ಭಗವದ್ಗೀತೆ: ಮನಸ್ಸಿನ ಬದಲಾವಣೆಯಿಂದ ದುಃಖ ಅಂತ್ಯವಾಗುತ್ತೆ; ಶ್ರೀಕೃಷ್ಣನ ಮಾತಿನ ಅರ್ಥ ಹೀಗಿದೆ
Aug 23, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ನಿನ್ನ ಮನಸ್ಸನ್ನು ಬದಲಾಯಿಸಿಕೊಂಡಾಗ ದುಃಖ ಅಂತ್ಯವಾಗುತ್ತದೆ ಎಂಬ ಶ್ರೀಕೃಷ್ಣನ ಮಾತಿನ ಅರ್ಥವನ್ನು ತಿಳಿಯೋಣ.
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು (Lord Krishna) ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ (Arjuna) ಉಪದೇಶ ನೀಡುತ್ತಾನೆ.
ತಾಜಾ ಫೋಟೊಗಳು
ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.
ಭಗವದ್ಗೀತೆಯಲ್ಲಿ (Bhagavadgita) 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.
ನಾವು ನಮ್ಮ ಜೀವನವನ್ನು ಹೇಗೆ ಕಳೆಯಬೇಕು, ನಮ್ಮ ಜೀವನದಲ್ಲಿ ಯಾವ ಮೌಲ್ಯಗಳನ್ನು ಹೊಂದಿರಬೇಕು ಎಂಬುದನ್ನು ಭಗವದ್ಗೀತೆ ನಮಗೆ ಕಲಿಸುತ್ತದೆ. ಇವತ್ತಿನ ಈ ಲೇಖನದಲ್ಲಿ ಶ್ರೀಕೃಷ್ಣನ ಬೋಧನೆಯ ಕೆಲವು ಭಾಗವನ್ನು ತಿಳಿದುಕೊಳ್ಳೋಣ.
ಮನಸ್ಸಿನ ಪರಿವರ್ತನೆಯು ಎಲ್ಲಾ ದುಃಖಗಳಿಗೆ ಅಂತ್ಯ
ಮನುಷ್ಯನ ಮನಸ್ಸಿನ ಪರಿವರ್ತನೆಯು ಎಲ್ಲಾ ದುಃಖಗಳಿಗೆ ಅಂತ್ಯ ಎಂದು ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಹೇಡಿಗಳು ಮತ್ತು ದುರ್ಬಲದವರು ಮಾತ್ರ ದುಃಖವನ್ನು ವಿಧಿಗೆ ಬಿಡುತ್ತಾರೆ ಎಂದು ಗೀತೆಯಲ್ಲಿ ಬರೆಯಲಾಗಿದೆ. ಬಲವಾದ ಮತ್ತು ಆತ್ಮವಿಶ್ವಾಸ ಇರುವವರು ಎಂದಿಗೂ ವಿಧಿಯ ಮೇಲೆ ಅವಲಂಬಿತರಾಗುವುದಿಲ್ಲ.
ಬಿಕ್ಕಟಿನ ಸಂದರ್ಭದಲ್ಲಿ ಯಾರಾದರೂ ನಿಮ್ಮಿಂದ ಸಲಹೆಯನ್ನು ಕೇಳಿದರೆ, ಸಲಹೆಯ ಜೊತೆಗೆ ನಿಮ್ಮ ಬೆಂಬಲವನ್ನೂ ನೀಡಿ ಎಂದು ಶ್ರೀಕೃಷ್ಣ ಹೇಳುತ್ತಾನೆ. ಏಕೆಂದರೆ ಸಲಹೆ ತಪ್ಪಾಗಿರಬಹುದು. ಆದರೆ ನಿಮ್ಮ ಬೆಂಬಲ ತಪ್ಪಾಗಿರುವುದಿಲ್ಲ.
ನಿಮ್ಮ ದುಃಖಗಳಿಗೆ ಜಗತ್ತನ್ನು ದೂಷಿಸಬೇಡಿ
ನಿಮ್ಮ ದುಃಖಗಳಿಗೆ ಜಗತ್ತನ್ನು ದೂಷಿಸಬೇಡಿ. ಮನಸ್ಸನ್ನು ಸ್ಪಷ್ಟಪಡಿಸಿಕೊಳ್ಳಿ. ಏಕೆಂದರೆ ಮನಸ್ಸಿನ ಪರಿವರ್ತನೆಯು ಎಲ್ಲಾ ದುಃಖಗಳ ಅಂತ್ಯವಾಗಿದೆ. ಆಸೆಗಳು, ನಿರೀಕ್ಷೆಗಳು ಹೆಚ್ಚಾದಾಗ ದುಃಖವು ಹೆಚ್ಚಾಗುತ್ತದೆ.
ನಶ್ವರ ದೇಹದ ಬಗ್ಗೆ ಹೆಮ್ಮೆ ಪಡಬೇಡಿ
ಮನುಷ್ಯನ ದೇಹವು ನಶ್ವರವಾಗಿದೆ. ಆದರೆ ಆತ್ಮವು ಅಮರವಾಗಿದೆ ಎಂದು ಶ್ರೀಕೃಷ್ಣ ಹೇಳುತ್ತಾನೆ. ಈ ಸತ್ಯವನ್ನು ಅರಿತುಕೊಂಡ ನಂತರವೂ ಮನುಷ್ಯನು ನಿಷ್ಪ್ರಯೋಜಕವಾದ ತನ್ನ ನಶ್ವರ ದೇಹದ ಬಗ್ಗೆ ಹೆಮ್ಮೆ ಪಡುತ್ತಾನೆ. ಮನುಷ್ಯನು ತನ್ನ ದೇಹದ ಬಗ್ಗೆ ಹೆಮ್ಮೆಪಡದೆ ಸತ್ಯವನ್ನು ಒಪ್ಪಿಕೊಳ್ಳಬೇಕು. ನೀನು ನಿನ್ನನ್ನು ದೇವರಿಗೆ ಒಪ್ಪಿಸಬೇಕು. ಅದು ಅತ್ಯುತ್ತಮ ಹಾಗೂ ಸತ್ಯದ ಮಾರ್ಗವಾಗಿದೆ. ದೇವರ ಬೆಂಬಲವನ್ನು ತಿಳಿದಿರುವವನು ಯಾವಾಗಲೂ ಭಯ, ಆತಂಕ ಮತ್ತು ದುಃಖದಿಂದ ಮುಕ್ತನಾಗಿರುತ್ತಾನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ.
ವಿಭಾಗ