logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾತ್ರಿ ಹೊತ್ತು ನಿದ್ರೆ ಬರದೆ ಹಿಂಸೆ ಆಗ್ತಿದ್ಯಾ, ಮಗುವಿನಂತೆ ನಿದ್ರೆ ಮಾಡಲು ಮಲಗುವ ಮುನ್ನ ಈ ಮಂತ್ರಗಳನ್ನು ಜಪಿಸಿ

ರಾತ್ರಿ ಹೊತ್ತು ನಿದ್ರೆ ಬರದೆ ಹಿಂಸೆ ಆಗ್ತಿದ್ಯಾ, ಮಗುವಿನಂತೆ ನಿದ್ರೆ ಮಾಡಲು ಮಲಗುವ ಮುನ್ನ ಈ ಮಂತ್ರಗಳನ್ನು ಜಪಿಸಿ

Rakshitha Sowmya HT Kannada

Jul 23, 2024 01:54 PM IST

google News

ರಾತ್ರಿ ಹೊತ್ತು ನಿದ್ರೆ ಬರದೆ ಹಿಂಸೆ ಆಗ್ತಿದ್ಯಾ, ಮಗುವಿನಂತೆ ನಿದ್ರೆ ಮಾಡಲು ಮಲಗುವ ಮುನ್ನ ಈ ಮಂತ್ರಗಳನ್ನು ಜಪಿಸಿ

  • ವೈಯಕ್ತಿಕ ಕಾರಣ ಅಥವಾ ಬೇರ್ಯಾವ ಕಾರಣಗಳಿಂದಲೋ ಬಹಳಷ್ಟು ಜನರಿಗೆ ರಾತ್ರಿ ನಿದ್ರೆ ಬರುವುದಿಲ್ಲ. ಎಷ್ಟೇ ಆಯಾಸವಾಗಿದ್ದರೂ ನಿದ್ರೆ ಬಾರದೆ ಒದ್ದಾಡುತ್ತಾರೆ. ಇದಕ್ಕೆ ನಾನಾ ಕಾರಣಗಳಿರಬಹುದು. ಆದರೆ ಕೆಲವೊಂದು ಮಂತ್ರಗಳನ್ನು ಪಠಿಸುವುದರಿಂದ ನೀವು ನೆಮ್ಮದಿಯಾಗಿ ನಿದ್ರೆ ಮಾಡಬಹುದು. 

ರಾತ್ರಿ ಹೊತ್ತು ನಿದ್ರೆ ಬರದೆ ಹಿಂಸೆ ಆಗ್ತಿದ್ಯಾ, ಮಗುವಿನಂತೆ ನಿದ್ರೆ ಮಾಡಲು ಮಲಗುವ ಮುನ್ನ ಈ ಮಂತ್ರಗಳನ್ನು ಜಪಿಸಿ
ರಾತ್ರಿ ಹೊತ್ತು ನಿದ್ರೆ ಬರದೆ ಹಿಂಸೆ ಆಗ್ತಿದ್ಯಾ, ಮಗುವಿನಂತೆ ನಿದ್ರೆ ಮಾಡಲು ಮಲಗುವ ಮುನ್ನ ಈ ಮಂತ್ರಗಳನ್ನು ಜಪಿಸಿ

ಒತ್ತಡ, ಚಿಂತೆ ಮತ್ತು ಆಲೋಚನೆಗಳಿಂದ ತುಂಬಿರುವ ಇಂದಿನ ದಿನಗಳಲ್ಲಿ ಬಹಳ ಜನರು ರಾತ್ರಿ ನಿದ್ರೆ ಇಲ್ಲದೆ ಕಳೆಯುತ್ತಾರೆ. ಇದರಿಂದ ಹೊರ ಬರಲು ಇರುವ ಏಕೈಕ ಮಾರ್ಗವೆಂದರೆ ಧ್ಯಾನ ಮತ್ತು ಯೋಗ. ಅವುಗಳ ಜೊತೆ ಕೆಲವು ಮಂತ್ರಗಳು ಮತ್ತು ಶ್ಲೋಕಗಳನ್ನು ಪಠಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಮನಸ್ಸನ್ನು ಕೇಂದ್ರೀಕರಿಸಿ ಮತ್ತು ಏಕಾಗ್ರತೆಯಿಂದ ಕೆಲವು ಮಂತ್ರಗಳನ್ನು ಪಠಿಸುವುದರಿಂದ, ನೀವು ಆರಾಮವಾಗಿ ಮಲಗಲು ಸಾಧ್ಯವಾಗುತ್ತದೆ. ಪಠಣವು ನಿಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಸಂದರ್ಭಕ್ಕೆ ತಕ್ಕಂತೆ ಹಲವು ಮಂತ್ರಗಳಿವೆ. ಆದ್ದರಿಂದ ಉತ್ತಮ ನಿದ್ರೆಗಾಗಿ ಉತ್ತಮ ಪ್ರಯೋಜನಗಳನ್ನು ನೀಡುವ 5 ಮಂತ್ರಗಳು ಇಲ್ಲಿವೆ. ಮಲಗುವ ಮುನ್ನ ಈ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಆತಂಕ ಕಡಿಮೆಯಾಗಲಿದೆ. ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಸಹಾಯ ಮಾಡುತ್ತದೆ.

ಓಂ ಮಂತ್ರ

ಪುರಾಣಗಳ ಪ್ರಕಾರ, ಓಂ ಎಂಬುದು ಬ್ರಹ್ಮಾಂಡದಿಂದ ಬರುವ ಮೊದಲ ಶಬ್ದವಾಗಿದೆ. ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ. ಮಲಗುವ ಮುನ್ನ ಓಂ ಮಂತ್ರವನ್ನು ಪಠಿಸುವುದರಿಂದ ನಿಮ್ಮನ್ನು ಕಾಸ್ಮಿಕ್ ಶಕ್ತಿಯೊಂದಿಗೆ ಸಂಪರ್ಕಿಸುತ್ತದೆ. ಓಂ ಪಠಣವು ಆತ್ಮವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಎಲ್ಲಾ ದಿನದ ಮಾನಸಿಕ ಆತಂಕವನ್ನು ದೂರ ಮಾಡುತ್ತದೆ. ಮನಸ್ಸಿನ ಚಿಂತೆಗಳನ್ನು ದೂರ ಮಾಡುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಮೆದುಳನ್ನು ರಿಲ್ಯಾಕ್ಸ್ ಮೋಡ್‌ನಲ್ಲಿ ಇರಿಸುವ ಮೂಲಕ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಹನುಮಾನ್ ಚಾಲೀಸಾ

ಹನುಮಾನ್ ಚಾಲೀಸಾವು ಹನುಮಾನ್ ದೇವರಿಗೆ ಸಮರ್ಪಿತವಾದ ಮಂತ್ರವಾಗಿದೆ. ಹನುಮಾನ್ ಚಾಲೀಸಾ ಓದುವುದು ತುಂಬಾ ಒಳ್ಳೆಯದು. ಅಗತ್ಯ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಶಕ್ತಿ ಮತ್ತು ರಕ್ಷಣೆ ನೀಡುತ್ತದೆ. ಬಹಳ ಭಕ್ತಿಯಿಂದ ಹನುಮಂತನನ್ನು ಕರೆದರೆ, ಅವನು ಬೇಗನೆ ಉತ್ತರಿಸುತ್ತಾನೆ ಎಂದು ಹೇಳಲಾಗುತ್ತದೆ. ಕೆಟ್ಟ ಕನಸುಗಳು ಮತ್ತು ನಕಾರಾತ್ಮಕ ಶಕ್ತಿಗಳಿಂದ ತೊಂದರೆಗೊಳಗಾದವರಿಗೆ ಹನುಮಾನ್ ಚಾಲೀಸಾ ಪಠಣವು ತುಂಬಾ ಸಹಾಯಕವಾಗಿದೆ. ‘ಭೂತ್ ಪಿಸಾಚ್ ನಿಕಟ್ ನಹೀ ಅವೆ, ಮಹಾವೀರ್ ಜಬ್ ನಾಮ್ ಸುನವೇ’ ಎಂಬ ಸಾಲುಗಳನ್ನು ಪಠಿಸುವುದರಿಂದ ನಮ್ಮನ್ನು ರಕ್ಷಿಸುತ್ತದೆ. ಇದು ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿಯಾಗಿ ಕಾರ್ಯ ಅಡೆ ತಡೆಯಿಲ್ಲದ ಶಾಂತ ನಿದ್ರೆಯನ್ನು ನಿಮಗೆ ನೀಡುತ್ತದೆ.

ದುರ್ಗಾ ಮಂತ್ರ

'ಯಾ ದೇವಿ ಸರ್ವ ಭೂತೇಷು ನಿದ್ರಾ ರೂಪೇಣ ಸಂಸ್ಥಿತಾ, ನಮಸ್ತಸ್ಯೇ ನಮಸ್ತಸ್ಯೇ ನಮೋ ನಮಃ' ಈ ದುರ್ಗಾ ಮಂತ್ರವು ದೈವಿಕ ಸ್ತ್ರೀ ಶಕ್ತಿಯ ವ್ಯಾಖ್ಯಾನವಾಗಿದೆ. ರಕ್ಷಣೆ ಮತ್ತು ಚಿಕಿತ್ಸೆಗೆ ಮೀಸಲಾದ ಮಂತ್ರ, ದುರ್ಗಾ ದೇವಿಯು ಅನೇಕ ರೂಪಗಳಲ್ಲಿ ಭಕ್ತರನ್ನು ರಕ್ಷಿಸುತ್ತಾಳೆ ಎಂದು ನಂಬಲಾಗಿದೆ. ತನ್ನ ಮಗುವನ್ನು ಕೆಟ್ಟದ್ದರಿಂದ ರಕ್ಷಿಸಲು ತಾಯಿ ಯಾವಾಗಲೂ ಮುಂದೆ ಇರುತ್ತಾಳೆ. ಮಲಗುವ ಸಮಯದಲ್ಲೂ ಈ ಮಂತ್ರವನ್ನು ಪಠಿಸುವುದರಿಂದ ನಮ್ಮನ್ನು ದುಸ್ವಪ್ನಗಳಿಂದ ರಕ್ಷಿಸುತ್ತದೆ. ದುರ್ಗಾ ದೇವಿ ನಮ್ಮ ರಕ್ಷಕಳಾಗಿರುವುದು ನಮಗೆ ಧೈರ್ಯ ನೀಡುತ್ತದೆ .

ಮಹಾ ಮೃತ್ಯುಂಜಯ ಮಂತ್ರ

ಭಯವನ್ನು ಹೋಗಲಾಡಿಸಲು ಮಹಾ ಮೃತ್ಯುಂಜಯ ಮಂತ್ರವು ಉಪಯುಕ್ತವಾಗಿದೆ. ಇದು ಸಾವಿನ ಭಯವನ್ನು ಹೋಗಲಾಡಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಓಂ ಎಂದು ಪ್ರಾರಂಭವಾಗುವ ಈ ಮಂತ್ರದ ಪುನರಾವರ್ತಿತ ಪಠಣದಿಂದ ಶಿವನ ಆಶೀರ್ವಾದ ದೊರೆಯುತ್ತದೆ. ಮಲಗುವ ಮುನ್ನ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಅಕಾಲಿಕ ಮರಣ ಭಯ ದೂರವಾಗುತ್ತದೆ. ಭಗವಂತ ಶಿವನನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ. ವ್ಯಕ್ತಿಯ ಸುತ್ತಲಿನ ಹಾನಿಕಾರಕ ಅಶುದ್ಧ ಶಕ್ತಿಗಳಿಂದ ಭಕ್ತರು ಪರಿಹಾರ ಪಡೆಯುತ್ತಾರೆ. ಹಾಗೇ ಈ ಮಂತ್ರವನ್ನು ಪಠಿಸುವುದರಿಂದ ಯಾವುದೇ ಒತ್ತಡ ಇಲ್ಲದೆ ಒತ್ತಡ ನಿವಾರಣೆಯಾಗಿ ಉತ್ತಮ ನಿದ್ರೆ ಬರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ