logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಆತ್ಮದ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮನುಷ್ಯನ ಬದುಕು ಸಾರ್ಥಕ; ಗೀತೆಯಲ್ಲಿನ ಅರ್ಥ ಹೀಗಿದೆ

ಭಗವದ್ಗೀತೆ: ಆತ್ಮದ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮನುಷ್ಯನ ಬದುಕು ಸಾರ್ಥಕ; ಗೀತೆಯಲ್ಲಿನ ಅರ್ಥ ಹೀಗಿದೆ

HT Kannada Desk HT Kannada

Nov 01, 2023 06:11 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಆತ್ಮದ ವಿಷಯ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮನುಷ್ಯನ ಬದುಕು ಸಾರ್ಥಕದ ಅರ್ಥ ಹೀಗಿದೆ

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಮ್

ಆಶ್ಚರ್ಯವದ್ ವದತಿ ತಥೈವ ಚಾನ್ಯಃ |

ಆಶ್ಚರ್ಯವಚ್ಚೈನಮನ್ಯಃ ಶೃಣೋತಿ

ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್ ||29||

ಕೆಲವರು ಆತ್ಮನನ್ನು ಆಶ್ಚರ್ಯದಿಂದ ಕಾಣುತ್ತಾನೆ; ಕೆಲವರು ಅವನನ್ನು ಆಶ್ಯರ್ಯಕರ ಎಂದು ವರ್ಣಿಸುತ್ತಾರೆ; ಮತ್ತೆ ಕೆಲವರ ಅವನು ಆಶ್ಚರ್ಯಕರ ಎನ್ನುವ ಮಾತನ್ನು ಕೇಳುತ್ತಾರೆ; ಇನ್ನು ಕೆಲವರಾದರೋ ಅವನ ವಿಷಯ ಕೇಳಿದರೂ ಒಂದಿಷ್ಟೂ ಅರ್ಥಮಾಡಿಕೊಳ್ಳಲಾರರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಗೀತೋಪನಿಷತ್ತಿಗೆ ಬಹುಮಟ್ಟಿಗೆ ಉಪನಿಷತ್ತಿನ ತತ್ವಗಳೇ ಆಧಾರ. ಆದುದರಿಂದ ಕಠೋಪನಿಷತ್ತಿನಲ್ಲಿ ಈ ಕೆಳಗಿನ ಶ್ಲೋಕ ಕಾಣುವುದರಲ್ಲಿ ಯಾವ ಆಶ್ಯರ್ಯವೂ ಇಲ್ಲ. (1.2.7)

ಶ್ರವಣಯಾಪಿ ಬಹುಭಿರ್ ಯೋ ನ ಲಭ್ಯಃ

ಶ್ಯಣ್ವಂತೋಪಿ ಬಹವೋ ಯಂ ನ ವಿದ್ಯುಃ |

ಆಶ್ಚರ್ಯೋ ವಕ್ತಾ ಕುಶಲೋಸ್ಯ ಲಬ್ಧಾ

ಆಶ್ಚರ್ಯೋಸ್ಯ ಜ್ಞಾತಾ ಕುಶಲಾನುಶಿಷ್ಟಃ ||

ಬೃಹತ್ ಪ್ರಾಣಿಯ ದೇಹದಲ್ಲೂ, ಬೃಹತ್ ಆಲದ ಮರದ ದೇಹದಲ್ಲೂ ಜೀವಾಣುವು ಇದೆ. ಕೇವಲ ಒಂದು ಅಂಗುಲದ ಸ್ಥಳವನ್ನ ಆಕ್ರಮಿಸುವ ಕೋಟ್ಯಂತರ ಕ್ರಿಮಿಗಳಲ್ಲೂ ಜೀವಾಣುವು ಇದೆ. ಇದು ಬಹು ಬೆರಗಿನ ಸಂಗತಿ. ಪ್ರಥಮ ಜೀವಿಯಾದ ಬ್ರಹ್ಮನಿಗೆ ಪಾಠಗಳನ್ನು ಬೋಧಿಸಿದ ಜ್ಞಾನದ ಪರಮಾಧಿಕಾರಿಯೇ ವ್ಯಕ್ತಿಗತ ಆತ್ಮನ ವಿಸ್ಮಯಗಳನ್ನು ವಿವರಸಿದ್ದಾನೆ. ಆದರೂ ಅಲ್ಪವಿದ್ಯೆಯುಳ್ಳವರು ಹಾಗೂ ಸಂಯಮ ಇಲ್ಲದವರು ಅದರ ವಿಸ್ಮಯಗಳನ್ನು ಅರಿಯಲಾರರು.

ಈ ಯುಗದ ಬಹುಮಂದಿಗೆ ವಸ್ತುಗಳ ಸ್ಥೂಲ ಐಹಿಕ ಪರಿಕಲ್ಪನೆಯಷ್ಟೇ ಇರುತ್ತದೆ. ಇದರಿಂದಾಗಿ ಸಣ್ಣ ಕಣವು ಇಷ್ಟು ಹಿದೂ ಇಷ್ಟು ಕಿರಿದೂ ಆಗಲು ಹೇಗೆ ಸಾಧ್ಯ ಎಂದು ಅವರಿಗೆ ಅಥವಾಗುವುದಿಲ್ಲ. ಆದ್ದರಿಂದ ನಿಜವಾದ ಆತ್ಮನು ಸ್ವರೂಪದಿಂದ ಅಥವಾ ವರ್ಣನೆಯಿಂದ ಅದ್ಭುತ ಎಂದು ಜನ ಭಾವಿಸುತ್ತಾರೆ. ಅಸ್ತಿತ್ತವಕ್ಕಾಗಿ ನಡೆಸುವ ಹೋರಾಟದಲ್ಲಿ ಸ್ವ ಅರಿವು ಇಲ್ಲದಿದ್ದರೆ ಎಲ್ಲಲ ಕ್ರಿಯೆಗಳೂ ಕಟ್ಟಕಡೆಗೆ ವಿಫಲವಾಗುತ್ತವೆ ಎನ್ನುವುದು ನಿಜ.

ಆದರೂ ಬಹು ಮಂದಿ ಭೌತಿಕ ಶಕ್ತಿಯಿಂದಾಗಿ ಮಾಯೆಗೆ ಸಿಲುಕುತ್ತಾರೆ. ಇದರಿಂದ ಇಂದ್ರಿಯತೃಪ್ತಿಯ ವಿಷಯಗಳಲ್ಲಿ ಮಗ್ನರಾಗಿ ಸ್ವ ಅರಿವಿನ ಪ್ರಶ್ನೆಯನ್ನುು ಅರ್ಥಮಾಡಿಕೊಳ್ಳಲು ಅವರಿಗೆ ಸಮಯವೇ ಇರುವುದಿಲ್ಲ. ಆತ್ಮವನ್ನು ಕುರಿತು ಯೋಚಿಸಬೇಕು, ಆ ಮೂಲಕ ಐಹಿಕ ದುಃಖಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದರ ಪರಿವೆಯೇ ಪ್ರಾಯಶಃ ಅವರಿಗಿಲ್ಲ.

ಆತ್ಮನು ವಿಷಯವಾಗಿ ಆಲಿಸುವ ಪ್ರವೃತ್ತಿ ಇರುವ ಕೆಲವರು ತಮ್ಮ ಒಳ್ಳೆಯ ಗೆಳೆಯರೊಂದಿಗೆ ಉಪನ್ಯಾಸಗಳಿಗೆ ಹೋಗುತ್ತಿರಬಹುದು. ಆದರೆ ಕೆಲವೊಮ್ಮೆ ಅವರು ಪ್ರಮಾಣದ ವ್ಯತ್ಯಾಸವಿಲ್ಲದೆ ಪರಮಾತ್ಮ ಮತ್ತು ಜೀವಾತ್ಮಗಳು ಒಂದೇ ಎಂಬ ದೃಷ್ಟಿಯನ್ನು ಅಜ್ಞಾನದಿಂದ ಸ್ವೀಕರಿಸಿ ಮಾರ್ಗ ತಪ್ಪುತ್ತಾರೆ. ಪರಮಾತ್ಮ, ಜೀವಾತ್ಮ ಇವುಗಳಲ್ಲಿ ಒಂದೊಂದರ ಸ್ಥಾನ, ಒಂದೊಂದರ ಕರ್ತವ್ಯಗಳು, ಪರಸ್ಪರ ಸಂಬಂಧ, ಮತ್ತಿತರ ಎಲ್ಲ ಮುಖ್ಯ ಮತ್ತು ಗೌಣ ವಿವರಗಳನ್ನು ಸಂಪೂರ್ಣವಾಗಿ ತಿಳಿದಿರುವ ಮನುಷ್ಯನನ್ನು ಕಾಣುವುದು ಬಹು ಕಷ್ಟ.

ಆತ್ಮದ ತಿಳಿವಿನಿಂದ ಸಂಪೂರ್ಣ ಫಲವನ್ನ ಪಡೆದುಕೊಂಡು, ವಿವಿಧ ದೃಷ್ಟಿಕೋನಗಳಿಂದ ಆತ್ಮನ ಸ್ಥಾನವನ್ನು ವರ್ಣಿಸಬಲ್ಲ ಮನುಷ್ಯನನ್ನು ಕಾಣುವುದು ಮತ್ತೂ ಕಷ್ಟ. ಆದರೆ ಹೇಗಾದರೂ ಆತ್ಮದ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮನುಷ್ಯನ ಬದುಕು ಸಾರ್ಥಕ.

ಆತ್ಮದ ವಿಷಯವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಸುಲಭವಾದ ಮಾರ್ಗವೆಂದರೆ ಇತರ ಸಿದ್ಧಾಂತಗಳಿಂದ ದಾರಿ ತಪ್ಪದೇ ಪರಮಾಧಿಕಾರಿಯಾದ ಶ್ರೀಕೃಷ್ಣನು (Lord Krishna) ಭಗವದ್ಗೀತೆಯಲ್ಲಿ (Bhagavadgita) ಮಾತುಗಳನ್ನು ಸ್ವೀಕರಿಸುವುದು. ಶ್ರೀಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದಾಗಿ ಸ್ವೀಕರಿಸುವುದಕ್ಕೂ ಈ ಜನ್ಮದಲ್ಲಾಗಲಿ ಹಿಂದಿನ ಜನ್ಮಗಳಲ್ಲಾಗಲಿ ವಿಶೇಷವಾಗಿ ತಪಸ್ಸು ಮತ್ತು ಯಜ್ಞಗಳನ್ನು ಮಾಡಿರಬೇಕು. ಆದರೆ ಪರಿಶುದ್ಧ ಭಕ್ತನ ಅವ್ಯಾಜ ಕೃಪೆಯಿಂದ ಮಾತ್ರ ಕೃಷ್ಣನನ್ನು ಅರಿಯಬಹುದು. ಇದಕ್ಕೆ ಬೇರೆ ದಾರಿಯೇ ಇಲ್ಲ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ