logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಒಬ್ಬ ವ್ಯಕ್ತಿಗೆ ಈ 5 ಗುಣಗಳಿದ್ದರೆ ಜೀವನದಲ್ಲಿ ಘನತೆಗೆ ಕೊರತೆಯೇ ಇರುವುದಿಲ್ಲ; ಶ್ರೀಕೃಷ್ಣನ ಮಾತಿನ ಅರ್ಥ ಹೀಗಿದೆ

ಭಗವದ್ಗೀತೆ: ಒಬ್ಬ ವ್ಯಕ್ತಿಗೆ ಈ 5 ಗುಣಗಳಿದ್ದರೆ ಜೀವನದಲ್ಲಿ ಘನತೆಗೆ ಕೊರತೆಯೇ ಇರುವುದಿಲ್ಲ; ಶ್ರೀಕೃಷ್ಣನ ಮಾತಿನ ಅರ್ಥ ಹೀಗಿದೆ

Raghavendra M Y HT Kannada

Aug 16, 2023 10:05 PM IST

google News

ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ. ಹಿಂದೂ ಧರ್ಮದಲ್ಲಿ ಗೀತೆಯ ಪ್ರಾಮುಖ್ಯ ಅನನ್ಯವಾಗಿದೆ. ಮನುಷ್ಯರ ಜೀವನಕ್ಕೆ ಇಂದಿಗೂ ಪ್ರಸ್ತುತವಾಗಿದೆ. ಒಬ್ಬ ವ್ಯಕ್ತಿಗೆ ಈ 5 ಗುಣಗಳಿದ್ದರೆ ಜೀವನದಲ್ಲಿ ಘನತೆಗೆ ಕೊರತೆಯೇ ಇರುವುದಿಲ್ಲ. ಈ ಮಾತಿನ ಅರ್ಥ ತಿಳಿಯಿರಿ.

ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಭಗವದ್ಗೀತೆಯಲ್ಲಿ (Bhagavad Gita) ಶ್ರೀಕೃಷ್ಣ (Lord Krishna) ಹೀಗೆ ಹೇಳುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ಐದು ಗುಣಗಳನ್ನು ಹೊಂದಿರಬೇಕು. ಶಾಂತತೆ, ಸೌಮ್ಯ ಸ್ವಭಾವ, ಮೌನ, ಸ್ವಯಂ ಸಂಯಮ ಹಾಗೂ ಪರಿಶುದ್ಧತೆಯನ್ನು ಹೊಂದಿರಬೇಕು. ಈ ಐದು ಗುಣಗಳು ಮನುಷ್ಯನನ್ನು ಶಿಸ್ತಿನ ವ್ಯಕ್ತಿಯಾಗಿ ರೂಪಿಸುತ್ತವೆ. ಐದು ಗುಣಗಳು ಇದ್ದಾಗ ಮಾತ್ರ ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಹೇಳಿದ್ದಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಒಳ್ಳೆಯವರೊಂದಿಗೆ ಒಳ್ಳೆಯವರಾಗಿರುವಂತೆ ಗೀತೆಯಲ್ಲಿ ಹೇಳಲಾಗಿದೆ. ಇದರರ್ಥ ಕೆಟ್ಟವರೊಂದಿಗೆ ಕೆಟ್ಟವರಾಗಿ ಇರಬೇಕು ಎಂದರ್ಥವಲ್ಲ. ಯಾಕೆಂದರೆ ವಜ್ರವನ್ನು ವಜ್ರದಿಂದ ಮಾತ್ರ ಕತ್ತರಿಸಬಹುದಾಗಿದೆ. ಆದರೆ ಮಣ್ಣಿನಿಂದ ಮಣ್ಣನ್ನು ಸ್ವಚ್ಛಗೊಳಿಸಲಾಗುವುದಿಲ್ಲ.

ಇಂದಿನ ನಮ್ಮ ಕ್ರಿಯೆಗಳು ನಾಳೆಯನ್ನು ನಿರ್ಧರಿಸುತ್ತದೆ

ನಮ್ಮ ಭವಿಷ್ಯವು ನಮ್ಮ ಹಿಂದಿನ ಕರ್ಮದ ಫಲವಾಗಿದೆ ಎಂದು ಶ್ರೀಕೃಷ್ಣ ಹೇಳುತ್ತಾನೆ. ಹಾಗೆಯೇ ಇಂದು ನಾವು ಮಾಡುವ ಕ್ರಿಯೆಗಳು ನಮ್ಮ ನಾಳೆಯನ್ನು ನಿರ್ಧರಿಸುತ್ತದೆ.

ನೀವು ಇನ್ನೊಬ್ಬರ ಹಣೆಬರಹವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಕನಿಷ್ಠ ನೀವು ಅವರಿಗೆ ಉತ್ತಮ ರೀತಿಯಲ್ಲಿ ಸ್ಪೂರ್ತಿಯೊಂದಿಗೆ ಮಾರ್ಗದರ್ಶನ ನೀಡಬಹುದು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಜೀವನದಲ್ಲಿ ನಿಮಗೆ ಎಂದಾದರೂ ಅವಕಾಶ ಸಿಕ್ಕರೆ, ನೀವು ಸಾರಥಿಯಾಗಬೇಕೇ ಹೊರತು ಸ್ವಾರ್ಥಿಯಾಗಬಾರದು.

ಮನುಷ್ಯನ ಅಹಂಕಾರ ವಿನಾಶಕ್ಕೆ ಕಾರಣವಾಗುತ್ತೆ

ಅಹಂಕಾರವು ಮನುಷ್ಯನನ್ನು ಅಂತಿಮವಾಗಿ ವಿನಾಶಕ್ಕೆ ಕಾರಣವಾಗುವಂತ ಕೆಲಸಗಳನ್ನು ಮಾಡಿಸುತ್ತದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ತನ್ನ ಅಹಂಕಾರವನ್ನು ಸಾಧ್ಯವಾದಷ್ಟು ಬೇಗ ತ್ಯಜಿಸಬೇಕು. ಆಗ ಯಾರಿಗೂ ತೊಂದರೆ ಮಾಡದೆ, ನೋವು ಪಡಿಸದೆ ಉತ್ತಮ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ.

ಕರ್ಮವು ಪ್ರತಿಯೊಂದು ಪರಿಸ್ಥಿತಿಯಲ್ಲೂ ತನ್ನನ್ನು ತಾನೇ ಕೊಯ್ಯಬೇಕಾದ ಬೆಳೆಯಾಗಿದೆ. ಆದ್ದರಿಂದ ಯಾವಾಗಲೂ ಉತ್ತಮ ಬೀಜವನ್ನು ಬಿತ್ತಿದರೆ ಬೆಳೆ ಚೆನ್ನಾಗಿರುತ್ತದೆ ಎಂದು ಶ್ರೀಕೃಷ್ಣ ಹೇಳುತ್ತಾನೆ.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.

ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಈ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣ ಮಾತು.

ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.

-----------------------------------------------------------------------------------

ಸಂಬಂಧಿತ ಲೇಖನ

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ