logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಮಾನತೆಯಿಂದ ಹೊಂದಾಣಿಕೆಯವರೆಗೆ; ರಥಯಾತ್ರೆಯ ಮೂಲಕ ಪುರಿಯ ಜಗನ್ನಾಥ ಜಗತ್ತಿಗೆ ಸಾರಿರುವ 4 ಸಂದೇಶಗಳಿವು

ಸಮಾನತೆಯಿಂದ ಹೊಂದಾಣಿಕೆಯವರೆಗೆ; ರಥಯಾತ್ರೆಯ ಮೂಲಕ ಪುರಿಯ ಜಗನ್ನಾಥ ಜಗತ್ತಿಗೆ ಸಾರಿರುವ 4 ಸಂದೇಶಗಳಿವು

Raghavendra M Y HT Kannada

Jul 14, 2024 10:30 AM IST

google News

ಸಮಾನತೆಯಿಂದ ಹೊಂದಾಣಿಕೆಯವರೆಗೆ; ರಥಯಾತ್ರೆಯ ಮೂಲಕ ಪುರಿಯ ಜಗನ್ನಾಥ ಜಗತ್ತಿಗೆ ಸಾರಿರುವ 4 ಸಂದೇಶಗಳಿವು

    • ಒಡಿಶಾದ ಪುರಿಯಲ್ಲಿರುವ ಜಗನ್ನಾಥ ರಥಯಾತ್ರೆ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಈ ರಥಯಾತ್ರೆ ಸಾರ್ವತಿಕ ಮೌಲ್ಯಗಳನ್ನು ಉತ್ತೇಜಿಸುವ ಹಬ್ಬವಾಗಿದೆ. ಸಮಾನತೆ, ಸಹಾನುಭೂತಿ ಹಾಗೂ ಹೊಂದಾಣಿಕೆಯ ಕುರಿತು ಭಗವಾನ್ ಜಗನ್ನಾಥನ ಬೋಧನೆ ಜಾಗತಿಕವಾಗಿ ಪ್ರತಿಧ್ವನಿಸುತ್ತದೆ. ರಥಯಾತ್ರೆಯ 4 ಸಂದೇಶಗಳು ಇಲ್ಲಿವೆ.
ಸಮಾನತೆಯಿಂದ ಹೊಂದಾಣಿಕೆಯವರೆಗೆ; ರಥಯಾತ್ರೆಯ ಮೂಲಕ ಪುರಿಯ ಜಗನ್ನಾಥ ಜಗತ್ತಿಗೆ ಸಾರಿರುವ 4 ಸಂದೇಶಗಳಿವು
ಸಮಾನತೆಯಿಂದ ಹೊಂದಾಣಿಕೆಯವರೆಗೆ; ರಥಯಾತ್ರೆಯ ಮೂಲಕ ಪುರಿಯ ಜಗನ್ನಾಥ ಜಗತ್ತಿಗೆ ಸಾರಿರುವ 4 ಸಂದೇಶಗಳಿವು

ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಒಡಿಶಾದ ಪುರಿಯನ್ನು ಅತ್ಯಂತ ಭವ್ಯವಾದ ಉತ್ಸದ ನೆಲೆ ಅಂತಲೂ ಕರೆಯಲಾಗುತ್ತದೆ. ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಅತಿ ದೊಡ್ಡ ರಥಯಾತ್ರೆಯನ್ನು ಜಗನ್ನಾಥನ ರಥಯಾತ್ರೆ ಅಂತಲೂ ಕರೆಯಲಾಗುತ್ತದೆ. ದೇವಿ ಸುಭದ್ರ, ಬಲಭದ್ರ ದೇವರುಗಳನ್ನು ಪುರಿಯ ಬೀದಿಗಳಲ್ಲಿ ಪ್ರತಿ ವರ್ಷ ಭಕ್ತರನ್ನು ಭೇಟಿ ಮಾಡಿಸುವ ಅತ್ಯಂತ ಅದ್ಧೂರಿಯ ರಥಯಾತ್ರೆ ಇದಾಗಿದೆ. ಭಾರತ ಮಾತ್ರವಲ್ಲದೇ, ಜಗತ್ತಿನಾದ್ಯಂತ ಜನರನ್ನು ರಥಯಾತ್ರೆ ಆಕರ್ಷಿಸುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ದೇವಾಲಯದಿಂದ ಗುಂಡಿಚಾ ಧಾಮ್‌ಗೆ ದೇವತೆಗಳ ಯಾತ್ರೆಗಿಂತ ಹೆಚ್ಚಾಗಿ ಇದು ಜಾಗತಿಕ ಸಮಾಜಕ್ಕೆ ಪಾಠಗಳನ್ನು ಮತ್ತು ಸಾರ್ವತ್ರಿಕ ಮೌಲ್ಯಗಳನ್ನು ಕಲಿಸುವ ಅಧ್ಯಾತ್ಮಿಕ ತಾಣವಾಗಿದೆ. ರಥಯಾತ್ರೆಯ ಉದ್ದೇಶ ಭಗವಾನ್ ಜಗನ್ನಾಥ ಜಗತ್ತಿಗೆ ನೀಡಿರುವ ಸಂದೇಶಗಳನ್ನು ನೀಡಲಾಗಿದೆ.

ಸಮಾನತೆಯ ಪಾಠ

ಭಗವಾನ್ ಜಗನ್ನಾಥನ ದೊಡ್ಡ ಕಣ್ಣುಗಳು ಎಲ್ಲಾ ಜೀವಿಗಳನ್ನು ಅವರ ಸಾಮಾಜಿಕ ಸ್ಥಾನಮಾ, ಜಾತಿ ಅಥವಾ ಪಂಥದ ಹೊರತಾಗಿ ನೋಡುತ್ತಾರೆ. ಅಪ್ಪಿಕೊಳ್ಳುತ್ತಾರೆ ಎಂಬುದನ್ನು ಈ ರಥಯಾತ್ರೆ ಸೂಚಿಸುತ್ತದೆ. ಅಂತರ್ಗತ ದೃಷ್ಟಿಯು ಸಾರ್ವತ್ರಿಕ ಆತ್ಮದ ಮೂಲ ಹಿಂದೂ ಬೋಧನೆಯನ್ನು ಎತ್ತಿ ತೋರಿಸುತ್ತದೆ. ಪ್ರತಿ ಜೀವಿಯು ದೈವಿಕ ಸಂಪೂರ್ಣ ಭಾಗವಾಗಿದೆ. ಯಾತ್ರೆಯು ಪ್ರಪಂಚದಾದ್ಯಂತ ಎಲ್ಲರಿಗೂ ರಥವನ್ನು ಎಳೆಯುವ ಅನುವು ಮಾಡಿಕೊಡುತ್ತದೆ. ದೈವಿಕ ದೃಷ್ಟಿಯಲ್ಲಿ ಎಲ್ಲಾ ಮಾನವರ ಸಮಾನತೆಯನ್ನು ಇದು ಗುರುತಿಸುತ್ತದೆ.

ಸಹಾನುಭೂತಿಯ ಶಕ್ತಿ

ಜನಗ್ನಾಥನ ಕಥೆಗಳು ಸಹಾನುಭೂತಿಗೆ ಹಲವು ಉದಾಹರಣೆಗಳನ್ನು ಕೊಡುತ್ತವೆ. ಒಂದು ದಂತಕಥೆಯ ಪ್ರಕಾರ, ದಸಿಯಾ ಬೌರಿ ಎಂಬ ಭಕ್ತೆ ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಿದ ಬಗ್ಗೆ ಹೇಳುತ್ತದೆ. ಈ ಭಕ್ತೆಯ ನೈವೇದ್ಯವನ್ನು ನಿಷೇದಿಸುವ ಸಾಮಾಜಿಕ ನಿಯಮಗಳ ಹೊರತಾಗಿಯೂ ಭಗವಾನ್ ಜಗನ್ನಾಥನು ಆಕೆಯ ನೈವೇದ್ಯವನ್ನು ಸ್ವೀಕರಿಸಿದ್ದನು. ಆ ಮೂಲಕ ಪ್ರಾಣಿಕ ಭಕ್ತಿ ಮತ್ತು ದಯೆಯು ಎಲ್ಲಕ್ಕಿಂತ ಹೆಚ್ಚು ಮೌಲ್ಯಯುವಾಗಿದೆ ಎಂಬುದನ್ನು ಪ್ರತಿನಿಧಿಸುತ್ತದೆ.

ಹೊಂದಾಣಿಕೆ

ರಥಯಾತ್ರೆಯ ಸಮಯದಲ್ಲಿ ರಥಗಳು ದೇವಾಲಯದಿಂದ ಉದ್ಯಾನ ಅರಮನೆಗೆ ಬಂದು ಹಿಂತಿರುಗಿ, ಪುನಃಸ್ಥಾಪನೆ ಹಾಗೂ ಪುನರ್ಯೌವನಗೊಳಿಸುವ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತವೆ. ಪ್ರತಿ 8, 12 ಅಥವಾ 19 ವರ್ಷಗಳಿಗೊಮ್ಮೆ ನಬಕಲೇಬರ ಮೂಲಕ ಭಗವಾನ್ ಜಗನ್ನಾಥ, ದೇವಿ ಸುಭದ್ರ ಹಾಗೂ ಭಗವಾನ್ ಬಲಭದ್ರರ ಮರದ ವಿಗ್ರಹಗಳನ್ನು ಬದಲಾಯಿಸಲಾಗುತ್ತದೆ. ಇದು ಪುನರ್ಜನ್ಮ, ಜೀವನ ಹಾಗೂ ಮರಣದ ಚಕ್ರವನ್ನು ಪ್ರತಿನಿಧಿಸುತ್ತದೆ. ಪ್ರಸ್ತುತ ಕಾಲದಲ್ಲಿ ತುಂಬಾ ಅನಿಶ್ಚಿತತೆಯಿರುವಾಗ ಹೊಂದಾಣಿಕೆಯು ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಆಧಾರಸ್ತಂಭವಾಗಿದೆ.

ಅಧ್ಯಾತ್ಮಿಕ ಮತ್ತು ಆಂತರಿಕ ಶಾಂತಿ

ಪ್ರತಿಯೊಬ್ಬರು ಒತ್ತಡ ಮತ್ತು ಗೊಂದಲಗಳನ್ನು ನಿಭಾಯಿಸುತ್ತಿರುವಾಗ ಶಾಂತಿಯ ಕ್ಷಣಗಳನ್ನು ಕಂಡುಕೊಳ್ಳುವುದು ಮತ್ತು ನಮ್ಮ ಆಂತರಿಕ ಆತ್ಮಗಳೊಂದಿಗೆ ಸಂಪರ್ಕ ಸಾಧಿಸುವುದು ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಮುಖ್ಯವಾಗಿದೆ. ಅಧ್ಯಾತ್ಮಿಕ ಸಂಪ್ರದಾಯಗಳಿಂದ ಪ್ರಭಾವಿತವಾಗಿರುವ ಧ್ಯಾನ, ಪ್ರಾರ್ಥನೆ ಹಾಗೂ ಚಿಂತನೆ ವ್ಯಕ್ತಿಗಳಿಗೆ ಸಮಯೋತನ ಹಾಗೂ ಶಾಂತಿಯನ್ನು ಸಾಧಿಸಲು ಸಹಾಯ ಮಡಾುತ್ತೆ. ರಥಯಾತ್ರೆಯಲ್ಲಿ ರಥವನ್ನು ಎಳೆಯುವುದು ಜಗನ್ನಾಥ ನಮ್ಮ ಹೃದಯ ಮತ್ತು ಮನೆಗಳನ್ನು ಪ್ರವೇಶಿಸುವ ಸಂಕೇತವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ