logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Basant Panchami: ಸರಸ್ವತಿ ದೇವಿಯ ವಿಗ್ರಹವನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಬೇಕು; ಈ ವಾಸ್ತು ನಿಯಮಗಳನ್ನ ತಪ್ಪದೇ ಪಾಲಿಸಿ

Basant Panchami: ಸರಸ್ವತಿ ದೇವಿಯ ವಿಗ್ರಹವನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಬೇಕು; ಈ ವಾಸ್ತು ನಿಯಮಗಳನ್ನ ತಪ್ಪದೇ ಪಾಲಿಸಿ

HT Kannada Desk HT Kannada

Feb 18, 2024 04:18 PM IST

google News

ಸರಸ್ವತಿ ದೇವಿಯ ವಿಗ್ರಹವನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಬೇಕು; ಈ ವಾಸ್ತು ನಿಯಮಗಳನ್ನ ತಪ್ಪದೇ ಪಾಲಿಸಿ

    • ತಾಯಿ ಸರಸ್ವತಿಯ ವಿಗ್ರಹವನ್ನು ವಸಂತ ಪಂಚಮಿಯ ದಿನದಂದು ನೀವು ಮನೆಗೆ ತರಲು ಬಯಸಿದರೆ, ಅವಳನ್ನು ಮೆಚ್ಚಿಸಲು, ನೀವು ವಾಸ್ತುಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಅದನ್ನು ಪಾಲಿಸುವ ಮೂಲಕ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು.
ಸರಸ್ವತಿ ದೇವಿಯ ವಿಗ್ರಹವನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಬೇಕು; ಈ ವಾಸ್ತು ನಿಯಮಗಳನ್ನ ತಪ್ಪದೇ ಪಾಲಿಸಿ
ಸರಸ್ವತಿ ದೇವಿಯ ವಿಗ್ರಹವನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಬೇಕು; ಈ ವಾಸ್ತು ನಿಯಮಗಳನ್ನ ತಪ್ಪದೇ ಪಾಲಿಸಿ

ʼಋತುಗಳ ರಾಜ ವಸಂತ ಖುತುʼ. ವಸಂತ ಖುತುವಿನ ಆಗಮನವನ್ನು ಸಂಭ್ರಮಿಸುವ ವಿಶೇಷ ಹಬ್ಬ ವಸಂತ ಪಂಚಮಿ. ಪ್ರತಿ ವರ್ಷ ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಮಾಘ ಮಾಸದಲ್ಲಿ ಆಯಾ ಪ್ರದೇಶಗಳ ಆಚಾರ ವಿಚಾರ, ನಂಬಿಕೆಗಳಿಗೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳು ಹಾಗೂ ಸಿಖ್ಖರಿಗೆ ವಸಂತ ಪಂಚಮಿ ಬಹಳ ಪ್ರಮುಖ ಹಬ್ಬ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಜ್ಞಾನ, ಭಾಷೆ, ಸಂಗೀತ ಮತ್ತು ಎಲ್ಲಾ ಕಲೆಗಳ ದೇವತೆಯಾಗಿರುವ ಸರಸ್ವತಿ ದೇವಿಗೆ ಸಮರ್ಪಿತವಾದ ಹಬ್ಬವಿದು. ಈ ದಿನದಂದು ತಾಯಿ ಸರಸ್ವತಿ ದೇವಿಯ ಆರಾಧನೆಯಿಂದ ಬುದ್ಧಿವಂತಿಕೆ, ವಿವೇಕ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯೂ ಇದೆ. ಈ ಶುಭ ದಿನದಂದು ನೀವು ಸಹ ತಾಯಿ ಸರಸ್ವತಿಯ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಲು ಬಯಸಿದರೆ, ವಾಸ್ತುವಿನ ಕೆಲವು ನಿಯಮಗಳ ಬಗ್ಗೆ ವಿಶೇಷ ಕಾಳಜಿ ವಹಿಸಸುವುದು ಸೂಕ್ತ. ಶಾರದಾ ಮಾತೆಯ ವಿಗ್ರಹವು ಸರಿಯಾದ ದಿಕ್ಕಿನಲ್ಲಿರುವುದರಿಂದ ಪೂಜೆಗೆ ವಿಶೇಷ ಪ್ರಯೋಜನಗಳನ್ನು ನೀಡಬಲ್ಲುದು. ಅಲ್ಲದೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಅಪಾರ ಯಶಸ್ಸನ್ನು ಪಡೆಯಲು ಮತ್ತು ಕೆಲಸದಲ್ಲಿನ ಅಡೆತಡೆಗಳ ನಿವಾರಣೆಗೂ ಇದು ಸಹಕಾರಿಯಾಗಲಿದೆ.

ಸರಸ್ವತಿ ಪ್ರತಿಮೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು

ವಾಸ್ತು ಪ್ರಕಾರ ತಾಯಿ ಸರಸ್ವತಿಯ ಪ್ರತಿಮೆ ಅಥವಾ ಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಸರಸ್ವತಿ ದೇವಿಯನ್ನು ಈ ದಿಕ್ಕಿಗೆ ಅಭಿಮುಖವಾಗಿ ಪೂಜಿಸುವುದರಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ ಮತ್ತು ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲಾಗುತ್ತದೆ ಎಂದು ನಂಬಲಾಗಿದೆ.

ಮನೆಗೆ ತರಬೇಕಾದ ವಿಗ್ರಹಗಳ ಆಯ್ಕೆ ಹೇಗಿರಬೇಕು? ವಾಸ್ತು ಪ್ರಕಾರ, ತಾವರೆ ಹೂವಿನ ಮೇಲೆ ಕುಳಿತ ಭಂಗಿಯಲ್ಲಿರುವ ತಾಯಿ ಸರಸ್ವತಿಯ ಪ್ರತಿಮೆಯು ಕೈಯಲ್ಲಿ ವೀಣೆ, ಮಾಲೆ ಮತ್ತು ಪುಸ್ತಕವನ್ನು ಹಿಡಿದಿರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜೊತೆಗೆ ಸರಸ್ವತಿಯ ವಿಗ್ರಹವು ಸೌಮ್ಯ, ಸುಂದರ ಮತ್ತು ಆಶೀರ್ವಾದದ ಭಂಗಿಯಲ್ಲಿದ್ದರೆ ಇನ್ನೂ ಉತ್ತಮ.

ವಸಂತ ಪಂಚಮಿಯ ದಿನದಂದು ದೇವಿಯ ವಿಗ್ರಹವನ್ನು ಮನೆಗೆ ತರುವ ವೇಳೆ ಗಮನಿಸಬೇಕಿರುವ ವಿಚಾರವೆಂದರೆ, ಪೂಜಿಸುವ ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚು ತಾಯಿ ಸರಸ್ವತಿಯ ವಿಗ್ರಹಗಳನ್ನು ಇರಿಸಕೂಡದು.

ಭಗ್ನಗೊಂಡ ತಾಯಿ ಸರಸ್ವತಿಯ ವಿಗ್ರಹವನ್ನು ಮನೆಗೆ ತಪ್ಪಿಯೂ ತರದಿರಿ. ಯಾಕೆಂದರೆ ಅದು ಮನೆಯ ಅಶುಭ ಸೂಚಕವಾಗಲಿದೆ.

ಸರಸ್ವತಿ ದೇವಿಯನ್ನು ಮೆಚ್ಚಿಸುವ ಮಾರ್ಗಗಳು

ದೇವಿ ಸರಸ್ವತಿ ಮಾತೆಯ ಆಶೀರ್ವಾದವನ್ನು ಪಡೆಯಬೇಕಾದರೆ ಸೂಕ್ತವಾದ ದಿನ ವಸಂತ ಪಂಚಮಿ. ಈ ದಿನದಂದು ಮನೆಯ ಈಶಾನ್ಯ ಮೂಲೆಯಲ್ಲಿ ತಾಯಿ ಸರಸ್ವತಿಯ ಪ್ರತಿಮೆಯನ್ನು ಸ್ಥಾಪಿಸಬೇಕು. ಮಾತೆಗೆ ದಾಸವಾಳ ಅಥವಾ ಮಾರಿಗೋಲ್ಡ್ ಹೂಗಳನ್ನು ಅರ್ಪಿಸಬೇಕು. ಪೂಜೆಯ ನಂತರ, ತಾಯಿ ಸರಸ್ವತಿಯ ವಿಗ್ರಹವನ್ನು ಅಧ್ಯಯನದ ಮೇಜಿನ ಮೇಲೆ ಇರಿಸಿ. ಇದು ಅಧ್ಯಯನಕ್ಕೆ ಸಹಕಾರಿ ಮಾತ್ರವಲ್ಲದೆ ಉತ್ತಮ ಅಂಕಗಳ ಗಳಿಕೆಗೂ ನೆರವಾಗಲಿದೆ.

ಇದರೊಂದಿಗೆ, ವಸಂತ ಪಂಚಮಿಯ ದಿನದಂದು ಮನೆ ಅಥವಾ ಕಚೇರಿಯ ಪೂರ್ವ ದಿಕ್ಕಿನಲ್ಲಿ ನವಿಲು ಗರಿಯನ್ನು ಇರಿಸುವುದು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಒಟ್ಟಿನಲ್ಲಿ ವಸಂತ ಪಂಚಮಿಯ ವಿಶೇಷ ದಿನದಂದು ಸರಸ್ವತಿ ದೇವಿಯ ವಿಗ್ರಹವನ್ನು ಮನೆ ತುಂಬಿಸಿಕೊಳ್ಳುವ ಮುನ್ನ ವಾಸ್ತುವಿನ ರೀತಿ ನೀತಿಗಳನ್ನು ಸರಿಯಾದ ವಿಧಾನದಲ್ಲಿ ಅನುಸರಿಸುವ ಮೂಲಕ ಉತ್ತಮ ವಿದ್ಯಾಭ್ಯಾಸಕ್ಕೆ, ಮನೆ ಅಷ್ಟೈಶ್ವರ್ಯಗಳಿಂದ ತುಂಬಿಕೊಳ್ಳಲು, ಕುಟುಂಬದ ಮಂದಿಯೆಲ್ಲ ಆರೋಗ್ಯದಿಂದ ಜೀವನ ನಡೆಸಲು ಸಾಧ್ಯವಾಗಲಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com )

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ