logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಶನಿಯ ಅಶುಭ ಪರಿಣಾಮ ನಿಗ್ರಹಿಸಲು ಕುದುರೆ ಗೊರಸನ್ನು ಮನೆಯ ಈ ದಿಕ್ಕಿನಲ್ಲಿ ಇಡಿ; ಸಂಪತ್ತು ವೃದ್ಧಿಯಾಗುವುದು ಖಂಡಿತ

Vastu Tips: ಶನಿಯ ಅಶುಭ ಪರಿಣಾಮ ನಿಗ್ರಹಿಸಲು ಕುದುರೆ ಗೊರಸನ್ನು ಮನೆಯ ಈ ದಿಕ್ಕಿನಲ್ಲಿ ಇಡಿ; ಸಂಪತ್ತು ವೃದ್ಧಿಯಾಗುವುದು ಖಂಡಿತ

HT Kannada Desk HT Kannada

Dec 25, 2023 02:51 PM IST

google News

ಶನಿಯ ಅಶುಭ ಪರಿಣಾಮ ದೂರಮಾಡಿಕೊಳ್ಳಲು ಹೀಗೆ ಮಾಡಿ.

    • ಹೊಸ ವರ್ಷದಲ್ಲಿ ಶನಿಯ ಅಶುಭ ಪರಿಣಾಮವನ್ನು ತೊಡೆದುಹಾಕಿ, ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಸುವಂತೆ ಆಗಬೇಕಾ? ನಿಮ್ಮ ಮನೆಗೆ ಕುದುರೆ ಗೊರಸನ್ನು ತನ್ನಿ. ವಾಸ್ತುಶಾಸ್ತ್ರದ ಪ್ರಕಾರ ಯಾವ ದಿಕ್ಕಿಗೆ ಕುದುರೆ ಗೊರಸು ಹಾಕಬೇಕೆಂದು ಹೇಳಿದ್ದಾರೆ ಗೊತ್ತಾ? ಇಲ್ಲಿದೆ ಓದಿ.
ಶನಿಯ ಅಶುಭ ಪರಿಣಾಮ ದೂರಮಾಡಿಕೊಳ್ಳಲು ಹೀಗೆ ಮಾಡಿ.
ಶನಿಯ ಅಶುಭ ಪರಿಣಾಮ ದೂರಮಾಡಿಕೊಳ್ಳಲು ಹೀಗೆ ಮಾಡಿ. (Pixabay)

ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರ ಬಹಳ ಮಹತ್ವವನ್ನು ಹೊಂದಿದೆ. ಅನೇಕ ಜನರು ತಮ್ಮ ಮನೆಯ ಮುಖ್ಯ ದ್ವಾರದಲ್ಲಿ ಯು(U)-ಆಕಾರದ ಕಬ್ಬಿಣದ ವಸ್ತುವನ್ನು ನೇತುಹಾಕುವುದನ್ನು ನೋಡಿರುತ್ತೀರಿ. ಇದನ್ನು ಕುದುರೆ ಗೊರಸು ಅಥವಾ ಹಾರ್ಸ್ ಶೂ ಎಂದು ಕರೆಯಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕುದುರೆ ಗೊರಸು ಇಡುವುದು ಅದೃಷ್ಟವನ್ನು ತರುತ್ತದೆ. ಮನೆಯಲ್ಲಿ ಕಪ್ಪು ಕುದುರೆಯ ಗೊರಸು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸಂತೋಷ, ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕುದುರೆಯ ಗೊರಸನ್ನು ನೇತುಹಾಕುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು, ಅಡೆತಡೆಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಮನೆಯಲ್ಲಿ ಕುದುರೆ ಗೊರಸುಗಳನ್ನು ಇಡುವುದರಿಂದ ಶಾಂತಿ ನೆಲೆಸುತ್ತದೆ ಮತ್ತು ಎಲ್ಲಾ ಹಣ ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಕುದುರೆ ಗೊರಸು ನೇತು ಹಾಕುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದರೆ ಮನೆಯಲ್ಲಿ ಕುದುರೆ ಗೊರಸು ನೇತು ಹಾಕುವಾಗ ವಾಸ್ತು ನಿಯಮಗಳನ್ನು ಖಂಡಿತ ಪಾಲಿಸಲೇಬೇಕು.

ಕುದುರೆ ಗೊರಸು ಯಾವ ದಿಕ್ಕಿನಲ್ಲಿ ಹಾಕಬೇಕು?

ವಾಸ್ತುಶಾಸ್ತ್ರದ ಪ್ರಕಾರ, ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುದುರೆ ಗೊರಸು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತು, ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿಡಬೇಕು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂಬ ನಿರೀಕ್ಷೆಯಿದ್ದರೆ ಕುದುರೆಯ ಬಲಗಾಲಿನ ಗೊರಸನ್ನು ಮನೆಯ ಮುಖ್ಯ ಬಾಗಿಲಿಗೆ ನೇತು ಹಾಕಬಹುದು. ಹೀಗೆ ಮಾಡುವುದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ಶನಿಯ ದುಷ್ಪರಿಣಾಮ ತೊಡೆದುಹಾಕಲು ಹೀಗೆ ಮಾಡಿ

ಶನಿಯ ದುಷ್ಪರಿಣಾಮಗಳನ್ನು ತೊಡೆದುಹಾಕಲು, ಸಾಸಿವೆ ಎಣ್ಣೆಯ ಬಟ್ಟಲಿನಲ್ಲಿ ಕಪ್ಪು ಕುದುರೆ ಪಾದರಕ್ಷೆಯನ್ನು ಹಾಕಿ, ಶಮಿ ವೃಕ್ಷದ ಕೆಳಗೆ ಹೂತುಹಾಕಿ. ಈ ರೀತಿ ಮಾಡುವುದರಿಂದ ಶನಿದೋಷ ದೂರವಾಗುತ್ತದೆ. ಯು-ಆಕಾರದ ಕುದುರೆ ಗೊರಸನ್ನು ಮನೆ ಮತ್ತು ಕಚೇರಿಯಲ್ಲಿ ಹಾಕುವುದು ಮಂಗಳಕರ ಎಂದು ನಂಬಲಾಗಿದೆ. ಇದು ಎರಡು ಆಕಾರದಲ್ಲಿ ಲಭ್ಯವಿದೆ. ಒಂದು ಯು ಆಕಾರ ಇನ್ನೊಂದು ರಿವರ್ಸ್ ಯು ಆಕಾರ. ನಿಮ್ಮ ಹತ್ತಿರ ರಿವರ್ಸ್‌ U ಆಕಾರದ ಕುದುರೆಯ ಗೊರಸು ಇದ್ದರೆ ಅದರ ಮೇಲೆ ಕನ್ನಡಿಯನ್ನು ಇಡಲು ಮರೆಯದಿರಿ.

ಇದನ್ನೂ ಓದಿ: ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು; ತೀರ್ಥವನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬಾರದು; ಮಾಹಿತಿ

ಕುದುರೆ ಗೊರಸು ನೇತುಹಾಕುವ ಮೊದಲು ಏನು ಮಾಡಬೇಕು?

ಕುದುರೆ ಗೊರಸನ್ನು ಮನೆಯಲ್ಲಿ ನೇತುಹಾಕುವ ಮೊದಲು ಗಂಗಾ ಜಲ ಅಥವಾ ನದಿ ನೀರಿನಲ್ಲಿ ಸ್ವಚ್ಛಗೊಳಿಸಬೇಕು. ಸೂರ್ಯನ ಕಿರಣಗಳು ಅದರ ಮೇಲೆ ಬಿದ್ದರೆ, ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಕಬ್ಬಿಣದಿಂದ ಮಾಡಿದ ಕುದುರೆ ಗೊರಸು ಉತ್ತಮ ಎಂದು ನಂಬಲಾಗಿದೆ. ಇದು ಅದೃಷ್ಟವನ್ನು ಆಕರ್ಷಿಸುತ್ತದೆ. ಕುದುರೆಯ ಗೊರಸನ್ನು ತುದಿಗಳನ್ನು ಮೇಲಕ್ಕೆ ಇಡುವುದರಿಂದ ಆ ಮನೆಗೆ ಅದೃಷ್ಟ ಮತ್ತು ಸಂಪತ್ತು ಬರುತ್ತದೆ. ಇದನ್ನು ಮನೆಯಲ್ಲಿಟ್ಟರೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

ಕುದುರೆ ಗೊರಸು ಇಡುವುದರಿಂದ ಸಿಗುವ ಪ್ರಯೋಜನಗಳು

– ಕಚೇರಿಯಲ್ಲಿ ಕಪ್ಪು ಕುದುರೆ ಗೊರಸು ಇಡುವುದರಿಂದ ಹಣದ ಹರಿವಿಗೆ ಅಡ್ಡಿಯಾಗುವುದಿಲ್ಲ. ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ. ಕಪ್ಪು ಕುದುರೆ ಗೊರಸು ನೇತುಹಾಕುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತದೆ. ಇದು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

– ಕುದುರೆಯ ಗೊರಸನ್ನು ಮುಖ್ಯ ಬಾಗಿಲಿಗೆ ನೇತುಹಾಕಿದರೆ, ಅದು ಮನೆಯಲ್ಲಿ ಕುಟುಂಬ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತದೆ. ಮನೆಗೆ ಆಧ್ಯಾತ್ಮಿಕ ಶಕ್ತಿಯನ್ನು ಆಕರ್ಷಿಸುತ್ತದೆ. ಬಾಗಿಲಿನ ಬಳಿ ನೇತು ಹಾಕುವುದರಿಂದ ದುಷ್ಟ ಕಣ್ಣು ದೂರವಾಗುತ್ತದೆ. ದುಃಸ್ವಪ್ನಗಳನ್ನು ದೂರವಿಡಲು ಈ ಕುದುರೆ ಗೊರಸನ್ನು ಹಾಸಿಗೆಯ ಬಳಿ ಇರಿಸಬಹುದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ