ಭಗವದ್ಗೀತೆ: ಈ 3 ಗುಣಗಳನ್ನ ಹೊಂದಿರುವವರು ಬದುಕಿನಲ್ಲಿ ಒಳ್ಳೆಯವರಾಗಿ ಇರುತ್ತಾರೆ; ಗೀತೆಯಲ್ಲಿ ಹೇಳಿರುವ ಕ್ವಾಲಿಟೀಸ್ ನಿಮ್ಮಲ್ಲೂ ಇವೆಯೇ?
Oct 14, 2023 09:36 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಈ 3 ಗುಣಗಳನ್ನ ಹೊಂದಿರುವವರು ಬದುಕಿನಲ್ಲಿ ಒಳ್ಳೆಯವರಾಗಿ ಇರುತ್ತಾರೆ ಎಂಬ ಗೀತೆಯಲ್ಲಿನ ಅರ್ಥ ತಿಳಿಯಿರಿ.
ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯನ್ತಿ ಕುಲಸ್ತ್ರಿಯಃ |
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸನ್ಕರಃ | | 40| |
ಹೇ ಕೃಷ್ಣ ಕುಟುಂಬದಲ್ಲಿ ಅರ್ಧಮವು ಪ್ರಧಾನವಾದಾಗ ಕುಲಸ್ತ್ರೀಯರು ನೀತಿಭ್ರಷ್ಟರಾಗಿ ಅನಿಷ್ಠ ಸಂತಾನ ಸೃಷ್ಟಿಯಾಗುತ್ತದೆ.
ತಾಜಾ ಫೋಟೊಗಳು
ಬದುಕಿನಲ್ಲಿ ಶಾಂತಿ, ಶ್ರೇಯಸ್ಸು ಮತ್ತು ಆಧ್ಯಾತ್ಮಿಕ ಮುನ್ನಡೆಗಳನ್ನು ಸಾಧಿಸಲು ಮಾನವ ಕುಲದಲ್ಲಿ ಅನಿವಾರ್ಯವಾದ ಮೂಲಾಧಾರವೆಂದರೆ ಒಳ್ಳೆಯ ಜನತೆ. ರಾಜ್ಯದ ಮತ್ತು ಸಮುದಾಯದ ಸಾಮಾನ್ಯ ಆಧ್ಯಾತ್ಮಿಕ ಬೆಳವಣಿಗೆಗಾಗಿ ಒಳ್ಳೆಯ ಜನರೇ ಪ್ರಭಾವಶಾಲಿಗಳಾಗುವಂತೆ ವರ್ಣಾಶ್ರಮಧರ್ಮದ ತತ್ವಗಳನ್ನು ರೂಪಿಸಲಾಗಿತ್ತು. ಇಂತಹ ಜನತೆಗೆ, ಸ್ರ್ತೀಯರ ಪಾತಿವ್ರತ್ಯ ಮತ್ತು ನಿಷ್ಠೆಯೇ ಆಧಾರ.
ಮಕ್ಕಳು ಹೇಗೆ ಸುಲಭವಾಗಿ ದಾರಿತಪ್ಪಬಹುದೋ ಹಾಗೆ ಸ್ತ್ರೀಯರೂ ಸುಲಭವಾಗಿ ಭ್ರಷ್ಟರಾಗಬಹುದು. ಆದುದರಿಂದ ಮಕ್ಕಳಿಗೂ ಸ್ತ್ರೀಯರಿಗೂ ಕುಟುಂಬದ ಹಿರಿಯರಿಂದ ರಕ್ಷಣೆಯು ಅಗತ್ಯ. ಹಲವಾರು ಧಾರ್ಮಿಕ ವಿಧಗಳಲ್ಲಿ ಮಗ್ನಾರದ ಸ್ತ್ರೀಯರು ದಾರಿತಪ್ಪಿ ವ್ಯಭಿಚಾರಕ್ಕಿಳಿಯುವುದಿಲ್ಲ. ಚಾಣಕ್ಯ ಪಂಡಿತನ ಪ್ರಕಾರ ಸ್ತ್ರೀಯರು ಸಾಮಾನ್ಯವಾಗಿ ಬಹಳ ಜಾಣರಲ್ಲವಾಗಿ ಅವರು ನಂಬಿಕೆಗೆ ಯೋಗ್ಯರಲ್ಲ. ಆದುದರಿಂದ ಧಾರ್ಮಿಕ ವಿಧಿಗಳ ಹಲವಾರು ಕೌಟುಂಬಿಕ ಸಂಪ್ರದಾಯಗಳಲ್ಲಿ ಅವರು ಸದಾ ಮಗ್ನಾರಾಗಿರಬೇಕು.
ಅವರ ಪಾತಿವ್ರತ್ಯ ಮತ್ತು ನಿಷ್ಠೆಗಳಿಂದ ವರ್ಣಾಶ್ರಮ ಧರ್ಮವು ವಿಫಲವಾದರೆ ಸಹಜವಾಗಿ ಮಹಿಳೆಯರಿಗೆ ಪುರುಷರೊಂದಿಗೆ ಕೆಲಸ ಮಾಡಿ ಬೆರೆಯಲು ಸ್ವಾತಂತ್ರ್ಯವು ದೊರೆಯುತ್ತದೆ. ಆಗ ವ್ಯಭಿಚಾರವು ಹೆಚ್ಚಿನ ಅನಪೇಕ್ಷಿತ ಜನತೆ ಸೃಷ್ಟಿಯಾಗುವ ಅಪಾಯ ಉಂಟಾಗುತ್ತದೆ. ಹೊಣೆಗೇಡಿ ಪುರುಷರು ಸಮಾಜದಲ್ಲಿ ವ್ಯಭಿಚಾರವನ್ನು ಪ್ರಚೋದಿಸುತ್ತಾರೆ. ಹೀಗೆ ಅನಪೇಕ್ಷಿತ ಮಕ್ಕಳು ಮಾನವಕುಲವನ್ನು ತುಂಬಿ, ಯುದ್ಧ ಮತ್ತು ಕ್ಷಾಮಗಳ ಅಪಾಯವು ತಲೆದೋರುತ್ತದೆ.
ಸನ್ಕರೋ ನರಕಾಯ್ಕೆವ ಕುಲಘ್ನಾನಾಂ ಕುಲಸ್ಯ ಚ |
ಪತನ್ತಿ ಪಿತರೋ ಹ್ಯೇಷಾಂ ಲುಪ್ತಪಿಣ್ದೋದಕರ್ಕಿಯಾಃ | | 41| |
ಬೇಡದ ಜನರ ಸಂಖ್ಯೆ ಹೆಚ್ಚಿದರೆ ಅದು ಸಂಸಾರದ ಬದುಕನನ್ನ ಮತ್ತು ಸಂಸಾರದ ಸಂಪ್ರದಾಯವನ್ನು ನಾಶಗೊಳಿಸಿದವರ ಬದುಕನ್ನು ನರಕದೃಶ ಮಾಡುತ್ತದೆ. ಇಂತಹ ಭ್ರಷ್ಟ ಸಂಸಾರಗಳ ಪೂರ್ವಿಕರು ಪತನಹೊಂದುತ್ತಾರೆ. ಏಕೆಂದರೆ ಅವರಿಗಾಗಿ ನಡೆಯಬೇಕಾದ ಪಿಂಡೋದಕ ಕ್ರಿಯೆಗಳು ಸಂಪೂರ್ಣವಾಗಿ ನಿಂತುಹೋಗುತ್ತವೆ.
ಕಾಮ್ಯಕರ್ಮದ ನಿಯಮಗಳ ಪ್ರಕಾರ ಕುಟುಂಬದ ಪೂರ್ವಿಕರಿಗೆ ಕಾಲಕಾಲಕ್ಕೆ ಪಿಂಡೋದಕ ಪ್ರದಾನವು ಅಗತ್ಯ. ಈ ಪ್ರದಾವನ್ನು ವಿಷ್ಣುಪೂಜೆಯ ಮೂಲಕ ಮಾಡಲಾಗುತ್ತದೆ. ಏಕೆಂದರೆ ವಿಷ್ಣುವಿನ ಪ್ರಸಾದ ಸೇವನೆ ವ್ಯಕ್ತಿಯನ್ನು ಎಲ್ಲಾ ಪಾಪಕರ್ಮಗಳಿಂದ ಮುಕ್ತಗೊಳಿಸುತ್ತದೆ. ಕೆಲವು ಸಲ ಪಿತೃಗಳ ನಾನಾ ಬಗೆಯ ಪಾಪಪೂರ್ಣ ಪ್ರತಿಕ್ರಿಯೆಗಳನ್ನು ಅನುಭವಿಸುತ್ತಿರಬಹುದು. ಕೆಲವೊಮ್ಮೆ ಅವರಲ್ಲಿ ಕೆಲವರು ಸ್ಥೂಲ ದೇಹವನ್ನೂ ಪಡೆಯಲಾಗದೆ ಪ್ರೇತಗಳಾಗಿ ಸೂಕ್ಷ್ಮ ಶರೀರದಲ್ಲೇ ಉಳಿದರಬೇಕಾಗಿ ಬರಬಹುದು.
ಪ್ರಸಾದದ ಉಳಿದ ಭಾಗವನ್ನು ವಂಶಜರು ಅರ್ಪಿಸಿದಾಗ ಪಿತೃಗಳಿಗೆ ಪ್ರೇತ ಅಥವಾ ಬೇರೆ ಬಗೆಯ ಯಾತನಾಮಯ ಅಸ್ತಿತ್ವದಿಂದ ಬಿಡುಗಡೆಯಾಗುತ್ತದೆ. ಪಿತೃಗಳಿಗೆ ನೀಡುವ ಈ ನೆರವು ಕುಟುಂಬದ ಸಂಪ್ರದಾಯ. ಇಂತಹ ವಿಧಿಗಳನ್ನು ನಡೆಸುವುದು ಭಕ್ತಿಸೇವೆಯಲ್ಲಿ ತೊಡಿಗಿಲ್ಲದ ಎಲ್ಲ ಜನರ ಕರ್ತವ್ಯ. ಭಕ್ತಿ ಸೇವೆಯಲ್ಲಿ ನಿರತರಾದವರು, ಈ ವಿಧಿಗಳನ್ನು ನಡೆಸಬೇಕಾಗಿಲ್ಲ. ಭಕ್ತಿಪೂರ್ವಕ ಸೇವೆ ಸಲ್ಲಿಸಿದ ಮಾತ್ರದಿಂದಲೇ ಒಬ್ಬ ಮನುಷ್ಯನು ನೂರಾರು ಮಂದಿ, ಸಾವಿರಾರು ಮಂದಿ ಪೂರ್ವಿಕರನ್ನು ಎಲ್ಲ ಬಗೆಯ ಯಾತನೆಗಳಿಂದ ಬಿಡುಗಡೆ ಮಾಡಬಹುದು.