logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಜಗತ್ತಿನಲ್ಲಿ ಮನುಷ್ಯ ನೆಮ್ಮದಿಯಾಗಿ ಬದುಕಬೇಕಾದರೆ ಏನು ಮಾಡಬೇಕು; ಗೀತೆಯ ಸಾರಾಂಶ ಹೀಗಿದೆ

ಭಗವದ್ಗೀತೆ: ಜಗತ್ತಿನಲ್ಲಿ ಮನುಷ್ಯ ನೆಮ್ಮದಿಯಾಗಿ ಬದುಕಬೇಕಾದರೆ ಏನು ಮಾಡಬೇಕು; ಗೀತೆಯ ಸಾರಾಂಶ ಹೀಗಿದೆ

HT Kannada Desk HT Kannada

Dec 06, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯ ನೆಮ್ಮದಿಯಾಗಿ ಬದುಕಬೇಕಾದರೆ ಏನು ಮಾಡಬೇಕು ಎಂಬುದನ್ನ ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಸಹಯಜ್ಞಾಃ ಪ್ರಜಾಃ ಸೃಷ್ಟಾ, ಪುರೋವಾಚ ಪ್ರಜಾಪತಿಃ |

ಅನೇನ ಪ್ರಸವಿಷ್ಯಧ್ವಮೇಷ ವೋಸ್ತ್ವಿಷ್ಟಕಾಮಧುಕ್ ||10||

ಸೃಷ್ಟಿಯ ಪ್ರಾರಂಭದಲ್ಲಿ ಸಕಲ ಜೀವಿಗಳ ಪ್ರಭುವು ಮನುಷ್ಯರ ಮತ್ತು ದೇವತೆಗಳ ಪೀಳಿಗೆಗಳನ್ನು ವಿಷ್ಣುವಿಗಾಗಿ ಯಜ್ಞಗಳೊಂದಿಗೆ ಕಳುಹಿಸಿಕೊಟ್ಟನು. ಅವರಿಗೆ, "ಈ ಯಜ್ಞದಿಂದ ಸುಖವಾಗಿರಿ, ಇದನ್ನು ನಡೆಸಿದರೆ ನಿಮಗೆ ಇಷ್ಟಕಾಮಗಳೆಲ್ಲ ಸಿದ್ಧಿಸುತ್ತವೆ ಮತ್ತು ಮುಕ್ತಿಸಾಧನೆಯು ಕೈಗೂಡುತ್ತದೆ'' ಎಂದು ಹೇಳಿದನು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಸಕಲ ಜೀವಿಗಳ ಪ್ರಭುವು (ವಿಷ್ಣು) ಇಹಲೋಕವನ್ನು ಸೃಷ್ಟಿಮಾಡಿದುವ ಭಗವದ್ಧಾಮಕ್ಕೆ ಹಿಂದಿರುಗಲು ಬದ್ಧಜೀವಿಗಳಿಗೆ ಒಂದು ಅವಕಾಶ. ಐಹಿಕ ಸೃಷ್ಟಿಯಲ್ಲಿನ ಎಲ್ಲ ಜೀವಿಗಳೂ ಪ್ರಕೃತಿಯಿಂದ ಬದ್ದರು. ಏಕೆಂದರೆ ಅವರು ದೇವೋತ್ತಮ ಪರಮ ಪುರುಷನಾದ ಕೃಷ್ಣ ಅಥವಾ ವಿಷ್ಣು ವಿನೊಡನೆ ತಮ್ಮ ಸಂಬಂಧವನ್ನು ಮರೆತು ಬಿಡುತ್ತಾರೆ.

ವೇದತತ್ವಗಳು ಈ ಸನಾತನ ಬಾಂಧವ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಭಗವದ್ಗೀತೆಯಲ್ಲಿ, ವೇದೈಶ್ಚ ಸರ್ವೈರಹಮೇವ ವೇದ್ಯಃ ಎಂದು ಹೇಳಿದೆ. ಆತನನ್ನು ಅರಿಯುವುದೇ ವೇದಗಳ ಗುರಿ ಎಂದು ಭಗವಂತನು ಹೇಳುತ್ತಾನೆ. ವೇದದ ಸ್ತುತಿಗಳಲ್ಲಿ ಪತಿಂ ವಿಶ್ವಸ್ಯಾತ್ಮೇಶ್ವರಮ್ ಎಂದು ಹೇಳಿದೆ. ಆದುದರಿಂದ ಸಕಲ ಜೀವಿಗಳ ಪ್ರಭುವು ದೇವೋತ್ತಮ ಪರಮ ಪುರುಷನಾದ ವಿಷ್ಣು. ಶ್ರೀಮದ್ಭಾಗವತದಲ್ಲಿ ಸಹ (2.4.20) ಶ್ರೀ ಶುಕಮುನಿಗಳು ಹಲವು ರೀತಿಗಳಲ್ಲಿ ಭಗವಂತನನ್ನು ಪತಿ ಎಂದು ವರ್ಣಿಸಿದ್ದಾರೆ.

ಶ್ರಿಯಃ ಪತಿರ್ಯಜ್ಞಪತಿಃ ಪ್ರಜಾಪತಿ-

ರ್ಧಿಯಾಂ ಪತಿರ್ಲೋಕಪತಿರ್ಧರಾಪತಿಃ |

ಪತಿರ್ಗತಿಶ್ಚಾಸ್ತ್ರ ಕವೃಷ್ಟಿ ಸಾತ್ವತಾಮ್

ಪ್ರಸೀದತಾಂ ಮೇ ಭಗವಾನ್ ಸತಾಂ ಪತಿಃ ||

ಪ್ರಜಾಪತಿಯು ಶ್ರೀ ವಿಷ್ಣು, ಅವನು ಎಲ್ಲ ಜೀವಿಗಳ, ಎಲ್ಲ ಲೋಕಗಳ, ಚೆಲುವುಗಳ ಪತಿ, ಎಲ್ಲರ ರಕ್ಷಕ, ಭಗವಂತನು ಈ ಐಹಿಕ ಜಗತ್ತನ್ನು ಒಂದು ಉದ್ದೇಶದಿಂದ ಸೃಷ್ಟಿಸಿದ. ಬದ್ಧ ಜೀವಿಗಳು ವಿಷ್ಣುವಿನ ಸಂತೃಪ್ತಿಗಾಗಿ ಯಜ್ಞಗಳನ್ನು ಮಾಡುವುದು ಹೇಗೆ ಎನ್ನುವುದನ್ನು ಕಲಿಯಬೇಕು. ಇದರಿಂದ ಅವರು ಐಹಿಕ ಜಗತ್ತಿನಲ್ಲಿರುವಾಗ ನಿರಾತಂಕವಾ ನೆಮ್ಮದಿಯಾಗಿ ಬಾಳಿ ಅನಂತರ ಈ ಐಹಿಕ ಶರೀರದ ವಾಸವನ್ನು ಮುಗಿಸಿ ದೇವರ ರಾಜ್ಯವನ್ನು ಸೇರಬೇಕು ಎನ್ನುವುದು ಈ ಉದ್ದೇಶ.

ಬದ್ಧ ಆತ್ಮಕ್ಕೆ ಇದು ಸಮಗ್ರಕಾರ್ಯಕ್ರಮ, ಯಜ್ಞವನ ಮಾಡುವುದರಿಂದ ಬದ್ಧ ಆತ್ಮವು ಕ್ರಮೇಣ ಕೃಷ್ಣಪ್ರಜ್ಞೆಯನ್ನು ಪಡೆಯುತ್ತದೆ. ಎಲ್ಲ ರೀತಿಗಳಲ್ಲಿ ದೈವಶ್ರದ್ದೆಯನ್ನು ಪಡೆಯುತ್ತದೆ. ವೇದಶಾಸ್ತ್ರಗಳು ಕಲಿಯುಗದಲ್ಲಿ ಸಂಕೀರ್ತನ ಯಜ್ಞವನು ನಡೆಸಬೇಕೆಂದು ಹೇಳುತ್ತವೆ. ಈ ಯುಗದ ಎಲ್ಲ ಮನುಷ್ಯರ ಉದ್ದಾರಕ್ಕಾಗಿ ಈ ಆಧ್ಯಾತ್ಮಿಕ ವ್ಯವಸ್ಥೆಯನ್ನು ಚೈತನ್ಯ ಮಹಾಪ್ರಭುಗಳು ಪ್ರಾರಂಭಿಸಿದರು. ಸಂಕೀರ್ತನ ಯಜ್ಞ ಮತ್ತು ಕೃಷ್ಣಪ್ರಜ್ಞೆಗಳು ಸೊಗಸಾಗಿ ಹೊಂದಿಕೊಳ್ಳುತ್ತವೆ. (ಚೈತನ್ಯ ಮಹಾಪ್ರಭುಗಳಾಗಿ ಶ್ರೀಕೃಷ್ಣನ ಭಕ್ತಿರೂಪವನ್ನು ಶ್ರೀಮದ್ಭಾಗವತದಲ್ಲಿ ವಿಶೇಷವಾಗಿ ಸಂಕೀರ್ತನ ಯಜ್ಞಕ್ಕೆ ಸಂಬಂಧಿಸಿದಂತೆ, ಹೀಗೆ ನಿರೂಪಿಸಿದೆ

ಕೃಷ್ಣವರ್ಣಂ ತ್ವಿಷಾಕೃಷ್ಣಂ ಸಾಂಗೋಪಾನ್ಗಾಸ್ತ್ರ ಪಾರ್ಷದಮ್ |

ಯಜ್ಞೆಃ ಸನ್ಕೀರ್ತನಪ್ರಾಯೈ ರ್ಯಜನ್ತಿ ಹಿ ಸುಮೇಧಸಃ ||

"ಈ ಕಲಿಯುಗದಲ್ಲಿ, ಸಾಕಷ್ಟು ಬುದ್ದಿಯುಳ್ಳವರು, ತನ್ನ ಸಂಗಾತಿಗಳೊಡನೆ ಕೂಡಿರುವ ಭಗವಂತನನ್ನು ಸಂಕೀರ್ತನ ಯಜ್ಞವನ್ನು ಮಾಡಿ ಪೂಜಿಸುತ್ತಾರೆ." ವೈದಿಕ ಸಾಹಿತ್ಯದಲ್ಲಿ ಹೆಸರಿಸಿರುವ ಇತರ ಯಜ್ಞಗಳನ್ನು ಕಲಿಯುಗದಲ್ಲಿ ಮಾಡುವುದು ಸುಲಭವಲ್ಲ. ಆದರೆ, ಭಗವದ್ಗೀತೆಯಲ್ಲಿಯೂ (9.14) ಹೇಳಿರುವಂತೆ, ಸಂಕೀರ್ತನ ಯಜ್ಞವು ಎಲ್ಲ ಉದ್ದೇಶಸಾಧನೆಗಳಿಗೂ ಸುಲಭವೂ ಹೌದು, ಭವ್ಯವೂ ಹೌದು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ