logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮಗೂ ಲಕ್ಷ್ಮೀ ಅನುಗ್ರಹ ಸಿಕ್ಕಿದೆಯೇ, ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಪರಿಶೀಲಿಸಿಕೊಳ್ಳಿ; ಅನುದಿನ ಅಧ್ಯಾತ್ಮ

ನಿಮಗೂ ಲಕ್ಷ್ಮೀ ಅನುಗ್ರಹ ಸಿಕ್ಕಿದೆಯೇ, ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಪರಿಶೀಲಿಸಿಕೊಳ್ಳಿ; ಅನುದಿನ ಅಧ್ಯಾತ್ಮ

HT Kannada Desk HT Kannada

Aug 26, 2023 05:20 AM IST

google News

ಲಕ್ಷ್ಮೀದೇವಿಯ ಅನುಗ್ರಹವಾಗುವುದು ತಿಳಿಯುವುದು ಹೇಗೆ?

    • Lakshmi Blessings: ಲಕ್ಷ್ಮೀ ಕಟಾಕ್ಷ ಅಂದರೆ ಅನುಗ್ರಹವು ದೊರೆತರೆ ಅಂಥವರ ಬದುಕು ಹೇಗಿರುತ್ತದೆ? ಹೇಗೆ ಬದಲಾಗುತ್ತದೆ? ನಮಗೆ ಲಕ್ಷ್ಮೀ ಅನುಗ್ರಹ ಆಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ವಿವರ.
ಲಕ್ಷ್ಮೀದೇವಿಯ ಅನುಗ್ರಹವಾಗುವುದು ತಿಳಿಯುವುದು ಹೇಗೆ?
ಲಕ್ಷ್ಮೀದೇವಿಯ ಅನುಗ್ರಹವಾಗುವುದು ತಿಳಿಯುವುದು ಹೇಗೆ?

ವರಮಹಾಲಕ್ಷ್ಮೀ ಹಬ್ಬ ನಿನ್ನೆ ತಾನೆ (ಆಗಸ್ಟ್ 24) ಮುಗಿದಿದೆ. ನಾಗರ ಪಂಚಮಿಯ ನಂತರ ಬರುವ ಈ ಪ್ರಮುಖ ಹಬ್ಬವನ್ನು ನಾಡು ಸಡಗರ ಸಂಭ್ರಮದಿಂದ ಆಚರಿಸಿದೆ. ಹೊಸ ಸೀರೆಯುಟ್ಟು ಲಕ್ಷ್ಮೀದೇವಿಯನ್ನು ಪೂಜಿಸಿದ ಮಹಿಳೆಯರು ಸಿಹಿ ಅಡುಗೆ ನೇವೇದ್ಯ ಮಾಡಿ ಕೈ ಮುಗಿದಿದ್ದಾರೆ. ಭಕ್ತಿಗೆ ಒಲಿಯುವ ಲಕ್ಷ್ಮೀ ದೇವಿಯನ್ನು ಸಂಪತ್ತಿನ ಅಧಿದೇವತೆಯೆಂದೇ ಕರ್ನಾಟಕದ ಭಕ್ತರು ಪರಿಭಾವಿಸಿದ್ದಾರೆ. ಇಂಥ ಲಕ್ಷ್ಮೀ ಕಟಾಕ್ಷ ಅಂದರೆ ಅನುಗ್ರಹವು ದೊರೆತರೆ ಅಂಥವರ ಬದುಕು ಹೇಗಿರುತ್ತದೆ? ಹೇಗೆ ಬದಲಾಗುತ್ತದೆ? ನಮಗೆ ಲಕ್ಷ್ಮೀ ಅನುಗ್ರಹ ಆಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಎಂಬ ಬಗ್ಗೆ ಈ ಬರಹದಲ್ಲಿ ವಿವರವಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಎಲ್ಲರಿಗೂ, ಎಲ್ಲಕ್ಕೂ ಹಣ ಬೇಕು. ಇದು ಈಗಿನ ಕಾಲಧರ್ಮ. ಹಣವಿಲ್ಲದೆ ವ್ಯವಹಾರವು ಈಗ ನಡೆಯುವಂತಿಲ್ಲ. ಆದರೆ ಹಣವನ್ನು ಹೇಗೆ ಸಂಪಾದಿಸಬೇಕು? ಹೇಗೆ ಗೌರವಿಸಬೇಕು? ಹೇಗೆ ವಿನಿಯೋಗ ಮಾಡಬೇಕು? ಹೇಗೆ ನಮ್ಮ ಪುರುಷಾರ್ಥ ಸಾಧನವಾಗಿ ಮಾಡಿಕೊಳ್ಳಬೇಕು ಎಂಬುದು ಅನೇಕರಿಗೆ ತಿಳಿಯದು. ನಮ್ಮ ಹಿರಿಯರು 'ಧನಾತ್ ಧರ್ಮಂ, ತತಃ ಸುಖಮ್' ಎಂದಿದ್ದಾರೆಯೇ ಹೊರತು, 'ಧನಾತ್ ಸುಖಂ' ಎಂದು ಹೇಳಿಲ್ಲ. ಹಣವಿದ್ದ ಮಾತ್ರಕ್ಕೆ ಸುಖ ಇರುತ್ತದೆ ಎನ್ನುವುದು ನಮ್ಮ ಹಿರಿಯರ ಭಾವನೆಯೇ ಆಗಿರಲಿಲ್ಲ. 'ಲಕ್ಷ್ಮೀಪೂಜೆಯಿಂದ ಧನಲಾಭವಾಗುತ್ತದೆ' ಎನ್ನುವುದು ನಮ್ಮ ಸಮಾಜದಲ್ಲಿ ನೆಲೆಸಿರುವ ಜನಪ್ರಿಯ ನಂಬಿಕೆ. ಆದರೆ ವೇದಗಳು ಲಕ್ಷ್ಮೀಪೂಜೆಯಿಂದ ಆಗುವ ಲಾಭದ ಬಗ್ಗೆ ಬೇರೆಯೇ ಆದ ವಿಚಾರಗಳನ್ನು ಹೇಳುತ್ತವೆ.

ಲಕ್ಷ್ಮೀದೇವಿಯ ಗುಣಮಹಿಮೆಗಳನ್ನು ವರ್ಣಿಸುವ ಶ್ರೀಸೂಕ್ತದ 21ನೇ ಋಕ್ಕುಗಳು ಸಂಪತ್ತಿನ ಸ್ವರೂಪದ ಬಗ್ಗೆ ವಿವರಿಸುತ್ತವೆ. "ಧನಮಗ್ನಿರ್ಧನಂ ವಾಯುರ್ಧನಂ ಸೂರ್ಯೋ ಧನಂ ವಸುಃ | ಧನಮಿಂದ್ರೋ ಬೃಹಸ್ಪತಿರ್ವರುಣ ಧನಮಸ್ತು ಮೇ" ಎನ್ನುವುದು ಈ ಋಕ್ಕು. ಈ ಮಂತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸಿದರೆ, "ಅಗ್ನಿ, ವಾಯು, ಸೂರ್ಯ, ವಸು, ಇಂದ್ರ, ಬೃಹಸ್ಪತಿ, ವರುಣ- ಈ ದೇವತೆಗಳೆಲ್ಲರೂ ನನಗೆ ಧನಸ್ವರೂಪರಾಗಿ ಅನುಗ್ರಹಿಸಲಿ" ಎಂದು ಆಗುತ್ತದೆ.

ಲಕ್ಷ್ಮೀ ಕಟಾಕ್ಷವಾದರೆ ದೇಶಕ್ಕೆ ಎಂದಿಗೂ ವಿದ್ಯುತ್, ನೀರು, ತೈಲ, ಆಹಾರ, ಔಷಧಿಗಳಿಗೆ ಕೊರತೆ ಇರುವುದಿಲ್ಲ ಎಂಬುದು ಇದರ ಪರೋಕ್ಷ ಅರ್ಥ. ಒಂದು ಹಳ್ಳಿಯಲ್ಲಿ ಮಳೆಯಾಗದಿದ್ದರೆ ಒಂದು ರಾಜ್ಯ ಹೇಗೋ ಆಸರೆಯಾಗಬಹುದು. ಆದರೆ ಒಂದು ದೇಶಕ್ಕೇ ಮಳೆಯಾಗದಿದ್ದರೆ ಯಾರು ಆಸರೆಯಾಗಬೇಕು? ಜನರು ನೆಮ್ಮದಿಯಾಗಿ ಇರಬೇಕು ಎಂದರೇ ಲಕ್ಷ್ಮೀಯ ಅನುಗ್ರಹ ಇರಬೇಕು.

ಇದೇ ಸೂಕ್ತದ 23ನೇ ಋಕ್ಕು ಲಕ್ಷ್ಮೀ ದೇವಿಯ ಅನುಗ್ರಹವನ್ನು ಇನ್ನೂ ಸೊಗಸಾಗಿ ವರ್ಣಿಸುತ್ತದೆ. "ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ" ಎನ್ನುವುದು ಈ ಮಂತ್ರದ ಮೊದಲ ಭಾಗ. "ಲಕ್ಷ್ಮೀ ಕೃಪೆ ಆದವರಿಗೆ ಕೋಪ, ಅಸೂಯೆ, ಜಿಪುಣತನ, ಕೆಟ್ಟಬುದ್ಧಿಗಳು ಬರುವುದಿಲ್ಲ" ಎನ್ನುವುದು ಈ ಮಂತ್ರದ ಸ್ಥೂಲ ಕನ್ನಡ ಅನುವಾದ ಆಗುತ್ತದೆ. ಹಣ ಅಥವಾ ಚಿನ್ನವನ್ನು ಶ್ರೀಸೂಕ್ತ ಸಂಪತ್ತು ಎಂದಾಗಲೀ, ಲಕ್ಷ್ಮೀ ಅನುಗ್ರಹದಿಂದ ಅದಷ್ಟೇ ಸಿಗುತ್ತದೆ ಎಂದಾಗಲೀ ಹೇಳುವುದಿಲ್ಲ. ಅದರ ಬದಲಿಗೆ "ಮೋಕ್ಷ ಲಕ್ಷ್ಮೀ ಅನುಗ್ರಹವಾದರೆ ಆತ್ಮಸಂತೃಪ್ತಿ ದೊರಕುತ್ತದೆ" ಎಂದು ವಿವರಿಸಿ, ಅದರ ಲಕ್ಷಣಗಳನ್ನು ಹೇಳುತ್ತದೆ.

ವರಮಹಾಲಕ್ಷ್ಮೀ ಪೂಜೆ ಮಾಡಿರುವ ನಿಮ್ಮಲ್ಲಿ ದಾನ ಬುದ್ಧಿ ಜಾಗೃತವಾದರೆ, ಸಂತೃಪ್ತ ಪ್ರಜ್ಞೆ ಮರಳಿದರೆ, ಉಪಕಾರ ಮಾಡಿದವರಿಗೆ ಕೃತಜ್ಞತೆ ಹೇಳಬೇಕು ಎನಿಸಿದರೆ ಲಕ್ಷ್ಮೀ ಪೂಜೆ ಸಾರ್ಥಕವಾಯಿತು ಎಂದೇ ಅರ್ಥ. ಆತ್ಮಸಂತೃಪ್ತಿ, ನೆಮ್ಮದಿಯೇ ಲಕ್ಷ್ಮೀ ಪೂಜೆಯ ನಿಜವಾದ ಫಲ.

(ಈ ಮಾಹಿತಿಯನ್ನು ಶ್ರೀಯುತ ಎಚ್.ಎಸ್.ಲಕ್ಷ್ಮೀನರಸಿಂಹಮೂರ್ತಿ ಅವರ 'ಶ್ರೀಸೂಕ್ತಭಾಷ್ಯ' ಪುಸ್ತಕದಿಂದ ಸಂಗ್ರಹಿಸಲಾಗಿದೆ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ