logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri: ಮಹಾಶಿವ ತನ್ನ ಕೊರಳಲ್ಲಿ ಹಾವನ್ನು ಸುತ್ತಿಕೊಂಡಿರುವುದೇಕೆ? ಇದರ ಹಿಂದಿನ ಕಥೆ ತಿಳಿಯಿರಿ

Maha Shivaratri: ಮಹಾಶಿವ ತನ್ನ ಕೊರಳಲ್ಲಿ ಹಾವನ್ನು ಸುತ್ತಿಕೊಂಡಿರುವುದೇಕೆ? ಇದರ ಹಿಂದಿನ ಕಥೆ ತಿಳಿಯಿರಿ

Reshma HT Kannada

Feb 09, 2024 05:01 PM IST

google News

ಮಹಾಶಿವ ತನ್ನ ಕೊರಳಲ್ಲಿ ಹಾವನ್ನು ಸುತ್ತಿಕೊಂಡಿರುವುದೇಕೆ?

    • ಮಹಾಶಿವನು ಸದಾ ತನ್ನ ಕೊರಳಿನಲ್ಲಿ ಹಾವೊಂದು ಸುತ್ತಿಕೊಂಡಿರುತ್ತಾನೆ. ಶಿವನ ಕೊರಳಲ್ಲಿ ಹಾವು ಇರಲು ಕಾರಣವೇನು, ಈ ಹಾವಿಗೂ ಶಿವನಿಗೂ ಏನು ಸಂಬಂಧ? ಇದರ ಹಿಂದಿದೆ ಒಂದು ಜನಪ್ರಿಯ ಕಥೆ.
 ಮಹಾಶಿವ ತನ್ನ ಕೊರಳಲ್ಲಿ ಹಾವನ್ನು ಸುತ್ತಿಕೊಂಡಿರುವುದೇಕೆ?
ಮಹಾಶಿವ ತನ್ನ ಕೊರಳಲ್ಲಿ ಹಾವನ್ನು ಸುತ್ತಿಕೊಂಡಿರುವುದೇಕೆ?

ಪರಮೇಶ್ವರನನ್ನು ಜಗತ್ತನ್ನು ಕಾಯುವವನು. ಇವನು ಸರ್ವಾಂತರ್ಯಾಮಿ. ಶಿವನು ಉಗ್ರಸ್ವರೂಪಿಯೂ ಹೌದು. ಶಿವನ ರೂಪನನ್ನು ನೆನೆದಾಗ ನಮ್ಮ ಕಣ್ಣ ಮುಂದೆ ಅವನು ಮೈಮೇಲೆ ಧರಿಸಿರುವ ಹುಲಿಯ ಚರ್ಮ, ಕೊರಳಲ್ಲಿ ಸುತ್ತಿಕೊಂಡಿರುವ ನಾಗರಹಾವು, ದೇಹವಿಡೀ ಬಳಿದುಕೊಂಡಿರುವ ವಿಭೂತಿ ಇವೆಲ್ಲವೂ ಕಾಣುತ್ತವೆ. ಶಿವನು ಸದಾ ತನ್ನ ಕೊರಳಲ್ಲಿ ಹಾವನ್ನು ಯಾಕೆ ಸುತ್ತಿಕೊಂಡಿರುತ್ತಾನೆ ಎಂಬುದು ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಯಾಗಿ ಕಾಡುತ್ತದೆ. ಹಲವರಿಗೆ ಇದರ ಹಿಂದಿನ ಕಥೆ ತಿಳಿದಿಲ್ಲ. ಇದರ ಹಿಂದಿನ ಜನಪ್ರಿಯ ಕಥೆಯನ್ನು ನೀವೂ ಓದಿ ತಿಳಿಯಿರಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಶಿವನ ಕುತ್ತಿಗೆಯಲ್ಲಿ ಹಾವು ಯಾಕಿದೆ?

ಶಿವನ ಕೊರಳಿನಲ್ಲಿರುವುದು ಮಹಾಸರ್ಪ ವಾಸುಕಿ. ವಾಸುಕಿ ಶಿವನ ಕೊರಳಿನಲ್ಲಿದ್ದು, ಪ್ರತಿದಿನ ಅವನ ಸೇವೆ ಮಾಡುತ್ತಿರುತ್ತಾನೆ. ವಾಸುಕಿಯು ಶಿವನ ಕೊರಳಲ್ಲಿ ಇರುವುದರ ಹಿಂದೆ ಒಂದು ಸಣ್ಣ ಕಥೆಯಿದೆ.

ಕಶ್ಯಪ ಮುನಿಯ 14 ಮಂದಿ ಹೆಂಡತಿಯರಲ್ಲಿ ವಿನತೆ ಮತ್ತು ಕದ್ರುವ ಕೂಡ ಇರುತ್ತಾರೆ. ವಿನತೆಗೆ ಗರುತ್ಮಂತ್ ಮತ್ತು ಆನೂರ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಆನೂರನು ಸೂರ್ಯನ ಸಾರಥಿ. ಕದ್ರುವಳು ಸಾವಿರ ಸರ್ಪಗಳ ತಾಯಿ. ಅವಳ ಸಂತಾನದಲ್ಲಿ ಆದಿಶೇಷನು ಹಿರಿಯನಾಗಿರುತ್ತಾನೆ. ಕದ್ರುವಳು ಒಮ್ಮೆ ಕ್ಷೀರ ಸಮುದ್ರದಲ್ಲಿ ದೂರದಿಂದ ಕುದುರೆಯೊಂದನ್ನು ನೋಡಿ ತನ್ನ ಸಹೋದರಿ ವಿನತೆಗೆ ಅದರ ಬಾಲ ಕಪ್ಪು ಎಂದು ಹೇಳುತ್ತಾಳೆ. ಆದರೆ ಬಿಳಿ ಕುದುರೆಗೆ ಕಪ್ಪು ಬಾಲ ಇರಲು ಹೇಗೆ ಸಾಧ್ಯ ಎಂದು ವಿನತೆ ಕದ್ರುವಳ ಮಾತನ್ನು ನಂಬುವುದಿಲ್ಲ. ಈ ವಿಚಾರವಾಗಿ ಇವರಿಬ್ಬರ ನಡುವೆ ವಾಗ್ವಾದ ನಡೆಯುತ್ತದೆ.

ಕೊನೆಯಲ್ಲಿ ಇವರಿಬ್ಬರೂ ಒಂದು ತೀರ್ಪಿಗೆ ಬರುತ್ತಾರೆ. ಒಂದು ವೇಳೆ ಕುದುರೆಯ ಬಾಲ ಕಪ್ಪಾಗಿದ್ದರೆ, ನೀನು ಸಾವಿರ ವರ್ಷಗಳ ಕಾಲ ನನಗೆ ಸೇವನೆಯಾಗಿರಬೇಕು ಎಂದು ಕದ್ರುವಳು ವಿನತೆಗೆ ಹೇಳುತ್ತಾಳೆ. ಕುದುರೆಯ ಬಾಲದ ಬಣ್ಣದ ಬಗ್ಗೆ ತನಿಖೆಗೆ ಹೋದಾಗ ಕತ್ತಲಾಗುತ್ತದೆ.

ಆದರೆ ಕದ್ರುವ ವಿನತೆಗೆ ತಿಳಿಯದಂತೆ ಹೋಗಿ ಕುದುರೆಯ ಬಾಲವನ್ನು ನೋಡುತ್ತಾಳೆ. ಆದರೆ ಅವಳು ಅಂದುಕೊಂಡತೆ ಕುದುರೆಯ ಬಾಲ ಕಪ್ಪಾಗಿರದೇ, ಬಳಿಯಾಗಿಯೇ ಇರುತ್ತದೆ. ಕುದುರೆಯ ಬಾಲ ಇನ್ನೂ ಬಿಳಿಯಾಗಿರುವುದರಿಂದ, ಹೇಗಾದರೂ ಪಂತವನ್ನು ಗೆಲ್ಲುವ ಭರವಸೆಯಲ್ಲಿ ಅವಳು ದುರಲೋಚನೆ ಮಾಡುತ್ತಾಳೆ. ತನ್ನ ಮಕ್ಕಳನ್ನು ಕರೆದು ನೀವೆಲ್ಲರೂ ಹೋಗಿ ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಹೇಳುತ್ತಾಳೆ. ಆದರೆ ಅಮ್ಮ ಹೇಳಿದ ಮಾತನ್ನು ಮಕ್ಕಳು ಒಪ್ಪುವುದಿಲ್ಲ. ಇದು ಅಧರ್ಮ ಎಂದು ಎಷ್ಟೇ ಹೇಳಿದರೂ ಕದ್ರುವ ಕೇಳುವುದಿಲ್ಲ. ತನ್ನ ಮಾತನ್ನು ಕೇಳದೇ ನಿರಾಕರಿಸಿದ ತನ್ನ ಪುತ್ರರನ್ನು ಶಪಿಸುತ್ತಾಳೆ. ಮುಂಬರುವ ಸರ್ಪ ಯಾಗದಲ್ಲಿ ಎಲ್ಲರೂ ಸಾಯುತ್ತೀರಿ ಎಂದು ಶಾಪ ನೀಡುತ್ತಾಳೆ. ಇದರಿಂದ ಭಯಗೊಂಡ ಕೆಲವು ಸರ್ಪಗಳು ತಾಯಿಯ ಮಾತನ್ನು ಅನುಸರಿಸಿ ಕುದುರೆಯ ಬಾಲವನ್ನು ಸುತ್ತಿಕೊಂಡವು. ಕುದುರೆಯ ಬಾಲ ಬಿಳಿಯ ಬದಲು ಕಪ್ಪು ಎಂದು ವಿನತೆ ನಂಬುತ್ತಾಳೆ. ಅವಳ ಮಾತಿನಂತೆ ಕದ್ರುವ ಅವಳನ್ನು ದಾಸಿಯನ್ನಾಗಿ ಮಾಡುತ್ತಾಳೆ. ಅವಳ ಎರಡನೇ ಮಗ ಗರುತ್ಮಂತು ಅವಳನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುತ್ತಾನೆ.

ಆದಿಶೇಷನ ವಿಷ್ಣುವಿನ ಬಳಿ, ವಾಸುಕಿ ಶಿವನ ಬಳಿ

ಕದ್ರುವಿನ ಮಾತನ್ನು ಒಪ್ಪದ ಆದಿಶೇಷ ಶಾಪಕ್ಕೆ ತುತ್ತಾಗಿ ಅದರಿಂದ ಮುಕ್ತಿ ಹೊಂದಲು ಮಹಾವಿಷ್ಣುವಿನಲ್ಲಿ ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿದ ಭಗವಾನ್ ವಿಷ್ಣುವು ಪ್ರತ್ಯಕ್ಷನಾಗಿ, ಅವನನ್ನು ಸಾವಿನ ಭಯದಿಂದ ಮುಕ್ತಗೊಳಿಸಲು ಅವನ ಸನ್ನಿಧಿಯಲ್ಲಿ ಉಳಿಯುವಂತೆ ವರ ನೀಡುತ್ತಾನೆ ಮತ್ತು ಕದ್ರುವಿನ ಎರಡನೆಯ ಮಗ ವಾಸುಕಿಯು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷನಾಗಿ ಅವನ ಕೊರಳಿಗೆ ಹಾರವನ್ನು ಧರಿಸಲು ಹೇಳಿದನು. ಶಿವನು ಮೃತ್ಯುಂಜಯ. ಅವನೊಂದಿಗಿದ್ದರೆ ವಾಸುಕಿಗೆ ಎಂದಿಗೂ ಸಾವಿನ ಭಯ ಕಾಡುವುದಿಲ್ಲ. ಹಾಗಾಗಿ ವಾಸುಕಿಯು ಅಂದಿನಿಂದ ಶಿವನ ಕೊರಳಲ್ಲಿಯೇ ಇರುತ್ತಾನೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ