ಭಗವದ್ಗೀತೆ: ಭಗವಂತನಿಗೆ ಅಲೌಕಿಕವಾದ ಪ್ರೀತಿಯ ಸೇವೆ ಅರ್ಪಿಸದೇ ಮನುಷ್ಯ ಸುಖಿಯಾಗಲಾರ; ಗೀತೆಯ ಪ್ರಸ್ತಾವನೆಯಲ್ಲಿನ ಸಾರಾಂಶ ತಿಳಿಯಿರಿ
Sep 18, 2023 06:57 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಒಬ್ಬ ಜೀವಿಯು ಇತರ ಜೀವಿಗಳಿಗೆ ಹಲವು ರೀತಿಗಳಲ್ಲಿ ಸೇವೆಸಲ್ಲಿಸುತ್ತಾನೆ. ಹೀಗೆ ಮಾಡುವುದರಿಂದ ಜೀವಿಯು ಬದುಕನ್ನು ಸವಿಯುತ್ತಾನೆ. ಸೇವೆಕರು ತಮ್ಮ ಒಡೆಯನನ್ನು ಸೇವಿಸುವಂತೆ ಕೆಳಮಟ್ಟದ ಪ್ರಾಣಿಗಳು ಮನುಷ್ಯರನ್ನು ಸೇವಿಸುತ್ತವೆ. ಗೀತೆಯ ಪ್ರಸ್ತಾವನೆಯಲ್ಲಿರುವ ಈ ಅರ್ಥವನ್ನು ತಿಳಿಯಿರಿ
ಭಗವದ್ಗೀತೆಯ (BhagavadGita) ಪ್ರಸ್ತಾವನೆಯಲ್ಲಿ ಹೀಗೆ ಹೇಳಲಾಗಿದೆ. ಸನಾತ ಗೋಸ್ವಾಮಿಯವರು ಪ್ರತಿಯೊಂದು ಜೀವನ ಸ್ವರೂಪವನ್ನು ಕುರಿತು ಶ್ರೀ ಚೈತನ್ಯ ಮಹಾಪ್ರಭುಗಳನ್ನು ಪ್ರಶ್ನಿಸಿದಾಗ ಮಹಾಪ್ರಭುಗಳು ದೇವೋತ್ತಮ ಪರಮ ಪುರುಷನ ಸೇವೆಯೇ ಜೀವಿಯ ಸ್ವರೂಪ ಎಂದು ಹೇಳಿದರು. ಚೈತನ್ಯ ಮಹಾಪ್ರಭುಗಳ ಈ ಮಾತನ್ನುು ನಾವು ವಿಶ್ಲೇಷಿಸಿ ನೋಡಿದರೆ ಪ್ರತಿಯೊಬ್ಬ ಜೀವಿಯೂ ಮತ್ತೊಮ್ಮ ಜೀವಿಯ ಸೇವೆಯಲ್ಲೇ ಸದಾ ನಿರತನಾಗಿರುತ್ತಾನೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ತಾಜಾ ಫೋಟೊಗಳು
ಒಬ್ಬ ಜೀವಿಯು ಇತರ ಜೀವಿಗಳಿಗೆ ಹಲವು ರೀತಿಗಳಲ್ಲಿ ಸೇವೆಸಲ್ಲಿಸುತ್ತಾನೆ. ಹೀಗೆ ಮಾಡುವುದರಿಂದ ಜೀವಿಯು ಬದುಕನ್ನು ಸವಿಯುತ್ತಾನೆ. ಸೇವೆಕರು ತಮ್ಮ ಒಡೆಯನನ್ನು ಸೇವಿಸುವಂತೆ ಕೆಳಮಟ್ಟದ ಪ್ರಾಣಿಗಳು ಮನುಷ್ಯರನ್ನು ಸೇವಿಸುತ್ತವೆ. ಸೇವಕರು ತಮ್ಮ ಒಡೆಯನನ್ನು ಸೇವಿಸುವಂತೆ ಕೆಳಮಟ್ಟದ ಪ್ರಾಣಿಗಳು ಮನುಷ್ಯರನ್ನು ಸೇವಿಸುತ್ತವೆ. ('ಎ' ಯು ತನ್ನ ಒಡೆಯ 'ಬಿ'ಯನ್ನು ಸೇವಿಸುತ್ತಾನೆ. 'ಬಿ'ಯು ತನ್ನ ಒಡೆಯ 'ಸಿ' ಯನ್ನು ಸೇವಿಸುತ್ತಾನೆ 'ಸಿ'ಯು ತನ್ನ ಒಡೆಯ 'ಡಿ'ಯನ್ನು ಸೇವಿಸುತ್ತಾನೆ ಇತ್ಯಾದಿ).
ಜೀವಿಗಳ ಸಮಾಜದಲ್ಲಿ ಸೇವೆಯ ಕಾರ್ಯಕ್ಕೆ ಹೊರತಾದ ಜೀವ ಎನ್ನುವುದೇ ಇಲ್ಲ
ಈ ಸನ್ನಿವೇಶದಲ್ಲಿ ಒಬ್ಬ ಸ್ನೇಹಿತನು ಮತ್ತೊಬ್ಬ ಸ್ನೇಹಿತನನ್ನು ಸೇವಿಸುತ್ತಾನೆ. ತಾಯಿಯು ಮಗನನ್ನು ಸೇವಿಸುತ್ತಾಳೆ. ಹೆಂಡತಿಯು ಗಂಡನನ್ನು ಸೇವಿಸುತ್ತಾಳೆ. ಗಂಡನು ಹೆಂತಿಯನ್ನು ಸೇವಿಸುತ್ತಾನೆ ಇತ್ಯಾದಿ. ಇದೇ ರೀತಿಯಲ್ಲಿ ನಾವು ಹುಡುಕುತ್ತಾ ಹೋದರೆ ಜೀವಿಗಳ ಸಮಾಜದಲ್ಲಿ ಸೇವೆಯ ಕಾರ್ಯಕ್ಕೆ ಹೊರತಾದ ಜೀವ ಎನ್ನುವುದೇ ಇಲ್ಲ ಎನ್ನುವುದನ್ನು ಕಾಣುತ್ತೇವೆ. ತನ್ನ ಸೇವಾ ಸಾಮರ್ಥ್ಯದಲ್ಲಿ ಜನತೆಗೆ ನಂಬಿಕೆಯನ್ನು ಹುಟ್ಟಿಸುವುದಕ್ಕೋಸ್ಕರ ರಾಜಕಾರಣಿಯು ತನ್ನ ಪ್ರಣಾಳಿಕೆಯನ್ನು ಪ್ರಕಟಿಸುತ್ತಾನೆ. ಆತನು ಸಮಾಜಕ್ಕೆ ಮೌಲಿಕವಾದ ಸೇವೆಯನ್ನು ಮಾಡುತ್ತಾನೆ ಎಂದು ನಂಬಿ ಮತದಾರರು ರಾಜಕಾರಣಿಗೆ ತಮ್ಮ ಮೌಲಿಕವಾದ ಮತಗಳನ್ನು ನೀಡುತ್ತಾರೆ.
ಅಂಡಿಯವನು ಗಿರಾಕಿಯ ಸೇವೆ ಮಾಡುತ್ತಾನೆ. ಕುಶಲಕರ್ಮಿಯು ಬಂಡವಾಳಗಾರನ ಸೇವೆ ಮಾಡುತ್ತಾನೆ. ಬಂಡವಾಳಗಾರನು ಕುಟುಂಬವನ್ನು ಸೇವಿಸುತ್ತಾನೆ. ಸನಾತನ ಜೀವನದ ಸನಾತನ ಸಾಮರ್ಥ್ಯಕ್ಕನುಗುಣವಾಗಿ ಕುಟುಂಬವು ರಾಜ್ಯಕ್ಕೆ ಸೇವೆ ಸಲ್ಲಿಸುತ್ತದೆ. ಹೀಗೆ ಇತರ ಜೀವಿಗಳಿಗೆ ಸೇವೆ ಸಲ್ಲಿಸುವುದರಿಂದ ಯಾವ ಜೀವಿಗೂ ವಿನಾಯಿತಿ ಇಲ್ಲ ಎನ್ನುವುದನ್ನು ಕಾಣುತ್ತೇವೆ. ಆದುದರಿಂದ ಸೇವೆಯೇ ಜೀವನದ ನಿರಂತರ ಸಂಗಾತಿ ಮತ್ತು ಸೇವೆ ಮಾಡುವುದೇ ಜೀವನದ ಸನಾತನ ಧರ್ಮ ಎಂದು ನಾವು ಖಂಡಿತವಾಗಿ ತೀರ್ಮಾನಿಸಬಹುದು.
ಆದರೂ ಮನುಷ್ಯನು ಒಂದು ನಿರ್ದಿಷ್ಟ ಕಾಲದಲ್ಲಿ ಒಂದು ನಿರ್ದಿಷ್ಟ ಬಗೆಯ ಶ್ರದ್ಧೆಗೆ ತಾನು ಸೇರಿದವನು ಎಂದು ಹೇಳುತ್ತಾನೆ ಮತ್ತು ತಾನು ಒಬ್ಬ ಹಿಂದು, ಮುಸ್ಲಿಂ ಕ್ರೈಸ್ತ, ಬೌದ್ಧ ಅಥವಾ ಬೇರಾವುದೋ ಪಂಥವನ್ನು ಅನುಸರಿಸುತ್ತೇನೆ ಎಂದು ಹೇಳಿಕೊಳ್ಳುತ್ತಾನೆ. ಇಂತಹವು ಸನಾತನ ಧರ್ಮೇತರ ಹೆಸರುಗಳು. ಹಿಂದುವೊಬ್ಬನು ತನ್ನ ಮತವನ್ನು ಬದಲಾಯಿಸಿ ಮುಸ್ಲಿಂ ಆಗಬಹುದು ಅಥವಾ ಮುಸ್ಲಿಂನೊಬ್ಬನು ತನ್ನ ಮತವನ್ನು ಬದಲಾಯಿಸಿ ಹಿಂದು ಆಗಬಹುದು ಅಥವಾ ಕ್ರೈಸ್ತನೊಬ್ಬ ತನ್ನ ಮತವನ್ನು ಬದಲಾಯಿಸಬಹುದು ಇತ್ಯಾದಿ.
ಆದರೆ ಯಾವುದೇ ಸನ್ನಿವೇಶದಲ್ಲಿಯೂ ಮತದ ಬದಲಾವಣೆಯು ಇತರರ ಸೇವೆ ಮಾಡುವ ಸನಾತನ ಧರ್ಮದ ಮೇಲೆ ಪ್ರಭಾವ ಬೀರುವುದಿಲ್ಲ. ಯಾವುದೇ ಸನ್ನಿವೇಶದಲ್ಲಿಯೂ ಹಿಂದು, ಮುಸ್ಲಿಂ ಅಥವಾ ಕ್ರೈಸ್ತನು ಮತ್ತೊಬ್ಬನ ಸೇವಕ. ಆದುದರಿಂದ ಯಾವುದೋ ಒಂದು ಮತಕ್ಕೆ ಸೇರಿದವನು ಎಂದು ಹೇಳಿಕೊಂಡರೆ ಸನಾತನ ಧರ್ಮಕ್ಕೆ ಸೇರಿದವನು ಎಂದಲ್ಲ. ಸೇವೆ ಮಾಡುವುದೇ ಸನಾತನ ಧರ್ಮ.
ಜೀವಿಗಳಾದ ನಾವೆಲ್ಲ ಭಗವಂತನ ಸೇವೆಕರು
ವಾಸ್ತವವಾಗಿ ನಮಗೆ ಭಗವಂತನೊಡನೆ ಸೇವೆಯ ಬಾಂಧವ್ಯವಿದೆ. ಭಗವಂತನೇ ಪರಮ ಭೋಕ್ತಾರ. ಜೀವಿಗಳದಾ ನಾವೆಲ್ಲ ಅವನ ಸೇವಕರು. ನಾವೆಲ್ಲ ಸೃಷ್ಟಿಯಾಗಿರುವುದು ಅವನ ಭೋಕ್ತಾರ. ಜೀವಿಗಳಾದ ನಾವೆಲ್ಲ ಅವನ ಸೇವೆಕರು. ನಾವೆಲ್ಲ ಸೃಷ್ಟಿಯಾಗಿರುವುದು ಅವನ ಭೋಗಕ್ಕಾಗಿಯೇ.
ಆ ದೇವೋತ್ತಮ ಪರಮ ಪುರುಷನ ಸನಾತನ ಭೋಗದಲ್ಲಿ ನಾವೂ ಭಾಗಿಗಳಾದರೆ ನಾವು ಸುಖಿಗಳಾಗುತ್ತೇವೆ. ಬೇರೆ ರೀತಿಯಲ್ಲಿ ನಾವು ಸುಖಿಗಳಾಗುವುದು ಸಾಧ್ಯವಿಲ್ಲ. ಹೊಟ್ಟೆಯೊಡನೆ ಸಹಕರಿಸದೆ ದೇಹದ ಯಾವುದೇ ಭಾಗವು ಹೇಗೆ ಸುಖಿಯಾಗಲು ಸಾಧ್ಯವಿಲ್ಲವೋ ಹಾಗೆಯೇ ನಾವು ಸ್ವತಂತ್ರವಾಗಿ ಸುಖಿಗಳಾಗುವುದು ಸಾಧ್ಯವಿಲ್ಲ. ಭಗವಂತನಿಗೆ ಅಲೌಕಿಕವಾದ ಪ್ರೀತಿಯ ಸೇವೆಯನ್ನು ಅರ್ಪಿಸದೆ ಜೀವಿಯು ಸುಖಿಯಾಗಲಾರ.