ಭಾವಿಸಬೇಕು. ಮುಂದೆ ಅವನು ಭಗವದ್ಧಾಮಕ್ಕೆ ಹಿಂದಿರುವುದು ಖಚಿತ. ಹೇಗೆ ಕೃಷ್ಣನು ಎಲ್ಲ ಟೀಕೆಗಳನ್ನೂ ಮೀರಿದವನೋ ಹಾಗೆಯೇ ಇಂತಹ ಭಕ್ತನು ಎಲ್ಲ ಐಹಿಕ ಟೀಕೆಗಳನ್ನೂ ಮೀರಿದವನು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ