logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಈ 6 ಕೆಟ್ಟ ಅಭ್ಯಾಸಗಳು ಮನುಷ್ಯನಲ್ಲಿ ಎಂದಿಗೂ ಇರಬಾರದು; ಗೀತೆಯಲ್ಲಿ ವಿವರಿಸಿರುವ ಆ ಅಂಶಗಳು ಯಾವುವು?

ಭಗವದ್ಗೀತೆ: ಈ 6 ಕೆಟ್ಟ ಅಭ್ಯಾಸಗಳು ಮನುಷ್ಯನಲ್ಲಿ ಎಂದಿಗೂ ಇರಬಾರದು; ಗೀತೆಯಲ್ಲಿ ವಿವರಿಸಿರುವ ಆ ಅಂಶಗಳು ಯಾವುವು?

HT Kannada Desk HT Kannada

Oct 13, 2023 08:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಗೀತೆಯಲ್ಲಿ ವಿವರಿಸಿರುವ 6 ಬಗೆಯ ಕೆಟ್ಟ ಮನುಷ್ಯರ ಬಗ್ಗೆ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ |

ತಸ್ಮಾನ್ನಾರ್ಹಾ ವಯಂ ಹನ್ತುಮ್ ಧಾರ್ತರಾಷ್ಟ್ರಾನ್ ಸ-ಬಾನ್ಧವಾನ್ |

ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ ||36||

ಇಂತಹ ಅಕ್ರಮಣಕಾರರನ್ನು ಕೊಂದರೆ ನಮಗೆ ಪಾಪವೇ ಘಟಿಸುತ್ತದೆ. ಆದ್ದರಿಂದ ಧೃತರಾಷ್ಟ್ರನ ಮಕ್ಕಳನ್ನೂ ನಮ್ಮ ಸ್ನೇಹಿತರನ್ನೂ ನಾವು ಕೊಲ್ಲುವುದು ಸರಿಯಲ್ಲ. ಭಾಗ್ಯದೇವತೆಯ ಪತಿಯಾದ ಮಾಧವನೇ, ನಮ್ಮ ಬಂಧುಗಳನ್ನೇ ಕೊಂದು ನಾವು ಏನನ್ನು ಪಡೆಯುತ್ತೇವೆ? ನಾವು ಸುಖವಾಗಿರಲು ಹೇಗೆ ಸಾಧ್ಯ?

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ದುರಾಕ್ರಮಣ ಮಾಡುವ ಆರು ಬಗೆಯ ಜನ

ವೇದಗಳ ಪ್ರಕಾರ ದುರಾಕ್ರಮಣ ಮಾಡುವವರು ಆರು ಬಗೆಯ ಜನ - 1) ವಿಷಹಾಕುವವನು 2) ಮನೆಗೆ ಬೆಂಕಿ ಹಚ್ಚುವವನು 3) ಮಾರಕ ಆಯುಧಗಳಿಂದ ಹಲ್ಲೆ ಮಾಡುವವನು 4) ಸಂಪತ್ತನ್ನು ಲೂಟಿಮಾಡುವವನು 5) ಮತ್ತೊಬ್ಬನ ನೆಲವನ್ನು ವಶಮಾಡಿಕೊಳ್ಳುವವನು ಮತ್ತು 6) ಮತ್ತೊಬ್ಬನ ಹೆಂಡತಿಯನ್ನು ಅಪಹರಿಸುವವನು.

ಇಂತಹ ಆಕ್ರಮಣಕಾರರನ್ನು ಕೂಡಲೇ ಕೊಲ್ಲಬೇಕು. ಹಾಗೆ ಕೊಲ್ಲುವುದರಿಂದ ಪಾಪವೇನೂ ಬರುವುದಿಲ್ಲ. ಇಂತಹ ಆಕ್ರಮಣಕಾರರನ್ನು ಕೊಲ್ಲುವುದು ಸಾಮಾನ್ಯ ಮನುಷ್ಯನಿಗೂ ಯೋಗ್ಯಕಾರ್ಯ. ಆದರೆ ಅರ್ಜುನನು ಸಾಮಾನ್ಯ ಮನುಷ್ಯನಾಗಿ ಇರಲಿಲ್ಲ. ಅವನದು ಸಂತ ಸದೃಶ ಸ್ವಭಾವ. ಆದ್ದರಿಂದ ಅವನು ಸಂತನಂತೆಯೇ ಅವರೊಡನೆ ನಡೆದುಕೊಳ್ಳಲು ಬಯಸಿದ. ಆದರೆ ಇಂತಹ ಸಂತನ ರೀತಿ ಕ್ಷತ್ರಿಯನಿಗಲ್ಲ.

ರಾಜ್ಯ ಆಡಳಿತದ ಹೊಣೆಗಾರಿಕೆಯುಳ್ಳ ವ್ಯಕ್ತಿ ಹೇಗಿರಬೇಕು?

ಒಂದು ರಾಜ್ಯದ ಆಡಳಿತದಲ್ಲಿ ಹೊಣೆಗಾರಿಕೆಯುಳ್ಳ ಮನುಷ್ಯನು ಸಂತ ಸದೃಶನಾಗಿರಬೇಕೆಂದು ಬಯಸುತ್ತಾರೆ. ನಿಜ, ಆದರೆ ಅವನು ಹೇಡಿಯಾಗಿರಬಾರದು. ಉದಾಹರಣೆಗೆ ಶ್ರೀರಾಮ. ಅವನದು ಎಂತಹ ಸ್ವಾಭಾವ ಎಂದರೆ ಈಗಲೂ ಜನರು ರಾಮರಾಜ್ಯದಲ್ಲಿರಬೇಕೆಂದು ಬಯಸುತ್ತಾರರೆ. ಆದರೆ ರಾಮನು ಎಂದೂ ಹೇಡಿಯಂತೆ ನಡೆದುಕೊಳ್ಳಲಿಲ್ಲ. ರಾಮನ ಪತ್ನಿ ಸೀತೆಯನ್ನು ಅಪಹರಿಸಿದ ರಾವಣನು ರಾಮನ ವಿರುದ್ಧ ಆಕ್ರಮಣ ಮಾಡಿದವನೇ. ಜಗತ್ತಿನ ಚರಿತ್ರೆಯಲ್ಲೇ ಸಾಮ್ಯವಿಲ್ಲದಂತಹ ಪಾಠವನ್ನು ಶ್ರೀರಾಮನು ಅವನಿಗೆ ಕಲಿಸಿದ.

ಆದರೆ ಅರ್ಜುನನ ವಿರುದ್ಧ ಆಕ್ರಮಣ ಮಾಡಿದವರು ವಿಶೇಷ ವರ್ಗದವರು. ಅಂದರೆ ಅವನ ತಾತ, ಅವನ ಗುರು, ಸ್ನೇಹಿತರು, ಮಕ್ಕಳು, ಮೊಮ್ಮಕ್ಕಳು ಮೊದಲಾದವರು ಎಂಬುದನ್ನು ಪರಿಗಣಿಸಬೇಕು. ಅದರಿಂದಾಗಿ ಅರ್ಜುನನು ಸಾಮಾನ್ಯ ಅತಿಕ್ರಮಣಕಾರರ ವಿರುದ್ಧ ಪರಿಗಣಿಸಬೇಕು. ಅದರಿಂದಾಗಿ ಅರ್ಜುನನು ಸಾಮಾನ್ಯ ಅತಿಕ್ರಮಣಕಾರರ ವಿರುದ್ಧ ಅಗತ್ಯವೆನಿಸುವ ತೀವ್ರಕ್ರಮಗಳನ್ನು ಕೈಗೊಳ್ಳಬಾರದು ಎಂದು ಭಾವಿಸಿದ. ಅಲ್ಲದೆ, ಸಂತಸ್ವಭಾವದವರು ಕ್ಷಮೆಯನ್ನು ತೋರಬೇಕೆಂದು ಆದೇಶವಿದೆ.

ಶಾಶ್ವತವಾದ ಮುಕ್ತಿಗೂ ಆಪತ್ತನ್ನೇಕೆ ತಂದುಕೊಳ್ಳಬೇಕು?

ಸಂತಸ್ವಭಾದವರಿಗೆ ಯಾವುದೇ ರಾಜಕೀಯ ತುರ್ತಿಗಿಂತ ಇಂತಹ ಆದೇಶಗಳು ಮುಖ್ಯ. ರಾಜಕೀಯ ಕಾರಣಗಳಿಗಾಗಿ ಅವರನ್ನು ಕ್ಷಮಿಸುವುದೇ ಉತ್ತಮ ಎಂದು ಅರ್ಜುನನು ಭಾವಿಸಿದ ತಾತ್ಕಾಲಿಕವಾದ ದೇಹಸುಖಕ್ಕಾಗಿ ಮಾತ್ರ ಅವರನ್ನು ಕೊಲ್ಲುವುದು ಯೋಗ್ಯವಲ್ಲ ಎಂದು ಅವನು ಭಾವಿಸಿದ. ಅವರನ್ನು ಕೊಂದು ಪಡೆಯುವ ರಾಜ್ಯವಾಗಲಿ ಸುಖವಾಗಲಿ ಶಾಶ್ವತವೇನೂ ಅಲ್ಲ. ಹೀಗಿರುವಾಗ ತನ್ನ ಬಂಧುಗಳನ್ನೇ ಕೊಂದು ತನ್ನ ಜೀವಕ್ಕೂ ಶಾಶ್ವತವಾದ ಮುಕ್ತಿಗೂ ಆಪತ್ತನ್ನೇಕೆ ತಂದುಕೊಳ್ಳಬೇಕು? ಅರ್ಜುನನು ಕೃಷ್ಣನನ್ನು ಮಾಧವ ಅಥವಾ ಭಾಗ್ಯದೇವತೆಯ ಪತಿ ಎಂದು ಕರೆಯುವುದೂ ಅರ್ಥವತ್ತಾಗಿದೆ. ಕೃಷ್ಣನು ಭಾಗ್ಯದೇವತೆಯ ಪತಿ. ಅವನು ತನ್ನನ್ನು ದೌರ್ಭಾಗ್ಯಕರವಾದ ದಾರಿಯಲ್ಲಿ ನಡೆಯುವಂತೆ ಪ್ರೇರಿಸಬಾರದು ಎಂದು ಅರ್ಜುನ ಹೇಳಬಯಸಿದ. ಆದರೆ ಕೃಷ್ಣನು ಭಕ್ತರಿಗೆ ಮಾತ್ರವಲ್ಲ, ಯಾರಿಗೂ ದುರದೃಷ್ಟವನ್ನು ತರುವುದಿಲ್ಲ.

'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್

"ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮಿಷ್ಟದ ವಿಷಯಗಳ ತ್ವರಿತ ಅಪ್‌ಡೇಟ್ ಪಡೆಯಲು 'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್ ಫಾಲೊ 🚀 ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್" ಕ್ಲಿಕ್ ಮಾಡಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ