logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯ ಮನಸ್ಸನ್ನ ಕೇಂದ್ರೀಕರಿಸಲು ಯಾವಾಗಲೂ ಏಕಾಂತವಾಸಿಯಾಗಿರಬೇಕು; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಮನುಷ್ಯ ಮನಸ್ಸನ್ನ ಕೇಂದ್ರೀಕರಿಸಲು ಯಾವಾಗಲೂ ಏಕಾಂತವಾಸಿಯಾಗಿರಬೇಕು; ಗೀತೆಯ ಸಾರಾಂಶ ತಿಳಿಯಿರಿ

Raghavendra M Y HT Kannada

Feb 16, 2024 11:07 PM IST

google News

ಮನುಷ್ಯ ಮನಸ್ಸನ್ನ ಕೇಂದ್ರೀಕರಿಸಲು ಯಾವಾಗಲೂ ಏಕಾಂತವಾಸಿಯಾಗಿರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

  • Bhagavad Gita Updesh: ಮನಸ್ಸನ್ನು ಕೇಂದ್ರೀಕರಿಸಲು ಮನುಷ್ಯನು ಯಾವಾಗಲೂ ಏಕಾಂತವಾಸಿಯಾಗಿರಬೇಕು. ಹೊರಗಿನ ವಸ್ತುಗಳಿಂದ ಕ್ಷೋಭೆಯುಂಟಾಗದಂತೆ ನೋಡಿಕೊಳ್ಳಬೇಕು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.

 ಮನುಷ್ಯ ಮನಸ್ಸನ್ನ ಕೇಂದ್ರೀಕರಿಸಲು ಯಾವಾಗಲೂ ಏಕಾಂತವಾಸಿಯಾಗಿರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಮನುಷ್ಯ ಮನಸ್ಸನ್ನ ಕೇಂದ್ರೀಕರಿಸಲು ಯಾವಾಗಲೂ ಏಕಾಂತವಾಸಿಯಾಗಿರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಅಧ್ಯಾಯ - 6 ಧ್ಯಾನ ಯೋಗ; ಶ್ಲೋಕ - 10

ಯೋಗೀ ಯುಞ್ಜೀತ ಸತತಮಾತ್ಮಾನಂ ರಹಸಿ ಸ್ಥಿತಃ |

ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ||10||

Bhagavad Gita Updesh in Kannada: ಯೋಗಿಯು ತನ್ನ ದೇಹ, ಮನಸ್ಸು ಮತ್ತು ಆತ್ಮಗಳನ್ನು ಪರಮ ಪ್ರಭುವಿನ ಸಂಬಂಧದಲ್ಲಿ ಸದಾ ತೊಡಗಿಸಬೇಕು. ಆತನು ಏಕಾಂತದಲ್ಲಿ ವಾಸಮಾಡಬೇಕು ಮತ್ತು ಯಾವಾಗಲೂ ಎಚ್ಚರದಿಂದ ತನ್ನ ಮನಸ್ಸನ್ನು ನಿಯಂತ್ರಣದಲ್ಲಿಡಬೇಕು. ಆತನು ಬಯಕೆಗಳಿಂದ ಮತ್ತು ಗಳಿಕೆಯ ಆಸೆಯಿಂದ ಮುಕ್ತನಾಗಿರಬೇಕು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಬ್ರಹ್ಮನ್, ಪರಮಾತ್ಮ ಮತ್ತು ದೇವೋತ್ತಮ ಪರಮ ಪುರುಷ ಎಂದು ಬೇರೆಬೇರೆ ಪ್ರಮಾಣಗಳಲ್ಲಿ ಕೃಷ್ಣಸಾಕ್ಷಾತ್ಕಾರವಾಗುತ್ತದೆ. ಸಂಗ್ರಹವಾಗಿ ಹೇಳುವುದಾದರೆ ಕೃಷ್ಣಪ್ರಜ್ಞೆಯೆಂದರೆ ಸದಾ ಭಗವಂತನ ಆಧ್ಯಾತ್ಮಿಕ ಪ್ರೇಮಪೂರ್ವಕ ಸೇವೆಯಲ್ಲಿ ನಿರತನಾಗಿರುವುದು. ಆದರೆ ನಿರಾಕಾರ ಬ್ರಹ್ಮನಲ್ಲಿ ಅಥವಾ ಅಂತರ್ಯಾಮಿ ಪರಮಾತ್ಮನಲ್ಲಿ ಆಸಕ್ತಿ ಇರುವವನೂ ಸಹ ಭಾಗಶಃ ಕೃಷ್ಣಪ್ರಜ್ಞೆ ಇರುವವರೇ. ಏಕೆಂದರೆ ನಿರಾಕಾರ ಬ್ರಹ್ಮವು ಕೃಷ್ಣನ ಆಧ್ಯಾತ್ಮಿಕ ಕಿರಣ ಮತ್ತು ಪರಮಾತ್ಮನು ಕೃಷ್ಣನ ಸರ್ವಾಂತರ್ಯಾಮಿಯಾದ ಸ್ವಾಂಶ ವಿಸ್ತರಣ.

ಹೀಗೆ ನಿರಾಕಾರವಾದಿಯೂ ಮತ್ತು ಧ್ಯಾನಯೋಗಿಯೂ ಪರೋಕ್ಷವಾಗಿ ಕೃಷ್ಣಪ್ರಜ್ಞೆ ಇರುವವರೇ. ನೇರವಾಗಿ ಕೃಷ್ಣಪ್ರಜ್ಞೆ ಇರುವ ಮನುಷ್ಯನು ಅತ್ಯುನ್ನತ ಅಧ್ಯಾತ್ಮಿಕವಾದಿ. ಏಕೆಂದರೆ ಇಂತಹ ಭಕ್ತನಿಗೆ ಬ್ರಹ್ಮನ್ ಎಂದರೇನು, ಪರಮಾತ್ಮ ಎಂದರೇನು, ಎಂದು ತಿಳಿದಿದೆ. ಪರಮ ಸತ್ಯದ ಅವನ ಜ್ಞಾನ ಪರಿಪೂರ್ಣವಾಗಿದೆ. ಆದರೆ ನಿರಾಕಾರವಾದಿಯ ಮತ್ತು ಧ್ಯಾನಯೋಗಿಯ ಕೃಷ್ಣಪ್ರಜ್ಞೆಯು ಅಪರಿಪೂರ್ಣವಾಗಿದೆ.

ಆದರೂ ಇಲ್ಲಿ ಇವರೆಲ್ಲರಿಗೂ ತಮ್ಮ ವಿಶಿಷ್ಟ ಅನ್ವೇಷಣೆಗಳಲ್ಲಿ ಸತತವಾಗಿ ತೊಡಗಿರುವಂತೆ ಹೇಳಲಾಗಿದೆ. ಏಕೆಂದರೆ ಅವರು ಶೀಘ್ರವಾಗಿಯೋ ಅಥವಾ ವಿಳಂಭವಾಗಿಯೋ ಅತ್ಯುತನ್ನತ ಪರಿಪೂರ್ಣತೆಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಅಧ್ಯಾತ್ಮಿಕವಾದಿಯ ಮೊದಲನೆಯ ಕೆಲಸವೆಂದರೆ ಮನಸ್ಸನ್ನು ಸದಾ ಕೃಷ್ಣನಲ್ಲಿ ನೆಲೆಗೊಳಿಸುವುದು. ಮನುಷ್ಯನು ನಿರಂತರವಾಗಿ ಕೃಷ್ಣನನ್ನು ಕುರಿತು ಯೋಚಿಸಬೇಕು. ಅವನನ್ನು ಒಂದು ಕ್ಷಣವೂ ಮರೆಯಲಾಗದು. ಪರಮ ಪುರುಷನಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದಕ್ಕೆ ಸಮಾಧಿ ಎಂದು ಹೆಸರು.

ಮನಸ್ಸನ್ನು ಕೇಂದ್ರೀಕರಿಸಲು ಮನುಷ್ಯನು ಯಾವಾಗಲೂ ಏಕಾಂತವಾಸಿಯಾಗಿರಬೇಕು. ಹೊರಗಿನ ವಸ್ತುಗಳಿಂದ ಕ್ಷೋಭೆಯುಂಟಾಗದಂತೆ ನೋಡಿಕೊಳ್ಳಬೇಕು. ತನ್ನ ಸಾಕ್ಷಾತ್ಕಾರಕ್ಕೆ ಸಹಕಾರಿಯಾದದ್ದನ್ನು ಸ್ವೀಕರಿಸಲು ಮತ್ತು ಅನನುಕೂಲವಾದದ್ದನ್ನು ತಿರಿಸ್ಕರಿಸಲು ಅವನು ಸದಾ ಎಚ್ಚರದಿಂದಿರಬೇಕು. ಹಲವು ಅನಗತ್ಯವಾದ ಐಹಿಕ ವಸ್ತುಗಳು ಮನುಷ್ಯನಲ್ಲಿ ಒಡೆತನದ ಭಾವನೆಗಳನ್ನು ಉಂಟಾಗುತ್ತವೆ. ಪರಿಪೂರ್ಣ ದೃಢ ಸಂಕಲ್ಪ ಮಾಡಿ ಆತನು ಇವುಗಳ ಬಯಕೆಯನ್ನು ದೂರವಿಡಬೇಕು.

ಈ ಎಲ್ಲಾ ಪರಿಪೂರ್ಣತೆಗಳನ್ನೂ ಮುನ್ನೆಚರಿಕೆಗಳನ್ನೂ ಮನುಷ್ಯನು ನೇರವಾಗಿ ಕೃಷ್ಣಪ್ರಜ್ಞೆಯಲ್ಲಿದ್ದಾಗ ಸಂಪೂರ್ಣವಾಗಿ ಕಾರ್ಯಗತಮಾಡಬಹುದು. ಏಕೆಂದರೆ ನೇರ ಕೃಷ್ಣಪ್ರಜ್ಞೆ ಎಂದರೆ ಆತ್ಮತ್ಯಾಗ. ಇದರಲ್ಲಿ ಐಹಿಕ ಗಳಿಕೆಯ ಬಯಕೆಗೆ ಅವಕಾಶವೇ ಇಲ್ಲ. ಶ್ರೀ ರೂಪ ಗೋಸ್ವಾಮಿಯವರು ಕೃಷ್ಣಪ್ರಜ್ಞೆ ಲಕ್ಷಣಗಳನ್ನು ಹೀಗೆ ಹೇಳುತ್ತಾರೆ -

ಅನಾಸಕ್ತಸ್ಯ ವಿಷಯಾನ್ ಯಥಾರ್ಹಮ್ ಉಪಯುಞ್ಜತಃ |

ನಿರ್ಬನ್ಧಃ ಕೃಷ್ಣಸಂಬನ್ಧೇ ಯುಕ್ತಂ ವೈರಾಗ್ಯಮುಚ್ಯತೇ ||

ಪ್ರಾಪಞ್ಚಿಕತಯಾ ಬುದ್ಧ್ಯಾ ಹರಿಸಮ್ಬನ್ಧಿ ವಸ್ತುನಃ |

ಮುಮುಕ್ಷುಭಿಃ ಪರಿತ್ಯಾಗೋ ವೈರಾಗ್ಯಂ ಫಲ್ಗು ಕಥ್ಯತೇ ||

ಮನುಷ್ಯನು ಯಾವುದಕ್ಕೂ ಅಂಟಿಕೊಳ್ಳದಿದ್ದಾಗ ಆದರೆ ಎಲ್ಲವನ್ನೂ ಕೃಷ್ಣಸಂಬಂಧದಲ್ಲಿ ಸ್ವೀಕರಿಸಿದಾಗ ಆತನು ಸರಿಯಾದ ರೀತಿಯಲ್ಲಿ ಗಳಿಕೆಯ ಹಂಬಲವನ್ನು ಮೀರಿದವನಾಗುತ್ತಾನೆ. ಅದರ ಬದಲು ಪ್ರತಿಯೊಂದನ್ನೂ ಅದಕ್ಕೆ ಕೃಷ್ಣನೊಡನಿರುವ ಸಂಬಂಧವನ್ನು ತಿಳಿಯದೆ ತಿರಸ್ಕರಿಸುವವನು ತ್ಯಾಗದಲ್ಲಿ ಅಷ್ಟು ಪರಿಪೂರ್ಣನಲ್ಲ. (ಭಕ್ತಿರಸಮಾಮೃತಸಿಂಧು 2.255-256)

ಕೃಷ್ಣಪ್ರಜ್ಞೆಯಿರುವ ಮನುಷ್ಯನಿಗೆ ಎಲ್ಲವೂ ಕೃಷ್ಣನಿಗೆ ಸೇರಿದ್ದು ಎನ್ನುವುದು ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ಯಾವ ವಸ್ತುವೇ ಆದರೂ ತನಗೆ ಸೇರಿದ್ದು ಎನ್ನುವ ಭಾವನೆಗಳಿಂದ ಮುಕ್ತನಾಗಿರುತ್ತಾನೆ. ಹೀಗಿರುವಾಗ ತನಗೆ ಬೇಕೆಂಬ ಕಾರಣಕ್ಕಾಗಿ ಆತನು ಯಾವುದಕ್ಕೂ ಹಂಬಲಿಸುವುದಿಲ್ಲ. ಕೃಷ್ಣಪ್ರಜ್ಞೆಗೆ ಅನುಕೂಲವಾದ ವಸ್ತುಗಳನ್ನು ಹೇಗೆ ಸ್ವೀಕರಿಸಬೇಕು ಮತ್ತು ಕೃಷ್ಣಪ್ರಜ್ಞೆಗೆ ಪ್ರತಿಕೂಲವಾದ ವಸ್ತುಗಳನ್ನು ಹೇಗೆ ತಿರಸ್ಕರಿಸಬೇಕು ಎಂದು ಆತನಿಗೆ ತಿಳಿದಿರುತ್ತದೆ. ಆತನು ಐಹಿಕ ವಸ್ತುಗಳಿಂದ ಸದಾ ದೂರವಾಗಿರುತ್ತಾನೆ. ಏಕೆಂದರೆ ಆತನು ಸದಾ ಅಧ್ಯಾತ್ಮಿಕ ಸ್ಥಿತಿಯಲ್ಲಿರುತ್ತಾನೆ. ಕೃಪ್ರಜ್ಞೆ ಇಲ್ಲಿದಿರುವವರೊಂದಿಗೆ ಅವನಿಗೆ ಯಾವುದೇ ಸಂಬಂಧವಿಲ್ಲದಿರುವುದರಿಂದ ಅವನು ಯಾವಾಗಲೂ ಏಕಾಕಿ. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ಪರಿಪೂರ್ಣ ಯೋಗಿ. (This copy first appeared in Hindustan Times Kannada website. To read more like this please logon to kannada.hindustantimes.com).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ