logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sita Name For Baby Girl: ನಿಮ್ಮ ಮಗುವಿಗೆ ಸೀತೆಯ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ

Sita Name for Baby Girl: ನಿಮ್ಮ ಮಗುವಿಗೆ ಸೀತೆಯ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ

Reshma HT Kannada

Jan 21, 2024 03:36 PM IST

google News

ನಿಮ್ಮ ಮಗುವಿಗೆ ಸೀತೆಯ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ

    • ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಈ ಸುಸಂದರ್ಭದಲ್ಲಿ ತಮ್ಮ ಮಗುವಿಗೆ ಸೀತಾ-ರಾಮ ಹೆಸರು ಇಡಬೇಕು ಎಂದು ಪೋಷಕರು ಯೋಚಿಸುತ್ತಿದ್ದಾರೆ. ನಿಮಗೆ ಹೆಣ್ಣು ಮಗು ಜನಿಸಿದ್ದು ಆ ಮಗುವಿಗೆ ಸೀತೆಯ ಹೆಸರು ಇಡಬೇಕು ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಇಲ್ಲಿದೆ 21 ಹೆಸರು.
ನಿಮ್ಮ ಮಗುವಿಗೆ ಸೀತೆಯ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ
ನಿಮ್ಮ ಮಗುವಿಗೆ ಸೀತೆಯ ಹೆಸರಿಡುವ ಆಸೆಯಿದೆಯೇ? ಈ 21 ಹೆಸರುಗಳನ್ನೊಮ್ಮೆ ಗಮನಿಸಿ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಹೊತ್ತಿನಲ್ಲಿ ಸೀತಾಮಾತೆಯನ್ನು ನಾವು ನೆನೆಯಲೇಬೇಕಿದೆ. ಶ್ರೀರಾಮನ ಬದುಕಿನ ಭಾಗವೇ ಆಗಿದ್ದ ಸೀತಾಮಾತೆಯನ್ನು ಹಿಂದೂಗಳು ದೇವತೆಯಂತೆ ಪೂಜಿಸುತ್ತಾರೆ. ಆಕೆಯು ತನ್ನ ತ್ಯಾಗ, ಭಕ್ತಿ, ನಿಷ್ಠೆ ಹೀಗೆ ಹಲವು ಕಾರಣಗಳಿಂದ ಪ್ರಸಿದ್ಧ ಪಡೆದಿದ್ದಾಳೆ. ತಾಯಿ ಮಗಳು, ಹೆಂಡತಿ ಹೀಗೆ ಎಲ್ಲಾ ಪಾತ್ರಗಳಲ್ಲೂ ಆಕೆಯ ಹಿರಿಮೆ ದೊಡ್ಡದು. ಆಕೆಯನ್ನು ಸಹನಾಮೂರ್ತಿ ಅಂತಲೂ ಕರೆಯಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಸೀತಾಮಾತೆಯನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಹೆಣ್ಣುಮಕ್ಕಳು ಹುಟ್ಟಿದರೆ ಸೀತೆಯಂತೆ ಗುಣಗಳಿರಬೇಕು ಎಂದು ಪೋಷಕರು ಬಯಸುವುದು ಸಹಜ. ಇದರೊಂದಿಗೆ ಸೀತಾದೇವಿಯ ಹೆಸರನ್ನು ತಮ್ಮ ಮಗುವಿಗೆ ಇರಿಸಲು ಬಯಸುತ್ತಾರೆ. ಸೀತೆಯಿಂದ ಪ್ರೇರಿತವಾದ ಸುಂದರ ಹೆಣ್ಣುಮಕ್ಕಳು ಹೆಸರು ಹಾಗೂ ಅದರ ಅರ್ಥ ಇಲ್ಲಿದೆ ಗಮನಿಸಿ.

ಸೀತೆಯ 21 ಹೆಸರುಗಳು ಹೀಗಿವೆ

  1. ಸಿಯಾ- ಸಿಯಾ ಎನ್ನುವುದು ಸೀತೆಯ ಹೆಸರು. ಇದರ ಅರ್ಥ ಹಾಲ ಬೆಳದಿಂಗಳಿನಂತೆ ಸುಂದರವಾಗಿರುವುದು ಎಂದು.

2. ಪಾರ್ಥವಿ- ಭೂತಾಯಿಯ ಮಗಳು

3. ಜಾನಕಿ- ಜನಕ ಮಹಾರಾಜನ ಮಗಳು

4. ಶಿವಸತಿ- ಸೀತಾದೇವಿಗೆ ಸಮಾನಾರ್ಥಕವಾದ ಹೆಸರು

5. ವಾಚ್ಯ - ಎಲ್ಲವನ್ನೂ ಸುಂದರವಾಗಿ ವ್ಯಕ್ತಪಡಿಸುವವರು

6. ಸಿತಾಶಿ- ಸೀತೆಗೆ ಸಮಾನಾರ್ಥಕ ಹೆಸರು

7. ಲಕ್ಷಕಿ- ಇದು ಸೀತಾದೇವಿಯ ಹೆಸರು

8. ಭೌಮಿ - ಭೂಮಿಯಿಂದ ಹುಟ್ಟಿದವಳು

9. ಜನಕನಂದಿನಿ - ಜನಕ ಮಹಾರಾಜನ ಮಗಳು

10. ಮೈಥಿಲಿ - ಮಿಥಿಲೆಯ ರಾಜಕುಮಾರಿ

11. ಮರುನ್ಮಯೀ - ಭೂಮಿ ಅಥವಾ ಜೇಡಿಮಣ್ಣಿನಿಂದ ಸೃಷ್ಟಿಯಾದವಳು

12. ವೈಧೆ -ಸೀತಾದೇವಿಯ ಇನ್ನೊಂದು ಹೆಸರು

13. ಸಿಹಾ- ಸಂತೋಷವನ್ನು ತರುವವಳು

14. ರಾಮೇತಿ - ಸದಾ ರಾಮನನ್ನು ಸ್ಮರಿಸುವವಳು

15. ಅವನಿಜ - ಭೂಮಿತಾಯಿಗೆ ಸಂಬಂಧಿಸಿರುವವಳು

16. ವನಿಕಾ- ಕಾಡಿನಲ್ಲಿ ವಾಸಿಸುವವಳು

17. ಅಂಕ್ಷಿತಾ -ಶಕ್ತಿಶಾಲಿ ಹಾಗೂ ಧೈರ್ಯಶಾಲಿ

18. ಭೂಮಿಜ - ಸಹಿಷ್ಣು ಗುಣವುಳ್ಳವವಳು

19. ಸಿಯಾನ್ಶಿ - ಸೀತಾದೇವಿಯ ಸ್ವಭಾವದ ಒಂದು ಭಾಗ

20. ಶಿತಿಜಾ - ಇದು ಸೀತೆಗೆ ಸಂಬಂಧಿಸಿದ ಹೆಸರು. ಇದರ ಅರ್ಥ ದಿಗಂತ.

21. ವೈದೇಹಿ - ಭಗವಾನ್‌ ಶ್ರೀರಾಮನ ಮಡದಿ

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ