ಭಗವದ್ಗೀತೆ: ತಪ್ಪು ಮಾಡಿದ ಮನುಷ್ಯನಿಗೆ ಆಗುವ ಶಿಕ್ಷೆಯನ್ನು ಯಾರೂ ಪ್ರಶ್ನಿಸುವಂತಿಲ್ಲ; ಗೀತೆಯಲ್ಲಿನ ಸಾರಾಂಶವನ್ನು ತಿಳಿಯಿರಿ
Oct 27, 2023 06:28 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ತಪ್ಪು ಮಾಡಿದ ಮನುಷ್ಯನಿಗೆ ಆಗುವ ಶಿಕ್ಷೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬ ಗೀತೆಯಲ್ಲಿನ ಅರ್ಥ ಹೀಗಿದೆ.
ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ |
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹನ್ತಿ ಕಮ್ ||21||
ಹೇ ಪಾರ್ಥ, ಆತ್ಮವು ಅವಿನಾಶಿ; ನಿತ್ಯ. ಅದಕ್ಕೆ ಹುಟ್ಟಿಲ್ಲ, ಕ್ಷಯವಿಲ್ಲ ಎಂದು ತಿಳಿದವನು ಹೇಗೆ ಯಾರನ್ನಾದರೂ ಕೊಲ್ಲುವನು ಅಥವಾ ಕೊಲ್ಲಿಸುವನು?
ತಾಜಾ ಫೋಟೊಗಳು
ಪ್ರತಿಯೊಂದು ವಸ್ತುವಿನಗೂ ಅದರದೇ ಪ್ರಯೋಜನವಿದೆ. ಪರಿಪೂರ್ಣ ವಿದ್ಯೆಯ ನೆಲೆ ಇರುವವನಿಗೆ ಒಂದು ವಸ್ತುವನ್ನು ಸರಿಯಾದ ಪ್ರಯೋಜನವನ್ನು ಪಡೆದುಕೊಳ್ಳಲು ಹೇಗೆ ಮತ್ತು ಎಲ್ಲಿ ಅದನ್ನು ಉಪಯೋಗಿಸಬೇಕು ಎನ್ನುವುದು ತಿಳಿದಿರುತ್ತದೆ. ಇದೇ ರೀತಿ ಹಿಂಸೆಗೂ ಅದರ ಪ್ರಯೋಜನವಿದೆ. ಹಿಂಸೆಯನ್ನು ಹೇಗೆ ಬಳಸಬೇಕು ಎನ್ನುವುದು ತಿಳುವಳಿಕೆಯುಳ್ಳ ಮನುಷ್ಯನನ್ನು ಅವಲಂಬಿಸಿದೆ.
ಕೊಲೆಮಾಡಿದವನೆಂದು ಶಿಕ್ಷೆಗೆ ಗುರಿಯಾಗಬೇಕಾದವನಿಗೆ ನ್ಯಾಯಧೀಶನು ಮರಣದಂಡನೆಯನ್ನು ವಿಧಿಸುತ್ತಾನೆ. ಆದರೆ ನ್ಯಾಯಾಧೀಶನನ್ನು ಆಕ್ಷೇಪಿಸುವಂತಿಲ್ಲ. ಏಕೆಂದರೆ ಅವನು ನ್ಯಾಯಸಂಹಿತೆಗೆ ಅನುಗುಣವಾಗಿ ಮತ್ತೊಬ್ಬನ ಮೇಲೆ ಹಿಂಸೆಯನ್ನು ಪ್ರಯೋಗಿಸುತ್ತಾನೆ. ಕೊಲೆಮಾಡಿದವನು ತಾನು ಮಾಡಿದ ಹೇಯ ಪಾಪಕ್ಕಾಗಿ ಮುಂದಿನ ಜನ್ಮದಲ್ಲಿ ಕಷ್ಠಪಡದಂತೆ ಅವನಿಗೆ ಮರಣದಂಡನೆಯನ್ನು ಕೊಡಬೇಕೆಂದು ಮನುಸಂಹಿತೆಯಲ್ಲಿ ಸಮರ್ಥಿಸಿದೆ. ಆದ್ದರಿಂದ ರಾಜನು ಕೊಲೆಗಡುಕನನ್ನು ನೇಣುಹಾಕಬೇಕೆಂದು ವಿಧಿಸಿದಾಗ ಅವನಿಗೆ ಉಪಕಾರವನ್ನೇ ರಾಜನು ಕೊಲೆಗಡುಕನನ್ನು ನೇಣುಹಾಕಬೇಕೆಂದು ವಿಧಿಸಿದಾಗ ಅವನಿಗೆ ಉಪಕಾರವನ್ನೇ ಮಾಡುತ್ತಿದ್ದಾನೆ.
ಹಾಗೆಯೇ ಕೃಷ್ಣನು ಯುದ್ಧಮಾಡು ಎಂದು ಅಜ್ಞಾಪಿಸಿದಾಗ ಈ ಹಿಂಸೆಯು ಪರಮ ನ್ಯಾಯಕ್ಕೋಸ್ಕೋರ ಎಂದು ಭಾವಿಸಬೇಕು. ಕೃಷ್ಣನಿಗಾಗಿ ಯುದ್ಧಮಾಡುವಾಗ ಆಗುವ ಹಿಂಸೆಯು ನಿಜವಾಗಿ ಹಿಂಸೆಯೇ ಅಲ್ಲ. ಏಕೆಂದರೆ ಒಬ್ಬ ಮನುಷ್ಯನನ್ನು ಅಥವಾ ಅವನ ಆತ್ಮವನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ಆದುದರಿಂದ ನ್ಯಾಯದ ನಿರ್ವಹಣೆಗಾಗಿ ಹೊರತೋರಿಕೆಯ ಹಿಂಸೆಗೆ ಅವಕಾಶವುಂಟು. ಅರ್ಜುನನು ಇದನ್ನು ಅರ್ಥಮಾಡಿಕೊಂಡು ಕೃಷ್ಣನ ಆದೇಶವನ್ನು ಪಾಲಿಸಬೇಕು. ಶಸ್ತ್ರಚಿಕಿತ್ಸೆಯ ಉದ್ದೇಶ ರೋಗಿಯನ್ನು ಕೊಲ್ಲುವುದು. ಅವನನ್ನು ಗುಣ ಪಡಿಸುವುದು. ಕೃಷ್ಣನ ಆದೇಶದಂತೆ ಅರ್ಜುನನು ಮಾಡುವ ಯುದ್ಧಕ್ಕೆ ಸಂಪೂರ್ಣ ತಿಳುವಳಿಕೆಯ ಆಧಾರವಿದೆ. ಆದ್ದರಿಂದ ಪಾಪಕರ್ಮದ ಫಲದ ಸಾಧ್ಯತೆಯೇ ಇಲ್ಲ.
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ |
ನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯ
ನ್ಯಾನಿ ಸಂಯಾತಿ ನವಾನಿ ದೇಹಿ ||22||
ಒಬ್ಬ ಮನುಷ್ಯನು ಹೇಗೆ ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವನೋ ಹಾಗೆಯೇ ಆತ್ಮವು ಜೀರ್ಣವಾದ ದೇಹವನ್ನು ಬಿಟ್ಟು ಹೊಸ ದೇಹವನ್ನು ಸ್ವೀಕರಿಸುತ್ತದೆ.
ಜೀವಾತ್ಮನು ದೇಹವನ್ನು ಬದಲಾಯಿಸುವನೆಂಬುದು ಎಲ್ಲರೂ ಒಪ್ಪಿರುವ ವಾಸ್ತವಾಂಶ. ಆಧುನಿಕ ವಿಜ್ಞಾನಿಗಳು ಆತ್ಮದ ಅಸ್ತಿತ್ವವನ್ನು ನಂಬುವುದಿಲ್ಲ. ಆದರೆ ಹೃದಯದಿಂದ ಬರುವ ಚೈತನ್ಯದ ಮೂಲವನ್ನು ವಿವರಿಸಲಾರರು. ಇವರು ಸಹ, ಶೈಶವದಿಂದ ಬಾಲ್ಯಕ್ಕೆ, ಮೌವನಕ್ಕೆ, ಮತ್ತೆ ಯೌವನದಿಂದ ವೃದ್ಧಾಪ್ಯಕ್ಕೆ ದೇಹದಲ್ಲಿ ಒಂದೇ ಸಮನೆ ಆಗುವ ಬದಲಾವಣೆಗಳನ್ನು ಒಪ್ಪಬೇಕಾಗುತ್ತದೆ. ಮುಪ್ಪಿನಲ್ಲಿ ಬದಲವಾಣೆಯು ಮತ್ತೊಂದು ದೇಹಕ್ಕೆ ಆಗುತ್ತದೆ.
ಜೀವಾತ್ಮವು ಇನ್ನೊಂದು ದೇಹವನ್ನು ಪ್ರವೇಶಿಸುವುದು ಸಾಧ್ಯವಾಗುವುದು ಪರಮಾತ್ಮನ ಕೃಪೆಯಿಂದ. ಸ್ನೇಹಿತನು ತನ್ನ ಸ್ನೇಹಿತನ ಆಸೆಯನ್ನು ನಡೆಸಿಕೊಡುವಂತೆ ಪರಮಾತ್ಮನು ಜೀವಾತ್ಮದ ಆಸೆಯನ್ನು ನಡೆಸಿಕೊಡುತ್ತಾನೆ. ಮುಂಡಕ ಉಪನಿಷತ್ತು ಮತ್ತು ಶ್ವೇತಾಶ್ವತರ ಉಪನಿಷತ್ತುಗಳಂತೆ ವೇದಗಳೂ ಆತ್ಮವನ್ನು ಮತ್ತು ಪರಮಾತ್ಮವನ್ನು ಒಂದೇ ವೃಕ್ಷದ ಮೇಲೆ ಕುಳಿತಿರುವ ಎರಡು ಗೆಳೆಯ ಪಕ್ಷಿಗಳಿಗೆ ಹೋಲಿಸುತ್ತವೆ. ಒಂದು ಪಕ್ಷಿಯು (ಜೀವಾತ್ಮ) ವೃಕ್ಷದ ಹಣನ್ನು ತಿನ್ನುತ್ತಿದೆ. ಇನ್ನೊಂದು ಪಕ್ಷಿಯು (ಕೃಷ್ಣ) ತನ್ನ ಸ್ನೇಹಿತನನ್ನು ನೋಡುತ್ತಿದೆ.
ಎರಡು ಪಕ್ಷಿಗಳೂ ಗುಣದಲ್ಲಿ ಒಂದೇ. ಆದರೆ ಒಂದು ಪ್ರಾಪಂಚಿಕ ವೃಕ್ಷದ ಹಣ್ಣುಗಳಿಗಾಗಿ ಆಸೆಪಟ್ಟಿದೆ. ಮತ್ತೊಂದು ತನ್ನ ಸ್ನೇಹಿತನು ಮಾಡುವುದನ್ನು ನೋಡುತ್ತ ಸುಮ್ಮನಿದೆ. ಕೃಷ್ಣನು ವೀಕ್ಷಿಸುವ ಪಕ್ಷಿ, ಅರ್ಜುನನು ತಿನ್ನುವ ಪಕ್ಷಿ. ಅವರು ಸ್ನೇಹಿತರಾದರೂ ಒಂದು ಪ್ರಭು. ಇನ್ನೊಂದು ಸೇವ. ಜೀವಾತ್ಮವು ಈ ಸಂಬಂಧವನ್ನು ಮರೆತಿರುವುದೇ ಒಂದು ಮರದ ಮೇಲಿನಿಂದ ಇನ್ನೊಂದು ಮರಕ್ಕೆ ಅಥವಾ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಬದಲಾವಣೆ ಮಾಡುವುದಕ್ಕೆ ಕಾರಣ. ಐಹಿಕ ದೇಹವೆನ್ನುವ ಮರದ ಮೇಲೆ ಜೀವಾತ್ಮವು ಬಹು ಕಷ್ಟಪಡುತ್ತದೆ. ಆದರೆ - ಸ್ವಇಚ್ಛೆಯಿಂದ ಕೃಷ್ಣನಿಗೆ ಶರಣಾಗತನಾಗಿ ಅರ್ಜುನನು ಮಾರ್ಗದರ್ಶನವನ್ನು ಒಪ್ಪಿಕೊಂಡಂತೆ - ಅದು ಇನ್ನೊಂದು ಪಕ್ಷಿಯನ್ನು ಪರಗುರು ಎಂದು ಒಪ್ಪಿಕೊಳ್ಳುತ್ತಲೇ ಅಧೀನ ಪಕ್ಷಿಯು ಎಲ್ಲ ದುಃಖದಿಂದ ಮುಕ್ತವಾಗುತ್ತದೆ.