logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಎಷ್ಟೇ ಪ್ರಯತ್ನಿಸಿದರೂ ಕಂಕಣ ಬಲ ಕೂಡಿ ಬರ್ತಿಲ್ವಾ? ಗ್ರಹಗಳ ಅನುಗ್ರಹಕ್ಕಾಗಿ ಹೀಗೆ ಮಾಡಿ

ಎಷ್ಟೇ ಪ್ರಯತ್ನಿಸಿದರೂ ಕಂಕಣ ಬಲ ಕೂಡಿ ಬರ್ತಿಲ್ವಾ? ಗ್ರಹಗಳ ಅನುಗ್ರಹಕ್ಕಾಗಿ ಹೀಗೆ ಮಾಡಿ

Raghavendra M Y HT Kannada

Jun 16, 2024 02:22 PM IST

google News

ಎಷ್ಟೇ ಪ್ರಯತ್ನಿಸಿದರೂ ಕಂಕಣ ಬಲ ಕೂಡಿ ಬರ್ತಿಲ್ವಾ? ಗ್ರಹಗಳ ಅನುಗ್ರಹಕ್ಕಾಗಿ ಹೀಗೆ ಮಾಡಿ

    • ಕೆಲವರು ಎಷ್ಟೇ ಬೇಗ ಸಂಬಂಧಗಳನ್ನ ಹುಡುಕಲು ಪ್ರಾರಂಭಿಸಿದರೂ ಮದುವೆ ಮಾತ್ರ ವಿಳಂಬವಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣವೇನು ಎಂದು ಚಿಂತಿಸಲು ಪ್ರಾರಂಭಿಸುತ್ತಾರೆ. ಅನೇಕ ಕಾರಣಗಳಿಂದ ಮದುವೆ ವಿಳಂಬವಾಗುತ್ತದೆ. ಅದಕ್ಕೆ ಈ ಗ್ರಹಗಳ ಸ್ಥಾನವೂ ಕಾರಣವಾಗಿರಬಹುದು ಎನ್ನುತ್ತಾರೆ ವಿದ್ವಾಂಸರು. 
ಎಷ್ಟೇ ಪ್ರಯತ್ನಿಸಿದರೂ ಕಂಕಣ ಬಲ ಕೂಡಿ ಬರ್ತಿಲ್ವಾ? ಗ್ರಹಗಳ ಅನುಗ್ರಹಕ್ಕಾಗಿ ಹೀಗೆ ಮಾಡಿ
ಎಷ್ಟೇ ಪ್ರಯತ್ನಿಸಿದರೂ ಕಂಕಣ ಬಲ ಕೂಡಿ ಬರ್ತಿಲ್ವಾ? ಗ್ರಹಗಳ ಅನುಗ್ರಹಕ್ಕಾಗಿ ಹೀಗೆ ಮಾಡಿ

ಮದುವೆಯೆಂಬುದು ಎಲ್ಲರ ಬಾಳಲ್ಲೂ ಬರುವ ಮಹತ್ವದ ಗಳಿಗೆ. ತಮ್ಮ ಮಕ್ಕಳಿಗೆ ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡಬೇಕೆಂಬುದು ಎಲ್ಲಾ ಪೋಷಕರ ಆಸೆಯಾಗಿರುತ್ತೆ. ಇದಕ್ಕೆ ತಕ್ಕಂತೆ ವಿವಾಹ ಸಂಬಂಧಗಳನ್ನು ಹುಡುಕುತ್ತಾರೆ. ಗಂಡು ಹೆಣ್ಣಿನ ಜಾತಕ ಹೋಲಿಸಿ ಸಂಬಂಧಗಳನ್ನು ನೋಡಲಾಗುತ್ತದೆ. ಆದರೆ ಪ್ರತಿ ಬಾರಿಯೂ ಒಂದಲ್ಲಾಒಂದು ಕಾರಣದಿಂದ ಮದುವೆ ವಿಳಂಬವಾಗುತ್ತದೆ. ಅದರಿಂದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ರೀತಿ ಏಕೆ ಆಗುತ್ತಿದೆ ಎಂದು ಚಿಂತೆಗೊಳಗಾಗುವವರೆ ಹೆಚ್ಚು. ವಿವಾಹ ವಿಳಂಬವಾಗಲು ಹಲವು ಕಾರಣಗಳಿವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ ವಿಳಂಬವಾಗಲು ಇರುವ ವಿವಿಧ ಕಾರಣಗಳಲ್ಲಿ ಗ್ರಹದೋಷವೂ ಒಂದು. ಜನ್ಮ ರಾಶಿಯಲ್ಲಿರುವ ಅನೇಕ ಗ್ರಹಗಳು ಮದುವೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಈ ಗ್ರಹಗಳ ಸ್ಥಾನಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪರಿಹಾರಗಳನ್ನು ಅನುಸರಿಸಬಹುದು. ಆಗ ದಾಂಪತ್ಯದಲ್ಲಿ ಯಾವುದೇ ಅಡೆತಡೆಗಳ ಭಯ ಇರುವುದಿಲ್ಲ. ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಹಾಗಾದರೆ ಆ ಗ್ರಹಗಳು ಯಾವುವು? ಗ್ರಹಗಳಿಂದ ಉಂಟಾಗುವ ತೊಂದರೆಗಳಿಗೆ ಪರಿಹಾರವೇನು ಎಂಬುದನ್ನು ತಿಳಿಯೋಣ.

  • ದಾಂಪತ್ಯದಲ್ಲಿ ಅಡೆತಡೆಗಳನ್ನು ಉಂಟುಮಾಡುವ ಗ್ರಹಗಳು

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜನ್ಮ ಕುಂಡಲಿಯ ಏಳನೇ ಮನೆಯಲ್ಲಿ ದಶಾ ಅಥವಾ ಅಂತರದಶಾ ಮತ್ತು ಆರನೇ ಮನೆಯಲ್ಲಿ ಅಂತರದಶಾ ಇದ್ದಾಗ ಮದುವೆಯಲ್ಲಿ ವಿಳಂಬವಾಗುತ್ತದೆ. ಜ್ಯೋತಿಷಿಗಳ ಪ್ರಕಾರ ಆರನೇ ಅಥವಾ ಹತ್ತನೇ ಮನೆ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗೆಯೇ ಶನಿಯು ಏಳನೇ ಮನೆಯಲ್ಲಿದ್ದರೆ ಆಗಲೂ ಮದುವೆ ವಿಳಂಬವಾಗಬಹುದು.

  • ಯಾವ ಗ್ರಹಗಳ ಸಂಯೋಜನೆಯು ಮದುವೆಯನ್ನು ವಿಳಂಬಗೊಳಿಸುತ್ತದೆ?

ಜಾತಕದಲ್ಲಿ ಏಳನೇ ಮನೆಯಲ್ಲಿ ಮಂಗಳ, ರಾಹು ಮತ್ತು ಕೇತು ಗ್ರಹಗಳಿದ್ದರೆ, ಅವರ ಮದುವೆ ವಿಳಂಬವಾಗಬಹುದು. ಹಾಗೆಯೇ 7 ಮತ್ತು 8ನೇ ಮನೆಯಲ್ಲಿ ಶನಿ-ಮಂಗಳ, ಶನಿ-ರಾಹು, ಮಂಗಳ-ರಾಹು, ಶನಿ-ಸೂರ್ಯ, ಮಂಗಳ-ಸೂರ್ಯ, ಸೂರ್ಯ-ರಾಹು ಸಂಯೋಗವಾದಾಗಲೂ ದಾಂಪತ್ಯದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ.

  • ಮಂಗಳದೋಷ

ಮದುವೆ ವಿಳಂಬವಾಗಲು ಇರುವ ಒಂದು ದೊಡ್ಡ ಕಾರಣವೆಂದರೆ ಕುಜದೋಷ. ಗುರು ಅಥವಾ ಇನ್ನಾವುದೇ ಲಾಭದಾಯಕ ಗ್ರಹವು ಏಳನೇ ಅಥವಾ 12 ನೇ ಮನೆಯಲ್ಲಿದ್ದರೆ ಮತ್ತು ಚಂದ್ರನು ದುರ್ಬಲನಾಗಿದ್ದರೆ, ಮದುವೆಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಜಾತಕದಲ್ಲಿನ ಕೆಲವು ಮನೆಗಳು ಮದುವೆಗೆ ಕಾರಣವಾಗಿವೆ. ಏಳನೇ ಮನೆಯು ಮದುವೆಗೆ ಸಂಬಂಧಿಸಿದ ಮನೆಯಾಗಿದೆ. ಶುಭ ಗ್ರಹ ಅಥವಾ ಆದಿ ದೇವತೆಗಳ ಅದರ ಅಧಿಪತಿ. ಗುರು ಅಥವಾ ಶುಕ್ರ ಗ್ರಹವು ಸರಿಯಾಗಿಲ್ಲದಿದ್ದರೆ ಮದುವೆಯ ಸಾಧ್ಯತೆಗಳು ಕಡಿಮೆ. ಹಾಗೆಯೇ ಗುರುವು ಏಳನೇ ಮನೆಯಲ್ಲಿದ್ದರೆ 25 ನೇ ವಯಸ್ಸಿನಲ್ಲಿ ಮದುವೆ ನಡೆಯುತ್ತದೆ. ಗುರು ಮತ್ತು ಸೂರ್ಯನ ಸ್ಥಾನ ಸರಿಯಾಗಿಲ್ಲದಿದ್ದರೆ ಮದುವೆ ಒಂದೂವರೆ ವರ್ಷ ತಡವಾಗುತ್ತದೆ. ಹಾಗೆಯೇ ರಾಹು ಅಥವಾ ಶನಿ ಬಾಧಿತವಾದರೆ ಮದುವೆ ಎರಡರಿಂದ ಮೂರು ವರ್ಷ ತಡವಾಗುತ್ತದೆ.

ಮದುವೆ ತಡವಾಗಲು ಇರುವ ಸಮಸ್ಯೆಗಳಿಗೆ ಪರಿಹಾರಗಳೇನು?

ವಿವಾಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕೆಲವೊಂದು ಪರಿಹಾರಗಳನ್ನು ಹೇಳಲಾಗಿದೆ. ಅವುಗಳನ್ನು ಪಾಲಿಸುವುದರಿಂದ ಮದುವೆ ವಿಳಂಬವಾಗುವುದನ್ನು ತಡೆಯಬಹುದು.

1. ಶಿವಲಿಂಗವನ್ನು ಪೂಜಿಸಿ

ದೀರ್ಘಕಾಲದಿಂದ ನಿಮ್ಮ ಮದುವೆ ವಿಷಯದಲ್ಲಿ ಸಾಕಷ್ಟು ವಿಳಂಬವನ್ನು ಎದುರಿಸುತ್ತಿದ್ದರೆ ನೀವು ಶಿವಲಿಂಗವನ್ನು ಪೂಜಿಸಿ. ಜೊತೆಗೆ ಗಣೇಶನನ್ನು ನಿತ್ಯವೂ ಪೂಜಿಸಬೇಕು. ಶೀಘ್ರ ವಿವಾಹವಾಗಲು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿ. ದೇವರಿಗೆ ಪಾಯಸವನ್ನು ನೈವೇದ್ಯ ಮಾಡಿ.

2. ಮದುವೆಯ ವಸ್ತುಗಳನ್ನು ಪಾರ್ವತಿ ದೇವಿಗೆ ಅರ್ಪಿಸಿ

ಗುರು, ಮಂಗಳ ಮತ್ತು ಶನಿ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ, ಅದಕ್ಕೆ ಈ ಪರಿಹಾರವನ್ನು ಹೇಳಲಾಗಿದೆ. ಪ್ರತಿ ಸೋಮವಾರ ಉಪವಾಸ ಆಚರಿಸಬೇಕು. ಶಿವನೊಂದಿಗೆ ಪಾರ್ವತಿ ದೇವಿಯನ್ನು ಪೂಜಿಸಬೇಕು. ಹಾಗೆಯೇ ಪಾರ್ವತಿ ದೇವಿಗೆ ಮದುವೆಗೆ ಸಂಬಂಧಿಸಿದ ವಸ್ತುಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಮದುವೆಗೆ ಇರುವ ಅಡೆತಡೆಗಳು ದೂರವಾಗುತ್ತವೆ.

3. ಮಂಗಳದೋಷಕ್ಕೆ ಪರಿಹಾರ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜನ್ಮ ಕುಂಡಲಿಯಲ್ಲಿ ಮಂಗಳದೋಷವಿದ್ದರೆ, ಅವರು ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಜ್ಯೋತಿಷಿಗಳ ಪ್ರಕಾರ, ಮಂಗಳನ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಲು ಮಂಗಳವಾರ ಉಪವಾಸ ಮಾಡಬೇಕು. ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಲಡ್ಡುಗಳನ್ನು ನೈವೇದ್ಯವಾಗಿ ಹನುಮಂತನಿಗೆ ಅರ್ಪಿಸಬೇಕು. ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಮಂಗಳದೋಷದ ಪರಿಣಾಮ ಕಡಿಮೆಯಾಗುತ್ತದೆ.

4. ಗುರುವಾರ ಉಪವಾಸ ಮಾಡಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೇವತೆಗಳ ಗುರು ಬೃಹಸ್ಪತಿಯನ್ನು (ಗುರು) ಮದುವೆಯ ಗ್ರಹ ಎಂದು ಕರೆಯಲಾಗುತ್ತದೆ. ಗುರು ಕ್ಷೀಣನಾದರೆ ದಾಂಪತ್ಯಕ್ಕೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಗುರುವಿನ ಸ್ಥಾನವನ್ನು ಸುಧಾರಿಸಲು ಗುರುವಾರದಂದು ಹಳದಿ ಬಟ್ಟೆಗಳನ್ನು ಧರಿಸಿ ವಿಷ್ಣು ದೇವರನ್ನು ಪೂಜಿಸಬೇಕು. ದೇವರಿಗೆ ಬೇಳೆ, ಬಾಳೆಹಣ್ಣು, ಅರಿಶಿನ, ಕುಂಕುಮವನ್ನು ಅರ್ಪಿಸುವುದರಿಂದ ಒಳಿತಾಗುತ್ತದೆ. ಸಾಧ್ಯವಾದರೆ 11 ಅಥವಾ 21 ಗುರುವಾರಗಳ ಉಪವಾಸ ಮಾಡುವುದರಿಂದಲೂ ಉತ್ತಮ ಫಲ ಲಭಿಸುತ್ತದೆ.

5. ದಾನ ಮಾಡಿ

ದಾಂಪತ್ಯದಲ್ಲಿ ಸಮಸ್ಯೆಗಳಿದ್ದರೆ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ದಾನ ಮಾಡಿ. ಆದರೆ ಅದನ್ನು ಗುಪ್ತವಾಗಿ ದಾನ ಮಾಡಿ. ಹಾಗೆ ಮಾಡುವುದರಿಂದ ವಿವಾಹದಲ್ಲಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ವಿದ್ವಾಂಸರು ಸೂಚಿಸುತ್ತಾರೆ. ರಹಸ್ಯವಾಗಿ ದಾನ ಮಾಡುವುದರಿಂದ ಜಾತಕದಲ್ಲಿ ರಾಹುವಿನ ಸ್ಥಾನವೂ ಬಲಗೊಳ್ಳುತ್ತದೆ.

6. ಶಿವಲಿಂಗಕ್ಕೆ ಕಪ್ಪು ಎಳ್ಳು ಅರ್ಪಿಸಿ

ಮದುವೆಯಲ್ಲಿನ ಅಡೆತಡೆಗಳು ದೂರವಾಗಲು ಪ್ರತಿ ಶನಿವಾರ ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸಬೇಕು. ಇದು ಬಹಳ ಫಲಪ್ರದವಾಗಿದೆ. ಅಲ್ಲದೆ ಶನಿವಾರದಂದು ಕಪ್ಪು ಬಟ್ಟೆಯಲ್ಲಿ ಕಪ್ಪು ಮೇಣ, ಕಬ್ಬಿಣ, ಕಪ್ಪು ಎಳ್ಳು ಮತ್ತು ಸಾಬೂನು ದಾನ ಮಾಡುವುದು ಎಲ್ಲಾ ಅಡೆತಡೆಗಳು ದೂರವಾಗಿ ಒಳ್ಳೆಯ ಫಲ ದೊರೆಯುತ್ತದೆ.

7. ರಾಧಾಕೃಷ್ಣ ಅವರ ಚಿತ್ರ ಇಡಬೇಕು

ಜ್ಯೋತಿಷಿಗಳ ಸಲಹೆಯಂತೆ ಮದುವೆಗೆ ಅಡ್ಡಿಗಳಿದ್ದರೆ ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಭಾವಚಿತ್ರ ಇಡಬಹುದು. ಇದನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಟ್ಟರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ