Powerful Mantra: ಜೀವನದಲ್ಲಿ ಸಕಲ ಸುಖ, ಸಂತೋಷ ನಿಮ್ಮದಾಗಬೇಕಾ? ಈ ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ ಅದೃಷ್ಟ ನಿಮ್ಮದಾಗಿಸಿಕೊಳ್ಳಿ
Apr 11, 2024 09:17 AM IST
ಸಕಲ ಸುಖ, ಸಂತೋಷಕ್ಕಾಗಿ ಈ ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ
Powerful Mantras: ಅದೃಷ್ಟ ಮತ್ತು ದುರಾದೃಷ್ಟ ಎರಡೂ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಅದೃಷ್ಟದಿಂದ ಮುಟ್ಟಿದೆಲ್ಲಾ ಚಿನ್ನವಾದರೆ ದುರಾದೃಷ್ಟದಿಂದ ಎಲ್ಲವನ್ನೂ ಕಳೆದುಕೊಳ್ಳಬಹುದು. ಹಾಗಂತ ನಮ್ಮ ಪ್ರಯತ್ನವನ್ನು ನಾವು ಬಿಡಬಾರದು. ನಿಷ್ಠೆಯಿಂದ ದೇವರ ಮಂತ್ರವನ್ನು ಪಠಿಸುತ್ತಿದ್ದರೆ ಸಮಸ್ಯೆಗಳೆಲ್ಲಾ ಮಾಯವಾಗುವುದು.
ಹಿಂದೂ ಧರ್ಮದಲ್ಲಿ ವೇದ ಮತ್ತು ಪುರಾಣಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಮಂತ್ರಗಳ ಉಚ್ಛಾರಣೆಯು ಅತೀಂದ್ರಿಯ ಅಥವಾ ಆಧ್ಯಾತ್ಮಿಕ ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಮಂತ್ರಗಳ ಉಚ್ಚಾರಣೆಯು ಧನಾತ್ಮಕ ಶಕ್ತಿ ಸುತ್ತುವರೆಯುತ್ತದೆ. ಅಲ್ಲದೆ, ಮಂತ್ರಗಳು ನಮ್ಮ ಆತ್ಮದೊಳಗೆ ಆಳವಾಗಿ ಪ್ರತಿಧ್ವನಿಸುವ ಮತ್ತು ಬ್ರಹ್ಮಾಂಡದ ಆವರ್ತನಕ್ಕೆ ಹೊಂದಿಕೆಯಾಗುವ ಪವಿತ್ರ ಪದಗಳು ಎಂದು ನಂಬಲಾಗಿದೆ. ಮಂತ್ರಗಳು ಮನಸ್ಸು ಮತ್ತು ಚೈತನ್ಯವನ್ನು ಶುದ್ಧೀಕರಿಸುತ್ತವೆ. ನಕಾರಾತ್ಮಕ ಚಿಂತನೆಯನ್ನು ಬದಲಾಯಿಸುತ್ತವೆ. ನಿಮ್ಮ ಜೀವನದಿಂದ ದುರಾದೃಷ್ಟವನ್ನು ತೊಡೆದುಹಾಕಲು ಈ 7 ಶಕ್ತಿಶಾಲಿ ಮಂತ್ರಗಳನ್ನು ಪಠಿಸಿದರೆ ಒಳ್ಳೆಯದು.
ತಾಜಾ ಫೋಟೊಗಳು
1. ಓಂ ನಮಃ ಶಿವಾಯ:
ಓಂ ನಮಃ ಶಿವಾಯ ಮಂತ್ರವು ಶಿವನನ್ನು ಗೌರವಿಸುವ ಪ್ರಬಲ ಮತ್ತು ಪವಿತ್ರ ಮಂತ್ರವಾಗಿದೆ. ಜಗದೊಡೆಯ ಈಶ್ವರನು ವಿನಾಶ ಮತ್ತು ರೂಪಾಂತರವನ್ನು ಪ್ರತಿನಿಧಿಸುತ್ತಾನೆ. ಈ ಮಂತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಜನನ ಮತ್ತು ಮರಣದ ಚಕ್ರದಿಂದ ಮುಕ್ತಿಯನ್ನು ಪಡೆಯಬಹುದು. ಓಂ ನಮಃ ಶಿವಾಯ ಮಂತ್ರವು ಐದು ಉಚ್ಚಾರಾಂಶಗಳನ್ನು ಒಳಗೊಂಡಿದೆ: ನ, ಮಾ, ಶಿ, ವಾ ಮತ್ತು ಯ. ಈ ಉಚ್ಚಾರಾಂಶಗಳು ಐದು ಅಂಶಗಳಿಗೆ ಮತ್ತು ಮಾನವ ದೇಹದಲ್ಲಿನ ಐದು ಚಕ್ರಗಳಿಗೆ ಸಂಬಂಧಿಸಿವೆ. ಮಂತ್ರವು ಓಂನಿಂದ ಪ್ರಾರಂಭವಾಗುತ್ತದೆ. ಇದು ಸೃಷ್ಟಿಯ ಮೂಲ ಎಂದು ನಂಬಲಾಗಿದೆ.
2. ಓಂ ತ್ರಯಂಬಕಂ ಯಜಾಮಾಹೇ:
“ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಊರ್ವರೂಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್”
ಓಂ ತ್ರಯಂಬಕಂ ಯಜಾಮಹೇ ಮಂತ್ರವನ್ನು ಪಠಿಸುವುದರಿಂದ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಆಂತರಿಕ ಮತ್ತು ಬಾಹ್ಯ ಸಮತೋಲನ, ಶಾಂತಿ, ಶಾಂತತೆ ಮತ್ತು ಯೋಗಕ್ಷೇಮವನ್ನು ಅನುಗ್ರಹಿಸುತ್ತದೆ. ಆಪತ್ಕಾಲದಲ್ಲಿ ಈ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ, ದುಷ್ಟ ಶಕ್ತಿಗಳನ್ನು ನಾಶ ಮಾಡಿ ದೈವಿಕ ಶಕ್ತಿಯು ಕವಚದಂತೆ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ.
3. ಓಂ ಗಂ ಗಣಪತೆಯೇ ನಮಃ:
ಹಿಂದೂಗಳು ಹಲವಾರು ದೇವರುಗಳನ್ನು ಆರಾಧಿಸಿದರೂ ಮೊದಲ ಪೂಜೆ ವಿಘ್ನ ನಿವಾರಕನಿಗೆ ಮಾಡಲಾಗುತ್ತದೆ. ಗಣೇಶನ ಆಶೀರ್ವಾದ ಪಡೆದ ನಂತರವೇ ಮುಂದಿನ ಕಾರ್ಯಕ್ರಮ ನಡೆಸಲಾಗುತ್ತದೆ. ಮೊದಲ ಪೂಜೆ ಗಣಪತಿಗೆ ಸಲ್ಲಿಸಿದರೆ ಸಕಲ ವಿಘ್ನಗಳು ದೂರವಾಗುತ್ತದೆ ಅನ್ನೋ ನಂಬಿಕೆ ಹಿಂದೂಗಳದ್ದು.
ಓಂ ಗಂ ಗಣಪತಯೇ ನಮಃ ಎಂಬ ಗಣೇಶ ಮಂತ್ರವನ್ನು ಭಕ್ತರು ಹೊಸ ಆರಂಭಕ್ಕೆ ಸಿದ್ಧರಾದಾಗ ಅಥವಾ ಏನಾದರೂ ಹೊಸತನವನ್ನು (ಹೊಸ ಕೆಲಸ, ಹೊಸ ಸಂಬಂಧ, ವ್ಯಾಪಾರ ಇತ್ಯಾದಿ) ತೊಡಗಿಸಿಕೊಂಡಾಗ ಬಳಸುತ್ತಾರೆ. ಈ ಮಂತ್ರವನ್ನು ಜಪಿಸುವುದರಿಂದ ಅಡೆತಡೆಗಳು, ನಕಾರಾತ್ಮಕತೆ ಮತ್ತು ಭಯ ದೂರವಾಗುತ್ತದೆ. ಏನಾದರೂ ಹೊಸ ಉದ್ಯಮ, ಉದ್ಯೋಗ ಮುಂತಾದವನ್ನು ಮಾಡಿದಾಗ ಈ ಮಂತ್ರ ಜಪಿಸಿದರೆ ಖಂಡಿತಾ ಯಶಸ್ಸು ಸಿಗುತ್ತದೆ.
4. ‘ಓಂ ಭೂರ್ ಭುವ ಸ್ವಃ’
ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ
ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್
ಈ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿಯು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಾನೆ. ಆತನ ಜೀವನ ಬದಲಾಗಿ ಸುಖ-ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ನಂಬಲಾಗಿದೆ. ಇದು ಸೂರ್ಯನನ್ನು ಸ್ತುತಿಸುವಂತಹ ಮಂತ್ರವಾಗಿದೆ. ಸೂರ್ಯನನ್ನು ಧ್ಯಾನಿಸುವ ಮೂಲಕ ನಮ್ಮ ಬುದ್ಧಿಶಕ್ತಿಯು ಸರಿಯಾದ ಮಾರ್ಗದಲ್ಲಿರುತ್ತದೆ ಎಂಬುದು ಈ ಮಂತ್ರದ ಆಶಯ.
5. ಓಂ ಸಹನಾ ವವತು:
ಓಂ ಸಹನಾ ವವತು |
ಸಹ ನೌ ಭುನಕ್ತು |
ಸಹ ವಿರ್ಯಂಕರ ವಾವಹೈ |
ತೇಜಸ್ವಿ ನೌ-ಅಧೀತಮ್-ಅಸ್ತು ಮಾ ವಿದ್ವಿಸ್ಸಾವಹೈ |
ಓಂ ಶಾಂತಿಃ ಶಾಂತಿಃ ಶಾಂತಿಃ |
ಸಾಮಾನ್ಯವಾಗಿ ಊಟದ ಸಮಯದಲ್ಲಿ ಈ ಮಂತ್ರವನ್ನು ಪಠಿಸಲಾಗುತ್ತದೆ. ಈ ಶಾಂತಿ ಮಂತ್ರವನ್ನು ಪಠಿಸಿದಾಗ ಮನಸ್ಸು ಶಾಂತವಾಗುತ್ತದೆ. ಅವನು ನಮ್ಮಿಬ್ಬರನ್ನೂ ಒಟ್ಟಿಗೆ ರಕ್ಷಿಸಲಿ, ಅವನು ನಮ್ಮನ್ನು ಪೋಷಿಸಲಿ ಎಂಬರ್ಥವನ್ನು ನೀಡುತ್ತೆ ಈ ಮಂತ್ರ. ಇದು ಪಠಿಸುವವರನ್ನು ಆಧ್ಯಾತ್ಮಿಕ ಮಟ್ಟಕ್ಕೆ ಕೊಂಡೊಯ್ಯುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.