ಭಗವದ್ಗೀತೆ: ಕೆಲಸ ಮಾಡು, ಫಲವನ್ನು ನಿರೀಕ್ಷಿಸಬೇಡ; ಶ್ರೀಕೃಷ್ಣನ ಮಾತಿನ ಅರ್ಥವನ್ನು ತಿಳಿಯಿರಿ
Aug 22, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಕರ್ಮಗಳನ್ನು ಮಾಡು, ಫಲವನ್ನು ನಿರೀಕ್ಷಿಸಬೇಡ ಎಂಬ ಶ್ರೀಕೃಷ್ಣನ ಮಾತಿನ ಅರ್ಥ ಇಲ್ಲಿದೆ.
ಭಗವದ್ಗೀತೆಯಲ್ಲಿ (Bhagavadgita) ಶ್ರೀಕೃಷ್ಣ (Lord Krishna) ಹೀಗೆ ಹೇಳುತ್ತಾನೆ. ಒಬ್ಬ ವ್ಯಕ್ತಿಯು ಎಂದಿಗೂ ತನ್ನ ಕರ್ಮವನ್ನು ಅನುಮಾನಿಸಬಾರದು. ತನ್ನ ಕೆಲಸವನ್ನು ಅನುಮಾನದಿಂದ ನೋಡಿದರೆ, ನಕಾರಾತ್ಮಕವಾಗಿ ಯೋಚಿಸಿದರೆ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತಾನೆ. ಆದ್ದರಿಂದ ಯಶಸ್ಸನ್ನು ಸಾಧಿಸಬೇಕು ಎಂದುಕೊಂಡಿದ್ದರೆ ನೀವು ಏನು ಮಾಡಿದರೂ ಪೂರ್ಣ ನಂಬಿಕೆಯಿಂದ ಮಾಡಿ, ಆಗ ಮಾತ್ರ ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ.
ತಾಜಾ ಫೋಟೊಗಳು
ಗೀತೆಯಲ್ಲಿ ಹೇಳುವಂತೆ ಕರ್ಮಗಳನ್ನು ಮಾಡು ಆದರೆ ಫಲವನ್ನು ನಿರೀಕ್ಷಿಸಬೇಡ. ನಿಮ್ಮ ಕರ್ಮ ಅಥವಾ ಕೆಲಸವನ್ನು ನಂಬಿ ಮುನ್ನಡೆಯಿರಿ. ಇದರ ಹೊರತಾಗಿ ನಿಮ್ಮ ಮನಸ್ಸಿನಲ್ಲಿ ಬರುವ ಯಾವುದೇ ಕೆಟ್ಟ ಆಲೋಚನೆಗಳು ನೀವು ಗುರಿಯನ್ನು ತಲುಪದಂತೆ ವಿಚಲಿತಗೊಳಿಸಬಹುದು.
ನಿನ್ನ ಕೆಲಸವನ್ನು ನಿರ್ಭೀತಿಯಿಂದ ಮಾಡು
ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು, ತನ್ನೊಳಗಿನ ಭಯವನ್ನು ಮೊದಲು ನಿರ್ಮೂಲನೆ ಮಾಡಬೇಕು ಎಂದು ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಅರ್ಜನನಿಗೆ ಹೇಳುತ್ತಾನೆ. ಓ ಅರ್ಜುನಾ, ನಿರ್ಭಯವಾಗಿ ಹೋರಾಡು, ಯುದ್ಧದಲ್ಲಿ ಸತ್ತರೆ ಸ್ವರ್ಗ, ಗೆದ್ದರೆ ಭೂಮಿಯಲ್ಲಿ ರಾಜ್ಯ ಸಿಗುತ್ತದೆ. ಆದ್ದರಿಂದ ನಿನ್ನ ಮನಸ್ಸಿನಲ್ಲಿರುವ ಭಯವನ್ನು ತೊಲಗಿಸು ಎಂದು ಹೇಳಿರುವುದಾಗಿ ಗೀತೆಯಲ್ಲಿ ಬರೆಯಲಾಗಿದೆ. ಹೀಗಾಗಿ ಯಾವುದೇ ಕೆಲಸವನ್ನು ನಿರ್ಭೀತಿಯಿಂದ ಮಾಡಬೇಕು
ಅತಿಯಾದ ಮೋಹವೂ ದುಃಖಕ್ಕೆ ಕಾರಣವಾಗುತ್ತೆ
ಒಬ್ಬ ವ್ಯಕ್ತಿಯು ಯಾವುದಕ್ಕೂ ಅತಿಯಾದ ಮೋಹವನ್ನು ಹೊಂದಬಾರದು. ಒಂದು ವೇಳೆ ಅತಿಯಾದ ಮೋಹವನ್ನು ಹೊಂದಿದ್ದರೇ ಅದು ತಪ್ಪಾಗುತ್ತದೆ. ಬಾಂಧವ್ಯವು ಒಬ್ಬರ ದುಃಖ ಮತ್ತು ವೈಫಲ್ಯಕ್ಕೆ ಕಾರಣವಾಗುತ್ತದೆ. ಅತಿಯಾದ ಬಾಂಧ್ಯವು ವ್ಯಕ್ತಿಯಲ್ಲಿ ಕೋಪ ಮತ್ತು ದುಃಖದ ಭಾವನೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯು ತನ್ನ ಕರ್ಮದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಒಬ್ಬರ ಮೇಲಿನ ಅತಿಯಾದ ಬಾಂಧವ್ಯವನ್ನು ತಪ್ಪಿಸಬೇಕು.
ಕೋಪ ಬುದ್ದಿಯನ್ನು ನಾಶ ಮಾಡುತ್ತೆ
ಕೆಲಸ ಮಾಡುವಾಗ ಮನಸ್ಸಿನ ಮೇಲಿನ ಹಿಡಿತ ಹೊಂದುವುದು ಬಹಳ ಮುಖ್ಯ ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳುತ್ತಾನೆ. ಕೆಲಸದಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಮತ್ತು ಅದನ್ನು ಮಾಡುವಾಗ ಕೋಪವನ್ನು ತಪ್ಪಿಸುವುದು ಬಹಳ ಮುಖ್ಯ. ಕೋಪವು ಬುದ್ದಿಯನ್ನು ನಾಶಪಡಿಸುತ್ತದೆ. ಮಾಡಿದ ಕೆಲಸವನ್ನು ಹಾಳುಮಾಡುತ್ತದೆ.ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ.
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.
ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.
ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.
ವಿಭಾಗ