logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನನ್ನು ಅಪಹಾಸ್ಯ ಮಾಡುವವರು ನಾಸ್ತಿಕರು ಎಂದು ತಿಳಿಯದುಕೊಳ್ಳಬೇಕು; ಗೀತೆಯ ಅರ್ಥ ಹೀಗಿದೆ

Bhagavad Gita: ಭಗವಂತನನ್ನು ಅಪಹಾಸ್ಯ ಮಾಡುವವರು ನಾಸ್ತಿಕರು ಎಂದು ತಿಳಿಯದುಕೊಳ್ಳಬೇಕು; ಗೀತೆಯ ಅರ್ಥ ಹೀಗಿದೆ

Raghavendra M Y HT Kannada

May 02, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಗವಂತನನ್ನು ಅಪಹಾಸ್ಯ ಮಾಡುವವರು ನಾಸ್ತಿಕರು ಎಂದು ತಿಳಿಯದುಕೊಳ್ಳಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 12 ರಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 12

ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ |

ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ ||12||

ಅನುವಾದ: ಹೀಗೆ ದಿಗ್ಬ್ರಮೆಯಾದವರನ್ನು ರಾಕ್ಷಸೀ ಮತ್ತು ನಾಸ್ತಿಕ ಅಭಿಪ್ರಾಯಗಳು ಆಕರ್ಷಿಸುತ್ತವೆ. ಈ ಭ್ರಾಂತಿಯ ಸ್ಥಿತಿಯಲ್ಲಿ ಅವರ ಮುಕ್ತಿಯ ಭರವಸೆಗಳು, ಅವರ ಫಲಾಪೇಕ್ಷಿತ ಕರ್ಮಗಳು ಮತ್ತು ಅವರ ಜ್ಞಾನ ಸಂಸ್ಕಾರ ಎಲ್ಲ ಸೋತು ಹೋಗುತ್ತವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ತಾವು ಕೃಷ್ಣಪ್ರಜ್ಞೆಯಲ್ಲಿ ಇದ್ದೇವೆ ಮತ್ತು ಭಕ್ತಿಸೇವೆಯಲ್ಲಿ ತೊಡಗಿದ್ದೇವೆ ಎಂದು ಭಾವಿಸಿಕೊಳ್ಳುವ ಅನೇಕ ಮಂದಿ ಭಕ್ತರು ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಪರಿಪೂರ್ಣ ಸತ್ಯ ಎಂದು ಸ್ವೀಕರಿಸುವುದಿಲ್ಲ. ಅವರು ಭಕ್ತಿಸೇವೆಯ ಫಲವಾದ ಭಗವದ್ಧಾಮಕ್ಕೆ ಹಿಂದಿರುಗುವುದನ್ನು ಎಂದೂ ಸವಿಯುವುದಿಲ್ಲ. ಹಾಗೆಯೇ ಹಲವರು ಫಲಾಪೇಕ್ಷೆಯುಳ್ಳ ಪುಣ್ಯಕಾರ್ಯಗಳಲ್ಲಿ ನಿರತರಾಗಿ ಈ ಐಹಿಕ ಬಂಧನದಿಂದ ಕಟ್ಟಕಡೆಗೆ ಬಿಡುಗಡೆಯಾಗುತ್ತೇವೆ ಎಂಬ ಭರವಸೆಯನ್ನು ಇಟ್ಟುಕೊಂಡಿರುತ್ತಾರೆ. ಅವರೂ ಯಶಸ್ವಿಗಳಾಗುವುದಿಲ್ಲ. ಏಕೆಂದರೆ ಅವರು ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ತೆಗಳುತ್ತಾರೆ (Bhagavad Gita Updesh in Kannada).

ಇತರ ಮಾತುಗಳಲ್ಲಿ ಹೇಳುವುದಾದರೆ ಕೃಷ್ಣನನ್ನು ಅಪಹಾಸ್ಯ ಮಾಡುವವರು ರಾಕ್ಷಸ ಸ್ವಭಾವದವರು ಅಥವಾ ನಾಸ್ತಿಕರು ಎಂದು ತಿಳಿದುಕೊಳ್ಳಬೇಕು. ಭಗವದ್ಗೀತೆಯ ಏಳನೆಯ ಅಧ್ಯಾಯದಲ್ಲಿ ವರ್ಣಿಸಿರುವಂತೆ ಈ ರಾಕ್ಷಸೀ ದುಷ್ಕರ್ಮಿಗಳು ಎಂದಿಗೂ ಕೃಷ್ಣನಿಗೆ ಶರಣಾಗತರಾಗುವುದಿಲ್ಲ. ಅವರು ಪರಿಪೂರ್ಣ ಸತ್ಯವನ್ನು ಮುಟ್ಟಲು ಊಹಾತ್ಮಕ ಚಿಂತನೆಗಳಲ್ಲಿ ತೊಡಗುತ್ತಾರೆ. ಇದರಿಂದ ಸಾಮಾನ್ಯ ಜೀವಿಯೂ ಕೃಷ್ಣನೂ ಒಂದೇ ಎನ್ನುವ ಮಿಥ್ಯೆಯ ನಿರ್ಣಯಕ್ಕೆ ಬರುತ್ತಾರೆ. ಇಂತಹ ಸುಳ್ಳು ನಂಬಿಕೆಯಿಂದ ಅವರು ಹೀಗೆ ಯೋಚಿಸುತ್ತಾರೆ. ಯಾವುದೇ ಮನುಷ್ಯನ ದೇಹವನ್ನು ಈಗ ಐಹಿಕ ಪ್ರಕೃತಿಯು ಮುಚ್ಚಿದೆ. ಮನುಷ್ಯನು ಈ ಐಹಿಕ ದೇಹದಿಂದ ಬಿಡುಗಡೆಯಾಗುತ್ತಲೇ ದೇವರಿಗೂ ಅವನಿಗೂ ವ್ಯತ್ಯಾಸವೇ ಇಲ್ಲ.

ಕೃಷ್ಣನೊಡನೆ ಒಂದಾಗುವ ಈ ಪ್ರಯತ್ನವು ಭ್ರಾಂತಿಯ ದೆಸೆಯಿಂದ ಗೊಂದಲಕ್ಕೆ ಈಡಾಗುತ್ತದೆ. ಅಧ್ಯಾತ್ಮಿಕ ಜ್ಞಾನದ ಇಂತಹ ನಾಸ್ತಿಕ ಮತ್ತು ರಾಕ್ಷಸೀ ಪಾಲನೆಯು ಯಾವಾಗಲೂ ನಿರರ್ಥಕ. ಇದೇ ಈ ಶ್ಲೋಕದ ಸೂಚನೆ. ಇಂತಹ ಜನರಿಗೆ ವೇದಾಂತ ಸೂತ್ರ ಮತ್ತು ಉಪನಿಷತ್ತುಗಳಂತಹ ವೈದಿಕ ಸಾಹಿತ್ಯದ ಜ್ಞಾನವು ಸದಾ ಗೊಂದಲವೇ. ಆದುದರಿಂದ ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಸಾಮಾನ್ಯ ಮನುನಷ್ಯ ಎಂದು ಭಾವಿಸುವುದು ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಸಾಮಾನ್ಯ ಮನುಷ್ಯ ಎಂದು ಭಾವಿಸುವುದು ದೊಡ್ಡ ಅಪರಾಧ. ಹೀಗೆ ಮಾಡುವವರಿಗೆ ನಿಶ್ಚಯವಾಗಿಯೂ ಭ್ರಾಂತಿ. ಏಕೆಂದರೆ ಅವರು ಕೃಷ್ಣನ ನಿತ್ಯರೂಪವನ್ನು ಅರ್ಥಮಾಡಿಕೊಳ್ಳಲಾರರು. ಬೃಹದ್ ವಿಷ್ಣು ಸ್ಮೃತಿಯು ಸ್ಪಷ್ಟವಾಗಿ ಹೀಗೆ ಹೇಳಿದೆ -

ಯೋ ವೇತ್ತಿ ಭೌತಿಕಂ ದೇಹಂ ಕೃಷ್ಣಸ್ಯ ಪರಮಾತ್ಮನಃ

ಸ ಸರ್ವಸ್ಮಾದ್ ಬಹಿಷ್ಕಾರ್ಯಃ ಶ್ರೌತಸ್ಮಾರ್ತವಿಧಾನತಃ

ಮುಖಂ ತಸ್ಯಾವಲೋಕ್ಯಾಪಿ ಸಚೇಲಂ ಸ್ನಾಮಾಚರೇತ್

ಇದನ್ನೂ ಓದಿ: ಉತ್ತಮ ಸಮಯಕ್ಕಾಗಿ ಎಂದೂ ಕಾಯಬೇಡಿ, ಕೆಲಸ ಮಾಡಿ; ಶ್ರೀಕೃಷ್ಣನ ಮಾತಿನ ಅರ್ಥ ಹೀಗಿದೆ

ಕೃಷ್ಣನ ದೇಹವು ಐಹಿಕವಾದದ್ದು ಎಂದು ಭಾವಿಸುವವನನ್ನು ಶ್ರುತಿ ಮತ್ತು ಸ್ಮೃತಿಗಳ ಎಲ್ಲ ವಿಧಿಗಳಿಂದ, ಚಟುವಟಿಕೆಗಳಿಂದ ಬಹಿಷ್ಕರಿಸಬೇಕು. ಅಕಸ್ಮಾತ್ತಾಗಿ ಅವನ ಮುಖವನ್ನು ನೋಡಿದರೆ ಆ ಕಲ್ಮಷ ಸೋಂಕನ್ನು ನಿವಾರಿಸಿಕೊಳ್ಳಲು ಕೂಡಲೇ ಗಂಗಾನದಿಯಲ್ಲಿ ಸ್ನಾನ ಮಾಡಬೇಕು. ಜನರು ದೇವೋತ್ತಮ ಪರಮ ಪುರುಷನ ಬಗ್ಗೆ ಅಸೂಯೆ ಪಡುವುದರಿಂದ ಕೃಷ್ಣನನ್ನು ಅಪಹಾಸ್ಯ ಮಾಡುತ್ತಾರೆ. ನಾಸ್ತಿಕ ಮತ್ತು ರಾಕ್ಷಸೀ ಬದುಕಿನ ವರ್ಗಗಳಲ್ಲಿ ಮತ್ತೆ ಮತ್ತೆ ಹುಟ್ಟುವುದು ನಿಶ್ಚಯವಾಗಿಯೂ ಅವರ ವಿಧಿ. ಎಂದೆಂದೂ ಅವರ ನಿಜವಾದ ಜ್ಞಾನವು ಭ್ರಾಂತಿಯಲ್ಲಿ ಸಿಲುಕಿರುತ್ತದೆ ಮತ್ತು ಕ್ರಮೇಣ ಅವರು ಸೃಷ್ಟಿಯ ಅತ್ಯಂತ ಕತ್ತಲೆಯ ಪ್ರದೇಶಕ್ಕೆ ಹಿನ್ನೆಡೆಯುತ್ತಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ