logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಹುಟ್ಟು, ಸಾವು, ರೋಗ, ಮುಪ್ಪು ಈ 4 ಘಟ್ಟಗಳಿಂದ ಯಾರೊಬ್ಬರು ಹೊರತಾಗಿಲ್ಲ; ಗೀತೆಯಲ್ಲಿನ ಅರ್ಥ ಹೀಗಿದೆ

ಭಗವದ್ಗೀತೆ: ಹುಟ್ಟು, ಸಾವು, ರೋಗ, ಮುಪ್ಪು ಈ 4 ಘಟ್ಟಗಳಿಂದ ಯಾರೊಬ್ಬರು ಹೊರತಾಗಿಲ್ಲ; ಗೀತೆಯಲ್ಲಿನ ಅರ್ಥ ಹೀಗಿದೆ

Raghavendra M Y HT Kannada

Sep 20, 2023 06:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಭಗವದ್ಗೀತೆಯಲ್ಲಿ (BhagavadGita) ಹೀಗೆ ಹೇಳಲಾಗಿದೆ. ಆಧ್ಯಾತ್ಮಿಕ ಗಗನದ ಪ್ರಜ್ವಲಿಸುವ ಕಿರಣಗಳಲ್ಲಿ ಅಸಂಖ್ಯಾತ ಗ್ರಹಗಳು ತೇಲುತ್ತಿರುತ್ತವೆ. ಬ್ರಹ್ಮಜ್ಯೋತಿಯು ಪರಮ ನಿವಾಸವಾದ ಕೃಷ್ಣ ಲೋಕದಿಂದ ಹೊರಸೂಸುತ್ತದೆ. ಜಡವಸ್ತುವಿನಿಂದ ಮಾಡಲ್ಪಟ್ಟಿರುವ ಆನಂದಮಯ ಮತ್ತು ಚಿನ್ಮಯ ಗ್ರಹಗಳು ಈ ಕಿರಣಗಳಲ್ಲಿ ತೇಲುತ್ತವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಗವಂತನು, ನ ತದ್ಭಾಸಯತೇ ಸೂರ್ಯೋ ನ ಶಾಶಾನ್ಕೋ ನ ಪಾವಕಃ/ಯದ್ಗತ್ವಾ ನ ನಿವರ್ತನ್ತೇ ತದ್ಧಾಮ ಪರಮಂ ಮಮ ಎಂದು ಹೇಳುತ್ತಾನೆ. ಆ ಅಧ್ಯಾತ್ಮಿಕ ಗಗನವನ್ನು ಸೇರಬಲ್ಲ ಯಾರೂ ಮತ್ತೆ ಐಹಿಕ ಆಕಾಶಕ್ಕೆ ಗ್ರಹವಾದ ಬ್ರಹ್ಮಲೋಕವನ್ನೇ ತಲುಪಿದರೂ ಹುಟ್ಟು, ಸಾವು, ರೋಗ, ಮುಪ್ಪು, ಬದುಕಿನ ಇದೇ ಸ್ಥಿತಿಗಳನ್ನು ಕಾಣುತ್ತೇವೆ. ಐಹಿಕ ಅಸ್ತಿತ್ವದ ಈ ನಾಲ್ಕು ತತ್ವಗಳಿಂದ ಐಹಿಕ ವಿಶ್ವದ ಯಾವ ಗ್ರಹವೂ ಹೊರತಾಗಿಲ್ಲ.

ಬೇರೆ ಗ್ರಹಗಳಿಗೆ ಹೋಗಲು ಅಪೇಕ್ಷಿಸಿದಿರೆ ಅದಕ್ಕೊಂದು ಕ್ರಮವಿದೆ

ಜೀವಿಗಳು ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಸಾಗುತ್ತಿರುತ್ತಾರೆ. ಆದರೆ ಯಾಂತ್ರಿಕ ಏರ್ಪಾಟಿನಿಂದ ಇಷ್ಟಬಂದ ಗ್ರಹಕ್ಕೆ ನಾವು ಹೋಗಬಹುದು ಎಂದೇನೂ ಅಲ್ಲ. ನಾವು ಬೇರೆ ಗ್ರಹಗಳಿಗೆ ಹೋಗಲು ಅಪೇಕ್ಷಿಸಿದಿರೆ ಅದಕ್ಕೊಂದು ಕ್ರಮವಿದೆ. ಇದನ್ನು ಹೀಗೆ ಹೇಳಿದರೆ ಯಾನ್ತಿ ದೇವವ್ರತಾ ದೇವಾನ್ ಪಿತೃನ್ ಯಾನ್ತಿ ಪಿತೃವ್ರತಾಃ. ನಾವು ಅಂತರ್‌ಗ್ರಹ ಪ್ರಯಾಣ ಮಾಡಲು ಯಾವುದೇ ಯಂತ್ರಗಳ ವ್ಯವಸ್ಥೆಯ ಅಗತ್ಯವಿಲ್ಲ.

ಗೀತೆಯು ಉಪದೇಶಿಸುತ್ತದೆ. ಯಾನ್ತಿ ದೇವವ್ರತಾ ದೇವಾನ್. ಸೂರ್ಯ, ಚಂದ್ರ ಮತ್ತು ಉನ್ನತ ಗ್ರಹಗಳಿಗೆ ಸ್ವರ್ಗಲೋಕಗಳು. ಭೂಮಿಯು ಮಧ್ಯವ್ಯವಸ್ಥೆಗೆ ಸೇರಿದೆ. ದೇವ ಲೋಕಕ್ಕೆ ಪ್ರಯಾಣ ಮಾಡುವುದು ಹೇಗೆಂಬುದನ್ನು ಭಗವದ್ಗೀತೆಯು ಒಂದು ಸರಳವಾದ ಸೂತ್ರದಿಂದ ತಿಳಿಸಿಕೊಡುತ್ತದೆ. ಯಾಂತಿ ದೇವವ್ರತಾ ದೇವಾನ್. ಆ ಗ್ರಹದ ಅಭಿಮಾನಿ ದೇವತೆಯನ್ನು ಪೂಜಿಸಿದರೆ ಸಾಕು. ಈ ರೀತಿಯಲ್ಲಿ ಸೂರ್ಯ, ಚಂದ್ರ ಅಥವಾ ಬೇರಾವುದೇ ಊರ್ಧ್ವ ಲೋಕಕ್ಕೆ ಹೋಗಬಹುದು. ಆದರೆ ಈ ಐಹಿಕ ಜಗತ್ತಿನಲ್ಲಿ ಯಾವುದೇ ಗ್ರಹಕ್ಕೆ ಹೋಗಬೇಕೆಂದು ಭಗವದ್ಗೀತೆಯು ನಮಗೆ ಉಪದೇಶ ಮಾಡುವುದಿಲ್ಲ.

ಐಹಿಕ ಕ್ಲೇಶಗಳಾದ ಹುಟ್ಟು, ಸಾವು, ರೋಗ, ಮುಪ್ಪುಗಳನ್ನು ಎಲ್ಲಿ ಕಾಣುತ್ತೇವೆ?

ಏಕೆಂದರೆ ಯಾವುದಾದರೂ ಯಾಂತ್ರಿಕ ಸಾಧನದಿಂದ ನಲವತ್ತು ಸಾವಿರ ವರ್ಷ ಪ್ರಯಾಣ ಮಾಡಿ (ಅಷ್ಟು ದೀರ್ಘಕಾಲ ಯಾರು ಬದುಕಿರುತ್ತಾರೆ) ಅತ್ಯುನ್ನತ ಗ್ರವಾದ ಬ್ರಹ್ಮಲೋಕಕ್ಕೆ ಹೋದರೂ ಐಹಿಕ ಕ್ಲೇಶಗಳಾದ ಹುಟ್ಟು, ಸಾವು, ರೋಗ, ಮುಪ್ಪುಗಳನ್ನು ಅಲ್ಲಿ ಕಾಣುತ್ತೇವೆ. ಆದರೆ ಪರಮ ಲೋಕವಾದ ಕೃಷ್ಣಲೋಕವಾಗಲೀ, ಆಧ್ಯಾತ್ಮಿಕ ಗಗನದಲ್ಲಿರುವ ಬೇರಾವುದೇ ಗ್ರಹಗಳನ್ನಾಗಲೀ ತಲಪಲು ಬಯಸುವ ಮನುಷ್ಯನು ಅಲ್ಲಿ ಈ ಐಹಿಕ ಕ್ಲೇಶಗಳನ್ನು ಕಾಣುವುದಿಲ್ಲ.

ಆಧ್ಯಾತ್ಮಿಕ ಗಗನದಲ್ಲಿ ಇರುವ ಗ್ರಹಗಳಲ್ಲಿ ಗೋಲೋಕ ವೃಂದಾವನ ಎನ್ನುವ ಪರಮ ಗ್ರಹವಿದೆ. ಇದು ಮೂಲ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ ಆವಾಸದಲ್ಲಿ ಮೂಲಗ್ರಹ. ಈ ಎಲ್ಲ ವಿಷಯಗಳನ್ನು ಭಗವದ್ಗೀತೆಯು ತಿಳಿಸಿಕೊಡುತ್ತದೆ. ಈ ತಿಳುವಳಿಕೆ ಮೂಲಕ, ಈ ಐಹಿಕ ಜಗತ್ತನ್ನು ಬಿಟ್ಟು ಆಧ್ಯಾತ್ಮಕಿ ಗಗನದಲ್ಲಿ ನಿಜವಾಗಿಯೂ ಆನಂದಮಯವಾದ ಬದುಕನ್ನು ಪ್ರಾರಂಭಿಸುವುದು ಹೇಗೆ ಎನ್ನುವ ಮಾಹಿತಿಯನ್ನು ಅದು ಕೊಟ್ಟಿದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ