logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesh Chaturthi 2024: ಏಕದಂತನಿಗೆ ಪ್ರಥಮ ಪೂಜೆ ಏಕೆ, ಗಣಪತಿ ಪ್ರಥಮಪೂಜಿತನಾದ ಹಿಂದಿದೆ ಆಸಕ್ತಿದಾಯಕ ಕಥೆ

Ganesh Chaturthi 2024: ಏಕದಂತನಿಗೆ ಪ್ರಥಮ ಪೂಜೆ ಏಕೆ, ಗಣಪತಿ ಪ್ರಥಮಪೂಜಿತನಾದ ಹಿಂದಿದೆ ಆಸಕ್ತಿದಾಯಕ ಕಥೆ

Reshma HT Kannada

Sep 03, 2024 02:56 PM IST

google News

ಏಕದಂತನಿಗೆ ಪ್ರಥಮ ಪೂಜೆ ಏಕೆ?

    • ಹಿಂದೂ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿದ್ದಾರೆ ಎಂದು ಪುರಾಣಗಳು ಹೇಳುತ್ತವೆ. ಈ ಎಲ್ಲ ದೇವರಗಳ ಮಧ್ಯೆ ಗಣಪತಿಗೆ ಪ್ರಥಮ ಪೂಜೆ. ಯಾವುದೇ ಪೂಜೆ, ಪುನಸ್ಕಾರದಲ್ಲೂ ಏಕದಂತೆನಿಗೆ ಮೊದಲು ಪೂಜೆ ಮಾಡುತ್ತಾರೆ. ಗಣೇಶ ಪ್ರಥಮಪೂಜಿತನಾಗಿದ್ದು ಹೇಗೆ, ಗಜಾನನನ ಜನ್ಮದ ಕಥೆ ತಿಳಿಯಿರಿ. (ಬರಹ: ಎಚ್‌. ಸತೀಶ್‌, ಜ್ಯೋತಿಷಿ) 
ಏಕದಂತನಿಗೆ ಪ್ರಥಮ ಪೂಜೆ ಏಕೆ?
ಏಕದಂತನಿಗೆ ಪ್ರಥಮ ಪೂಜೆ ಏಕೆ? (PC: Canva)

ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಶುರುವಾಗಿದೆ. ಎಲ್ಲೆಲ್ಲೂ ಗಣಪತಿಯ ಮೂರ್ತಿಗಳೇ ಕಣ್ಣಿಗೆ ಬೀಳುತ್ತಿವೆ. ಮನೆ ಮನಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಬಾರಿ ಸೆಪ್ಟೆಂಬರ್ 7, ಶನಿವಾರದಂದು ಗಣೇಶ ಚತುರ್ಥಿ ಇದೆ. ಗಣೇಶನ ಹಬ್ಬದ ಎಂದರೆ ಹಿಂದೂಗಳಿಗೆ ಬಹಳ ವಿಶೇಷ. ಯಾಕೆಂದರೆ ಗಣಪತಿ ಪ್ರಥಮ ಪೂಜಿತ. ಯಾವುದೇ ಶುಭ ಸಮಾರಂಭ ಗಣೇಶನ ಪೂಜೆ ಮಾಡಿಯೇ ನಾವು ಮುಂದಿನ ಕಾರ್ಯ ಆರಂಭಿಸುತ್ತೇವೆ. ಹಾಗಾದರೆ ಗಣಪತಿ ಪ್ರಥಮ ಪೂಜಿತ ಆಗಿದ್ದು ಹೇಗೆ, ಗಣಪತಿಯ ಜನನ ಕಥೆ ಏನು, ಇಲ್ಲಿದೆ ಗಜಾನನ ಕಥೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಗಣಪತಿಯ ಹುಟ್ಟಿನ ಕಥೆ

ಶಿವಗಣಗಳಲ್ಲಿ ನಂದಿಯು ಬಹು ಮುಖ್ಯನಾಗುತ್ತಾನೆ. ಒಮ್ಮೆ ಸಾಕ್ಷತ್ ಶಿವನಿಗೆ ಬೇಸರ ಉಂಟಾದಾಗ ಇದೇ ನಂದಿ ಹೇಳುವ ಜ್ಯೋತಿಷ್ಯ ಪಾಠವೇ ಬೃಗುನಂದಿ ನಾಡಿ ಎಂದು ತಿಳಿದುಬಂದಿದೆ. ನಂದಿಯು ಶಿವನ ಪರಮಾಪ್ತನೂ ಹೌದು ಹಾಗೆ ಶಿವನ ಪರಮ ಭಕ್ತನು ಹೌದು. ಆದರೆ ಪಾರ್ವತಿಯ ಉತ್ತಮ ಒಡನಾಟ ಇರುವುದಿಲ್ಲ. ಅನಿವಾರ್ಯವಾಗಿ ಪಾರ್ವತಿಯು ನಂದಿಗೆ ಮುಖ್ಯವಾದ ಕೆಲಸವೊಂದನ್ನು ಒಪ್ಪಿಸುತ್ತಾಳೆ. ಆದರೆ ಅದನ್ನು ಪಾರ್ವತಿಯ ಮನಸ್ಸಿಗೆ ಸಮಾಧಾನವಾಗುವಂತೆ ಮಾಡಲು ನಂದಿಯು ಸೋಲುತ್ತಾನೆ. ನಂದಿಯ ಮನಸ್ಸಿಗೆ ಇದರಿಂದ ನೋವುಂಟಾಗುತ್ತದೆ. ಆದರೆ ಪಾರ್ವತಿಯು ಇದನ್ನು ನಂದಿಯು ಉದ್ದೇಶಪೂರ್ವಕವಾಗಿ ಮಾಡಿದನೆಂದು ತಪ್ಪು ತಿಳಿಯುತ್ತಾಳೆ. ಇದರ ಬಗ್ಗೆ ಶಿವನಿಗೆ ತಿಳಿಸುತ್ತಾಳೆ. ಆದರೆ ಶಿವನು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾರಣದಿಂದ ಪಾರ್ವತಿಗೆ ಅಸಮಾಧಾನ ಉಂಟಾಗುತ್ತದೆ. ಬೇಸರದಿಂದ ಕುಳಿತಾಗ, ಅಲ್ಲಿಗೆ ಆಗಮಿಸಿದ ಜಯಾ ವಿಜಯರು ಬೇಸರಕ್ಕೆ ಕಾರಣವನ್ನು ತಿಳಿಯುತ್ತಾರೆ. ಅನಂತರ ಪಾರ್ವತಿಯನ್ನು ಕುರಿತು ನೀನೇ ಒಂದು ಬೊಂಬೆಯನ್ನು ತಯಾರಿ ಮಾಡಿ, ಅದಕ್ಕೆ ಜೀವವನ್ನು ನೀಡಿದರೆ ನಿನ್ನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎನ್ನುತ್ತಾನೆ. ಈ ರೀತಿ ಚಿಂತಿಸುತ್ತಾ ಹೋದರೆ ಕೇವಲ ಸಮಯ ವ್ಯರ್ಥವಾಗುತ್ತದೆ. ಬಹುಶಃ ನಂದಿಗೆ ಸಮಾನ ಪ್ರತಿಸ್ಪರ್ಧಿ ಬರುವ ವೇಳೆ ಇದಾಗಿದೆ ಎಂದು ಹೇಳುತ್ತಾರೆ.

ಜಯ ವಿಜಯರ ಮಾತಿನಿಂದ ಸ್ಪೂರ್ತಿಗೊಂಡ ಪಾರ್ವತಿಯು ತನ್ನ ಮೈ ಬೆವರಿನಿಂದ ಆಕರ್ಷಕ ಮತ್ತು ಸುಂದರವಾದ ಬೊಂಬೆಯನ್ನು ಮಾಡುತ್ತಾಳೆ. ಆ ಬೊಂಬೆಯ ಸೌಂದರ್ಯವು ಯಾವ ಪರಿ ಇತ್ತೆಂದರೆ ನೋಡಿದ ಕ್ಷಣ ಬೊಂಬೆಗೆ ದೃಷ್ಟಿ ತಾಕುವಂತೆ ಕಾಣುತ್ತಿತ್ತು. ಆ ಬೊಂಬೆಯ ಮೇಲೆ ಸ್ವಯಂ ಪಾರ್ವತಿಗೆ ವಿಶೇಷವಾದ ಅಕ್ಕರೆ ಮೂಡುತ್ತದೆ. ತಕ್ಷಣವೇ ಪಾರ್ವತಿಯು ಆ ಬೊಂಬೆಯನ್ನು ನನ್ನ ತೊಡೆಯ ಮೇಲೆ ಕೂಡಿಸಿಕೊಳ್ಳುತ್ತಾಳೆ. ಪ್ರೀತಿಯಿಂದ ತನ್ನ ಹಸ್ತದಿಂದ ಆ ಮಗುವಿನ ತಲೆಯನ್ನು ಸವರುತ್ತಾಳೆ. ಆ ಕ್ಷಣವೇ ಆ ಬೊಂಬೆಗೆ ಜೀವ ಬರುತ್ತದೆ. ನೋಡಲು ನೈಜವಾದ ಮಗುವಿನಂತೆ ಕಾಣುತ್ತದೆ. ಜೀವ ಬಂದ ಕ್ಷಣವೇ ಮೇಲೆದ್ದು ಪಾರ್ವತಿಯನ್ನು ಕುರಿತು ಅಮ್ಮ ಎಂದು ಕರೆಯುತ್ತಾ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾನೆ. ಆ ಕ್ಷಣ ಮೈಮರೆತ ಪಾರ್ವತಿಯು ಆ ಮಗುವಿನ ಸುಂದರವಾದ ಮುಖವನ್ನು ನೋಡುತ್ತಾ ಸುಮುಖ ಎಂದು ಕರೆಯುತ್ತಾಳೆ. ಸುಮುಖ ಎಂದರೆ ನೋಡಲು ಸುಂದರವಾದ ಲಕ್ಷಣವಾಗಿರುವ ಮುಖ ಇರುವವ ಎಂಬ ಅರ್ಥ ಬರುತ್ತದೆ. ತಕ್ಷಣವೇ ಆ ಬಾಲಕನನ್ನು ಬಿಗಿದಪ್ಪಿ ಸಂತೋಷಗೊಳ್ಳುತ್ತಾಳೆ. ಮಾತೃ ಪ್ರೇಮವನ್ನು ತೋರಿಸುತ್ತಾ ಮುದ್ದಿಸುತ್ತಾಳೆ.

ಗಣಪತಿಗೆ ಮೊದಲ ಪೂಜೆ ಸಿಗಲು ಕಾರಣವಿದು

ಪಾರ್ವತಿಯು ಆ ಮಗುವಿನ ಕೈಗೆ ದಂಡವನ್ನು ನೀಡಿ ನಾನೀಗ ಸ್ನಾನವನ್ನು ಮಾಡಬೇಕು. ನೀನು ಈ ದ್ವಾರದ ಮುಂದೆ ನಿಂತಿರು. ನನ್ನ ಸ್ನಾನವಾಗುವವರೆಗೂ ಯಾರನ್ನು ಬಿಡಬೇಡ ಎಂದು ತಿಳಿಸುತ್ತಾಳೆ. ಸಂತಸಗೊಂಡ ಬಾಲಕನು ತಾಯಿಯ ಮಾತಿನಂತೆ ಕೈಲಾಸದ ಬಾಗಿಲನ್ನು ಕಾಯುತ್ತಾನೆ. ಕೆಲವೇ ಕ್ಷಣಗಳಲ್ಲಿ ತನ್ನ ಪತ್ನಿಯನ್ನು ಕಾಣಲು ಸಾಕ್ಷಾತ್ ಪರಶಿವನು ಅಲ್ಲಿಗೆ ಆಗಮಿಸುತ್ತಾನೆ. ಅಲ್ಲಿರುವ ಈ ಬಾಲಕನನ್ನು ಕಂಡು ಶಿವನಿಗೆ ಅಚ್ಚರಿಯಾಗುತ್ತದೆ. ಮಗುವನ್ನು ಕುರಿತು ನೀನಾರೆಂದು ಕೇಳಲು, ನಾನು ನನ್ನ ಅಮ್ಮನ ಮಗ. ನನ್ನ ಅಮ್ಮನು ಸ್ನಾನ ಮಾಡಲು ಹೋಗಿದ್ದಾಳೆ. ಅವಳ ಸ್ನಾನ ಮುಗಿಯುವವರೆಗೂ ಒಳಗಡೆ ಯಾರನ್ನು ಬಿಡದಂತೆ ಕಾವುಲು ಕಾಯುವುದೇ ನನ್ನ ಕರ್ತವ್ಯ. ನಿನ್ನ ತಾಯಿ ಮಾಡಿರುವ ಕಟ್ಟಪ್ಪಣೆ ಬೇರೆಯವರಿಗೆ. ನಿನಗೆ ನಾನಾರೆಂದು ತಿಳಿಯದು. ಕೈಲಾಸವೇ ನನ್ನದು. ಮೊದಲು ನನ್ನನ್ನು ಒಳಗೆ ಬಿಡು ಎಂದು ಪ್ರೀತಿಯಿಂದ ಕೇಳುತ್ತಾನೆ. ಆಗ ಗಣಪತಿಯು ಇದನ್ನು ವಿನಮ್ರವಾಗಿ ತಿರಸ್ಕರಿಸುತ್ತಾನೆ. ಇದರಿಂದ ಕ್ರೋಧಗೊಂಡ ಶಿವನು ತನ್ನ ತ್ರಿಶೂಲದಿಂದ ಆ ಮಗುವಿನ ರುಂಡವನ್ನು ಕತ್ತರಿಸುತ್ತಾನೆ. ಆ ವೇಳೆಗೆ ಸ್ನಾನ ಮುಗಿಸಿದ ಪಾರ್ವತಿಯು ಬಂದು ತನ್ನ ಮಗನಿಗೆ ಆದ ಅವಸ್ಥೆಯನ್ನು ಕಂಡು , ಶಿವನ ಮೇಲೆ ಕೋಪಗೊಂಡು ಇವನು ನನ್ನ ಮಗ ಇವನನ್ನು ಬದುಕಿಸು ಎಂದು ಹಠ ಹಿಡಿಯುತ್ತಾಳೆ. ಆಗ ಶಿವನು ಉತ್ತರ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗಿರುವ ಪ್ರಾಣಿಯ ತಲೆಯನ್ನು ತರಲು ತನ್ನ ಭಟರಿಗೆ ತಿಳಿಸುತ್ತಾನೆ. ಆಗ ಭಟರು ಆನೆಯ ತಲೆಯೊಂದನ್ನುತರುತ್ತಾರೆ. ಆ ತಲೆಯನ್ನೇ ಶಿಶುವಿಗೆ ಇಟ್ಟು ಹೋದ ಪ್ರಾಣವನ್ನು ಮರಳಿ ನೀಡುತ್ತಾರೆ. ಆಗ ಸುಮುಖನನ್ನು ಬಿಗಿದಪ್ಪಿ ಮುದ್ದಿಸಿದ ಶಿವ ಪಾರ್ವತಿಯರು ಅವನಿಗೆ ಭೂಲೋಕದಲ್ಲಿ ಮೊದಲ ಪೂಜೆಯು ಸಲ್ಲಲಿ ಎಂದುವರ ನೀಡುತ್ತಾರೆ. ಈ ರೀತಿ ಗಣಪತಿಗೆ ಮೊದಲ ಪೂಜೆಯ ಅವಕಾಶ ದೊರೆಯುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ