logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಿಶುದ್ಧವಾದ ಮನಸ್ಸಿನಿಂದ ಭಗವಂತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಪರಿಶುದ್ಧವಾದ ಮನಸ್ಸಿನಿಂದ ಭಗವಂತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತೆ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Aug 03, 2024 05:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಪರಿಶುದ್ಧವಾದ ಮನಸ್ಸಿನಿಂದ ಭಗವಂತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 11ನೇ ಶ್ಲೋಕದಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 11

ಅಥೈತದಪ್ಯಶಕ್ತೋಸಿ ಕರ್ತುಂ ಮದ್ಯೋಗಮಾಶ್ರಿತಃ |

ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ ||11||

ಅನುವಾದ: ನನ್ನ ಪ್ರಜ್ಞೆಯಲ್ಲಿ ಕೆಲಸ ಮಾಡಲು ನಿನಗೆ ಸಾಧ್ಯವಿಲ್ಲದಿದ್ರೆ ನಿನ್ನ ಎಲ್ಲ ಕರ್ಮಫಲವನ್ನು ತ್ಯಾಗಮಾಡಿ ಆತ್ಮಸ್ಥಿತನಾಗಿರಲು ಪ್ರಯತ್ನಿಸು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಸಾಮಾಜಿಕ, ಕೌಟುಂಬಿಕ ಅಥವಾ ಧಾರ್ಮಿಕ ಕಾರಣಗಳಿಂದಾಗಿ ಅಥವಾ ಬೇರೆ ಅಡ್ಡಿಗಳಿಂದಾಗಿ ಮನುಷ್ಯನಿಗೆ ಕೃಷ್ಣಪ್ರಜ್ಞೆಯ ಚಟುವಟಿಕೆಗಳಲ್ಲಿ ಸಹಾನುಭೂತಿಯನ್ನು ತೋರುವುದಕ್ಕೂ ಸಾಧ್ಯವಾಗದೆ ಹೋಗಬಹುದು. ಕೃಷ್ಣಪ್ರಜ್ಞೆಯ ಕೆಲಸಕಾರ್ಯಗಳಲ್ಲಿ ನೇರವಾಗಿ ಆಸಕ್ತಿಯನ್ನು ತೋರಿದರೆ ಕುಟುಂಬದವರು ಆಕ್ಷೇಪಿಸಬಹುದು ಅಥವಾ ಬೇರೆ ಎಷ್ಟೋ ತೊಂದರೆಗಳಿರಬಹುದು. ಇಂತಹ ಸಮಸ್ಯೆ ಇರುವವನಿಗೆ, ತನ್ನ ಚಟುವಟಿಕೆಗಳಿಂದ ಸಂಗ್ರಹವಾದ ಫಲವನ್ನು ಒಂದು ಒಳ್ಳೆಯ ಕಾರ್ಯಕ್ಕಾಗಿ ತ್ಯಾಗಮಾಡಬೇಕೆಂದು ಬುದ್ಧಿವಾದ ಹೇಳಿದೆ (Bhagavad Gita Updesh in Kannada).

ಇಂತಹ ವಿಧಿಯನ್ನು ವೇದಗಳ ನಿಯಮಗಳಲ್ಲಿ ವರ್ಣಿಸಿದೆ. ಯಜ್ಞಗಳಲ್ಲಿ ಅಥವಾ ವಿಶೇಷ ಪುಣ್ಯಕಾರ್ಯಗಳಲ್ಲಿ ಒಬ್ಬನ ಹಿಂದಿನ ಕರ್ಮದ ಫಲವನ್ನು ಹೇಗೆ ಉಪಯೋಗಿಸಬಹುದು ಎನ್ನುವುದಕ್ಕೆ ವೈದಿಕ ಶಾಸ್ತ್ರಗಳಲ್ಲಿ ಅನೇಕ ವರ್ಣನೆಗಳಿವೆ. ಹೀಗೆ ಮನುಷ್ಯನು ಕ್ರಮೇಣ ಜ್ಞಾನದ ಸ್ಥಿತಿಗೆ ಏರಬಹುದು. ಕೃಷ್ಣಪ್ರಜ್ಞೆಯ ಕೆಲಸಕಾರ್ಯಗಳಲ್ಲಿ ಆಸಕ್ತಿ ಇಲ್ಲದವನು ಒಂದು ಆಸ್ಪತ್ರೆಗಾಗಿ ಅಥವಾ ಬೇರೆಯಾವುದಾದರೂ ಸಾಮಾಜಿಕ ಸಂಸ್ಥೆಗೆ ದಾನಮಾಡುತ್ತಾನೆ ಎಂಬುದನ್ನು ಕಾಣುತ್ತೇವೆ. ಹೀಗೆ ಮಾಡುವುದರಿಂದ ಅವನು ತನ್ನ ಅತೀವ ಶ್ರಮದ ಫಲಗಳನ್ನು ತ್ಯಾಗಮಾಡುತ್ತಾನೆ. ಅದನ್ನು ಇಲ್ಲಿ ಸಮರ್ಥಿಸಿ ಸಲಹೆಮಾಡಿದೆ. ಏಕೆಂದರೆ ಕರ್ಮಫಲವನ್ನು ತ್ಯಾಗಮಾಡಲು ಅಭ್ಯಾಸ ಮಾಡಿದವನು ಕ್ರಮೇಣ ತನ್ನ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಲು ಸಮರ್ಥನಾಗುತ್ತಾನೆ.

ಆ ಪರಿಶುದ್ಧವಾದ ಮನಸ್ಸಿನ ಸ್ಥಿತಿಯಲ್ಲಿ ಕೃಷ್ಣಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ನಿಜ, ಕೃಷ್ಣಪ್ರಜ್ಞೆಯು ಬೇರಾವ ಅನುಭವವನ್ನೂ ಅವಲಂಬಿಸಿಲ್ಲ. ಏಕೆಂದರೆ ಕೃಷ್ಣಪ್ರಜ್ಞೆಯೇ ಮನುಷ್ಯನ ಮನಸ್ಸನ್ನು ಪರಿಶುದ್ಧಗೊಳಿಸಬಲ್ಲದು. ಆದರೆ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಲು ಬೇರೆ ಅಡ್ಡಿಗಳಿದ್ದಲ್ಲಿ ಮನುಷ್ಯನು ತನ್ನ ಕರ್ಮಗಳ ಫಲವನ್ನು ತ್ಯಾಗಮಾಡಲು ಪ್ರಯತ್ನಿಸಬಹುದು. ಈ ಕಾರಣಕ್ಕಾಗಿ ಸಾಮಾಜಿಕ ಸೇವೆ, ಸಮುದಾಯ ಸೇವೆ, ರಾಷ್ಟ್ರಸೇವೆ, ದೇಶಕ್ಕಾಗಿ ತ್ಯಾಗ ಮೊದಲಾದುವನ್ನು ಒಪ್ಪಿಕೊಳ್ಳಬಹುದು. ಇದರಿಂದ ಮನುಷ್ಯನು ಎಂದಾದರೂ ಒಂದು ದಿನ ಪರಮ ಪ್ರಭುವಿನ ಪರಿಶುದ್ಧ ಭಕ್ತಿಸೇವೆಯ ಘಟ್ಟಕ್ಕೆ ಬರಬಹುದು.

ಭಗವದ್ಗೀತೆಯಲ್ಲಿ (18.46) ಯಥಾ ಪ್ರವೃತ್ತಿರ್ ಭೂತಾನಾಮ್ ಎಂದು ಹೇಳಿದೆ - ಎಂದರೆ ಪರಮ ಆದರ್ಶವು ಕೃಷ್ಣನೇ ಎಂದು ತಿಳಿಯದಿದ್ದರೂ ಪರಮ ಆದರ್ಶನಕ್ಕಾಗಿ ತ್ಯಾಗ ಮಾಡಲು ಮನುಷ್ಯನು ನಿರ್ಧರಿಸಿದ್ದರೆ, ಅವನು ಕೃಷ್ಣನೇ ಪರಮ ಆದರ್ಶ ಎನ್ನುವುದನ್ನು ತ್ಯಾಗಮಾರ್ಗದಿಂದ ಕ್ರಮೇಣ ತಿಳಿದುಕೊಳ್ಳುತ್ತಾನೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ