ಭಗವದ್ಗೀತೆ: ಮನುಷ್ಯನ ಅತಿಯಾದ ಮೋಹ ದುಃಖಕ್ಕೆ ಕಾರಣವಾಗುತ್ತದೆ; ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ
Aug 20, 2023 05:53 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿ ಲಭ್ಯ ಇರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸುರಿಸುವುದು ಗೀತೆಯ ಅರ್ಥವಾಗಿದೆ. ಮನುಷ್ಯನ ಅತಿಯಾದ ಮೋಹದಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿಯಿರಿ.
ಭಗವದ್ಗೀತೆಯಲ್ಲಿ (Bhagavad Geetha) ಶ್ರೀಕೃಷ್ಣ (Lord Krishna) ಹೀಗೆ ಹೇಳುತ್ತಾನೆ. ಒಬ್ಬ ವ್ಯಕ್ತಿ ಅತಿಯಾದ ಮೋಹವನ್ನು ಹೊಂದಿದ್ದರೇ ಅದು ತಪ್ಪು. ಬಾಂಧವ್ಯವು ಒಬ್ಬರ ದುಃಖ ಮತ್ತು ವೈಫಲ್ಯಕ್ಕೆ ಕಾರಣವಾಗಿದೆ. ಅತಿಯಾದ ಬಾಂಧವ್ಯವು ವ್ಯಕ್ತಿಯಲ್ಲಿ ಕೋಪ ಮತ್ತು ದುಃಖದ ಭಾವನೆಗಳನ್ನು ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯು ತನ್ನ ಕರ್ಮದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಒಬ್ಬರ ಅತಿಯಾದ ಬಾಂಧವ್ಯವನ್ನು ತಪ್ಪಿಸಬೇಕು ಎಂದು ಹೇಳಿದ್ದಾನೆ.
ತಾಜಾ ಫೋಟೊಗಳು
ಕೆಲಸ ಮಾಡುವಾಗ ಮನಸ್ಸಿನ ಮೇಲೆ ಹಿಡಿತ ಹಿರಲಿ
ಕೆಲಸ ಮಾಡುವಾಗ ಮನಸ್ಸಿನ ಮೇಲೆ ಹಿಡಿತ ಹೊಂದುವುದು ಬಹಳ ಮುಖ್ಯ ಎಂದು ಶ್ರೀ ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ. ಕೆಲಸದಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಮತ್ತು ಅದನ್ನು ಮಾಡುವಾಗ ಕೋಪವನ್ನು ತಪ್ಪಿಸುವುದು ಬಹಳ ಮುಖ್ಯ. ಕೋಪವು ಬುದ್ದಿಯನ್ನು ನಾಶಪಡಿಸುತ್ತದೆ. ಮಾಡಿದ ಕೆಲಸವನ್ನೂ ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ.
ಭಗವದ್ಗೀತೆಯ ಪ್ರಕಾರ, ಒಬ್ಬನು ತನ್ನ ಕರ್ಮವನ್ನು ಎಂದಿಗೂ ಅನುಮಾನಿಸಬಾರದು. ಇದನ್ನು ಮಾಡುವುದರಿಂದ ಮನುಷ್ಯನು ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತಾನೆ. ಆದ್ದರಿಂದ ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ, ನೀವು ಏನು ಮಾಡಿದರೂ ಪೂರ್ಣ ನಂಬಿಕೆಯಿಂದ ಮಾಡಿ. ಆಗ ಮಾತ್ರ ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ.
ನಿಮ್ಮ ಕರ್ಮವನ್ನು ನಂಬಿ ಮುನ್ನಡೆಯಿರಿ
ಫಲವನ್ನು ನಿರೀಕ್ಷಿಸಬೇಡಿ. ನಿಮ್ಮ ಕರ್ಮವನ್ನು ನಂಬಿ ಮುನ್ನಡೆಯಿರಿ. ಇದರ ಹೊರತಾಗಿ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಆಲೋಚನೆಯು ನಿಮ್ಮ ಗುರಿಯನ್ನು ತಲುಪದಂತೆ ನಿಮ್ಮನ್ನು ವಿಚಲಿತಗೊಳಿಸಬಹುದು.
ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವ ಮೊದಲು ಗುಪ್ತ ಭಯವನ್ನು ನಿರ್ಮೂಲನೆ ಮಾಡಬೇಕು. ಅರ್ಜನಿಗೆ ಶ್ರೀಕೃಷ್ಣ ಈ ಮಾತನ್ನು ಹೇಳುವಾಗ, ಓ ಅರ್ಜನಾ ನಿರ್ಭಯವಾಗಿ ಹೋರಾಡು ಎಂದ ಹೇಳುತ್ತಾನೆ. ಯುದ್ಧದಲ್ಲಿ ಸತ್ತರೆ ಸ್ವರ್ಗ, ಗೆದ್ದರೆ ಭೂಮಿಯಲ್ಲಿ ರಾಜ್ಯ ಸಿಗುತ್ತದೆ. ಆದ್ದರಿಂದ ನಿಮ್ಮ ಮನಸ್ಸಿನಲ್ಲಿರುವ ಭಯವನ್ನು ತೊಲಗಿಸಿ ಎಂದು ಉಪದೇಶ ನೀಡುತ್ತಾನೆ.
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.
ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣ ಮಾತು.
ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.
ವಿಭಾಗ