ಭಗವದ್ಗೀತೆ: ಹೃದಯದ ಸತ್ಯ ಮತ್ತು ಒಳ್ಳೆಯತನ ಎಂದಿಗೂ ವ್ಯರ್ಥವಾಗುವುದಿಲ್ಲ; ಶ್ರೀಕೃಷ್ಣನ ಮಾತಿನಲ್ಲಿ ಹತ್ತಾರು ಅರ್ಥ
Aug 03, 2023 06:34 AM IST
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿ ಲಭ್ಯ ಇರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸುರಿಸುವುದು ಗೀತೆಯ ಅರ್ಥವಾಗಿದೆ.
Bhagavad Gita Updesh: ಮಹಾಭಾರತದಲ್ಲಿ ಅರ್ಜುನ ತನ್ನ ಸ್ವಂತ ಸಂಬಂಧಿಕರ ವಿರುದ್ಧ ಹೋರಾಡಬೇಕು ಅಂತ ಹತಾಶನಾಗುತ್ತಾನೆ. ನನ್ನ ಸ್ವಂತ ಬಂಧುಗಳ ವಿರುದ್ಧ ನಾನು ಹೇಗೆ ಯುದ್ಧ ಮಾಡಲಿ ಎಂದು ಯೋಚಿಸುತ್ತಾನೆ. ಅರ್ಜುನನ ಎಲ್ಲಾ ಪ್ರಶ್ನೆಗಳಿಗೆ ಶ್ರೀಕೃಷ್ಣ (Lord Krishna) ಭಗವದ್ಗೀತೆಯ (Bhagavadgita) ಮೂಲಕ ಉತ್ತರ ನೀಡುತ್ತಾನೆ.
ತಾಜಾ ಫೋಟೊಗಳು
ಧರ್ಮೋಪದೇಶದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಹೀಗೆ ಹೇಳುತ್ತಾನೆ. ಶಾಂತಿ, ಸೌಮ್ಯತೆ, ಮೌನ, ಸ್ವಯಂ ನಿಯಂತ್ರಣ ಮತ್ತು ಶುದ್ಧತೆ ಈ ಐದು ವಿಷಯಗಳು ಮನಸ್ಸನ್ನು ಶಿಸ್ತುಗೊಳಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ಈ ಎಲ್ಲಾ ಗುಣಗಳನ್ನು ಹೊಂದಿರಬೇಕು. ಆಗ ಮಾತ್ರ ಅವನು ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯ.
ಭಗವದ್ಗೀತೆಯಲ್ಲಿ ಹೇಳುವಂತೆ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆದರೆ ನಮ್ಮಲ್ಲಿರುವ ಈ ಪ್ರತಿಭೆಯನ್ನು ಅರಿತುಕೊಳ್ಳುವ ಬದಲು ಜನರು ಇತರರಂತೆ ಅದನ್ನು ನಾಶಪಡಿಸುತ್ತಾರೆ.
ಶ್ರೀಕೃಷ್ಣ ಹೇಳುತ್ತಾನೆ ಎಂದಿಗೂ ಯಾರು ಕೂಡ ಕ್ಲೇಶಗಳನ್ನು ನೋಡಿಲ್ಲ. ಅವರ ಶಕ್ತಿ ಎಂದಿಗೂ ತಿಳಿದಿರುವುದಿಲ್ಲ. ಹೃದಯ ಸತ್ಯ ಮತ್ತು ಒಳ್ಳೆಯನ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಗೀತೆಯಲ್ಲಿ ಹೇಳಲಾಗಿದೆ. ನೀವು ಏನು ಮಾಡಿದರೂ ಅದನ್ನು ದೇವರಿಗೆ ಅರ್ಪಿಸಿ ಎಂದು ಕೃಷ್ಣ ಹೇಳುತ್ತಾನೆ. ಹೀಗೆ ಮಾಡುವುದರಿಂದ ಮುಕ್ತ ಜೀವನದ ಆನಂದವನ್ನು ಸದಾ ಅನುಭವಿಸಬಹುದು.
ಹತಾಶನಾದ ಅರ್ಜುನನಿಗೆ ತನ್ನ ಕರ್ತವ್ಯವನ್ನು ನೆನಪಿಸಿ ಸತ್ಯದ ಮಾರ್ಗವನ್ನು ಅನುಸರಿಸುವುದು ಭಗವದ್ಗೀತೆಯ ಅರ್ಥವಾಗಿದೆ. ಈ ಪರಿಕಲ್ಪನೆ ಇಂದಿಯೂ ಉಪಯುಕ್ತವಾಗಿದೆ.
ಮಹಾಭಾರತ ಹಿಂದುಗಳಿಗೆ ಸಂಸ್ಕೃತಿಯ ಪವಿತ್ರ ಗ್ರಂತವಾಗಿದೆ. ಇದು ಅಧರ್ಮದೊಂದಿಗಿನ ಧರ್ಮದ ಯುದ್ಧವನ್ನು ಆಧರಿಸಿದೆ. ಇದನ್ನು ಐದನೇ ವೇದ ಅಂತಲೂ ಕರೆಯುತ್ತಾರೆ.
ಮಹಾಭಾರತದ ಶ್ರೀಮದ್ ಭಗವದ್ಗೀತೆ ಮತ್ತು ವಿದುರ್ ನೀತಿ ಎರಡು ಕೂಡ ಮಹಾಭಾರದ ಆಧಾರಸ್ತಂಭಗಳು ಇದ್ದಂತೆ. ಒಂದರಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಅನ್ಯಾಯದ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಾನೆ.
ನಮ್ಮ ಭವಿಷ್ಯವು ನಮ್ಮ ಹಿಂದಿನ ಕರ್ಮದ ಫಲಿತಾಂಶವಾಗಿದೆ. ಇಂದು ನಾವು ಮಾಡುವ ಕ್ರಿಯೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಅದಕ್ಕಾಗಿಯೇ ನಾವು ಯಾವಾಗಲೂ ನಮ್ಮ ಕರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.
-----------------------------------------------------------------------------------
ಸಂಬಂಧಿತ ಲೇಖನ
ವಿಭಾಗ