ಭಗವದ್ಗೀತೆ: ಇಂದು ಬೇರೆಯವರನ್ನು ಮೋಸ ಮಾಡುವವನು ಮುಂದೊಂದು ದಿನ ಸ್ವತಃ ಮೋಸ ಹೋಗುತ್ತಾನೆ; ಶ್ರೀಕೃಷ್ಣನ ಮಾತಿನಲ್ಲಿ ಹತ್ತಾರು ಅರ್ಥ
Jul 31, 2023 08:05 AM IST
ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಸಾರಾಂಶ ಅನನ್ಯವಾಗಿದೆ. ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನ ಹತಾಶನಾಗಿದ್ದ ಅರ್ಜುನನಿಗೆ ಶ್ರೀಕೃಷ್ಣ ಉಪದೇಶವನ್ನು ನೀಡುತ್ತಾನೆ. ಗೀತೆಯಲ್ಲಿರುವ ಆ ಉಪದೇಶವೇನು ಎಂಬುದನ್ನು ತಿಳಿಯಿರಿ.
Bhagavad Gita Updesh: ಮಹಾಭಾರತದ (Mahabharat) ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು (Lord Krishna) ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ (Arjuna) ಹೀಗೆ ಉಪದೇಶ ನೀಡುತ್ತಾನೆ.
ತಾಜಾ ಫೋಟೊಗಳು
ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ.
ಆಗ ಅರ್ಜುನನಿಗೆ ಶ್ರೀಕೃಷ್ಣ ಈ ರೀತಿಯಾಗಿ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು. ಜೀವನದ ಸಾರವನ್ನು ಗೀತೆಯಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿ ಹೇಗೆ ವರ್ತಿಸಬೇಕು, ಯಾರನ್ನಾದರೂ ಸರಿಯೇ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಭಗವದ್ಗೀತೆಯಲ್ಲಿ ಅಡಕವಾಗಿದೆ. ಗೀತೆಯ ಈ ಅಂಶವನ್ನು ಅತ್ಯುತ್ತಮ ಜೀವನದ ಪಾಠ ಎಂದು ಪರಿಗಣಿಸಲಾಗಿದೆ.
ಇತರರನ್ನು ಮೋಸ ಮಾಡುವವನು ನಂತರ ಮೋಸ ಹೋಗುತ್ತಾನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ಮತ್ತೊಂದೆಡೆ ಸತ್ಯದಲ್ಲಿ ಬದುಕುವವರು ಪ್ರತಿ ಕ್ಷಣವೂ ಶಾಂತಿಯನ್ನು ಕಂಡುಕೊಳ್ಳುತ್ತಾರೆ. ಯೋಗವಿಲ್ಲದ ವ್ಯಕ್ತಿಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ ಎಂದು ಗೀತೆಯಲ್ಲಿ ಹೇಳಲಾಗಿದೆ. ಅಂತಹ ವ್ಯಕ್ತಿಗೆ ಯಾವುದೇ ಭಾವನೆಗಳಿಲ್ಲ. ಅಂತಹ ಜನರು ಎಂದಿಗೂ ಮಾನಸಿಕವಾಗಿ ಶಾಂತವಾಗಿರುವುದಿಲ್ಲ. ಇವರು ಜೀವನದಲ್ಲಿ ಎಂದಿಗೂ ಸಂತೋಷವಾಗಿರುವುದಿಲ್ಲ.
ಮನಸ್ಸಿನಲ್ಲಿ ಅಹಂಕಾರ ಹೊಂದಿರುವವನು ಎಂದಿಗೂ ಯಶಸ್ಸಿನ ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಇದರಿಂದ ಹೊರಬರಲು ಮನಸ್ಸಿನಲ್ಲಿ ಸಾಮರಸ್ಯ ಇರಬೇಕು. ಸಮತ್ವ ಯೋಗದಿಂದ ಮಾತ್ರ ನಿಸ್ವಾರ್ಥ ಕಾರ್ಯಗಳನ್ನು ಮಾಡಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕೆಲಸವನ್ನು ಸಾಮರಸ್ಯದಿಂದ ಮಾಡಬೇಕು.
ಅಹಂಕಾರವಿಲ್ಲದೆ, ದುರಾಸೆಯನ್ನು ತೊರೆದು ತನ್ನ ಕರ್ತವ್ಯವನ್ನು ನಿರ್ವಹಿಸುವವನು ಪ್ರತಿಯೊಂದು ಕಾರ್ಯದಲ್ಲೂ ಯಶಸ್ವಿಯಾಗುತ್ತಾನೆ. ಅಂತಹ ಜನರು ಶಾಂತಿಯನ್ನು ಕಂಡುಕೊಳ್ಳುತ್ತಾರೆ. ಒಬ್ಬ ಮನುಷ್ಯನು ನನ್ನನ್ನು ನೆನಪಿಸಿಕೊಂಡಂತೆ, ನಾನು ಅವನಿಗೆ ಪ್ರತಿಫಲವನ್ನು ನೀಡುತ್ತೇನೆ. ಪ್ರತಿಯೊಬ್ಬರೂ ನನ್ನ ಮಾರ್ಗವನ್ನು ಎಲ್ಲಾ ರೀತಿಯಲ್ಲಿ ಅನುಸರಿಸುತ್ತಾರೆ ಎಂದು ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೀಗೆ ಹೇಳುತ್ತಾನೆ.