ಇಲ್ಲಿ ಪೂಜೆ ಸಲ್ಲಿಸಿದರೆ ಕುಟುಂಬದಲ್ಲಿ ಹೊಂದಾಣಿ, ಮನಸ್ಸಿಗೆ ಶಾಂತಿ ಸಿಗುತ್ತೆ; ತಮಿಳುನಾಡಿನ ಕಪಾಲೇಶ್ವರ ದೇವಾಲಯ ವಿಶೇಷ ತಿಳಿಯಿರಿ
Jul 31, 2024 02:35 PM IST
ಈ ದೇವರಿಗೆ ಪೂಜೆ ಸಲ್ಲಿಸಿದರೆ ಕುಟುಂಬದಲ್ಲಿ ಹೊಂದಾಣಿ, ಮನಸ್ಸಿಗೆ ಶಾಂತಿ ಸಿಗುತ್ತೆ; ತಮಿಳುನಾಡಿನ ಕಪಾಲೇಶ್ವರ ದೇವಾಲಯದ ಮತ್ತಷ್ಟು ವಿಶೇಷ ತಿಳಿಯಿರಿ
- ತಮಿಳುನಾಡು ರಾಜಧಾನಿ ಚೆನ್ನೈನಲ್ಲಿರುವ ಕಪಾಲೇಶ್ವರ ದೇವಾಲಯ ಹಲವು ಕಾರಣಗಳಿಗೆ ಭಕ್ತರ ನೆಚ್ಚಿನ ಆಲಯ ಎನಿಸಿದೆ. ಕಪಾಲೇಶ್ವರ ಹೆಸರು ಹೇಗೆ ಬಂತು ಎಂಬುದರ ಸೇರಿದಂತೆ ಇಲ್ಲಿನ ಇತಿಹಾಸ ಮತ್ತು ಮಹತ್ವವನ್ನು ಇಲ್ಲಿ ನೀಡಲಾಗಿದೆ.
ಭಾರತದಲ್ಲಿನ ಧಾರ್ಮಿಕ ಕ್ಷೇತ್ರಗಳು ಹಾಗೂ ದೇವಾಲಯಗಳು ಎನ್ನುವಷ್ಟರಲ್ಲಿ ಮೊದಲಿಗೆ ನೆನಪಾಗುವುದೇ ನೆರೆಯ ತಮಿಳುನಾಡು. ದ್ರಾವಿಡರ ನಾಡಿನಲ್ಲಿ ಸಾವಿರಾರು ವರ್ಷಗಳ ಇತಿಹಾಸದ ನೂರಾರು ದೇವಾಲಯಗಳಿವೆ. ಕಪಾಲೇಶ್ವರ ದೇವಾಲಯವು (Kapaleeshwarar Temple) ಚೆನ್ನೈನ ಮೈಲಾಪುರ್‌ನಲ್ಲಿದೆ. ಚರಿತ್ರೆಯಿಂದ ಸುಮಾರು 7ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿನ ವಾಸ್ತುಶಿಲ್ಪವು ವಿಶೇಷವಾಗಿದೆ. ಇದನ್ನು ಪಲ್ಲವರು ನಿರ್ಮಿಸಿದರೆಂದು ಹೇಳಲಾಗಿದೆ. ಪೋರ್ಚುಗೀಸರು ಇದನ್ನು ಹಾಳುಗೆಡವಿದ ನಂತರ ವಿಜಯನಗರ ಅರಸರು ಇದನ್ನು ಪುನರ್ನಿಮಿಸುತ್ತಾರೆ. ಈ ದೇವಾಲಯದಲ್ಲಿ ಏಳು ಅಂತಸ್ತುಗಳಿವೆ. ಇಲ್ಲಿ ದೊಡ್ಡ ಕಲ್ಯಾಣಿಯೂ ಕಾಣಸಿಗುತ್ತದೆ. ಈ ಕಲ್ಯಾಣಿಯ ಬಳಿ ತರ್ಪಣ ನೀಡಲು ಮತ್ತು ಇನ್ನಿತರ ಕಾರ್ಯಗಳನ್ನು ನಿರ್ವಹಿಸಲು ವಿಶೇಷವಾದ ಮಂಟಪವಿದೆ.
ತಾಜಾ ಫೋಟೊಗಳು
ಕಪಾಲೇಶ್ವರ ದೇವಾಲಯಕ್ಕೆ ಈ ಹೆಸರು ಹೇಗೆ ಬಂತು?
ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಸುಮಾರು ಒಂಬತ್ತು ದಿನಗಳ ಕಾಲ ಇಲ್ಲಿ ವಿಶೇಷ ದೇವತಾಕಾರ್ಯಗಳು ನಡೆಯಲಿವೆ. ಶಿವನನ್ನು ಕಪಾಲೀಶ್ವರ ಎಂಬ ಪೂಜಿಸಲಾಗುತ್ತದೆ. ಶಿವನು ಇಲ್ಲಿ ಲಿಂಗರೂಪದಿಂದ ನೆಲೆಗೊಂಡಿದ್ದಾನೆ. ಪಾರ್ವತಿಯನ್ನು ಕರ್ಪಗಂಬಲ್ ಎಂಬ ಹೆಸರಿಂದ ಪೂಜಿಸಲಾಗುತ್ತದೆ. ಬ್ರಹ್ಮನಿಗೆ ಮೊದಲು 5 ತಲೆಗಳು ಇರುತ್ತವೆ. ಇದರಿಂದಾಗಿ ಬ್ರಹ್ಮನಿಗೆ ತಾನೆ ದೊಡ್ಡವನೆಂದು ತಿಳಿದಿರುತ್ತಾನೆ. ಇದೇ ರೀತಿ ಶಿವನಿಗೂ ತನಗಿಂತಲೂ ದೊಡ್ಡವರು ಬೇರಾರು ಇಲ್ಲವೆಂಬ ಭಾವನೆ ಇರುತ್ತದೆ. ಇದರಿಂದಾಗಿ ಶಿವನಿಗೆ ಅವಮಾನವಾಗುತ್ತದೆ. ಆಗ ಸಿಟ್ಟಿಗೆ ಒಳಗಾದ ಶಿವನು ಬ್ರಹ್ಮನ ಒಂದು ಮುಖವನ್ನು ಬೇರ್ಪಡಿಸುತ್ತಾನೆ. ಆಗ ಬ್ರಹ್ಮನು ತನ್ನ ತಪ್ಪನ್ನು ಅರಿತು ಭೂಲೋಕದಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಾನೆ. ಈ ಕಾರಣದಿಂದ ಈ ದೇವಾಲಯದಲ್ಲಿ ಇರುವ ಶಿವನಿಗೆ ಕಪಾಲೇಶ್ವರ ಎಂಬ ಹೆಸರು ಬಂದಿದೆ. ಇಲ್ಲಿನ ಪ್ರತಿಯೊಂದು ಗೋಡೆಯ ಮೇಲೆ ಶಿವ, ಪಾರ್ವತಿ ಮತ್ತು ಶ್ರೀ ಸುಬ್ರಹ್ಮಸ್ವಾಮಿಗೆ ಸಂಬಂಧಿಸಿದ ಮಂತ್ರಗಳು ಮತ್ತು ಶ್ಲೋಕಗಳು ಕಾಣಸಿಗುತ್ತವೆ.
ಒಮ್ಮೆ ಪಾರ್ವತಿಯು ಶಿವನನ್ನು ಕುರಿತು ವಿಭೂತಿ ಮತ್ತು ಶಿವಪಂಚಾಕ್ಷರಿ ಮಂತ್ರದ ಮಹಿಮೆಯನ್ನು ತನಗೆ ತಿಳಿಸುವಂತೆ ತಿಳಿಸುತ್ತಾಳೆ. ಸಂತಸದಿಂದ ಶಿವನು ಪಾರ್ವತಿಗೆ ಇದರ ಬಗ್ಗೆ ವಿವರಣೆ ನೀಡಲು ಆರಂಭಿಸುತ್ತಾನೆ. ಆದರೆ ಪಾರ್ವತಿಯು ತನ್ನ ಮನಸ್ಸನ್ನು ಒಂದೆಡೆ ಕೇಂದ್ರೀಕೃತಗೊಳಿಸಲ್ಲು ವಿಫಲಳಾಗುತ್ತಾಳೆ. ಇದನ್ನು ಕಂಡ ಶಿವನು ಕೋಪದಿಂದ ಪಾರ್ವತಿಯನ್ನು ಭೂಲೋಕದಲ್ಲಿ ಜನಿಸುವಂತೆ ಶಾಪ ನೀಡುತ್ತಾನೆ. ಪಾರ್ವತಿಯು ಭೂಲೋಕದಲ್ಲಿ ಜನಿಸಿ ಶಿವಲಿಂಗವನ್ನು ಪೂಜಿಸಲು ಆರಂಭಿಸುತ್ತಾಳೆ. ಪಾರ್ವತಿಯ ಭಕ್ತಿತೆ ಒಲಿದ ಶಿವನು ಪ್ರೀತಿಯಿಂದ ಕರ್ಪಗಂಬಲ್ ಎಂದು ಕರೆಯುತ್ತಾನೆ. ಪಾರ್ವತಿಯು ಪೂಜೆಗೈದ ಈ ಸ್ಥಳವನ್ನು ಮೈಲಾಪುರ ಎಂದು ಕರೆಯಲಾಗುತ್ತದೆ.
ಇಲ್ಲಿರುವ ದೇವರುಗಳನ್ನು ನಾಲ್ಕೂ ವೇದಗಳಿಂದ ಪೂಜಿಸುತಲಾಗುತ್ತದೆ. ಆದ್ದರಿಂದ ಈ ಸ್ಥಳಕ್ಕೆ ವೇದಪುರಿ ಎಂಬ ಹೆಸರು ಬಂದಿದೆ. ಶ್ರೀ ರಾಮಚಂದ್ರನು ಇಲ್ಲಿ ಶಿವನ ಪೂಜೆ ಮಾಡಿದನಂತರ ರಾವಣನ ಸಂಹಾರ ಮಾಡಿದನೆಂದು ಹೇಳಲಾಗುತ್ತದೆ. ಬಲಿಚಕ್ರವರ್ತಿಯು ವಾಮನ ರೂಪಿ ವಿಷ್ಣುವಿಗೆ ದಾನ ನೀಡುವುದನ್ನು ತಪ್ಪಿಸಲು ಅಸುರರ ಗುರು ಶುಕ್ರಾಚಾರ್ಯರು ಬಲಿಯ ಕೈಯಲ್ಲಿದ್ದ ಕಮಂಡಲವನ್ನು ಪ್ರವೇಶಿಸುತ್ತಾನೆ. ಅಗ ಬಲಿಯು ದಾನ ನೀಡಲು ಸಾಧ್ಯವಾಗುವುದಿಲ್ಲ. ಇದನ್ನರಿತ ವಿಷ್ಣುವು ಧರ್ಬೆಯಿಂದ ಕಮಂಡಲದ ನೀರು ಹೋಗುವ ಬಾಗವನ್ನು ಹಾನಿಗೊಳಿಸುತ್ತಾನೆ.
ಆ ಧರ್ಬೆಯು ಶುಕ್ರಾಚಾರ್ಯರ ಕಣ್ಣಿಗೆ ಸೋಕಿ ಕಣ್ಣಿನ ದೃಷ್ಟಿ ಹೋಗುತ್ತದೆ. ಆಗ ಶ್ರೀ ಶುಕ್ರಾಚಾರ್ಯರು ಇದೇ ದೇವಾಲಯದಲ್ಲಿ ಶಿವನನ್ನು ಕುರಿತು ತಪಸ್ಸನ್ನು ಮಾಡಿ ತಮ್ಮ ಕಣ್ಣನ್ನು ಪುನ: ಪಡೆದರೆಂಬ ಕತೆಯಿದೆ. ಶ್ರೀ ಸುಬ್ರಹ್ಮಣ್ಯಸ್ವಾಮಿಯು ಇದೇ ಸ್ಥಳದಲ್ಲಿ ಶಿವ ಪಾರ್ವತಿಯನ್ನು ಪೂಜಿಸಿ ಶಕ್ತಿವೇಲನ್ನು ಪಡೆಯುತ್ತಾನೆ. ಶನಿದೇಗುವೂ ಇಲ್ಲಿದೆ. ಇಲ್ಲಿ ಶಿವ ಪಾರ್ವತಿಯರ ಪೂಜೆ ಮಾಡುವುದರಿಂದ ಅನಸ್ಸಿಗೆ ಶಾಂತಿ ದೊರೆಯುತ್ತದೆ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಮೂಡುತ್ತದೆ. ಮಾತ್ರವಲ್ಲದೆ ಜನ್ಮ ಜನ್ಮಾಂತರದ ಪಾಪ ಕರ್ಮಗಳು ದೂರವಾಗುತ್ತವೆ. ಇಲ್ಲಿನ ಗಣಪತಿಗೆ ಪೂಜೆ ಮಾಡಿದಲ್ಲಿ ವಿದ್ಯಾಭ್ಯಾಸದಲ್ಲಿನ ತೊಡಕು ದೂರವಾಗುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)