logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಗುರುಪರಂಪರೆ ತತ್ವ ಅನುಸರಿಸದೆ ಯಾರೂ ನಿಜವಾದ ಗುರುವಾಗಲು ಸಾಧ್ಯವಿಲ್ಲ; ಗೀತೆಯ ಅರ್ಥ ಹೀಗಿದೆ

ಭಗವದ್ಗೀತೆ: ಗುರುಪರಂಪರೆ ತತ್ವ ಅನುಸರಿಸದೆ ಯಾರೂ ನಿಜವಾದ ಗುರುವಾಗಲು ಸಾಧ್ಯವಿಲ್ಲ; ಗೀತೆಯ ಅರ್ಥ ಹೀಗಿದೆ

Raghavendra M Y HT Kannada

Jan 19, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಗುರುಪರಂಪರೆ ತತ್ವ ಅನುಸರಿಸದೆ ಯಾರೂ ನಿಜವಾದ ಗುರುವಾಗಲು ಸಾಧ್ಯವಿಲ್ಲ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಶ್ರೇಯಾನ್ ದ್ರವ್ಯಮಯಾದ್ ಯಜ್ಞಾಜ್ಞನಯಜ್ಞ ಪರನ್ತಪ |

ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ ||33||

ಶತ್ರುಗಳನ್ನು ದಂಡಿಸುವ ಅರ್ಜುನನೇ, ದ್ರವ್ಯಮಯ ಯಜ್ಞ ಮಾಡುವುದಕ್ಕಿಂತ ಜ್ಞಾನಯಜ್ಞವು ಉತ್ತಮವಾದರೂ, ಪಾರ್ಥ, ಎಲ್ಲ ಯಜ್ಞ ಕರ್ಮವೂ ದಿವ್ಯಜ್ಞಾನದಲ್ಲಿ ಪರಿಸಮಾಪ್ತಿಯಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಎಲ್ಲ ಯಜ್ಞಗಳ ಗುರಿಯೂ ಒಂದೇ - ಸಂಪೂರ್ಣ ಜ್ಞಾನ ಸ್ಥಿತಿಯನ್ನು ಮುಟ್ಟಿ ಅನಂತರ ಐಹಿಕ ದುಃಖಗಳಿಂದ ಬಿಡುಗಡೆ ಹೊಂದಿ, ಅಂತಿಮವಾಗಿ ಕೃಷ್ಣಪ್ರಜ್ಞೆಯಲ್ಲಿ ಭಗವಂತನ ಪ್ರೇಮಪೂರ್ವಕ ದಿವ್ಯಸೇವೆಯಲ್ಲಿ ನಿರತವಾಗುವುದು. ಆದರೂ ಈ ವಿವಿಧ ಯಜ್ಞಕ್ರಿಯೆಗಳಲ್ಲಿ ಒಂದು ರಹಸ್ಯವಿದೆ. ಈ ರಹಸ್ಯವನ್ನು ತಿಳಿದುಕೊಳ್ಳಬೇಕು. ಕೆಲವೊಮ್ಮೆ ಯಜ್ಞಗಳು ಯಜ್ಞಮಾಡುವವನ ವಿಶಿಷ್ಟ ಶ್ರದ್ಧಗೆ ಅನುಗುಣವಾಗಿ ವಿವಿಧ ರೂಪಗಳನ್ನು ಪಡೆಯುತ್ತವೆ. ಯಜ್ಞ ಮಾಡುವವನ ಶ್ರದ್ಧೆಯು ಆಧ್ಯಾತ್ಮಿಕ ಜ್ಞಾನದ ಘಟ್ಟವನ್ನು ತಲಪಿದಾಗ, ಅನು ಇಂತಹ ಜ್ಞಾನವಿಲ್ಲದೆ ಐಹಿಕ ವಸ್ತುಗಳ ಯಜ್ಞವಷ್ಟನ್ನೇ ಮಾಡುವವರಿಗಿಂತ ಮುನ್ನಡೆದಿದ್ದಾನೆ ಎಂದು ಭಾವಿಸಬೇಕು. ಏಕೆಂದರೆ ಜ್ಞಾನ ಪಡೆಯದೆ ಮಾಡಿದ ಯಜ್ಞಗಳು ಐಹಿಕ ನೆಲೆಯಲ್ಲೇ ಉಳಿಯುತ್ತವೆ. ಇವುಗಳಿಂದ ಯಾವ ಆಧ್ಯಾತ್ಮಿಕ ಫಲವೂ ಇಲ್ಲ.

ನಿಜವಾದ ಜ್ಞಾನವು ಆಧ್ಯಾತ್ಮಿಕ ಜ್ಞಾನದ ಅತ್ಯುನ್ನತ ಹಂತವಾದ ಕೃಷ್ಣಪ್ರಜ್ಞೆಯಲ್ಲಿ ಶಿಖರವನ್ನು ಮುಟ್ಟುತ್ತದೆ. ಯಜ್ಞಮಾಡುವವನ ಜ್ಞಾನವು ಉನ್ನತ ಮಟ್ಟಕ್ಕೇರದಿದ್ದರೆ ಯಜ್ಞಗಳು ಐಹಿಕ ಕರ್ಮಗಳಷ್ಟೇ. ಆದರೆ ಅವನ್ನು ಆಧ್ಯಾತ್ಮಿಕ ಜ್ಞಾನದ ಮಟ್ಟಕ್ಕೇರಿಸಿದಾಗ ಅಂತಹ ಎಲ್ಲ ಕರ್ಮಗಳು ಆಧ್ಯಾತ್ಮಿಕ ನೆಲೆಗೆ ಏರುತ್ತವೆ. ಪ್ರಜ್ಞೆಯಲ್ಲಿನ ವ್ಯತ್ಯಾಸಗಳಿಗೆ ಅನುಗುಣವಾಗಿ ಯಜ್ಞಕರ್ಮಗಳನ್ನು ಕೆಲವೊಮ್ಮೆ ಕ್ರಮಕಾಂಡಗಳೆಂದೂ ಕೆಲವೊಮ್ಮೆ ಜ್ಞಾನಕಾಂಡಗಳೆಂದೂ ಕರೆಯುತ್ತಾರೆ. ಜ್ಞಾನದ ಗುರಿಯಿಂದ ಮಾಡಿದ ಯಜ್ಞವು ಉತ್ತಮ.

ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |

ಉಪದೇಕ್ಷ್ಯನ್ತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ||34||

ಗುರುವಿನ ಬಳಿಗೆ ಹೋಗಿ ಸತ್ಯವನ್ನು ತಿಳಿದುಕೊಳ್ಳಲು ಪರಿಯತ್ನಿಸು. ನಮ್ರನಾಗಿ ಅವರಿಗೆ ಪ್ರಶ್ನೆಮಾಡುವ ಮತ್ತು ಅವರಿಗೆ ಸೇವೆ ಮಾಡು. ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಗಳು ಸತ್ಯವನ್ನು ಕಂಡಿದ್ದಾರೆ. ಆದುದರಿಂದ ಅವರು ನಿನಗೆ ಜ್ಞಾನೋಪದೇಶ ಮಾಡಬಲ್ಲರು.

ಆಧ್ಯಾತ್ಮಿಕ ಸಾಕ್ಷಾತ್ಕಾರದ ಮಾರ್ಗ ನಿಶ್ಚಯವಾಗಿಯೂ ಕಠಿಣವಾಗದ್ದು. ಆದುದರಿಂದ, ಭಗವಂತನಿಂದಲೇ ಬಂದ ಗುರುಪರಂಪರೆಯಲ್ಲಿನ ಒಬ್ಬ ನಿಜವಾದ ಗುರುವಿನ ಬಳಿಗೆ ಹೋಗುವಂತೆ ಭಗವಂತನು ಬುದ್ಧಿಹೇಳುತ್ತಾನೆ. ಈ ಗುರುಪರಂಪರೆಯ ತತ್ವವನ್ನು ಅನುಸರಿಸದೆ ಯಾರೂ ನಿಜವಾದ ಗುರುವಾಗಲು ಸಾಧ್ಯವಿಲ್ಲ. ಭಗವಂತನೇ ಪ್ರಪ್ರಥಮ ಗುರು. ಈ ಪರಂಪರೆಯಲ್ಲಿ ಬಂದವನು ಭಗವಂತನ ಸಂದೇಶವನ್ನು ಯಥಾವತ್ತಾಗಿ ಹೇಳಿಕೊಡಬಲ್ಲ. ಸೋಗುಹಾಗುವ ಮೂರ್ಖರು ಮಾಡುವಂತೆ ತನ್ನ ಪ್ರಕ್ರಿಯೆಯನ್ನು ತಾನೇ ಸೃಷ್ಟಿಸಿಕೊಂಡು ಯಾರೂ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಸಾಧಿಸಲು ಸಾಧ್ಯವಿಲ್ಲ.

ಭಾಗವತು (6.3.19) ಧರ್ಮಂ ತು ಸಾಕ್ಷಾದ್ ಭಗವತ್ ಪ್ರಣೀತಮ್ ಎಂದರೆ ಧರ್ಮಮಾರ್ಗವನ್ನು ಭಗವಂತನೇ ನೇರವಾಗಿ ತೋರಿಸಿಕೊಡುತ್ತಾನೆ ಎಂದು ಹೇಳುತ್ತದೆ. ಆದುದರಿಂದ ಊಹಾತ್ಮಕ ಚಿಂತನೆಗಳಾಗಲಿ, ಒಣವಾದಗಳಾಗಲಿ, ಮನುಷ್ಯನನ್ನು ಸರಿಯಾದ ದಾರಿಗೆ ಕರೆದೊಯ್ಯಲಾರವು. ವಿದ್ಯಾಗ್ರಂಥಗಳನ್ನು ಸ್ವತಂತ್ರವಾಗಿ ಅಭ್ಯಾಸ ಮಾಡಿಯೂ ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಈ ಜ್ಞಾನವನ್ನು ಪಡೆದುಕೊಳ್ಳಲು ಒಬ್ಬ ನಿಜವಾದ ಗುರುವಿನ ಬಳಿಗೆ ಹೋಗಬೇಕಾಗುತ್ತದೆ. ಅಂತಹ ಗುರುವಿಗೆ ಸಂಪೂರ್ಣವಾಗಿ ಶರಣಾಗಬೇಕು. ಶಿಷ್ಯನು ಒಣಪ್ರತಿಷ್ಠೆಯಿಲ್ಲದೆ ದಾಸನಂತೆ ಗುರುವಿನ ಸೇವೆ ಮಾಡಬೇಕು. ಆತ್ಮಸಾಕ್ಷಾತ್ಕಾರ ಪಡೆದ ಗುರುವಿನ ತೃಪ್ತಿಯೇ ಆಧ್ಯಾತ್ಮಿಕ ಬದುಕಿನಲ್ಲಿ ಪ್ರಗತಿಯ ಗುಟ್ಟು.

ಆಧ್ಯಾತ್ಮಿಕ ಅರಿವಿಗೆ ಪ್ರಶ್ನಿಸುವುದು ಮತ್ತು ವಿಧೇಯತೆಗಳೆರಡೂ ಇರಬೇಕು. ವಿಧೇಯತೆ ಮತ್ತು ಸೇವೆಗಳಿಲ್ಲದಿದ್ದರೆ ವಿದ್ಯಾಂಸನಾದ ಗುರುವನ್ನು ಪ್ರಶ್ನಿಸುವುದರಿಂದ ಪ್ರಯೋಜನವಿಲ್ಲ. ಗುರುವಿನ ಪರೀಕ್ಷೆಯಲ್ಲಿ ಶಿಷ್ಯನು ಉತ್ತೀರ್ಣನಾಗಬೇಕು. ಗುರುವು ಶಿಷ್ಯನ ಪ್ರಮಾಣಿಕ ಹಂಬಲವನ್ನು ಕಂಡಾಗ ತಂತಾನೇ ಅವನಿಗೆ ನಿಜವಾದ ಆಧ್ಯಾತ್ಮಿಕ ಅರಿವನ್ನು ಅನುಗ್ರಹಿಸುತ್ತಾನೆ. ಈ ಶ್ಲೋಕದಲ್ಲಿ ಕುರುಡು ಅನುಸರಣೆ ಮತ್ತು ಅಸಂಬದ್ಧ ಪ್ರಶ್ನೆಗಳು ಎರಡನ್ನೂ ಖಂಡಿಸಿದೆ.

ಶಿಷ್ಯನು ಗುರುವಿನ ಮಾತುಗಳನ್ನು ವಿಧೇಯತೆಯಿಂದ ಆಲಿಸಬೇಕು. ಅಷ್ಟೇ ಅಲ್ಲದೆ ವಿಧೇಯನಾಗಿ ಸೇವೆ ಸಲ್ಲಿಸಿದ ಪ್ರಶ್ನೆಗಳನ್ನು ಕೇಳಿ ಗುರುವಿನಿಂದ ಸ್ಪಷ್ಟವಾದ ಅರಿವನ್ನು ಪಡೆಯಬೇಕು. ನಿಜವಾದ ಗುರುವು ಸ್ವಭಾವದಿಂದಲೇ ಶಿಷ್ಯನ ವಿಷಯದಲ್ಲಿ ದಯೆ ತೋರಿಸುತ್ತಾನೆ. ಆದುದರಿಂದ ವಿದ್ಯಾರ್ಥಿಯು ವಿಧೇಯನಾಗಿ ಸದಾ ಸೇವೆ ಸಲ್ಲಿಸಲು ಸಿದ್ಧನಾಗಿದ್ದರೆ, ಜ್ಞಾನ ಮತ್ತು ವಿಚಾರಗಳ ವಿನಿಮಯವು ಪರಿಪೂರ್ಣವಾಗುತ್ತದೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ