ಈ ವ್ಯಕ್ತಿಗಳ ಕಾಲು ಮುಟ್ಟಿ ಎಂದಿಗೂ ನಮಸ್ಕರಿಸಬೇಡಿ; ನಿಮಗೆ ಅಶುಭ ಕಾಡಬಹುದು, ಎಚ್ಚರ
Jun 18, 2024 04:16 PM IST
ಈ ವ್ಯಕ್ತಿಗಳ ಕಾಲು ಮುಟ್ಟಿ ಎಂದಿಗೂ ನಮಸ್ಕರಿಸಬೇಡಿ; ನಿಮಗೆ ಅಶುಭ ಕಾಡಬಹುದು
- ಹಿಂದೂ ಸಂಸ್ಕೃತಿಯಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು ಎಂದು ಹೇಳಲಾಗಿದೆ. ಇದು ಚಿಕ್ಕವರು ಹಿರಿಯರಿಗೆ ತೋರುವ ಗೌರವವಾಗಿದೆ. ಹಿಂದೂ ಧರ್ಮದಲ್ಲಿ ಚರಣವನ್ನು ಸ್ಪರ್ಶಿಸುವುದಕ್ಕೆ ಅದರದ್ದೇ ಆದ ಆಧ್ಯಾತ್ಮಿಕ ಮಹತ್ವವಿದೆ ಎಂದು ನಂಬಲಾಗಿದೆ. ಆದರೆ ಕೆಲವರ ಚರಣವನ್ನು ಸ್ಪರ್ಶಿಸುವುದು ಸರಿಯಲ್ಲ.
ಹಿಂದೂ ಧರ್ಮದಲ್ಲಿ ಕೆಲ ಆಚರಣೆಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಕೆಲ ಆಚರಣೆಗಳನ್ನು ಗುರು-ಹಿರಿಯರು ತಮ್ಮ ಮುಂದಿನ ಪೀಳಿಗೆಯವರಿಗೆ ಹೇಳಿಕೊಡುತ್ತಾರೆ. ಅದನ್ನು ಪಾಲಿಸುವುದು, ಪರಂಪರೆ ಮುಂದುವರಿಸುವುದು ತಲೆಮಾರುಗಳ ಕರ್ತವ್ಯವೆಂದು ತಿಳಿ ಹೇಳುತ್ತಾರೆ. ಹಿಂದೂ ಧರ್ಮದಲ್ಲಿ ತಂದೆ–ತಾಯಿ, ಗುರು–ಹಿರಿಯರ ಚರಣ ಸ್ಪರ್ಶಿಸಿ ನಮಸ್ಕರಿಸುವ ಸಂಪ್ರದಾಯವು ಅನಾದಿಕಾಲದಿಂದಲೂ ಇದೆ. ಈ ಸಂಪ್ರದಾಯವು ವ್ಯಕ್ತಿಯ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಹಿರಿಯರ ಆಶೀರ್ವಾದ ಪಡೆದುಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇದೆ. ಶಾಸ್ತ್ರಗಳಲ್ಲೂ ಸಹ ಶುದ್ಧ ಮನಸ್ಸಿನಿಂದ ನಮಸ್ಕರಿಸುವುದನ್ನು ಉತ್ತಮ ಸಂಸ್ಕಾರಗಳಲ್ಲೊಂದು ಎಂದು ಹೇಳಲಾಗಿದೆ. ಪಾದವನ್ನು ಮುಟ್ಟಿ ನಮಸ್ಕರಿಸುವುದೇನೋ ಸರಿ, ಆದರೆ ಶಾಸ್ತ್ರದಲ್ಲಿ ಕೆಲವು ವ್ಯಕ್ತಿಗಳ ಪಾದವನ್ನು ಸ್ವರ್ಶಿಸುವುದರಿಂದ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಸಹ ಹೇಳಲಾಗಿದೆ. ಎಂಥವರ ಪಾದ ಸ್ಪರ್ಶಿಸಬಾರದು? ವಿವರ ಇಲ್ಲಿದೆ. ಇವರ ಚರಣ ಸ್ಪರ್ಶಿಸಿದರೆ ಪೂಜೆಯ ಫಲ ಸಿಗುವುದಿಲ್ಲ.
ತಾಜಾ ಫೋಟೊಗಳು
///ದೇವರಪೂಜೆ ಮಾಡುವವರ ಚರಣ ಸ್ಪರ್ಶ ಸಲ್ಲದು///
ಯಾರಾದರೂ ದೇವರಪೂಜೆ ಮಾಡುತ್ತಿದ್ದರೆ ಆ ಸಮಯದಲ್ಲಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಬಾರದು. ಹೀಗೆ ಮಾಡುವುದರಿಂದ ಪೂಜೆಗೆ ಅಡ್ಡಿಪಡಿಸಿದಂತಾಗುತ್ತದೆ. ಅದೇ ರೀತಿ ದೇವಸ್ಥಾನದ ಗರ್ಭಗೃಹದಲ್ಲಿ ಯಾರ ಪಾದಗಳನ್ನೂ ಮುಟ್ಟಿ ನಮಸ್ಕರಿಸುವುದು ಸರಿಯಲ್ಲ. ಏಕೆಂದರೆ ಎಲ್ಲರಿಗಂತ ದೇವರೇ ದೊಡ್ಡವನು ಎಂಬ ನಂಬಿಕೆಯಿದೆ. ಆ ಸ್ಥಳದಲ್ಲಿ ಮನುಷ್ಯನ ಪಾದಗಳನ್ನು ಸ್ಪರ್ಶಿಸುವುದು ಅಲ್ಲಿನ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ ಎಂದು ಹೇಳಲಾಗುತ್ತದೆ.
///ಪಾಪದಲ್ಲಿ ಭಾಗಿಯಾಗುತ್ತಾರೆ///
ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ದೇವಿಯ ಪ್ರತಿರೂಪ ಎಂಬ ನಂಬಿಕೆಯಿದೆ. ಹೀಗಾಗಿಯೇ ಮನೆಯಲ್ಲಿ ದೇವರಪೂಜೆ ನಡೆಯುವ ಸಂದರ್ಭದಲ್ಲಿ ಮನೆಯ ಹೆಣ್ಣುಮಕ್ಕಳು ಇತರರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಬಾರದು. ಪೂಜೆಯ ಸಮಯದಲ್ಲಿ ಕನ್ಯೆಯರು ಬೇರೆಯವರ ಪಾದಗಳನ್ನು ಮುಟ್ಟುವುದರಿಂದ ಆ ವ್ಯಕ್ತಿಗೆ ಅಶುಭ ಎಂಬ ನಂಬಿಕೆಯಿದೆ.
///ಇವರ ಪಾದಗಳನ್ನು ಮುಟ್ಟಬೇಡಿ///
ಶಾಸ್ತ್ರಗಳ ಪ್ರಕಾರ ಯಾರಾದರೂ ಸ್ಮಶಾನಕ್ಕೆ ಹೋಗಿ ಹಿಂತಿರುಗುತ್ತಿದ್ದರೆ, ಅವರು ನಿಮಗಿಂತ ಹಿರಿಯರಾಗಿದ್ದರೂ ಅವರ ಪಾದಗಳನ್ನು ಮುಟ್ಟಬಾರದು. ಆ ರೀತಿ ಮಾಡುವುದು ಅಶುಭ ಎಂದು ಪರಿಗಣಿಸಲಾಗಿದೆ. ಅದೇ ರೀತಿ ನಿದ್ದೆ ಮಾಡುತ್ತಿರುವವರ ಚರಣವನ್ನು ಸಹ ಸ್ಪರ್ಶಿಸಬಾರದು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
(ಅರ್ಚನಾ ವಿ ಭಟ್)
ಇನ್ನಷ್ಟು ಆಧ್ಯಾತ್ಮಿಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Vastu Tips: ಸಂಜೆ ಹೊತ್ತು ಇಂಥ ಕೆಲಸ ಮಾಡಲೇ ಬೇಡಿ; ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ