logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡ ಮನುಷ್ಯ ಪರಿಪೂರ್ಣವಾಗುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita: ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡ ಮನುಷ್ಯ ಪರಿಪೂರ್ಣವಾಗುತ್ತಾನೆ; ಗೀತೆಯ ಅರ್ಥ ಹೀಗಿದೆ

Raghavendra M Y HT Kannada

Feb 19, 2024 05:15 AM IST

google News

ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡ ಮನುಷ್ಯ ಪರಿಪೂರ್ಣವಾಗುತ್ತಾನೆ ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿ ಇರುವ ಅರ್ಥವನ್ನು ಹೀಗೆ ಅರ್ಥೈಯಿಸಲಾಗಿದೆ.

  • Bhagavad Gita Updesh: ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡ ಮನುಷ್ಯ ಪರಿಪೂರ್ಣವಾಗುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡ ಮನುಷ್ಯ ಪರಿಪೂರ್ಣವಾಗುತ್ತಾನೆ ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿ ಇರುವ ಅರ್ಥವನ್ನು ಹೀಗೆ ಅರ್ಥೈಯಿಸಲಾಗಿದೆ.
ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡ ಮನುಷ್ಯ ಪರಿಪೂರ್ಣವಾಗುತ್ತಾನೆ ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿ ಇರುವ ಅರ್ಥವನ್ನು ಹೀಗೆ ಅರ್ಥೈಯಿಸಲಾಗಿದೆ.

ಅಧ್ಯಾಯ - 6 ಧ್ಯಾನ ಯೋಗ: ಶ್ಲೋಕ - 8

ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇನ್ದ್ರಿ ಯಃ |

ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟ್ರಾಶ್ಮಕಾಞ್ಚನಃ ||8||

Bhagavad Gita Updesh in Kannada: ಒಬ್ಬ ಮನುಷ್ಯನು ತಾನು ಗಳಿಸಿದ ಜ್ಞಾನ ಮತ್ತು ಸಾಕ್ಷಾತ್ಕಾರಗಳಿಂದ ಸಂಪೂರ್ಣ ತೃಪ್ತಿಯನ್ನು ಪಡೆದಿದ್ದರೆ ಆತನು ಆತ್ಮ ಸಾಕ್ಷಾತ್ಕಾರದಲ್ಲಿ ಸ್ಥಿರನಾಗಿರುವನೆಂದೂ ಮತ್ತು ಯೋಗಿಯೆಂದೂ ಹೇಳುತ್ತಾರೆ. ಇಂತಹ ಮನುಷ್ಯನು ಸಮಾಧಿಯಲ್ಲಿದ್ದು ಇಂದ್ರಿಯಗಳನ್ನು ಗೆದ್ದಿರುತ್ತಾನೆ. ಮಣ್ಣಾಗಲೀ, ಕಲ್ಲಾಗಲೀ ಅಥವಾ ಚಿನ್ನವಾಗಲಿ ಎಲ್ಲವನ್ನೂ ಆತನು ಒಂದೇ ರೀತಿಯಾಗಿ ಕಾಣುತ್ತಾನೆ. ಪರಮಸತ್ಯದ ಸಾಕ್ಷಾತ್ಕಾರವಿಲ್ಲದ ಪುಸ್ತಕ ಜ್ಞಾನದಿಂದ ಪ್ರಯೋಜವಿಲ್ಲ. ಇದನ್ನು ಹೀಗೆ ಹೇಳಿದೆ-

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಅತಃ ಶ್ರೀಕೃಷ್ಣನಾಮಾದಿ ನ ಭವೇದ್ ಗ್ರಾಹ್ಯಮ್ ಇನ್ದ್ರಿಯೈಃ |

ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮೇವ ಸ್ಪರತ್ಯದಃ ||

ಐಹಿಕವಾಗಿ ಕಲುಷಿತಗೊಂಡ ತನ್ನ ಇಂದ್ರಿಗಳ ಮೂಲಕ ಯಾರೂ ಶ್ರೀಕೃಷ್ಣನ ನಾಮ, ರೂಪ, ಗುಣ ಮತ್ತು ಲೀಲೆಗಳ ಅಧ್ಯಾತ್ಮಿಕ ಸ್ವಭಾವವನ್ನು ತಿಳಿಯಲಾರರು. ಭಗವಂತನ ದಿವ್ಯಸೇವೆಯಿಂದ ಮನುಷ್ಯನು ಅಧ್ಯಾತ್ಮಿಕದಲ್ಲಿ ಮಗ್ನಿನಾದಾಗ ಮಾತ್ರ ಭಗವಂತನ ಅಲೌಕಿಕ ನಾಮ, ರೂಪ, ಗುಣ ಮತ್ತು ಲೀಲೆಗಳು ಅವನ ಮುಂದೆ ತೆರೆದುಕೊಳ್ಳುತ್ತವೆ. (ಭಕ್ತಿರಸಾಮೃತಸಿಂಧು 1.2.234).

ಭಗವದ್ಗೀತೆಯು ಕೃಷ್ಣಪ್ರಜ್ಞೆಯ ವಿಜ್ಞಾನ. ಐಹಿಕ ಪಾಂಡಿತ್ಯ ಮಾತ್ರದಿಂದಲೇ ಯಾರೂ ಕೃಷ್ಣಪ್ರಜ್ಞೆಯನ್ನು ಪಡೆಯಲಾರರು. ಪರಿಶುದ್ಧ ಪ್ರಜ್ಞೆಯಲ್ಲಿರುವವನ ಸಹವಾಸಭಾಗ್ಯವು ದೊರೆಯಬೇಕು. ಕೃಷ್ಣಪ್ರಜ್ಞೆಯನ್ನು ಇರುವ ಮನುಷ್ಯನು ಕೃಷ್ಣನ ಕೃಪೆಯಿಂದ ಜ್ಞಾನವನ್ನು ಪಡೆದಿದ್ದಾನೆ. ಏಕೆಂದರೆ ಪರಿಶುದ್ಧ ಭಕ್ತಿಸೇವೆಯಿಂದ ಅವನಿಗೆ ತೃಪ್ತಿ. ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡು ಮನುಷ್ಯನು ಪರಿಪೂರ್ಣವಾಗುತ್ತಾನೆ. ಅಧ್ಯಾತ್ಮಿಕ ಜ್ಞಾನದಿಂದ ಮನುಷ್ಯನು ತನ್ನ ದೃಢನಂಬಿಕೆಗಳಲ್ಲಿ ಅಚಲನಾಗಿರಬಹುದು. ಆದರೆ ಬರಿಯ ಪಾಂಡಿತ್ಯದಿಂದ ಮನುಷ್ಯನು ಭ್ರಮೆಗೆ ಒಳಗಾಗಬಹುದು.

ಹೊರಗೆ ತೋರುವ ಪರಸ್ಪರ ದ್ವಂದ್ವಗಳಿಂದ ಗೊಂದಲಕ್ಕೆ ಒಳಗಾಗಬಹುದು. ಸಾಕ್ಷಾತ್ಕಾರ ಪಡೆದ ಆತ್ಮನಿಗೆ ಮಾತ್ರವೇ ವಾಸ್ತವವಾಗಿ ಸಂಯವು ಸಾಧ್ಯ. ಏಕೆಂದರೆ ಇಂತಹ ಮನುಷ್ಯನು ಕೃಷ್ಣನಿಗೆ ಶರಣಾಗಿರುತ್ತಾನೆ. ಐಹಿಕ ಪಾಂಡಿತ್ಯದೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಂಡಿಲ್ಲದಿರುವುದರಿಂದ ಅವನು ದಿವ್ಯಸ್ಥಿತಿಯಲ್ಲಿರುತ್ತಾನೆ. ಐಹಿಕ ಪಾಂಡಿತ್ಯ ಮತ್ತು ಊಹಾತ್ಮಕ ಚಿಂತನೆ ಇತರರಿಗೆ ಬಂಗಾರಕ್ಕೆ ಸಮಾನ. ಆದರೆ ಈ ಮನುಷ್ಯನಿಗೆ ಅವು ಬರಿಯ ಕಲ್ಲಿನ ಚೂರುಗಳಿಗೆ ಸಮಾನ.

ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ನೀಡುವ ಉಪದೇಶವೇನು?

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ. ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.(This copy first appeared in Hindustan Times Kannada website. To read more like this please logon to kannada.hindustantimes.com).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ