logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ:ನಿಜವಾದ ಯೋಗದ ಗುರಿ ಯಾವುದು? ಗೀತೆಯಲ್ಲಿನ ಅರ್ಥಪೂರ್ಣ ವಿವರ ಹೀಗಿದೆ

ಭಗವದ್ಗೀತೆ:ನಿಜವಾದ ಯೋಗದ ಗುರಿ ಯಾವುದು? ಗೀತೆಯಲ್ಲಿನ ಅರ್ಥಪೂರ್ಣ ವಿವರ ಹೀಗಿದೆ

Raghavendra M Y HT Kannada

Nov 21, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ನಿಜವಾದ ಯೋಗದ ಗುರಿ ಯಾವುದು ಅನ್ನೋದನ್ನ ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ |

ವಶೇ ಹಿ ಯಸ್ಸೇನ್ದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||60||

ಯಾರು ತನ್ನ ಇಂದ್ರಿಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ ಅಂಕೆಯಲ್ಲಿಡುತ್ತಾನೋ ಮತ್ತು ತನ್ನ ಪ್ರಜ್ಞೆಯನ್ನು ನನ್ನಲ್ಲಿ ಕೇಂದ್ರೀಕರಿಸುತ್ತಾನೋ ಅವನನ್ನು ಸ್ಥಿರಬುದ್ಧಿಯವನು ಎಂದು ಕರೆಯುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಯೋಗ ಪರಿಪೂರ್ಣತೆಯ ಅತ್ಯುನ್ನತ ಪರಿಕಲ್ಪನೆಯು ಕೃಷ್ಣಪ್ರಜ್ಞೆ ಎನ್ನುವುದನ್ನು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ವಿವರಿಸಿದೆ. ಮನುಷ್ಯನಿಗೆ ಕೃಷ್ಣಪ್ರಜ್ಞೆ ಇಲ್ಲದಿದ್ದರೆ ಇಂದ್ರಿಯಗಳನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ. ಮೇಲೆ ಹೇಳಿದಂತೆ ದುರ್ವಾಸಮುನಿಯು ಅಂಬರೀಷ ಮಹಾರಾಜನೊಂದಿಗೆ ಜಗಳವನ್ನು ಪ್ರಾಂಭಿಸಿದ.

ದುರ್ವಾಸಮುನಿಯು ಅಹಂಕಾರದಿಂದ ಅನಗತ್ಯವಾಗಿ ಕೋಪಮಾಡಿಕೊಂಡ. ಆದುದರಿಂದ ತನ್ನ ಇಂದ್ರಿಯಗಳನ್ನು ಅಂಕೆಯಲ್ಲಿಡಲಾಗಲಿಲ್ಲ. ರಾಜನು ಋಷಿಯು ಮಾಡಿದ ಅನ್ಯಾಯವನ್ನೆಲ್ಲ ಮೌನವಾಗಿ ಸಹಿಸಿಕೊಂಡ ಮತ್ತು ಇದರಿಂದ ವಿಜಯವನ್ನು ಸಾಧಿಸಿದ. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ (9.4.18-20) ಈ ಕೆಳಗಿನ ಅರ್ಹತೆಗಳಿಂದ ರಾಜನು ತನ್ನ ಇಂದ್ರಿಯಗಳನ್ನು ನಿಯಂತ್ರಿಸಲು ಸಾಧ್ಯವಾಯಿತು.

ಸ ವೈ ಮನಃ ಕೃಷ್ಣ ಪದಾರವಿನ್ದಯೋರ್

ವಚಾಂಪಿ ವೈಕುಣ್ಠಗುಣಾನುವರ್ಣನೇ |

ಕರೌ ಹರೇರ್ಮನ್ದಿರ ಮಾರ್ಜನಾದಿಷು

ಶ್ರುತಿಂ ಚಕಾರಾಚ್ಯುತಸತ್ಕಥೋದಯೇ ||

ಮುಕುನ್ದಲಿನ್ಗಾಲಯ ದರ್ಶನೇ ದೃಶೌ

ತದ್ಭೃತ್ಯಗಾತ್ರಸ್ಪರ್ಶೇಸನ್ಗ ಸನ್ಗಮಮ್ |

ಘ್ರಾಣಂ ಚ ತತ್ಪಾದಸರೋಜ ಸೌರಭೇ

ಶ್ರೀಮತ್ತುಲಸ್ಯಾ ರಸನಾಂ ತದರ್ಪಿತೇ ||

ಪಾದೌ ಹರೇಃ ಕ್ಷೇತ್ರಪದಾನುಸರ್ಪಣೇ

ಶಿರೋ ಹೃಷೀಕೇಶಪದಾಭಿವನ್ದನೇ |

ಕಾಮಂ ಚ ದಾಸ್ಯೇ ನ ತು ಕಾಮಕಾಮ್ಯಯಾ

ಯಥೋತ್ತಮಶ್ಲೋಕಜನಾಶ್ರಯಾ ರತಿಃ ||

ಅಂಬರೀಷ ಮಹಾರಾಜನು ತನ್ನ ಮನಸ್ಸನ್ನು ಶ್ರೀಕೃಷ್ಣನ ಪದಕಮಲಗಳಲ್ಲಿ ನಿಲ್ಲಿಸಿದನು. ಭಗವಂತನ ನಿವಾಸವನ್ನು ವರ್ಣಿಸುವುದಕ್ಕೆ ಮಾತುಗಳನ್ನು ಬಳಿಸಿಕೊಂಡನು. ಕೈಗಳನ್ನು ಭಗವಂತನ ದೇವಸ್ಥಾನವನ್ನು ಸ್ವಚ್ಛಗೊಳಿಸಲು ಬಳಸಿದನು. ಕಿವಿಗಳನ್ನು ಭಗವಂತನ ಲೀಲೆಗಳನ್ನು ಕೇಳಲು ಬಳಸಿದನು.

ಕಣ್ಣುಗಳನ್ನು ಭಗವಂತನ ರೂಪವನ್ನು ನೋಡಲು ಬಳಸಿದನು. ದೇಹವನ್ನು ಭಕ್ತನ ದೇಹವನ್ನು ಸ್ಪರ್ಶಿಸಲು ಬಳಸಿದನು. ನಾಸಿಕವನ್ನು ಭಗವಂತನ ಚರಣ ಕಮಲಗಳಲ್ಲಿ ಅರ್ಪಿಸಿದ ಹೂವುಗಳ ಸೌರಭವನ್ನು ಗ್ರಹಿಸಲು ಬಳಿಸಿದನು. ನಾಲಿಗೆಯನ್ನು ಭಗವಂತನಿಗೆ ಅರ್ಪಿಸಿದ ತುಳಿಸಿ ಪತ್ರವನ್ನು ಸವಿಯಲು ಬಳಿಸಿದನು.

ಶಿರವನ್ನು ಭಗವಂತನಿಗೆ ಪ್ರಣಾಮಗಳನ್ನು ಅರ್ಪಿಸಲು ಬಳಿಸಿದನು ಮತ್ತು ತನ್ನ ಬಯಕೆಗಳನ್ನು ಭಗವಂತನ ಅಪೇಕ್ಷೆಗಳನ್ನು ನೆರವೇರಿಸಲು ಬಳಿಸಿದನು. ಈ ಎಲ್ಲಾ ಅರ್ಹತೆಗಳನ್ನು ಭಗವಂತನ ಮತ್ಪರ ಭಕ್ತನಾಗಲು ಯೋಗ್ಯನನ್ನಾಗಿ ಮಾಡಿದವು.

ಈ ಸಂದರ್ಭದಲ್ಲಿ ಮತ್ಪರ ಶಬ್ದವು ಅರ್ಥವತ್ತಾದದ್ದು. ಮನುಷ್ಯನು ಮತ್ಪರ ಹೇಗೆ ಆಗಬಹುದು ಎನ್ನುವುದನ್ನು ಅಂಬರೀಷ ಮಹಾರಾಜನ ಬದುಕಿನಲ್ಲಿ ಕಾಣಬಹುದು. ಮಹಾವಿದ್ವಾಂಸರೂ ಮತ್ಪರ ಪರಂಪರೆಯಲ್ಲಿ ಆಚಾರ್ಯರೂ ಆದ ಶ್ರೀಲ ಬಲದೇವ ವಿದ್ಯಾಭೂಷಣರು ಹೀಗೆನ್ನುತ್ತಾರೆ.

ಮದ್ಭಕ್ತಿ ಪ್ರಭಾವೇನ ಸರ್ವೇಂದ್ರಿಯವಿಜಯಪೂರ್ವಿಕಾ ಸ್ವಾತ್ಮದೃಷ್ಟಿಃ ಸುಲಭೇತಿ ಭಾವಃ. ಕೃಷ್ಣನಿಗೆ ಸಲ್ಲಿಸುವ ಭಕ್ತಿಪೂರ್ವಕ ಸೇವೆಯ ಶಕ್ತಿಯಿಂದ ಮಾತ್ರವೇ ಇಂದ್ರಿಯಗಳನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡಬಹುದು. ಕೆಲವೊಮ್ಮೆ ಅಗ್ನಿಯ ಉದಾಹರಣೆಯನ್ನು ಕೊಡುವುದುಂಟು. ಪ್ರಜ್ವಲಿಸುವ ಅಗ್ನಿಯ ಕೊಠಡಿಯಲ್ಲಿರುವ ಎಲ್ಲ ವಸ್ತುವನ್ನು ಸುಡುವಂತೆ ಯೋಗಿಯ ಹೃದಯದಲ್ಲಿ ನೆಲೆಸಿರುವ ಶ್ರೀವಿಷ್ಣುವು ಎಲ್ಲ ಬಗೆಯ ಕಲ್ಮಷಗಳನ್ನೂ ಸುಟ್ಟುಹಾಕುತ್ತಾನೆ.

ಯೋಗ ಸೂತ್ತವೂ ಸಹ ವಿಷ್ಣುವನ್ನು ಕುರಿತ ಧ್ಯಾನವನ್ನು ವಿಧಿಸುತ್ತದೆ. ಶೂನ್ಯವನ್ನು ಕುರಿತ ಧ್ಯಾನವನ್ನಲ್ಲ. ವಿಷ್ಣುಪೀಠದ ಮೇಲೆ ಇಲ್ಲದಿರುವ ಏನನ್ನೋ ಧ್ಯಾನಿಸುವ ಯೋಗಿಗಳೆನಿಸಿಕೊಂಡವರು ಮಾಯಾ ಆಕೃತಿಗಳ ವ್ಯರ್ಥ ಹುಡುಕಾಟದಲ್ಲಿ ಕಾಲವನ್ನು ದಂಡಮಾಡುತ್ತಾರೆ. ನಾವು ಕೃಷ್ಣಪ್ರಜ್ಞೆಯಲ್ಲಿರಬೇಕು. ದೇವೋತ್ತಮ ಪರಮ ಪುರುಷನಲ್ಲಿ ಭಕ್ತಿಯಿಟ್ಟುಕೊಳ್ಳಬೇಕು. ಇದೇ ನಿಜವಾದ ಯೋಗದ ಗುರಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ