logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಭಕ್ತರಲ್ಲಿ 3 ಬಗೆಯಯವರಿದ್ದಾರೆ, ಯಾರು ಯಾವ ಹಂತದಲ್ಲಿದ್ದಾರೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಭಗವಂತನ ಭಕ್ತರಲ್ಲಿ 3 ಬಗೆಯಯವರಿದ್ದಾರೆ, ಯಾರು ಯಾವ ಹಂತದಲ್ಲಿದ್ದಾರೆ; ಗೀತೆಯ ಸಾರಾಂಶ ತಿಳಿಯಿರಿ

Raghavendra M Y HT Kannada

May 01, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಗವಂತನ ಭಕ್ತರಲ್ಲಿ 3 ಬಗೆಯಯವರಿದ್ದಾರೆ. ಯಾರು ಯಾವ ಹಂತದಲ್ಲಿದ್ದಾರೆ ಎಂಬುದನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 11 ರಲ್ಲಿನ ಮುಂದುವರಿದ ಭಾಗವನ್ನು ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 11

ಅವಜಾನನ್ತಿ ಮಾಂ ಮೂಢಾ ಮಾನನುಷೀಂ ತನುಮಾಶ್ರಿತಮ್ |

ಪರಂ ಭಾವಮಜಾನನ್ತೋ ಮಮ ಭೂತಮಹೇಶ್ವರಮ್ ||11||

ಭಗವಂತನು (Lord Krishna) ಮನುಷ್ಯರೂಪದಲ್ಲಿ ಕಾಣಿಸಿಕೊಳ್ಳುವ ವಿಷಯದಲ್ಲಿ ನಿರಾಕಾರವಾದಿಗಳಿಗೂ ಸಾಕಾರವಾದಿಗಳಿಗೂ ಬಹು ವಾದವಿವಾದಗಳಿವೆ. ಆದರೆ ಕೃಷ್ಣ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಭಗವದ್ಗೀತೆಯೂ (Bhagavad Gita Updesh in Kannada), ಶ್ರೀಮದ್ಭಾಗವತವೂ ಪ್ರಮಾಣ ಗ್ರಂಥಗಳು. ಅವನ್ನು ಓದಿ ನೋಡಿದರೆ ಕೃಷ್ಣನು ದೇವೋತ್ತಮ ಪರಮ ಪುರುಷನು ಎಂದು ನಾವು ಅರ್ಥಮಾಡಿಕೊಳ್ಳಬಹುದು. ಸಾಮಾನ್ಯ ಮನುಷ್ಯನಂತೆ ಭೂಲೋಕದಲ್ಲಿ ಕಾಣಿಸಿಕೊಂಡರೂ ಆತನು ಸಾಮಾನ್ಯ ಮನುಷ್ಯನಲ್ಲ. ಶ್ರೀಮದ್ಭಾಗವತದ ಪ್ರಥಮ ಸ್ಕಂಧದ ಪ್ರಥಮ ಅಧ್ಯಾಯದಲ್ಲಿ, ಶೌನಕರ ನಾಯಕತ್ವದಲ್ಲಿ ಋಷಿಗಳನ್ನು ಕೃಷ್ಣನ ಕಾರ್ಯಗಳನ್ನು ಕುರಿತು ಪ್ರಶ್ನೆ ಮಾಡಿದಾಗ ಅವರು ಹೀಗೆ ಹೇಳಿದರು -

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕೃತವಾನ್ ಕಿಲ ಕರ್ಮಾಣಿ ಸಹ ರಾಮೇಣ ಕೇಶವಃ |

ಅತಿಮರ್ತ್ಯಾನಿ ಭಗವಾನ್ ಗೂಢಃ ಕಪಟಮಾನುಷಃ ||

ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು, ಬಲರಾಮನೊಡನೆ, ಮನುಷ್ಯನಂತೆ ಆಟವಾಡಿದನು. ಹೀಗೆ ಮರೆಯಾಗಿ ಬಹು ಮನುಷ್ಯಾತೀತ ಕಾರ್ಯಗಳನ್ನು ಮಾಡಿದನು. (ಭಾಗವತ 1.1.20) ಮನುಷ್ಯನಾಗಿ ಪ್ರಭುವು ಕಾಣಿಸಿಕೊಳ್ಳುವುದು ಮೂಢರಿಗೆ ದಿಗ್ಭ್ರಮೆಯನ್ನುಂಟು ಮಾಡುತ್ತದೆ. ಕೃಷ್ಣನು ಈ ಭೂಮಿಯ ಮೇಲಿದ್ದ ಕಾಲದಲ್ಲಿ ಮಾಡಿದ ಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲು ಸಾಧ್ಯವಿಲ್ಲ. ಕೃಷ್ಣನು ತನ್ನ ತಂದೆ ತಾಯಿಯರಾದ ವಸುದೇವ ಮತ್ತು ದೇವಕಿಯರ ಎದುರಿಗೆ ಚತುರ್ಭುಜನಾಗಿ ಕಾಣಿಸಿಕೊಂಡ. ಆದರೆ ತನ್ನ ತಂದೆತಾಯಿಯರು ಪ್ರಾರ್ಥನೆ ಮಾಡಿದನಂತರ ಆತನು ಸಾಮಾನ್ಯ ಮಗುವಿನ ರೂಪವನ್ನು ಧರಿಸಿದ. ಭಾಗವತದಲ್ಲಿ ಹೇಳಿರುವಂತೆ (10.3.46) ಭಭೂವ ಪ್ರಾಕೃತಃ ಶಿಶುಃ ಆತನು ಸಾಮಾನ್ಯ ಮನುಷ್ಯನಂತೆ ಆದನು.

ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಳ್ಳುವುದು ಪ್ರಭುವಿನ ದಿವ್ಯ ಶರೀರದ ಲಕ್ಷಣಗಳಲ್ಲಿ ಒಂದು ಎಂದು ಇಲ್ಲಿ ಮತ್ತೆ ಸೂಚಿಸುತ್ತದೆ. ಭಗವದ್ಗೀತೆಯ ಹನ್ನೊಂದನೆಯ ಅಧ್ಯಾಯದಲ್ಲಿ ಅರ್ಜುನನು ಕೃಷ್ಣನ ಚತುರ್ಭುಜ ರೂಪವನ್ನು ಕಾಣಲು ಬಯಸಿದ (ತೇನೈವ ರೂಪೇಣ ಚತುರ್ಭುಜೇನ) ಎಂದು ಹೇಳಿದೆ. ಈ ರೂಪವನ್ನು ತೋರಿಸಿದ ಅನಂತರ, ಅರ್ಜುನನ ಪ್ರಾರ್ಥನೆಯಂತೆ ಕೃಷ್ಣನು ಮತ್ತೆ ತನ್ನ ಮನುಷ್ಯ ರೂಪವನ್ನು (ಮಾನುಷಂ ರೂಪಮ್) ಧರಿಸಿದನು. ಪರಮ ಪ್ರಭುವಿನ ಈ ಬೇರೆಬೇರೆ ಸ್ವರೂಪಗಳು ನಿಶ್ಚಯವಾಗಿಯೂ ಸಾಮಾನ್ಯ ಮನುಷ್ಯನ ರೂಪಗಳಲ್ಲ.

ಮಾಯಾವಾದಿ ಸಿದ್ಧಾಂತದ ಸೋಂಕಿನಿಂದ ಕೃಷ್ಣನನ್ನು ತೆಗಳುವವರಲ್ಲಿ ಕೆಲವರು, ಆತನು ಸಾಮಾನ್ಯ ಮನುಷ್ಯ ಎಂದು ತೋರಿಸಿ ಕೊಡಲು ಶ್ರೀಮದ್ಭಾಗವತದಿಂದ (3.29.21) - ಪರಮ ಪ್ರಭುವು ಪ್ರತಿಯೊಂದು ಜೀವಿಯಲ್ಲಿ ಇದ್ದಾನೆ. ಕೃಷ್ಣನನ್ನು ತೆಗಳುವ ಅನಧಿಕೃತ ವ್ಯಕ್ತಿಗಳ ವ್ಯಾಖ್ಯಾರ್ಥವನ್ನು ಅನುಸರಿಸುವ ಬದಲು ಜೀವ ಗೋಸ್ವಾಮಿ ಮತ್ತು ವಿಶ್ವನಾಥ ಚಕ್ರವರ್ತಿ ಠಾಕೂರರಂತಹವರ ಮಾರ್ಗದರ್ಶನದಲ್ಲಿ ಈ ಶ್ಲೋಕವನ್ನು ಗಮನಿಸುವುದು ಉತ್ತಮ. ಈ ಶ್ಲೋಕವನ್ನು ವ್ಯಾಖ್ಯಾನ ಮಾಡುತ್ತ ಜೀವ ಗೋಸ್ವಾಮಿಯವರು, ಸ್ವಾಂಶ ವಿಸ್ತರಣೆಯಲ್ಲಿ ಕೃಷ್ಣನು ಪರಮಾತ್ಮನಾಗಿ ಸಕಲ ಚರಾಚರಗಳಲ್ಲಿ ಇದ್ದಾನೆ. ಆದುದರಿಂದ ಅರ್ಚಾಮೂರ್ತಿಗಷ್ಟೇ - ದೇವಸ್ಥಾನದಲ್ಲಿ ಅರ್ಚನೆ ಮಾಡುವ ಪರಮ ಪ್ರಭುವಿನ ರೂಪಕ್ಕಷ್ಟೇ ಗಮನಕೊಟ್ಟು ಇತರ ಜೀವಿಗಳನ್ನು ಗೌರವಿಸದಿರುವ ನವಶಿಷ್ಯನು ದೇವಾಲಯದಲ್ಲಿರುವ ದೇವರ ರೂಪವನ್ನು ನಿರ್ಥಕವಾಗಿ ಪೂಜೆ ಮಾಡುತ್ತಾನೆ ಎಂದು ಹೇಳಿದ್ದಾರೆ.

ಪ್ರಭುವಿನ ಭಕ್ತರಲ್ಲಿ ಮೂರು ಬಗೆಯಯವರಿದ್ದಾರೆ. ನವಶಿಷ್ಯನು ಅತ್ಯಂತ ಕೆಳಗಿನ ಹಂತದಲ್ಲಿದ್ದಾನೆ. ನವಶಿಷ್ಯ ಭಕ್ತನು ಇತರ ಭಕ್ತರಿಗೆ ಕೊಡುವುದಕ್ಕಿಂತ ಹೆಚ್ಚು ಗಮನವನ್ನು ದೇವಸ್ಥಾನದಲ್ಲಿರುವ ಮೂರ್ತಿಗೆ ಕೊಡುತ್ತಾನೆ. ಆದುದರಿಂದ ವಿಶ್ವನಾಥ ಚಕ್ರವರ್ತಿ ಠಾಕೂರರು ಇಂತಹ ಮನೋಧರ್ಮವನ್ನು ತಿದ್ದಬೇಕು ಎಂದು ಎಚ್ಚರ ಹೇಳಿದ್ದಾರೆ. ಪರಮಾತ್ಮ ಸ್ವರೂಪದಲ್ಲಿ ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲೂ ಇರುವುದರಿಂದ ಪ್ರತಿಯೊಬ್ಬನೂ ಪರಮ ಪ್ರಭುವಿನ ಸಾಕಾರರೂಪ ಅಥವಾ ದೇವಾಲಯ ಎನ್ನುವುದನ್ನು ಭಕ್ತನು ಅರ್ಥಮಾಡಿಕೊಳ್ಳಬೇಕು. ಪ್ರಭುವಿನ ದೇವಾಲಯಕ್ಕೆ ಗೌರವ ಕೊಡುವಂತೆ ಪರಮಾತ್ಮನು ವಾಸಿಸುವ ಒಂದೊಂದು ದೇಹಕ್ಕೂ ಗೌರವವನ್ನು ಕೊಡಬೇಕು. ಪ್ರತಿಯೊಬ್ಬನಿಗೂ ಉಚಿತವಾದ ಗೌರವವನ್ನು ನೀಡಬೇಕು. ಯಾರನ್ನೂ ಅಲಕ್ಷ್ಯ ಮಾಡಬಾರದು.

ದೇವಾಲಯ ಪೂಜೆಯನ್ನು ತೆಗಳುವ ಅನೇಕ ಮಂದಿ ನಿಕಾರಾವಾದಿಗಳು ಇದ್ದಾರೆ. ದೇವರು ಎಲ್ಲೆಲ್ಲಿಯೂ ಇದ್ದಾನೆ. ಆದುದರಿಂದ ಭಕ್ತನು ದೇವಾಲಯ ಪೂಜೆಗೇ ತನ್ನನ್ನು ಏಕೆ ಸೀಮಿತಗೊಳಿಸಿಕೊಳ್ಳಬೇಕು. ಎಂದು ಅವರು ಕೇಳುತ್ತಾರೆ. ದೇವರು ಎಲ್ಲೆಲ್ಲಿಯೂ ಇರುವುದಾದರೆ ಆತನು ದೇವಾಲಯದಲ್ಲಿ ಅಥವಾ ಮೂರ್ತಿಯಲ್ಲಿ ಇರುವುದಿಲ್ಲವೆ? ಸಾಕಾರವಾದಿಗಳು, ನಿರಾಕಾರವಾದಿಗಳು ನಿರಂತರವಾಗಿ ಒಬ್ಬರೊಡನೊಬ್ಬರು ಜಗಳವಾಡುತ್ತಾರೆ. ಆದರೂ ಕೃಷ್ಣಪ್ರಜ್ಞೆಯಲ್ಲಿರುವ ಪರಿಪೂರ್ಣ ಭಕ್ತನಿಗೆ ಕೃಷ್ಣನು ಪರಮ ಪುರುಷನಾದರೂ ಬ್ರಹ್ಮಸಂಹಿತೆಯಲ್ಲಿ ದೃಢಪಡಿಸಿರುವಂತೆ ಆತನು ಎಲ್ಲೆಲ್ಲಿಯೂ ಇದ್ದಾನೆ ಎಂದು ಗೊತ್ತು. ಗೋಲೋಕ ವೃಂದಾವನವು ಆತನ ವೈಯಕ್ತಿಕ ನಿವಾಸ. ಅವನು ಸದಾ ಅಲ್ಲಿಯೇ ವಾಸಿಸುತ್ತಾನೆ. ಆದರೂ ತನ್ನ ಶಕ್ತಿಯ ಬೇರೆ ಬೇರೆ ಅಭಿವ್ಯಕ್ತಿಗಳಿಂದ ಮತ್ತು ತನ್ನ ಪೂರ್ಣ ವಿಸ್ತರಣೆಯಿಂದ ಆತನು ಐಹಿಕ ಮತ್ತು ಅಧ್ಯಾತ್ಮಿಕ ಸೃಷ್ಟಿಯ ಎಲ್ಲ ಭಾಗಗಳಲ್ಲಿ ಎಲ್ಲೆಲ್ಲಿಯೂ ಇದ್ದಾನೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ