logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಿಗೆ ಪೂಜೆ, ಗೌರವ ಸಲ್ಲಿಸಿದರೆ ಪ್ರಗತಿ ಸಾಧ್ಯವಾಗುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನಿಗೆ ಪೂಜೆ, ಗೌರವ ಸಲ್ಲಿಸಿದರೆ ಪ್ರಗತಿ ಸಾಧ್ಯವಾಗುತ್ತೆ; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Jul 17, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita: ಭಗವಂತನಿಗೆ ಪೂಜೆ, ಗೌರವ ಸಲ್ಲಿಸಿದರೆ ಪ್ರಗತಿ ಸಾಧ್ಯವಾಗುತ್ತೆ ಎಂಬುದರ ಅರ್ಥವನ್ನು ಭಗವಗ್ದೀತೆಯ 11ನೇ ಅಧ್ಯಾಯ 54ನೇ ಶ್ಲೋಕದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 54

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋರ್ಜುನ |

ಜ್ಞಾತುಂ ದ್ರಷ್ಟಂ ಚ ತತ್ತ್ವೇನ ಪ್ರವೇಷ್ಟುಂ ಚ ಪರನ್ತಪ ||54||

ಅನುವಾದ: ನನ್ನ ಪ್ರೀತಿಯ ಅರ್ಜುನನೆ, ಏಕಚಿತ್ತದ ಭಕ್ತಿಸೇವೆಯಿಂದ ಮಾತ್ರ ನಿನ್ನ ಮುಂದೆ ನಿಂತಿರುವ ನನ್ನನ್ನು ನಾನಿರುವಂತೆ ಅರ್ಥಮಾಡಿಕೂಳ್ಳಲು ಸಾಧ್ಯ. ಹೀಗೆ ಮಾತ್ರ ನನ್ನನ್ನು ನೇರವಾಗಿ ನೋಡಲು ಸಾಧ್ಯ. ಈ ರೀತಿಯಲ್ಲಿ ಮಾತ್ರ ನನ್ನನ್ನು ತಿಳಿಯುವ ರಹಸ್ಯಗಳನ್ನು ನೀನು ಪ್ರವೇಶಿಸಬಲ್ಲೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಏಕಾಗ್ರಚಿತ್ತದ ಭಕ್ತಿಸೇವೆಯ ಪ್ರಕ್ರಿಯೆಯಿಂದ ಮಾತ್ರ ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ಕೃಷ್ಣನು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾನೆ. ಬರಿಯ ಊಹಾತ್ಮಕ ಚಿಂತನೆಯ ಪ್ರಕ್ರಿಯೆಯಿಂದ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಅಧಿಕಾರವಿಲ್ಲದ ವ್ಯಾಖ್ಯಾನಕಾರರು ತಾವು ಕಾಲವನ್ನು ವ್ಯರ್ಥಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳಲಿ ಎನ್ನುವುದು ಇದರ ಉದ್ದೇಶ. ಕೃಷ್ಣನನ್ನು ಯಾರೂ ಅರ್ಥಮಾಡಿಕೊಳ್ಳಲಾರರು. ಅವನು ಚತುರ್ಭುಜ ರೂಪದಲ್ಲಿ ತಂದೆ ತಾಯಿಯಿಂದ ಹೇಗೆ ಬಂದ ಮತ್ತು ತಕ್ಷಣವೇ ಎರಡು ಕೈಗಳ ರೂಪವನ್ನು ಹೇಗೆ ಧರಿಸಿದ ಎನ್ನುವದು ಯಾರಿಗೂ ಅರ್ಥವಾಗುವುದಿಲ್ಲ (Bhagavad Gita Updesh in Kannada).

ವೇದಾಧ್ಯಯನದಿಂದ ಅಥವಾ ಊಹಾತ್ಮಕಚಿಂತನೆಯಿಂದ ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದುದರಿಂದ ಯಾರೂ ಅವನನ್ನು ಕಾಣಲಾರರು ಮತ್ತು ಯಾರೂ ಈ ವಿಷಯಗಳನ್ನು ತಿಳಿದುಕೊಳ್ಳಲಾರರು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ವೇದಸಾಹಿತ್ಯದ ನುರಿತ ವಿದ್ಯಾರ್ಥಿಗಳಾದವರು ಅನೇಕ ರೀತಿಗಳಲ್ಲಿ ವೇದಸಾಹಿತ್ಯದಿಂದ ಅವನ ವಿಷಯವನ್ನು ತಿಳಿದುಕೊಳ್ಳಬಹುದು. ಅದಕ್ಕೆ ಹಲವಾರು ನಿಯಮ ನಿಬಂಧನೆಗಳಿವೆ. ಕೃಷ್ಣನನ್ನು ಯಾರಾದರೂ ಅರ್ಥಮಾಡಿಕೊಳ್ಳಲು ಬಯಸಿದರೆ ಆತನು ಪ್ರಮಾಣಗ್ರಂಥಗಳಲ್ಲಿ ವರ್ಣಿಸುವ ನಿಯಂತ್ರಕ ತತ್ವಗಳನ್ನು ಅನುಸರಿಸಬೇಕು.

ಈ ತತ್ವಗಳಿಗೆ ಅನುಗುಣವಾಗಿ ವ್ರತಗಳನ್ನು ಆಚರಿಸಬಹುದು. ಉದಾಹರಣಗೆ ಕಟ್ಟುನಿಟ್ಟಾದ ವ್ರತಗಳನ್ನು ನಡೆಸಲು ಕೃಷ್ಣನು ಕಾಣಿಸಿಕೊಂಡ ಜನ್ಮಾಷ್ಟಮಿಯಂದು ಮತ್ತು ಕೃಷ್ಣಪಕ್ಷ, ಶುಕ್ಲಪಕ್ಷಗಳಂದು ಏಕಾದಶಿಯ ದಿವಸ ಉಪವಾಸ ಮಾಡಬಹುದು. ದಾನದ ವಿಷಯ ಹೇಳುವುದಾದರೆ ಇಡೀ ಜಗತ್ತಿನಲ್ಲಿ ಕೃಷ್ಣ ಸಿದ್ಧಾಂತವನ್ನು ಅಥವಾ ಕೃಷ್ಣಪ್ರಜ್ಞೆಯನ್ನು ಹರಡಲು ಕೃಷ್ಣನ ಭಕ್ತಿಸೇವೆಯಲ್ಲಿ ನಿರತರಾದ ಅವನ ಭಕ್ತರಿಗೆ ದಾನ ಕೊಡಬೇಕು ಎನ್ನುವುದು ಸ್ಪಷ್ಟ. ಕೃಷ್ಣಪ್ರಜ್ಞೆಯು ಮಾನವ ಕುಲಕ್ಕೆ ಒಂದು ವರ. ರೂಪ ಗೋಸ್ವಾಮಿಯವರು ಚೈನತ್ಯ ಮಹಾಪ್ರಭುಗಳನ್ನು ಅತ್ಯಂತ ದಾನಶೂರರೆಂದು ಮೆಚ್ಚಿಕೊಂಡರು. ಇದಕ್ಕೆ ಕಾರಣ, ಪಡೆಯಲು ಬಹು ಕಷ್ಟವಾದ ಕೃಷ್ಣಪ್ರೇಮವನ್ನು ಚೈತನ್ಯರು ಉಚಿತವಾಗಿ ಹಂಚಿದರು. ಆದುದರಿಂದ ಕೃಷ್ಣಪ್ರಜ್ಞೆಯನ್ನು ವಿತರಣೆ ಮಾಡುವುದರಲ್ಲಿ ನಿರತರಾದವರಿಗೆ ದಾನ ನೀಡಿದರೆ ಕೃಷ್ಣಪ್ರಜ್ಞೆಯನ್ನು ಹರಡಲು ಕೊಟ್ಟ ಈ ದಾನವು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ದಾನವಾಗುತ್ತದೆ.

ದೇವಾಲಯದಲ್ಲಿ ವಿಧಿಸಿರುವ ರೀತಿಯಲ್ಲಿ ಪೂಜೆಮಾಡಿದರೆ (ಭಾರತದ ದೇವಾಲಯಗಳಲ್ಲಿ ಯಾವಾಗಲೂ ಸಾಮಾನ್ಯವಾಗಿ ವಿಷ್ಣು ಅಥವಾ ಕೃಷ್ಣನ ಒಂದು ವಿಗ್ರಹ ಇರುತ್ತದೆ) ದೇವೋತ್ತಮ ಪರಮ ಪುರುಷನಿಗೆ ಪೂಜೆ ಮತ್ತು ಗೌರವ ಸಲ್ಲಿಸುವ ಮೂಲಕ ಪ್ರಗತಿಯನ್ನು ಸಾಧಿಸಲು ಅದೊಂದು ಅವಕಾಶ. ಭಗವಂತನ ಭಕ್ತಿಸೇವೆಯನ್ನು ಪ್ರಾರಂಭಿಸುವವರಿಗೆ ದೇವಾಲಯದಲ್ಲಿ ಪೂಜೆಮಾಡುವುದು ಅಗತ್ಯ. ಇದನ್ನು ವೇದಸಾಹಿತ್ಯವು ದೃಢಪಡಿಸುತ್ತದೆ - (ಶ್ವೇತಾಶ್ವತರ ಉಪನಿಷತ್ 6.23)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ