logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಹತೋಟಿಯಲ್ಲಿ ಇಟ್ಟುಕೊಳ್ಳದವನ ಮನಸ್ಸು ಶತ್ರುವಿನಂತೆ ವರ್ತಿಸುತ್ತೆ; ಅರ್ಜುನನಿಗೆ ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ತಿಳಿಯಿರಿ

ಭಗವದ್ಗೀತೆ: ಹತೋಟಿಯಲ್ಲಿ ಇಟ್ಟುಕೊಳ್ಳದವನ ಮನಸ್ಸು ಶತ್ರುವಿನಂತೆ ವರ್ತಿಸುತ್ತೆ; ಅರ್ಜುನನಿಗೆ ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ತಿಳಿಯಿರಿ

Raghavendra M Y HT Kannada

Aug 07, 2023 06:00 AM IST

google News

ಯುದ್ಧ ಆರಂಭಕ್ಕೂ ಮುನ್ನವೇ ಹತಾಶನಾದ ಅರ್ಜುನನಿಗೆ ಶ್ರೀಕೃಷ್ಣ ನೀಡಿರುವ ಧರ್ಮೋಪದೇಶವನ್ನು ಭಗವದ್ಗೀತೆ. ಇವತ್ತಿನ ಗೀತೆಯ ಸಾರಾಂಶ ಇಲ್ಲಿದೆ.

  • ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ. ಹಿಂದೂ ಧರ್ಮದಲ್ಲಿ ಗೀತೆಯ ಪ್ರಾಮುಖ್ಯ ಅನನ್ಯವಾಗಿದೆ. ಮನುಷ್ಯರ ಜೀವನಕ್ಕೆ ಇಂದಿಗೂ ಪ್ರಸ್ತುತವಾಗಿದೆ. ಹತೋಟಿಯಲ್ಲಿ ಇಟ್ಟುಕೊಳ್ಳದವನ ಮನಸ್ಸು ಶತ್ರುವಿನಂತೆ ವರ್ತಿಸುತ್ತೆ ಎಂಬುದರ ಅರ್ಥವನ್ನು ಇವತ್ತು ತಿಳಿಯೋಣ

ಯುದ್ಧ ಆರಂಭಕ್ಕೂ ಮುನ್ನವೇ ಹತಾಶನಾದ ಅರ್ಜುನನಿಗೆ ಶ್ರೀಕೃಷ್ಣ ನೀಡಿರುವ ಧರ್ಮೋಪದೇಶವನ್ನು ಭಗವದ್ಗೀತೆ. ಇವತ್ತಿನ ಗೀತೆಯ ಸಾರಾಂಶ ಇಲ್ಲಿದೆ.
ಯುದ್ಧ ಆರಂಭಕ್ಕೂ ಮುನ್ನವೇ ಹತಾಶನಾದ ಅರ್ಜುನನಿಗೆ ಶ್ರೀಕೃಷ್ಣ ನೀಡಿರುವ ಧರ್ಮೋಪದೇಶವನ್ನು ಭಗವದ್ಗೀತೆ. ಇವತ್ತಿನ ಗೀತೆಯ ಸಾರಾಂಶ ಇಲ್ಲಿದೆ.

ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳದ ವ್ಯಕ್ತಿಯ ಮನಸ್ಸು ಶತ್ರುವಿನಂತೆ ವರ್ತಿಸುತ್ತದೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ಒಬ್ಬರ ವರ್ತಮಾನವನ್ನು ನೋಡುವ ಮೂಲಕ ಅವರ ಭವಿಷ್ಯವನ್ನು ಅಪಹಾಸ್ಯ ಮಾಡಬಾರದು. ಯಾಕೆಂದರೆ ಸಮಯವು ಕಲ್ಲಿದ್ದಲನ್ನು ನಿಧಾನವಾಗಿ ವಜ್ರಗಳನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ದೇವರು ಯಾರ ಭವಿಷ್ಯವನ್ನೂ ಬರೆಯುವುದಿಲ್ಲ ಎಂದು ಗೀತೆ ಹೇಳುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮ ಆಲೋಚನೆಗಳು, ನಮ್ಮ ನಡವಳಿಕೆ ಹಾಗೂ ಕಾರ್ಯಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಶ್ರೀಕೃಷ್ಣನು ಹೀಗೆ ಹೇಳುತ್ತಾನೆ. ನನ್ನ ಭಕ್ತನು ನನ್ನಲ್ಲಿ ನಂಬಿಕೆಯಿಂದ ಮೌನವಾಗಿ ಆಲಿಸಿದರೆ ಅವನ ಮೌನ ಮತ್ತು ನಂಬಿಕೆಗೆ ನಾನೇ ಪ್ರತಿಕ್ರಿಯಿಸುತ್ತೇನೆ ಎಂಬುದಾಗಿ ಹೇಳಿದ್ದಾನೆ.

ಕಾಮ, ಕ್ರೋಧ ಮತ್ತು ಲೋಭ ಇವು ನರಕದ ಮೂರು ದ್ವಾರಗಳು. ಮೂರನ್ನೂ ಸ್ವಯಂ ವಿನಾಶಕಾರಿ ಎಂದು ಪರಿಗಣಿಸಲಾಗುತ್ತದೆ ಎಂದು ಗೀತೆಯಲ್ಲಿ ಹೇಳಲಾಗಿದೆ. ಈ ದೇಹವು ನಿಮ್ಮದಲ್ಲ ಅಥವಾ ನೀವು ಈ ದೇಹಕ್ಕೆ ಸೇರಿದವರಲ್ಲ. ಈ ದೇಹವು ಬೆಂಕಿ, ನೀರು, ಗಾಳಿ, ಭೂಮಿ ಹಾಗೂ ಆಕಾಶದಿಂದ ಮಾಡಲ್ಪಟ್ಟಿದೆ. ಅಂತಿಮವಾಗಿ ಅವುಗಳಲ್ಲಿ ಈ ದೇಹ ವಿಲೀನಗೊಳ್ಳುತ್ತದೆ. ಆದರೆ ಆತ್ಮವು ಅಚಲವಾಗಿದೆ.

ನಂಬಿಕೆ ಹೊಂದಿದ್ದರೆ ಅರ್ಹವಾದ ಎಲ್ಲವನ್ನೂ ಪಡೆಯುತ್ತೀರಿ

ಹಾಗಾದರೆ ನೀವು ಏನು? ದೇವರು ಹೇಳುತ್ತಾನೆ ಓ ಮನುಷ್ಯನೇ ನಿನ್ನನ್ನು ದೇವರಿಗೆ ಒಪ್ಪಿಸು. ಅದು ಅತ್ಯುತ್ತಮವಾದ ಆಧಾರವಾಗಿದೆ. ದೇವರ ಬೆಂಬಲವನ್ನು ತಿಳಿದಿರುವವನು ಭಯ, ಆತಂಕ ಹಾಗೂ ದುಃಖದಿಂದ ಶಾಶ್ವತವಾಗಿ ಮುಕ್ತನಾಗಿರುತ್ತಾನೆ. ಗೀತೆಯ ಪ್ರಕಾರ, ನಿಮ್ಮ ಹಣೆಬರಹವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನೀವು ದೇವರಲ್ಲಿ ನಂಬಿಕೆ ಹೊಂದಿದ್ದರೆ ಅರ್ಹವಾದ ಎಲ್ಲವನ್ನೂ ಪಡೆಯುತ್ತೀರಿ.

ಗೀತೆಯ ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಹತಾಶನಾದ ಅರ್ಜುನನಿಗೆ ಶ್ರೀಕೃಷ್ಣನು ನೀಡಿದ ಉಪದೇಶವಾಗಿದೆ. ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆ ಅನನ್ಯವಾಗಿದೆ. ಮಹಾಭಾರತ ಹಿಂದೂ ಜನರ ಸಂಸ್ಕೃತಿಯ ಪವಿತ್ರ ಗ್ರಂಥವಾಗಿದೆ. ಇದು ಅಧರ್ಮದೊಂದಿಗಿನ ಧರ್ಮದ ಯುದ್ಧವನ್ನು ಆಧರಿಸಿದೆ. ಇದನ್ನು ಐದನೇ ವೇದ ಅಂತಲೂ ಕರೆಯುತ್ತಾರೆ. ಭಗವದ್ಗೀತೆ ಮತ್ತು ವಿದುರ್ ನೀತಿ ಭಗವದ್ಗೀತೆಯ ಎರಡು ಕಂಬಗಳಿದ್ದಂತೆ.

ಅರ್ಜುನ ತನ್ನ ಸ್ವಂತ ಸಂಬಂಧಿಕರ ವಿರುದ್ಧ ಹೋರಾಡುವ ಮೊದಲು ತನ್ನ ಬಿಲ್ಲುಬಾಣವನ್ನು ಕೆಳಗೆ ಇಳಿಸಿ ಮನಸ್ಸಿನಲ್ಲೇ ಹೀಗೆ ಅಂದುಕೊಳ್ಳುತ್ತಾನೆ. ನನ್ನ ಸ್ವಂತ ಬಂಧುಗಳ ವಿರುದ್ಧ ನಾನು ಹೇಗೆ ಯುದ್ಧ ಮಾಡಲಿ ಎಂದು ಯೋಚಿಸುತ್ತಾನೆ. ಆಗ ಅರ್ಜುನನ ಈ ಎಲ್ಲಾ ಪ್ರಶ್ನೆಗಳಿಗೆ ಶ್ರೀಕೃಷ್ಣನು ಗೀತೆಯ ಮೂಲಕ ಉತ್ತರ ನೀಡುತ್ತಾನೆ.

-----------------------------------------------------------------------------------

ಸಂಬಂಧಿತ ಲೇಖನ

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ