logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರೀಕೃಷ್ಣನೇ ದೇವೋತ್ತಮ, ಪರಮ ಸತ್ಯ ಮತ್ತು ಪರಿಪೂರ್ಣನಾಗಿದ್ದಾನೆ; ಗೀತೆಯಲ್ಲಿನ ಈ ಸಾರವನ್ನು ತಿಳಿಯಿರಿ

ಭಗವದ್ಗೀತೆ: ಶ್ರೀಕೃಷ್ಣನೇ ದೇವೋತ್ತಮ, ಪರಮ ಸತ್ಯ ಮತ್ತು ಪರಿಪೂರ್ಣನಾಗಿದ್ದಾನೆ; ಗೀತೆಯಲ್ಲಿನ ಈ ಸಾರವನ್ನು ತಿಳಿಯಿರಿ

Raghavendra M Y HT Kannada

Sep 14, 2023 06:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ದೇವೋತ್ತಮ ಪರಮ ಪುರುಷನಾದ ಪುರುಷೋತ್ತಮನು ನಿರಾಕಾರ ಬ್ರಹ್ಮನನ್ನೂ ಪರಮಾತ್ಮನ ಅಸಂಪೂರ್ಣ ಸಾಕ್ಷಾತ್ಕಾರವನ್ನೂ ಮೀರಿದವನು ಎನ್ನುವುದನ್ನು ಭಗವದ್ಗೀತೆಯ ಹದಿನೈದನೆಯ ಅಧ್ಯಾಯದಲ್ಲಿ ಕಾಣುತ್ತೇವೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಭಗವದ್ಗೀತೆಯಲ್ಲಿ (Bhagavadgita) ಹೀಗೆ ಹೇಳಲಾಗಿದೆ. ಅಖಂಡ ಪೂರ್ಣವು ಪರಮ ನಿಯಂತ್ರಕನನ್ನೂ, ನಿಯಂತ್ರಣಕ್ಕೊಳಗಾದ ಜೀವಿನಗಳನ್ನೂ, ವಿಶ್ವ ಅಭಿವ್ಯಕ್ತಿಯನ್ನೂ, ಅನಂತಕಾಲವನ್ನೂ, ಕರ್ಮವನ್ನೂ ಒಳಗೊಂಡಿದೆ ಎಂಬುದನ್ನು ಭಗವದ್ಗೀತೆಯಲ್ಲಿ ಕಾಣುತ್ತೇವೆ. ಅದರಲ್ಲಿ ಇವೆಲ್ಲವನ್ನೂ ವಿವರಿಸಿದೆ. ಇವೆಲ್ಲವೂ ಸೇರಿ ಅಖಂಡ ಪೂರ್ಣವಾಗುತ್ತದೆ. ಈ ಅಖಂಡ ಪೂರ್ಣವನ್ನು ಪರಮ ಸತ್ಯ ಎಂದು ಕರೆಯುತ್ತಾರೆ. ದೇವೋತ್ತಮ ಪುರುಷನಾದ ಶ್ರೀಕೃಷ್ಣನೇ ಅಖಂಡ ಪೂರ್ಣವೂ, ಪರಮ ಸತ್ಯವೂ ಆಗಿದ್ದಾನೆ. ಅಭಿವ್ಯಕ್ತಿಗಳು ಅವನ ವಿವಿಧ ಶಕ್ತಿಗಳಿಂದ ಆಗಿವೆ. ಅವನೇ ಪರಿಪೂರ್ಣ ಅಖಂಡನಾಗಿದ್ದಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಿರಾಕಾರ ಬ್ರಹ್ಮನ್ ಪರಿಪೂರ್ಣ ಅಖಂಡದ ಅಂಸಪೂರ್ಣ ಸಾಕ್ಷಾತ್ಕಾರ

ನಿರಾಕಾರ ಬ್ರಹ್ಮನ್ ಪೂರ್ಣ ಪರಮ ಪುರುಷನಿಗೆ ಅಧೀನ (ಬ್ರಹ್ಮಣೋ ಹಿ ಪ್ರತಿಷ್ಠಾಹಮ್) ಎಂದು ಗೀತೆಯು ವಿವರಿಸುತ್ತದೆ. ಬ್ರಹ್ಮಸೂತ್ರವು ಬ್ರಹ್ಮನು ಸೂರ್ಯಕಿರಣಗಳಂತೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ನಿರಾಕಾರ ಬ್ರಹ್ಮನ್ ಪರಿಪೂರ್ಣ ಅಖಂಡದ ಅಂಸಪೂರ್ಣ ಸಾಕ್ಷಾತ್ಕಾರ; ಪರಮಾತ್ಮ ಪರಿಕಲ್ಪನೆಯೂ ಹೀಗೆಯೇ. ದೇವೋತ್ತಮ ಪರಮ ಪುರುಷನಾದ ಪುರುಷೋತ್ತಮನು ನಿರಾಕಾರ ಬ್ರಹ್ಮನನ್ನೂ ಪರಮಾತ್ಮನ ಅಸಂಪೂರ್ಣ ಸಾಕ್ಷಾತ್ಕಾರವನ್ನೂ ಮೀರಿದವನು ಎನ್ನುವುದನ್ನು ಹದಿನೈದನೆಯ ಅಧ್ಯಾಯದಲ್ಲಿ ಕಾಣುತ್ತೇವೆ.

ದೇವೋತ್ತಮ ಪರಮ ಪುರುಷನನ್ನು ಸಚ್ಚಿದಾನಂದವಿಗ್ರಹ ಎಂದು ಕರೆಯಲಾಗಿದೆ. ಬ್ರಹ್ಮಸಂಹಿತೆಯು ಆರಂಭವಾಗುವುದು ಹೀಗೆ - ಈಶ್ವರಃ ಪರಮಃ ಕೃಷ್ಣಃ ಸತ್-ಚಿತ್-ಆನನ್ದ ವಿಗ್ರಹಃ/ಅನಾದಿರ್ ಆದಿರ್ ಗೋವಿನ್ದಃ ಸರ್ವಕಾರಣಕಾರಣಮ್. ಎಂದರೆ ಗೋವಿಂದನು, ಕೃಷ್ಣನು ಎಲ್ಲ ಕಾರಣಗಳ ಕಾರಣನು. ಅವನು ಮೂಲಕಾರಣನು. ಅವನೇ ಸತಾನನು, ಚಿತ್ ಮತ್ತು ಆನಂದಗಳ ಸಾಕಾರ ರೂಪನು. ನಿರಾಕಾರ ಬ್ರಹ್ಮನ್‌ನ ಸಾಕ್ಷಾತ್ಕಾರವು ಅವನ ಸತ್ (ಸನಾತನ) ಲಕ್ಷಣವಾದ ಸಾಕ್ಷಾತ್ಕಾರ. ಪರಮಾತ್ಮ ಸಾಕ್ಷಾತ್ಕಾರವು ಅವನ ಸತ್-ಚಿತ್ (ಸನಾತನ ಚಿತ್ತ) ದ ಸಾಕ್ಷಾತ್ಕಾರ. ಆದರೆ ಪೂರ್ಣ ವಿಗ್ರಹ (ರೂಪ)ದಲ್ಲಿ ಸತ್, ಚಿತ್ ಮತ್ತು ಆನಂದ (ಶಾಶ್ವತ, ಜ್ಞಾನ ಮತ್ತು ಆನಂದ)ಗಳ ಎಲ್ಲ ದಿವ್ಯಲಕ್ಷಣಗಳ ಸಾಕ್ಷಾತ್ಕಾರವೇ ದೇವೋತ್ತಮ ಪುರುಷನಾದ ಶ್ರೀಕೃಷ್ಣನ ಸಾಕ್ಷಾತ್ಕಾರವಾಗಿದೆ.

ಬುದ್ಧಿಇಲ್ಲದವರು ಪರಮ ಸತ್ಯವು ನಿರಾಕಾರ ಎಂದು ಭಾವಿಸುತ್ತಾರೆ

ಹೆಚ್ಚು ಬುದ್ಧಿಇಲ್ಲದವರು ಪರಮ ಸತ್ಯವು ನಿರಾಕಾರ ಎಂದು ಭಾವಿಸುತ್ತಾರೆ. ಆದರೆ ಅವನು ಅಲೌಕಿಕ ಪುರುಷ. ಎಲ್ಲ ವೈದಿಕ ಸಾಹಿತ್ಯವು ಇದನ್ನೇ ದೃಢಪಡಿಸುತ್ತದೆ, ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮ್ (ಕಠೋಪನಿಷತ್ 2.2.13). ನಾವೆಲ್ಲ ಪ್ರತ್ಯೇಕ ವ್ಯಕ್ತಿಗಳಾಗಿದ್ದು ನಮಗೆ ಪ್ರತ್ಯೇಕ ವ್ಯಕ್ತಿತ್ವವಿರುವಂತೆ ಕಟ್ಟಕಡೆಗೆ ಪರಮ ಪರಾತ್ಪರಸತ್ಯವು ಪುರುಷನೇ. ದೇವೋತ್ತಮ ಪುರುಷನ ಸಾಕ್ಷಾತ್ಕಾರವೆಂದರೆ ಅವನ ಪೂರ್ಣರೂಪದ ಎಲ್ಲ ಅಲೌಕಿಕ ಲಕ್ಷಣಗಳ ಸಾಕ್ಷಾತ್ಕಾರ. ಅಖಂಡತೆಯು ಆಕಾರರಹಿತವಲ್ಲ. ಆತನು ಆಕಾರರಹಿತನಾದರೆ ಅಥವಾ ಬೇರೆ ಯಾವುದೇ ವಸ್ತುವಿಗಿಂತ ಕಡಮೆಯಾದರೆ ಅವನು ಪೂರ್ಣನಾಗುವುದು ಸಾಧ್ಯವಿಲ್ಲ. ನಮ್ಮ ಅನುಭವದಲ್ಲಿ ಬಂದದ್ದೆಲ್ಲ ಮತ್ತು ನಮ್ಮ ಅನುಭವದ ಆಚೆ ಇರುವುದೆಲ್ಲ ಅಖಂಡತ್ವದಲ್ಲಿ ಇರಬೇಕು. ಇಲ್ಲವಾದರೆ ಅದು ಅಖಂಡವಾಗಲಾರದು.

ದೇವೋತ್ತಮ ಪುರುಷನಾದ ಅಖಂಡನಿಗೆ ಅಗಾಧ ಶಕ್ತಿ ಸಾಧ್ಯತೆಗಳಿವೆ (ಪರಾಸ್ಯ ಶಕ್ತಿ ರ್ವಿವಿಧೈವ ಶ್ರೂಯತೇ). ಶ್ರೀಕೃಷ್ಣನು ಬೇರೆ ಬೇರೆ ಶಕ್ತಿಗಳ ಮೂಲಕ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದನ್ನು ಭಗವದ್ಗೀತೆಯು ವಿವರಿಸುತ್ತದೆ. ನಾವಿರುವ ಈ ಭೌತಿಕ ಜಗತ್ತು ಸಹ ಸ್ವಯಂಪೂರ್ಣ. ಏಕೆಂದರೆ ಸಾಂಖ್ಯ ಸಿದ್ಧಾಂತದ ಪ್ರಕಾರ ಭೌತಿಕ ವಿಶ್ವವು ಇಪ್ಪತ್ತುನಾಲ್ಕು ಮೂಲಾಂಶಗಳ ತಾತ್ಕಾಲಿಕ ಅಭಿವ್ಯಕ್ತಿ.

ಈ ವಿಶ್ವದ ನಿರ್ವಹಣೆ ಮತ್ತು ಉಳಿವಿಗೆ ಅಗತ್ಯವಾದ ಎಲ್ಲ ಸಂಪನ್ಮೂಲಗಳನ್ನು ಸೃಷ್ಟಿಸುವಂತೆ ಈ ಅಂಶಗಳನ್ನು ಸಂಪೂರ್ಣವಾಗಿ ಹೊಂದಾಣಿಕೆ ಮಾಡಲಾಗಿದೆ. ಅನಗತ್ಯವಾದದ್ದು ಏನೂ ಇಲ್ಲ. ಈಗಿರುವುದಲ್ಲದೆ ಬೇರೆ ಯಾವುದರ ಅಗತ್ಯವೂ ಇಲ್ಲ. ಈ ಅಭಿವ್ಯಕ್ತಿಯ ಕಾಲಪ್ರಮಾಣವನ್ನು ಪರಮ ಅಖಂಡತ್ವದ ಚೈತನ್ಯವು ನಿರ್ಧರಿಸಿದೆ. ಅದರ ಕಾಲಪ್ರಮಾಣವು ಮುಗಿದಾಗ ಈ ತಾತ್ಕಾಲಿಕ ಅಭಿವ್ಯಕ್ತಿಗಳನ್ನು ಪೂರ್ಣತ್ವದ ಪೂರ್ಣ ಏರ್ಪಾಡು ನಾಶಮಾಡುತ್ತದೆ. ಪೂರ್ಣತ್ವದ ಸಮಗ್ರ ತಿಳುವಳಿಕೆ ಇಲ್ಲದಿರುವುದರಿಂದ ಎಲ್ಲ ಬಗೆಯ ಅಪರಿಪೂರ್ಣತೆಯ ಅನುಭವವಾಗುತ್ತದೆ. ಆದುದರಿಂದ ಭಗವದ್ಗೀತೆಯಲ್ಲಿ ವೈದಿಕ ಜ್ಞಾನದ ಸಂಪೂರ್ಣ ತಿಳಿವು ಇದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ