logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಬ್ರಹ್ಮನನ್ನು ಸೃಷ್ಟಿಸಿದಾತನೇ ಮೂಲ ಸೃಷ್ಟಿಕರ್ತನು ಎಂದು ತಿಳಿಯುವಷ್ಟು ಬುದ್ಧಿ ನಮಗಿರಬೇಕು; ಗೀತೆಯ ಸಾರವನ್ನು ತಿಳಿಯಿರಿ

ಭಗವದ್ಗೀತೆ: ಬ್ರಹ್ಮನನ್ನು ಸೃಷ್ಟಿಸಿದಾತನೇ ಮೂಲ ಸೃಷ್ಟಿಕರ್ತನು ಎಂದು ತಿಳಿಯುವಷ್ಟು ಬುದ್ಧಿ ನಮಗಿರಬೇಕು; ಗೀತೆಯ ಸಾರವನ್ನು ತಿಳಿಯಿರಿ

Raghavendra M Y HT Kannada

Sep 15, 2023 06:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಭಗವದ್ಗೀತೆಯು ಹೇಳುವಂತೆ ಪರಂಪರೆಯಿಂದ ನಮಗೆ ಬರುವ ಪರಿಪೂರ್ಣ ಜ್ಞಾನವನ್ನು ನಾವು ಸ್ವೀಕರಿಸಬೇಕು. ಅದು ಹೇಗೆ ಅನ್ನೋದನ್ನು ತಿಳಿಯೋಣ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಭಗವದ್ಗೀತೆಯಲ್ಲಿ (Bhagavadgita) ಹೀಗೆೆ ಹೇಳಲಾಗಿದೆ. ವೈದಿಕ ತಿಳುವಳಿಕೆಯಲ್ಲಿ ತಪ್ಪಿರಲು ಸಾಧ್ಯವೇ ಇಲ್ಲ. ಹಿಂದೂಗಳು, ವೈದಿಕ ತಿಳುವಳಿಕೆಯ ಸಂಪೂರ್ಣವಾದದ್ದು ಮತ್ತು ತಪ್ಪಲು ಸಾಧ್ಯವೇ ಇಲ್ಲದ್ದು ಎಂದು ಸ್ವೀಕರಿಸುತ್ತಾರೆ. ಉದಾಹರಣೆಗೆ ಸಗಣಿಯು ಒಂದು ಪ್ರಾಣಿಯ ಮಲ. ಸ್ಮೃತಿ ಅಥವಾ ವೈದಿಕ ವಿಧಿಗಳ ಪ್ರಕಾರ ಯಾರಾದರೂ ಪ್ರಾಣಿಯ ಮಲವನ್ನು ಮುಟ್ಟಿದರೆ ಸ್ನಾನಮಾಡಿ ಶುದ್ಧಮಾಡಿಕೊಳ್ಳಬೇಕು. ಆದರೆ ವೈದಿಕ ಧರ್ಮಗ್ರಂಥಗಳಲ್ಲಿ ಸಗಣಿಯನ್ನು ಶುದ್ಧಿಗೊಳಿಸುವ ಒಂದು ಸಾಧನ ಎಂದು ಪರಿಗಣಿಸಿದೆ. ಇವುಗಳಲ್ಲಿ ಪರಸ್ಪರ ವಿರೋಧವಿದೆ ಎಂದು ತೋರಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಆದರೆ ಇದು ವೈದಿಕ ವಿಧಿಯಾದದ್ದರಿಂದ ಜನರು ಇದನ್ನು ಒಪ್ಪುತ್ತಾರೆ. ಇದನ್ನು ಒಪ್ಪುವುದು ತಪ್ಪೆನಿಸುವುದಿಲ್ಲ. ಸಗಣಿಯು ಕ್ರಿಮಿನಾಶಕವೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಯಪಡಿಸಿವೆ. ವೇದಜ್ಞಾನವು ಸಂದೇಹ ಮತ್ತು ದೋಷಗಳಿಗೆ ಹೊರತಾಗಿರುವುದರಿಂದ ಪರಿಪೂರ್ಣವಾದದ್ದು. ಭಗವದ್ಗೀತೆಯಾದರೋ ವೇದಜ್ಞಾನದ ಸಾರವೇ ಆಗಿದೆ.

ಪರಿಪೂರ್ಣವಲ್ಲದ ಇಂದ್ರಿಯಗಳನ್ನು ಬಳಸಿ ಸಂಶೋಧನೆ ಮಾಡುತ್ತೇವೆ

ವೇದಜ್ಞಾನವು ಸಂಶೋಧನೆಗೆ ವಸ್ತುವಲ್ಲ. ನಾವು ಪರಿಪೂರ್ಣವಲ್ಲದ ಇಂದ್ರಿಯಗಳನ್ನು ಬಳಸಿ ಸಂಶೋಧನೆ ಮಾಡುತ್ತೇವೆ. ಆದುದರಿಂದ ನಮ್ಮ ಸಂಶೋಧನೆಯು ಪರಿಪೂರ್ಣವಲ್ಲ. ಭಗವದ್ಗೀತೆಯು ಹೇಳುವಂತೆ ಪರಂಪರೆಯಿಂದ ನಮಗೆ ಬರುವ ಪರಿಪೂರ್ಣ ಜ್ಞಾನವನ್ನು ನಾವು ಸ್ವೀಕರಿಸಬೇಕು. ಪರಮ ಗುರುವಾದ ಭಗವಂತನಿಂದ ಪ್ರಾರಂಭವಾಗಿ ಗುರುಶಿಷ್ಯರ ಪರಂಪರೆಯಲ್ಲಿ ಯೋಗ್ಯಮೂಲದಿಂದ ಬರುವ ಮತ್ತು ಗುರುಗಳ ಪರಂಪರೆಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಬಂದಿರುವ ಜ್ಞಾನವನ್ನು ನಾವು ಒಪ್ಪಿಕೊಳ್ಳಬೇಕು. ಶ್ರೀಕೃಷ್ಣನಿಂದ ಆತನ ಶಿಷ್ಯನಾಗಿ ಉಪದೇಶ ಪಡೆದ ಅರ್ಜುನನು ಅವನು ಹೇಳಿದುದೆಲ್ಲವನ್ನೂ ವಿರೋಧಿಸದೆ ಒಪ್ಪಿಕೊಂಡನು.

ಭಗವದ್ಗೀತೆಯ ಒಂದು ಭಾಗವನ್ನು ಒಪ್ಪಿಕೊಂಡು ಮತ್ತೊಂದು ಭಾಗವನ್ನು ನಿರಾಕರಿಸಲು ಅವಕಾಶವಿಲ್ಲ. ಇಲ್ಲಿ ನಾವು ಕುತರ್ಕಮಾಡದೆ, ಏನನ್ನೂ ಬಿಡದೆ, ಮತ್ತು ನಮ್ಮ ಮನಸೋ ಇಚ್ಛೆ ಅರ್ಥಮಾಡದೆ ಭಗವದ್ಗೀತೆಯನ್ನು ಒಪ್ಪಿಕೊಳ್ಳಬೇಕು. ಭಗವದ್ಗೀತೆಯನ್ನು ವೈದಿಕ ಜ್ಞಾನದ ಅತ್ಯಂತ ಪರಿಪೂರ್ಣ ನಿರೂಪಣೆ ಎಂದು ಒಪ್ಪಿಕೊಳ್ಳಬೇಕು. ವೈದಿಕ ಜ್ಞಾನವು ಅಲೌಕಿಕ ಮೂಲಗಳಿಂದ ಬರುತ್ತದೆ. ಇದರ ಪ್ರಾರಂಭದ ವಾಕ್ಯಗಳನ್ನು ಭಗವಂತನೇ ಆಡಿದ್ದಾನೆ. ಭಗವಂತನ ಮಾತುಗಳಿಗೆ ಅಪೌರುಷೇಯ ಎಂದು ಹೆಸರು.

4 ದೋಷಗಳಿಂದ ಕೂಡಿದ ಇಹಲೋಕದ ವ್ಯಕ್ತಿಯ ಮಾತುಗಳಿಂದ ಭಿನ್ನವಾದವು

ಹೀಗೆಂದರೆ, ಈ ಮಾತುಗಳು ನಾಲ್ಕು ದೋಷಗಳಿಂದ ಕೂಡಿದ ಇಹಲೋಕದ ವ್ಯಕ್ತಿಯ ಮಾತುಗಳಿಂದ ಭಿನ್ನವಾದವು ಎಂದು ಅರ್ಥ. ಇಹಲೋಕದ ವ್ಯಕ್ತಿಯು 1. ಖಂಡಿವಾಗಿಯೂ ತಪ್ಪುಗಳನ್ನು ಮಾಡುತ್ತಾನೆ. 2. ಭ್ರಮೆಗೆ ಒಳಗಾಗಿಯೇ ಇರರುತ್ತಾನೆ 3. ಇತರರಿಗೆ ಮೋಸಮಾಡುವ ಪ್ರವೃತ್ತಿಯವನಾಗಿರುತ್ತಾನೆ ಮತ್ತು 4. ಅಪರಿಪೂರ್ಣ ಇಂದ್ರಿಯಗಳಿಂದ ಮಿತಿಗೊಳಗಾಗಿರುತ್ತಾನೆ. ಈ ನಾಲ್ಕು ದೋಷಗಳ ಕಾರಣ ಮನುಷ್ಯನಾದವನು ಸರ್ವವ್ಯಾಪಿಯಾದ ಜ್ಞಾನವನ್ನು ಕುರಿತು ಪೂರ್ಣ ತಿಳುವಳಿಕೆಯನ್ನು ನೀಡಲಾರ.

ವೈದಿಕ ಜ್ಞಾನವನ್ನು ಇಂತಹ ದೋಷಯುಕ್ತ ಜೀವಿಗಳು ನೀಡುವುದಿಲ್ಲ. ಪ್ರಥಮವಾಗಿ ಸೃಷ್ಟಿಯಾದ ಜೀವಿ ಬ್ರಹ್ಮ. ಅವನ ಹೃದಯಕ್ಕೆ ಈ ಜ್ಞಾನವನ್ನು ನೀಡಲಾಯಿತು. ತಾನು ಭಗವಂತನಿಂದ ಪಡೆದುಕೊಂಡಂತೆಯೇ ಈ ಜ್ಞಾನವನ್ನು ಬ್ರಹ್ಮನು ತನ್ನ ಪುತ್ರರಿಗೂ ಶಿಷ್ಯರಿಗೂ ಅನುಗ್ರಹಿಸಿದನು. ಭಗವಂತನು ಪೂರ್ಣನು, ಆತನು ಐಹಿಕ ಪ್ರಕೃತಿಯ ನಿಮಗಳಿಗೆ ಒಳಾಗಾಗುವ ಸಾಧ್ಯತೆಯೇ ಇಲ್ಲ. ಆದುದರಿಂದ ಭಗವಂತನೇ ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಒಡೆಯ.

ಬ್ರಹ್ಮನನ್ನು ಸೃಷ್ಟಿಸಿದಾತನೇ ಮೂಲ ಸೃಷ್ಟಿಕರ್ತನು ಎಂದು ತಿಳಿಯುವಷ್ಟು ಬುದ್ಧಿ ನಮಗಿರಬೇಕು. ಹನ್ನೊಂದನೆಯ ಅಧ್ಯಾಯದಲ್ಲಿ ಭಗವಂತನನ್ನು ಪ್ರಪಿತಾಹ ಎಂದು ಸಂಭೋದಿಸಿದೆ. ಏಕೆಂದರೆ ಬ್ರಹ್ಮನನ್ನು ಪಿತಾಮಹ ಎಂದು ಕರೆದರೆ ಮತ್ತು ಭಗವಂತನು ಪಿತಾಮಹನನ್ನು ಸೃಷ್ಟಿಸಿದವನು. ಆದುದರಿಂದ ಯಾರೂ ಯಾವುದೇ ವಸ್ತುವಿಗೂ ತಾವು ಒಡೆಯ ಎಂದು ಹೇಳಿಕೊಳ್ಳಬಾರದು. ತನ್ನ ಜೀವನ ನಿರ್ವಹಣೆಗಾಗಿ ತನ್ನ ಭಾಗ ಎಂದು ಭಗವಂತನು ಪ್ರತ್ಯೇಕ ತೆಗೆದಿಟ್ಟದ್ದು ಎಂದೇ ವಸ್ತುಗಳನ್ನು ಸ್ವೀಕರಿಸಬೇಕು.

ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ವೇಳಾಪಟ್ಟಿ

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ